ಬೈಕ್ ಕಳವು: ದೂರು

ಕುಂಬಳೆ: ಕುಂಬಳೆ ಪೇಟೆಯಲ್ಲಿ ಮಸೀದಿ ಸಮೀಪ ನಿಲ್ಲಿಸಿದ್ದ ಬೈಕ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಕುಂಬಳೆ ಭಾಸ್ಕರ ನಗರ ನಿವಾಸಿ ಕೃಷ್ಣ ಪ್ರಸಾದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೈಕ್ ಕೃಷ್ಣಪ್ರಸಾದ್‌ರ ಸ್ನೇಹಿತನ ದ್ದಾಗಿದೆಯೆನ್ನಲಾಗಿದೆ.

ಜೈಲಿನಲ್ಲಿ ಖೈದಿಗಳಿಂದ ಹಲ್ಲೆ ಓರ್ವನಿಗೆ ಗಾಯ; ಮೂವರ ವಿರುದ್ಧ ಕೇಸು ದಾಖಲು

ಕಾಸರಗೋಡು: ಮಾದಕದ್ರವ್ಯ ವ್ಯಸನಿಗಳಾದ ಖೈದಿಗಳು ಸೇವಿಸಲು ಮಾದಕದ್ರವ್ಯ ಲಭಿಸದ ದ್ವೇಷದಿಂದ ಇನ್ನೋರ್ವ ಖೈದಿ ಮೇಲೆ ಹಲ್ಲೆ ನಡೆಸಿದ ಘಟನೆ ಹೊಸದುರ್ಗದಲ್ಲಿ ರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.  ಜಿಲ್ಲಾ ಕಾರಾಗೃಹದಲ್ಲಿ ಅಡುಗೆ ಕೆಲಸದಲ್ಲಿ ನಿರತನಾಗಿದ್ದ ಖೈದಿ ಬಿಜು ಎಂಬಾತನ ಮೇಲೆ ಅದೇ ಜೈಲಿನಲ್ಲಿ ಕಳೆಯುತ್ತಿರುವ ಜಿತು ಅಲಿಯಾಸ್ ವೈಷಾಕನ್, ಮೊಹಮ್ಮದ್ ಇಜಾಸ್ ಮತ್ತು ವಿಷ್ಣು ಪ್ರಸಾದ್ ಎಂಬವರು ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆ ನಡೆಸುವುದನ್ನು  ತಡೆಯಲು ಬಂದ ಜೈಲು ಸಿಬ್ಬಂದಿಗಳಿಗೆ ಈ ಮೂವರು ಬೆದರಿಕೆಯೊಡ್ಡಿದ್ದಾರೆ. ಜಿಲ್ಲಾಸ್ಪತ್ರೆಯ ಪರಿಸರದಿಂದ …

ನಗರಸಭಾ ಅಧ್ಯಕ್ಷ ಸ್ಥಾನ ; ಮುಸ್ಲಿಂ ಲೀಗ್‌ನಲ್ಲಿ ತಲೆಯೆತ್ತಿದ ಭಿನ್ನಮತ

ಕಾಸರಗೋಡು: ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಭಾರೀ ಭಿನ್ನಮತ ತಲೆಯೆತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆ ಬಳಿಕ ಜಿಲ್ಲಾ ಮುಸ್ಲಿಂ ಲೀಗ್ ಸಮಿತಿ ಮಾಡಲಾದ ಹೊಂದಾಣಿಕೆ ಪ್ರಕಾರ ಅಧ್ಯಕ್ಷರಾಗಿ ಐದು ವರ್ಷ ಆಡಳಿತೆಯ ಮೊದಲ ಎರಡೂವರೆ ವರ್ಷ ವಿ.ಎಂ. ಮುನೀರ್ ಹಾಗೂ ನಂತರದ ಎರಡು ವರ್ಷ ಅಬ್ಬಾಸ್ ಬೀಗಂರನ್ನು ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಪ್ರಕಾರ ವಿ.ಎಂ. ಮುನೀರ್ ಅವರನ್ನು ನಗರಸಭಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹಿಂದೆ ಬದಲಾದ ಹೊಂದಾಣಿಕೆ ಪ್ರಕಾರ …

ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಸಂಜೆ ಧರಣಿ

ಬದಿಯಡ್ಕ: ವಂಡಿಪೆರಿಯಾರ್ ಚುರಕಾಲಂ ಎಸ್ಟೇಟ್‌ನಲ್ಲಿ ೬ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಗೈದ ಘಟನÉಯ ಅಪರಾದಿsಯನ್ನು ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪೊಲೀಸ್ ಪಡೆಯೊಂದಿಗೆ ಆಡಳಿತವರ್ಗವು ಕೈಜೋಡಿಸಿದೆ ಎಂದು ದೇಶೀಯ ಕೃಷಿ ಕಾರ್ಮಿಕ ಫೆಡರೇಶನ್ (ಡಿಕೆಟಿಎಫ್) ಜಿಲ್ಲಾ ಅಧ್ಯಕ್ಷ ವಾಸುದೇವನ್ ನಾಯರ್ ಆರೋಪಿಸಿದರು.ಕೆಪಿಸಿಸಿ ಆಹ್ವಾನದಂತೆ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಬದಿ ಯಡ್ಕದಲ್ಲಿ ಆಯೋಜಿಸಿದ್ದ `ಮಗಳೇ ಕ್ಷಮಿಸು…’ ಸಂಜೆ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಮ್ಮನ್ ಚಾಂಡಿಯವರ ಜನಸಂ ಪರ್ಕ ಯಾತ್ರೆಯನ್ನು ಟೀಕಿಸಿದÀÄ್ದ …

ನವಕೇರಳ ಸಭೆ: ಲಭಿಸಿದ ದೂರುಗಳಲ್ಲಿ ಎರಡು ದಿನದೊಳಗೆ ತೀರ್ಪು ನೀಡಲು ಜಿಲ್ಲಾಧಿಕಾರಿ ಸೂಚನೆ

ಕಾಸರಗೋಡು:  ನವಕೇರಳ ಸಭೆಯಲ್ಲಿ ಲಭಿಸಿದ ಎಲ್ಲಾ ದೂರುಗಳನ್ನು ಈ ತಿಂಗಳ ೨೨ರ ಮುಂಚಿತ ತೀರ್ಪು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸೂಚಿಸಿದ್ದಾರೆ. ಅರ್ಜಿಗಳ ಬಗ್ಗೆ ಪರಾಮರ್ಶೆ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಇಲಾಖೆ ಗಳಿಗೆ ಲಭಿಸಿದ ಜಿಲ್ಲೆಯಲ್ಲಿ ಜ್ಯಾರಿ ಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಅವುಗಳ ಸಾಧ್ಯತೆ ಅಧ್ಯಯನವನ್ನು ಆಯಾ ಇಲಾಖೆಗಳು ನಡೆಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ಜಿಲ್ಲಾಧಿಕಾರಿಗೆ ನೀಡಬೇಕು. ಅರ್ಜಿಗಳಲ್ಲಿ ತೀರ್ಪು ಕಲ್ಪಿಸುವಾಗ …

ಈಡೇರಿದ ಆಗ್ರಹ: ತೆಲಂಗಾನ ಸಚಿವರಿಂದ ಕುಕ್ಕೆ ಕ್ಷೇತ್ರಕ್ಕೆ ಒಂದು ಕೋಟಿ ರೂ. ದೇಣಿಗೆ

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ  ದೇವಸ್ಥಾನಕ್ಕೆ ತೆಲಂಗಾನದ ಕಂದಾಯ ಸಚಿವ ಒಂದು ಕೋಟಿ ರೂ. ದೇಣಿಗೆ ಸಮರ್ಪಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿ ತನ್ನ ಮನದಿಚ್ಛೆ ನೆರವೇರಿದರೆ ಒಂದು ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು. ಅದರಂತೆ ಮೂರು ತಿಂಗಳೊಳಗೆ ಅವರ ಆಗ್ರಹ ಈಡೇರಿದ್ದು, ಅದರ ನೆನಪಿಗೆ ನಿನ್ನೆ ಕ್ಷೇತ್ರಕ್ಕೆ ತಲುಪಿ ಒಂದು ಕೋಟಿ ರೂ. ಸಮರ್ಪಿಸಿದ್ದಾರೆ. ಸಚಿವ ಶ್ರೀನಿವಾಸ ರೆಡ್ಡಿ ಅಂದು ತನ್ನ ಮಗಳಿಗೆ ಉತ್ತಮ ವರ ಲಭಿಸಬೇಕೆಂದು ಪ್ರಾರ್ಥಿಸಿದ್ದರು. ಮೂರು ತಿಂಗಳಲ್ಲೇ …

ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ಷಷ್ಠೀ ಮಹೋತ್ಸವ

ಬದಿಯಡ್ಕ: ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠೀ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಉತ್ಸವದ ಅಂಗವಾಗಿ ನೀರ್ಚಾಲು ಅಶ್ವತ್ಥ ಕಟ್ಟೆಯಿಂದ ಹಾಗೂ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಿAದ ಹಸಿರುವಾಣಿ ಮೆರವಣಿಗೆ ನಡೆಯಿತು. ಗಣಪತಿ ಹೋಮ, ವೇದಪಾರಾಯಣ, ನವಕಾಭಿಷೇಕ, ತುಲಾಭಾರ ಸೇª,ೆ ದೀಪಾರಾಧನೆ, ತಾಯಂಬಕA, ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿAದ ಹುಲ್ಪೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮಣಿಕಂಠ ಭಜನಾ ಸಂಘ ಮಜಿರ್ಪಳ್ಳಕಟ್ಟೆಯ …

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಹಾಗೂ ಕ್ರಿಮಿನಲ್‌ಗಳಾಗಿರುವ ವಲಸೆ ಕಾರ್ಮಿಕರ ಪತ್ತೆ ಕಾರ್ಯಾಚರಣೆ ಮುಂದುವರಿಕೆ

ಕಾಸರಗೋಡು: ವಲಸೆ ಕಾರ್ಮಿಕರೆಂಬ ಸೋಗಿನಲ್ಲಿ  ಬಾಂಗ್ಲಾ ದೇಶ, ಪಾಕಿಸ್ತಾನ ಇನ್ನಿತರ ನೆರೆ ದೇಶಗಳಿಂದ ಅದೆಷ್ಟೋ ಮಂದಿ ನಕಲಿ ದಾಖಲು ಪತ್ರಗಳೊಂದಿಗೆ ಬಂದು ಕೇರಳದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆಂಬ ಮಾಹಿತಿ ಲಭಿಸಿರುವ  ಹಿನ್ನೆಲೆಯಲ್ಲಿ ಅಂತಹವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಗುರುತು ಚೀಟಿ ಹೊಂದಿರುವವರ ಮೇಲೂ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ. ವಲಸೆ ಕಾರ್ಮಿಕರ ಆಧಾರ್ ಕಾರ್ಡ್ ನಂಬ್ರವನ್ನು ಸಂಗ್ರಹಿಸಿ ಅದನ್ನು ಪರಿಶೀಲನೆಗಾಗಿ ಕೇಂದ್ರ ಹಾಗೂ ರಾಜ್ಯ ಐ.ಟಿ. ಇಲಾಖೆಗೆ ಕಳುಹಿಸಿ ಕೊಡಲಾಗುತ್ತಿದೆ ಎಂದು ರಾಜ್ಯ …

ಕೂಡ್ಲು: ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘ ಮಹಾಸಭೆ

ಕಾಸರಗೋಡು: ಕೇರಳ ರಾಜ್ಯ  ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘ ಕೂಡ್ಲು ಮತ್ತು ಮಹಿಳಾ ಹಾಗೂ ಯುವಕ ಸಂಘಗಳ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ವಿಶ್ವನಾಥ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ  ಮೀಪುಗುರಿಯ ಶ್ರೀ ಪಂಜುರ್ಲಿ ಕಲ್ಲುರ್ಟಿ ತರವಾಡಿನಲ್ಲಿ ಜರಗಿತು. ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಕುಂಬಳೆ, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ರಶಾಂತ್, ಯುವಕ ಸಂಘದ ಅಧ್ಯಕ್ಷ ಮುರಳೀ ಪಾರೆಕಟ್ಟೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಪಾಂಡುರಂಗ ವಿದ್ಯಾನಗರ ವರದಿ, ಲೆಕ್ಕಪತ್ರಗಳನ್ನು ದಿವಾಕರ ಮೀಪುಗುರಿ ಮಂಡಿಸಿದರು. …

ಬೈಕ್, ಕಾರು, ಆಟೋರಿಕ್ಷಾ ಪರಸ್ಪರ ಢಿಕ್ಕಿ : ವಿದ್ಯಾರ್ಥಿ ದಾರುಣ ಮೃತ್ಯು; ಮೂವರು ಜಖಂ

ಕಾಸರಗೋಡು: ಬೈಕ್, ಕಾರು ಮತ್ತು ಆಟೋರಿಕ್ಷಾಗಳು ಪರಸ್ಪರ ಢಿಕ್ಕಿ ಹೊಡೆದು ಅದರಲ್ಲಿ ಬೈಕ್ ಸವಾರನಾದ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದಿದೆ. ಕೋಳಿಯಡ್ಕದ ಚೆಮ್ನಾಡ್ ಗ್ರಾಮ ಪಂಚಾಯತ್ ಕಚೇರಿ ಸಮೀಪದ ಆಯಿಷಾ ಮಂಜಿಲ್‌ನ ಟಿ.ವಿ. ಮೊಹಮ್ಮದ್ ಅಶ್ರಫ್- ಫಾತಿಮಾ ದಂಪತಿ ಪುತ್ರ ಮಂಗಳೂರಿನ ಖಾಸಗಿ ಕಾಲೇಜಿನ  ದ್ವಿತೀಯ ವರ್ಷ ಬಿಕಾಂ ವಿದ್ಯಾರ್ಥಿ ಸಿ.ಎ. ಸಫರುಲ್ ಅಮಾನ್ (೧೯) ಸಾವನ್ನಪ್ಪಿದ ದುರ್ದೈವಿ ಯುವಕ. ಈ ಅಪಘಾತದಲ್ಲಿ ಆಟೋರಿಕ್ಷಾ ಪ್ರಯಾಣಿಕರಾದ ಹೊಸದುರ್ಗ ನಿವಾಸಿಗಳಾಗಿರುವ ಶ್ರೀಜೇಶ್, ವಿಜೇಶ್ ಮತ್ತು …