ಕಾಡು ಹಂದಿಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರಿಗೆ ಗಾಯ

ಕುಂಬಳೆ: ರಸ್ತೆಗೆ ಅಡ್ಡವಾಗಿ  ಓಡಿದ ಕಾಡು ಹಂದಿಗೆ ಢಿಕ್ಕಿ ಹೊಡೆದು ಬೈಕ್ ಮಗುಚಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಕೊಡ್ಯಮ್ಮೆ ನಿವಾಸಿ ಸಿನಾನ್ (೧೯), ಅನ್‌ಶಿತ್ (೧೬) ಎಂಬಿವರು ಗಾಯಗೊಂಡವರಾಗಿ ದ್ದಾರೆ. ನಿನ್ನೆ ಮುಂಜಾನೆ ೫.೩೦ರ ವೇಳೆ ಕಂಚಿಕಟ್ಟೆಯಲ್ಲಿ ಘಟನೆ ನಡೆ ದಿದೆ. ಈ ಇಬ್ಬರು ಆಟ ಮುಗಿದು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಕಂಚಿಕಟ್ಟೆಯಲ್ಲಿ ಕಾಡು ಹಂದಿ ರಸ್ತೆಗೆ ಅಡ್ಡವಾಗಿ ಓಡಿದೆ. ಈ ವೇಳೆ ಅದಕ್ಕೆ ಬೈಕ್ ಢಿಕ್ಕಿ ಹೊಡೆ ದಿದೆ. ಇತ್ತೀಚೆಗೆ ಕಂಚಿಕಟ್ಟೆಯಲ್ಲಿ ಡಜನ್‌ನಷ್ಟು …

ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರು ಮೋಟಾರ್ ಕಳವು: ಸಿಪಿಎಂನಿಂದ ಪಂ. ಕಚೇರಿಗೆ ಮಾರ್ಚ್

ಬದಿಯಡ್ಕ: ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರು ವಿತರಣೆಗೆ ಬಳಸುವ ಮೋಟಾರ್ ಕಳವುಗೈದವರನ್ನು ಮಾದರಿ ರೀತಿಯಲ್ಲಿ ಶಿಕ್ಷಿಸಬೇಕೆಂದು ಒತ್ತಾಯಿಸಿ ಸಿಪಿಎಂ ಬದಿಯಡ್ಕ, ನೀರ್ಚಾಲು ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಬದಿಯಡ್ಕ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು. ಕಳವುಗೈದ ಮೋಟಾರನ್ನು ಮರಳಿ ತಲುಪಿಸಿರುವುದರಿಂದ ಸಾರ್ವಜನಿಕ ಸೊತ್ತು ಕಳವು ಆರೋಪದಿಂದ ಮುಕ್ತವಾಗಲು ಸಾಧ್ಯವಿಲ್ಲವೆಂದು ಮಾರ್ಚ್‌ನಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟಿದ್ದಾರೆ. ಕಳವುಗೀಡಾದ ಸೊತ್ತು ಮರಳಿ ಲಭಿಸಿದುದರಿಂದ ಕಳವು ಪ್ರಕರಣ ಅಗತ್ಯವಿಲ್ಲವೆಂಬ ಪೊಲೀಸರ ನಿಲುವನ್ನು ಅಂಗೀಕರಿಸಲಾಗದು ಎಂದು ಕಾರ್ಯಕರ್ತರು ಮುನ್ನೆಚ್ಚರಿಕೆ ನೀಡಿದರು. ಇಂತಹ ನಿಲುವನ್ನು …

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನ: ಸ್ಥಿತಿ ಗಂಭೀರ

ಕರಾಚಿ: ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಭೂಗತ ಪಾತಕಿ ಮೂಲತಃ ಮುಂಬೈ ನಿವಾಸಿ ಈಗ ಪಾಕಿಸ್ತಾನದ ಕರಾಚಿಯಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿರುವ ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಷಪ್ರಾಶನ ಮಾಡಿದ್ದು, ಆತನನ್ನು ಕರಾಚಿಯ ಆಸ್ಪತ್ರೆಯೊಂ ದರಲ್ಲಿ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆಯೆಂದು ವರದಿಯಾ ಗಿದೆ. ಆದರೆ ಪಾಕಿಸ್ತಾನ ಇದನ್ನು ಇನ್ನೂ ದೃಢೀಕರಿಸಿಲ್ಲ. ಮೊದಲೇ ಕಾಯಿಲೆಯಿಂದ ಬಳಲುತ್ತಿದ್ದ ದಾವೂದ್ ಇಬ್ರಾಹಿಂ ವಿಷಪ್ರಾಶನ ಮಾಡಿದ್ದು, ವಿಷವನ್ನು ಆತ ಹಾಗೂ ವೈದ್ಯರ ಗಮನಕ್ಕೂ ಬಾರದ …

ಗಾಂಜಾ ಸಸಿ, ಗಾಂಜಾ, ಮದ್ಯ, ವಾಹನ ವಶ: ಐದು ಮಂದಿ ಸೆರೆ

ಕಾಸರಗೋಡು: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ವೇಳೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಮದ್ಯ ಮತ್ತಿತರ ಮಾದಕ ದ್ರವ್ಯ ಹರಿದು ಬರುವ ಸಾಧ್ಯತೆಯನ್ನು ಪರಿಗಣಿಸಿ ಅದನ್ನು  ತಡೆಗಟ್ಟಲು ಅಬಕಾರಿ ಇಲಾಖೆ ಆರಂ ಭಿಸಿರುವ ದಾಳಿ ಇನ್ನೂ ಜೋರಾ ಗಿಯೇ ಮುಂದುವರಿಯುತ್ತಿದೆ. ಇದರಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ, ಗಾಂಜಾ ಮತ್ತು ಗಾಂಜಾ ಸಸಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮಾತ್ರವಲ್ಲ ಇದಕ್ಕೆ ಸಂಬಂಧಿಸಿ ಐವರನ್ನು ಸೆರೆ ಹಿಡಿಯಲಾಗಿದೆ. ಹಾಗೂ ಎರಡು …

ತಾಯಿ, ಮಗಳು ನಾಪತ್ತೆ-ದೂರು

ಮಂಜೇಶ್ವರ: ತಾಯಿ ಮತ್ತು ಮಗಳು ನಾಪತ್ತೆಯಾದ ಬಗ್ಗೆ ಮಂ ಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೈವಳಿಕೆ ಭಂಡಾರ ಹೌಸ್‌ನ ಗಲ್ಪ್ ಉದ್ಯೋಗಿ ಯೂಸಫ್ ಎಂಬರ ಪತ್ನಿ ಕದೀಜತ್ ತಾಹಿರ [33] ಹಾಗೂ 8ವರ್ಷದ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾರೆ. ನವಂಬರ್ 7ರಂದು ಬೆಳಿಗ್ಗೆ ಮನೆಯಿಂದ ಇವರಿ ಬ್ಬರು ಟೈಲರಿಂಗ್ ಶಾಪï‌ಗೆಂದು ಹೇಳಿ ತೆರಳಿದವರು ಬಳಿಕ ಮರಳ ಲಿಲ್ಲವೆಂದು ಕದೀಜತ್ ತಾಹಿರ ರವರ ಸಹೋದರ ಅಶ್ರಫ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಯುವತಿಗೆ ಕಾರಿನೊಳಗೆ ಕಿರುಕುಳ: ಆರೋಪಿಗೆ ರಿಮಾಂಡ್

ಕಾಸರಗೋಡು: ಮಗುವಿನ ಚಿಕಿತ್ಸೆಗೆ ಸಹಾಯ ದೊರಕಿಸುವುದಾಗಿ ತಿಳಿಸಿ ಕಾಸರಗೋಡು ನಿವಾಸಿಯಾದ ೩೬ರ ಹರೆಯದ ಯುವತಿಗೆ ಕಾರಿನೊಳಗೆ ಕಿರುಕುಳ ನೀಡಲಾಯಿತೆಂಬ ಪ್ರಕರಣದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದ್ದು, ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಹೊಸದುರ್ಗ ಕಡಪ್ಪುರ ಬದ್ರಿಯಾ ನಗರ ಚಿರಮ್ಮಲ್ ಹೌಸ್‌ನ ಸಿ.ಎಚ್. ಮಜೀದ್ (೫೦) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ಪ್ರಕರಣಕ್ಕೆ ಕಾರಣವಾದ ಘಟನೆ ಇತ್ತೀಚೆಗೆ ನಡೆದಿದೆ. ಕಾಞಂಗಾಡ್‌ನಿಂದ ಯುವತಿಯನ್ನು ಕಾರಿಗೆ ಹತ್ತಿಸಿ ಕರೆದೊಯ್ದು ತೆಂಗಿನ ತೋಟದಲ್ಲಿ ಕಾರು ನಿಲ್ಲಿಸಿದ ಬಳಿಕ ಕಿರುಕುಳ ನೀಡಲಾಯಿತೆಂದು ದೂರಲಾಗಿದೆ. ಐವರು ಮಕ್ಕಳಿರುವ ತಾಯಿಯಾಗಿರುವ ಯುವತಿಗೆ ಮಜೀದ್‌ನನ್ನು …

ಕುಂಡಂಕುಳಿ ಜಿಬಿಜಿ ಠೇವಣಿ ವಂಚನೆ : ಕಣ್ಣೂರು ನಿವಾಸಿಗಳ ೧೦ ಲಕ್ಷರೂ. ವಂಚನೆ

ಕಾಸರಗೋಡು: ಕುಂಡಂಕುಳಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಗ್ಲೋಬಲ್ ಬಿಸ್‌ನೆಸ್ ಗ್ರೂಪ್ (ಜಿಬಿಜಿ) ವಂಚನೆಗೆ ಸಂಬಂಧಿಸಿ  ಬೇಡಗಂ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ವಂಚನೆಗೆ ಸಂಬಂಧಿಸಿ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ ೨೨ಕ್ಕೇರಿದೆ. ಕಣ್ಣೂರು ವೆಳ್ಳೋರ ವಿಲ್ಲೇಜ್‌ನ ಪೆರುಂಬಡವ್ ವೆಳ್ಳಿ ಪಳ್ಳಿಲ್ ನಿವಾಸಿ ಬಿನೇಶ್ ಮೈಕಲ್ ನೀಡಿದ ದೂರಿನಂತೆ ಈಗ ಕೇಸು ದಾಖಲಿಸಲಾಗಿದೆ. ಜಿಬಿಜಿ ಮೆನೇಜಿಂಗ್ ಡೈರೆಕ್ಟರ್ ಕುಂಡಂಕುಳಿಯ ಡಿ. ವಿನೋದ್ ಕುಮಾರ್ (೫೦), ಆಲಂಪಾಡಿ ನಾಲ್ತಡ್ಕದ ಮೊಹಮ್ಮದ್ ರಸಾಕ್ (೪೧) ಪಿಲಿಕ್ಕೋಡ್ ಮಲ್ಲಕ್ಕರದ  ಸಿ. …

ಖೋಟಾನೋಟುಗಳ ಸಹಿತ ಮಂಜೇಶ್ವರ ನಿವಾಸಿ ಮಂಗಳೂರಿನಲ್ಲಿ ಸೆರೆ

ಮಂಗಳೂರು: ಖೋಟಾನೋಟುಗಳ ಸಹಿತ ಮಂಜೇಶ್ವರ ನಿವಾಸಿಯೋರ್ವ ಮಂಗಳೂರಿನಲ್ಲಿ ಸೆರೆಗೀಡಾಗಿದ್ದಾನೆ. ಮಂಜೇಶ್ವರ, ಕೀರ್ತೇಶ್ವರ ಆಬುಪಡ್ಪುವಿನ ಪ್ರಶ್ವಿತ್ (೨೫) ಎಂಬಾತನನ್ನು ಕಂಕನಾಡಿಯಿಂದ ಸಿಟಿ ಕ್ರೈಂಬ್ರಾಂಚ್ ಪೊಲೀಸರು ಸೆರೆ ಹಿಡಿದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲರಿಗೆ ಲಭಿಸಿದ ಗುಪ್ತ ಮಾಹಿತಿ ಹಿನ್ನೆಲೆಯಲ್ಲಿ ಡಿ.ಸಿ.ಪಿ ಸಿದ್ಧಾರ್ಥ್ ಗೋಯಲ್‌ರ ನೇತೃತ್ವದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪ್ರಶ್ವಿತ್‌ನ ಕೈಯಿಂದ ೫೦೦ ರೂಪಾಯಿಗಳ ಮೂರು, ೨೦೦ ರೂಪಾಯಿಗಳ ಎರಡು, ೧೦೦ ರೂಪಾಯಿಗಳ ಮೂರು ಖೋಟಾನೋಟುಗಳನ್ನು ವಶಪಡಿಸಲಾಗಿದೆ. ೪೨೫೦ ರೂಪಾಯಿಯ ಅಸಲಿ ನೋಟುಗಳು ಹಾಗೂ …

ಸೋಂಕಾಲಿನಲ್ಲಿ ನಿರಂತರ ಕುಡಿಯುವ ನೀರು ಪೋಲು: ದುರಸ್ತಿಗೆ ಒತ್ತಾಯ

ಉಪ್ಪಳ: ಪ್ರತಾಪನಗರದ ೭ನೇ ವಾರ್ಡ್ ಸೋಂಕಾಲಿನಲ್ಲಿ ಪೈಪ್ ಬಿರುಕು ಬಿಟ್ಟು ವ್ಯಾಪಕ ಕುಡಿ ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದರಿಂದ ಮುಂದೆ ನೀರಿನ ಕ್ಷಾಮ ತಲೆದೆÀÆÃರಲಿದೆ ಎಂದು ಊರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕಾಲು ಬಸ್ ನಿಲ್ದಾಣ ಬಳಿಯಲ್ಲಿ ಹಲವಾರು ದಿನಗಳಿಂದ ಪೈಪ್ ಬಿರುಕುಬಿಟ್ಟಿದ್ದು, ಇದರಿಂದ ನೀರು ಪೋಲಾಗಿ ರಸ್ತೆ ಉದ್ದಕ್ಕೂ ಹರಿದು ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿ ವಾಹನ ಸಂಚಾರ ಸಹಿತ ನಡೆದದಾಡಲು ಸಮಸ್ಯೆಯಾಗಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಸ್ಥಳೀಯರು ಸಂಬAಧಪಟ್ಟವರ ಗಮನಕ್ಕೆ ತಂದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು …

ಮಂಗಲ್ಪಾಡಿ ಪಂ. ಲ್ಯಾಪ್‌ಟಾಪ್ ಹಂಚಿಕೆಯಲ್ಲಿ ಅವ್ಯವಹಾರ: ತನಿಖೆಗೆ ಬಿಜೆಪಿ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ೭, ೧೯ನೇ ವಾರ್ಡ್‌ನಲ್ಲಿನ ಮೂವರು ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲ್ಯಾಪ್‌ಟಾಪ್ ಪಡೆದು ವಂಚಿಸಿದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಪಂ. ಸಮಿತಿ ಆಗ್ರಹಿಸಿದೆ. ಪಂಚಾಯತ್‌ನ ೨೦೨೨-೨೩ನೇ ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸೋಷ್ಯಲ್ ಆಡಿಟಿಂಗ್‌ನಿಂದ ತಿಳಿದು ಬಂದಿದೆ ಎಂದು ಬಿಜೆಪಿ ತಿಳಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ …