ಜಿಲ್ಲಾ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ದಯಾಮರಣ ನೀಡಬೇಕೆಂದು ಮಹಿಳಾ ನ್ಯಾಯಾಧೀಶೆಯ ಬೇಡಿಕೆ; ವರದಿ ಕೇಳಿದ ಚೀಫ್ ಜಸ್ಟೀಸ್

ಹೊಸದಿಲ್ಲಿ: ಜಿಲ್ಲಾ ನ್ಯಾಯಾ ಧೀಶ ಲೈಂಗಿಕ ಕಿರುಕಳ ನಡೆಸಿದ್ದಾ ರೆಂದು ತಿಳಿಸಿ ಮಹಿಳಾ ನ್ಯಾಯಾ ಧೀಶೆ ಯೊಬ್ಬರು ಸುಪ್ರೀಂಕೋ ರ್ಟ್‌ನ ಚೀಫ್ ಜಸ್ಟೀಸ್‌ಗೆ ದೂರು ನೀಡಿದ್ದಾರೆ. ತನಗೆ ದಯಾಮರಣಕ್ಕೆ   ಅನುಮತಿ ನೀಡಬೇಕೆಂದೂ  ನ್ಯಾಯಾಧೀಶೆ ದೂರಿನಲ್ಲಿ ವಿನಂತಿಸಿ ದ್ದಾರೆ.  ದೂರಿನ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅವರು ಅಲಹಾಬಾದ್ ಹೈಕೋರ್ಟ್ ನೊಂದಿಗೆ ವರದಿ ಆಗ್ರಹಪಟ್ಟಿದ್ದಾರೆ. ಉತ್ತರಪ್ರದೇಶದ ಬಂಧ ಜಿಲ್ಲೆಯ   ನ್ಯಾಯಾಧೀಶೆ ಚೀಫ್  ಜಸ್ಟೀಸ್‌ರಿಗೆ ದೂರು ಒಳಗೊಂಡ ಪತ್ರ ಕಳುಹಿಸಿದ್ದಾರೆ. ನ್ಯಾಯಾಧೀ ಶರು ಲೈಂಗಿಕವಾಗಿ ಕಿರುಕುಳ ನೀಡಿ …

ತೊಟ್ಟಿಲಿನ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ದಾರುಣ ಮೃತ್ಯು

ಮಲಪ್ಪುರಂ: ತೊಟ್ಟಿಲಿನ ಹಗ್ಗ ಕುತ್ತಿಗೆಗೆ ಸಿಲುಕಿ ಆರರ ಹರೆಯದ ಬಾಲಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಲಪ್ಪುರಂ ಕುಟ್ಟಿಪುರ ಬಾಂಗ್ಲಾಕುನ್ನು ಎಂಬಲ್ಲಿನ ಹಯಾ ಫಾತಿಮ ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ನಿನ್ನೆ ರಾತ್ರಿ ಈ ದಾರುಣ ಘಟನೆ ನಡೆದಿದೆ. ತೊಟ್ಟಿಲಿನಿಂದ ಬಾಲಕಿ ಇಳಿಯುತಿ ದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿತ್ತು. ಇದರಿಂದ ಬಾಲಕಿಯ ಬೊಬ್ಬೆ ಕೇಳಿ ತಲುಪಿದ ಮನೆ ಮಂದಿ ಕೂಡಲೇ ಹಗ್ಗವನ್ನು ಬಿಡಿಸಿ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ರಾಜ್ಯಪಾಲರ ವಿರುದ್ಧ ಪ್ರತಿಭಟನೆ: ಎಸ್‌ಎಫ್‌ಐ ಕಾರ್ಯಕರ್ತರ ಜಾಮೀನು ಅರ್ಜಿ ವಜಾ

ತಿರುವನಂತಪುರ: ತಿರುವನಂ ತಪುರದಲ್ಲಿ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ ಅವರ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂ ಗ ಬಂಧನಕ್ಕೊಳಗಾದ ಆರೋಪಿಗ ಳಾದ ಎಸ್‌ಎಫ್‌ಐ ಕಾರ್ಯಕರ್ತರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರುವನಂತಪುರ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ವಜಾಗೈದು, ಅವರಿಗೆ ಜಾಮೀನು ನಿರಾಕರಿಸಿದೆ. ಎಸ್‌ಎಫ್‌ಐ ಕಾರ್ಯಕರ್ತ ರಾದ ಯದುಕೃಷ್ಣನ್, ಆಶಿಕ್  ಪ್ರದೀಪ್, ಆರ್.ಜಿ. ಆಶಿಕ್, ದಿಲೀ ಪ್, ರಯಾನ್, ರಿನೋ ಸ್ಟೀಫನ್, ಅಮಲ್ ಎಂಬವರು ಈ ಪ್ರಕರಣದ …

ಹೊಯ್ಗೆ ಸಾಗಾಟಕ್ಕೆ ಹಿತ್ತಿಲ ಮೂಲಕ ರಸ್ತೆ: ಇಬ್ಬರ ವಿರುದ್ಧ ಕೇಸು; ಏಳು ಕಡವುಗಳ ನಾಶ

ಕುಂಬಳೆ: ಅನಧಿಕೃತವಾಗಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಹೊಯ್ಗೆ ಸಾಗಾಟ ವಿರುದ್ಧ ಪೊಲೀಸರು ಹದ್ದುಗಣ್ಣಿಟ್ಟು ಕಾರ್ಯಾಚರಣೆ ನಡೆಸಿದರೂ ನಾಮಾತ್ರವೇ ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹೊಯ್ಗೆ ಸಾಗಾಟ ನಡೆಸಲು ಕೆಲವು ಮಂದಿ ತಮ್ಮ ಹಿತ್ತಿಲ ಮೂಲಕ ರಸ್ತೆ ನಿರ್ಮಿಸಿ ನೀಡುತ್ತಿರು ವುದು ಕೂಡಾ ಪೊಲೀಸರಿಗೆ ತಿಳಿದು ಬಂದಿದೆ. ಇದರಂತೆ ಹಿತ್ತಿಲಿನ ಮೂಲಕ ರಸ್ತೆ ನಿರ್ಮಿಸಿದವರ ವಿರುದ್ಧ ಕುಂಬಳೆ ಇನ್ಸ್‌ಪೆಕ್ಟರ್ ಕೇಸು ದಾಖಲಿಸಿಕೊಂಡಿ ದ್ದಾರೆ. ಶಿರಿಯಾ ಒಳಯಂನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಏಳು …

ಎಂಡಿಎಂಎ ಸಹಿತ ಪುತ್ತಿಗೆ ನಿವಾಸಿ ಸೆರೆ

ಬದಿಯಡ್ಕ: ೯.೦೮ ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಯಾಗಿದ್ದಾನೆ. ಪುತ್ತಿಗೆ ಕಟ್ಟತ್ತಡ್ಕ, ಎಕೆಜಿ ನಗರದ ಮುಹಮ್ಮದ್ ಹನೀಫ್ (೩೩)ನನ್ನು ಬದಿಯಡ್ಕ ಎಸ್.ಐ. ಅನೂಪ್ ಮತ್ತು ತಂಡ ಸೆರೆಹಿಡಿದಿದೆ. ನಿನ್ನೆ ರಾತ್ರಿ ೭.೧೫ ಗಂಟೆಗೆ ಬದಿಯಡ್ಕ ಬೋಳುಕಟ್ಟೆಯಿಂದ ಈತನನ್ನು ಸೆರೆ ಹಿಡಿಯಲಾಗಿದೆ. ಪೊಲೀಸರು ರಾತ್ರಿ ಕಾಲ ತಪಾಸಣೆ ನಡೆಸುವುದರ ಮಧ್ಯೆ ಬಸ್ ನಿಲ್ದಾಣದಲ್ಲಿ ಸಂಶಯಕರವಾದ ಸನ್ನಿವೇಶದಲ್ಲಿ ಕಂಡುಬಂದ ಮುಹಮ್ಮದ್ ಹನೀಫ್‌ನನ್ನು ಕಸ್ಟಡಿಗೆ ತೆಗೆದು ತಪಾಸಿಸಿದಾಗ ಮಾದಕ ಪದಾರ್ಥ ಪತ್ತೆಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಸೌಖ್ಯ: ಅಧ್ಯಾಪಿಕೆ ನಿಧನ

ಉಪ್ಪಳ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಸ್ಕೂಲ್ ಅಧ್ಯಾಪಕ, ಕುಬಣೂರು ವಿದ್ಯಾ ನಗರ ನಿವಾಸಿ ಹರಿನಾಥ ಕೆ.ಪಿ.ರವರ ಪತ್ನಿ ರೂಪಶ್ರೀ (೩೯) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದ ಇವರು ಏಳ್ಕಾನ ಕೆದ್ವಾರ್ ರಾಮಚಂದ್ರ- ಕಮಲ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಪುತ್ರಿ ದೃತಿ ಶೆಟ್ಟಿ, ಸಹೋದರಿ ಯರಾದ ಶಶಿ, ಪವಿತ್ರ, ಸಹೋದರ ಪ್ರಸನ್ನ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

ಶಾಲಾ ಪರಿಸರದಲ್ಲಿ ಮದ್ಯಪಾನ ಪ್ರಶ್ನಿಸಿದ ಯುವಕನನ್ನು ಇರಿದು ಕೊಲೆಗೈದ ಪ್ರಕರಣ: ಇಬ್ಬರ ಸೆರೆ

ತಲಪ್ಪಾಡಿ: ಶಾಲಾ ಪರಿಸರದಲ್ಲಿ ಮದ್ಯಪಾನವನ್ನು ಪ್ರಶ್ನಿಸಿದ ದ್ವೇಷದಿಂದ ಯುವಕನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಸೆರೆಗೀಡಾಗಿದ್ದಾರೆ. ಸೋಮೇಶ್ವರ ಪಂಚಾಯತ್ ಮಾಜಿ ಸದಸ್ಯ ರವಿರಾಜ್ (೪೪), ಸೂರಜ್ (೪೦) ಎಂಬಿವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಇಡೀ ನಾಡನ್ನು ಕಣ್ಣೀರಿನಲ್ಲಿ ಮುಳುಗಿಸುವ ಕೊಲೆಕೃತ್ಯ ನಡೆದಿದೆ. ಆರೋಪಿಗಳು ಕೊಲ್ಯ ಜೋಯ್‌ಲ್ಯಾಂಡ್ ಶಾಲೆ ಸಮೀಪ ಕುಳಿತು ಮದ್ಯ ಸೇವಿಸಿ, ಮದ್ಯದ ಬಾಟ್ಲಿಗಳನ್ನು ಒಡೆದು ಹಾಕಿದ್ದಾರೆ. ಸಂಬಂಧಿಕರ ಮನೆಗೆ ತೆರಳಿ ಮರಳುತ್ತಿದ್ದ ಸಾರಸ್ವತ ಕಾಲನಿಯ ವರುಣ್ ಅದನ್ನು ಕಂಡು ಪ್ರಶ್ನಿಸಿದ್ದರು. ಈ …

ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಅನ್ವಿತ ಆರ್.ವಿ. ಆಯ್ಕೆ

ಕಾಸರಗೋಡು: ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನ್ವಿತ ಆರ್.ವಿ. ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕಾಸರಗೋಡು ಜಿಲ್ಲಾ ಶಾಲಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾಳೆ.ಕಾರಡ್ಕ ನೆಚ್ಚಿಪಡ್ಪು ರಾಮಚಂದ್ರ-ವಿದ್ಯಾ ದಂಪತಿ ಪುತ್ರಿಯಾದ ಅನ್ವಿತ ಆರ್.ವಿ. 14 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದು, ತನ್ನ ಮೊದಲ ಪ್ರಯತ್ನದಲ್ಲೇ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಈ ಹಿಂದೆ ಜಿಲ್ಲಾ ತಂಡದ ಉಪನಾಯಕಿಯಾಗಿಯೂ, 15 ವರ್ಷಕ್ಕಿಂತ ಕೆಳಗಿನ ಉತ್ತರ ವಲಯ ತಂಡದಲ್ಲಿ ಕಳೆದ 2 ಸಲವೂ, …

ರಾಜ್ಯಪಾಲರ ಮೇಲೆ ಹಲ್ಲೆಗೆತ್ನ: ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‌ರನ್ನು ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ತಡೆದು ಹಲ್ಲೆಗೆ ಯತ್ನಿಸಿದ ಘಟನೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೇರಳದಲ್ಲಿ ಶಾಂತಿ ಸುವ್ಯವಸ್ಥೆ ಪೂರ್ಣವಾಗಿ ಹದಗೆಟ್ಟಿದೆ ಎಂದು ಅಂದಾಜಿಸಿರುವ ಕೇಂದ್ರ ಗೃಹಖಾತೆ, ಈ ಕುರಿತಾಗಿ ಕೇಂದ್ರ ಸೇವೆಯಲ್ಲಿ ರುವ ಉನ್ನತಾಧಿಕಾರಿಗಳಿಗೆ ಕಠಿಣ ತಾಕೀತು ನೀಡುವ ಸಾಧ್ಯತೆ ಇದೆಯೆಂದೂ ಹೇಳಲಾಗುತ್ತಿದೆ. ಇಝೆಡ್ ಪ್ಲಸ್ ಭದ್ರತೆಯುಳ್ಳ ರಾಜ್ಯಪಾಲರ ವಿರುದ್ಧ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆ, ಹಲ್ಲೆ ಯತ್ನದಂತಹ ಘಟನೆಯನ್ನು ಕ್ಷುಲ್ಲಕವಾಗಿ ಕಂಡರೆ ಸಂಬಂಧ ಪಟ್ಟವರ ವಿರುದ್ಧ …

ಭಕ್ತರ ಮೇಲೆ ಸರಕಾರ ಉದ್ದೇಶ ಪೂರ್ವಕ ಗದಾ ಪ್ರಹಾರ- ರವೀಶ ತಂತ್ರಿ ಕುಂಟಾರು

ಮಂಜೇಶ್ವರ: ಶಬರಿಮಲೆ ಆದಾಯವನ್ನು ಮಾತ್ರ ಕಣ್ಣಿಟ್ಟಿರುವ ಕೇರಳ ಸರಕಾರ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಭಕ್ತರು ನರಕ ಯಾತನೆ ಅನುಭವಿಸುವಂತಾಗಿದೆ. ಇದರ ಶಾಪ ಎಡರಂಗ ಸರಕಾರಕ್ಕೆ ತಟ್ಟಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ನೇತಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಮುಗ್ಗಟ್ಟಿನಲ್ಲಿರುವ ಸರಕಾರ ಲೈಫ್ ಯೋಜನೆಯ ಹಣ ಬಿಡುಗಡೆ ಮಾಡದೆ ವಂಚಿಸುತ್ತಿದೆ. ಪಂಚಾಯತ್‌ಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಮಂಜೇಶ್ವರ ಮಂಡಲ …