ಊರಾಲುಂಗಲ್ ಸೊಸೈಟಿ ನೌಕರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬಂದ್ಯೋಡು:  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯಾದ ಊರಾಲುಂಗಲ್ ಸೊಸೈಟಿಯ ನೌಕರನೋರ್ವ ವಾಸಸ್ಥಳದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪಶ್ಚಿಮಬಂಗಾಲ ನಿವಾಸಿ ಬುತ್ತನ್ ಸಿಂಗ್ (೨೬) ಮೃತಪಟ್ಟ ವ್ಯಕ್ತಿ. ಇವರು ಕಳೆದ ಒಂದು ವರ್ಷದಿಂದ ಬಂದ್ಯೋಡು ಮುಟ್ಟಂನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಇವರು ಕೆಲಸಕ್ಕೆ ತಲುಪಿರಲಿಲ್ಲ. ಇದರಿಂದ ಇತರ ಕೆಲಸಗಾರರು  ಹುಡುಕಿ ಕ್ವಾರ್ಟರ್ಸ್‌ಗೆ ತಲುಪಿದಾಗ  ಬುತ್ತನ್ ಸಿಂಗ್ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಯುವಕನ ಮೇಲೆ ಹಲ್ಲೆ ನಡೆಸಿ ಸ್ಕೂಟರ್  ಹಿಡಿದೆಳೆದು ಸಾಗಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಕಳೆದ ನವಂಬರ್ ೧೬ರಂದು ರಾತ್ರಿ ತಳಂಗರೆಯ ಹೋಟೆಲೊಂದಕ್ಕೆ ಆಹಾರ ಸೇವಿಸಲು ಹೋಗಿದ್ದ ಅಡ್ಕತ್ತಬೈಲು ನಿವಾಸಿ ರಾಜೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಹಿಡಿದೆಲೆದು ಎಸೆದ ಬಳಿಕ ಅವರ ಕೈಯಲ್ಲಿದ್ದ ಸ್ಕೂಟರ್‌ನ ಕೀಲಿಯನ್ನು ಹಿಡಿದೆಳೆದು  ಆ ಸ್ಕೂಟರ್‌ನೊಂದಿಗೆ ಸಾಗಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ವಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈ ಹಿಂದೆ ತೆರುವತ್ ಸಿರಾಮಿಕ್ಸ್ ರೋಡ್ ಕ್ವಾರ್ಟರ್ಸ್ ಒಂದರಲ್ಲಿ  ವಾಸಿಸುತ್ತಿದ್ದು ಈಗ ಉಳಿಯತ್ತಡ್ಕದಲ್ಲಿ ನೆಲೆಸಿರುವ ಜಾವೀದ್ …

ಉಳ್ಳಾಲದಲ್ಲಿ ಯುವಕನನ್ನು ಇರಿದು ಕೊಲೆ

ತಲಪ್ಪಾಡಿ: ಮದ್ಯಪಾನ ವೇಳೆ ಉಂಟಾದ ಜಗಳ ತಾರಕಕ್ಕೇರಿದ ಪರಿಣಾಮ ಯುವಕನೋರ್ವ ಇರಿತಕ್ಕೆ ಬಲಿಯಾದ ಘಟನೆ ನಡೆದಿದೆ.  ಉಳ್ಳಾಲ ಸರಸ್ವತಿ ಕಾಲನಿಯ ವರುಣ್ (೨೮) ಎಂಬವರು ಕೊಲೆಗೀಡಾದ ವ್ಯಕ್ತಿ. ಸೋಮೇಶ್ವರ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದಾಗ ಉಂಟಾದ ತರ್ಕದ ಹಿನ್ನೆಲೆಯಲ್ಲಿ  ಸೂರಜ್ ಎಂಬಾತ ಇರಿದು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೨೭ರಂದು ಉಳ್ಳಾಲ ನಗರಸಭೆಗೆ ಚುನಾವಣೆ ನಡೆಯಲಿರುವುದು. ಇದಕ್ಕೆ ಸಂಬಂಧಿಸಿ  ನಡೆದ ವಾಗ್ವಾದ ತಾರಕಕ್ಕೇರಿ ಅದು ಕೊಲೆಯಲ್ಲಿ ಪರ್ಯವಸಾನಗೊಂ …

ಗಡಿ ಪ್ರದೇಶಗಳಿಗೆ ನಕಲಿ ಮದ್ಯ ಸಾಗಾಟ ನಡೆಸುವ ಕೇಂದ್ರ ಪತ್ತೆ: ಸ್ಪಿರಿಟ್, ಮದ್ಯ ವಶ

ಮಂಜೇಶ್ವರ: ಕೇರಳ ಹಾಗೂ ಗಡಿ ಪ್ರದೇಶಗಳಿಗೆ ವ್ಯಾಪಕವಾಗಿ ನಕಲಿ ಮದ್ಯ ಸಾಗಾಟ ನಡೆಸುವ ಕೇಂದ್ರವೊಂದನ್ನು ಕರ್ನಾಟಕ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ತಲಪಾಡಿಯ ಮನೆಯೊಂದನ್ನು ಕೇಂದ್ರೀಕರಿಸಿ ನಡೆಯುವ ನಕಲಿ ಮದ್ಯ ಕೇಂದ್ರದಿಂದ ವಿವಿಧ ಭಾಗಗಳಿಗೆ ಮದ್ಯ ಸಾಗಾಟವಾಗುತ್ತಿದೆಯೆಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಕರ್ನಾಟಕ ಅಬಕಾರಿ ಅಧಿಕಾರಿಗಳು ಆ ಮನೆಗೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಮದ್ಯ ಹಾಗೂ ಸ್ಪಿರಿಟ್ ಪತ್ತೆಹಚ್ಚಲಾಗಿದೆ. ತಲಪಾಡಿ ಗಡಿ ಪ್ರದೇಶದ ಬಳಿಯ ಸಾಂತ್ಯಾ …

ಹಣಕಾಸು ಪ್ರಕರಣ: ೩೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಜೇಶ್ವರ; ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ೩೨ ವರ್ಷಗಳ ಬಳಿಕ ಪೊಲೀಸರು ಸೆರೆಹಿಡಿದಿದ್ದಾರೆ. ಉಪ್ಪಳ ನಿವಾಸಿ ಇಕ್ಬಾಲ್ (೭೦) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಈ ಹಿಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ಸೆರೆ ಹಿಡಿದಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಈತ ತಲೆಮರೆಸಿಕೊಂಡಿದ್ದನು. ಪೊಲೀಸರು ಈತನಿಗೆ ತೀವ್ರ ಶೋಧ ನಡೆಸುತ್ತಿದ್ದರೂ ಈ ಮಧ್ಯೆ ಈತ ಮಲಪ್ಪುರಂನ ಎಡಕ್ಕರ ಎಂಬಲ್ಲಿರುವುದಾಗಿ ಮಾಹಿತಿ ಲಭಿಸಿದೆ. ಇದರಂತೆ ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದು ಕಿಲೋ ತಂಬಾಕು ಉತ್ಪನ್ನ ಪತ್ತೆ

ಬದಿಯಡ್ಕ: ಬದಿಯಡ್ಕ ಅಬಕಾರಿ ರೇಂಜ್‌ನ ಎಕ್ಸೈಸ್, ಇನ್ಸ್‌ಪೆಕ್ಟರ್ ವಿನು ಎಚ್‌ರ ನೇತೃತ್ವದ ತಂಡ ಬೋವಿಕ್ಕಾನದಲ್ಲಿ  ಎರಡು ಅಂಗಡಿಗಳು ಮತ್ತು ಪರಿಸರದಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ೧ ಕಿಲೋದಷ್ಟು ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿದೆ. ಮಾತ್ರವಲ್ಲ ಇದಕ್ಕೆ ಸಂಬಂಧಿಸಿ ಓರ್ವನಿಂದ ೫೦೦೦ ರೂ. ಮತ್ತು ಇನ್ನೋರ್ವನಿಂದ ೨೦೦ ರೂ. ದಂಡ ವಸೂಲಿ ಮಾಡಿ, ಅವರಿಗೆ ಅಬಕಾರಿ ಅಧಿಕಾರಿಗಳು ಮುನ್ನೆಚಚರಿಕೆಯನ್ನು ನೀಡಿದರು. ಅಬಕಾರಿ ಇಲಾಖೆಯ ಸಿಇಒಗಳಾದ ಜೋಬಿ ಪೋಲ್, ಮೋಹನ್ ಕುಮಾರ್, ಜೋಬಿ ಮತ್ತು ಪ್ರಭಾಕರನ್ …

ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ದೀಪಕ್ ನಿಧನ

ಪೆರ್ಲ: ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ದೀಪಕ್ ಭಂಡಾರದ ಮನೆ (೫೭) ನಿಧನಹೊಂದಿ ದರು. ನಿನ್ನೆ ಹೃದಯಾಘಾತ ಉಂಟಾಗಿ ನಿಧನ ಸಂಭವಿಸಿದೆ. ಎಣ್ಮಕಜೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ, ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಯಾಗಿದ್ದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಸದಸ್ಯರಾಗಿದ್ದರು. ಮೃತರು ತಾಯಿ ಗೌರಿ, ಪತ್ನಿ ರವಿಕಲಾ, ಮಕ್ಕಳಾದ ಶ್ರೇಯಸ್, ಸಮರ್ಥ್, ಸಹೋದರ ಪ್ರಕಾಶ್, ಸಹೋದರಿ ಚಂದ್ರಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ …

ಮರ ವ್ಯಾಪಾರಿ ನಿಧನ

ಪೆರ್ಲ: ಗೋಳಿತ್ತಡ್ಕ ನಿವಾಸಿ ಹುಸೈನ್ ಕುಂಞಿ    (೬೫) ನಿಧನ ಹೊಂದಿದರು. ಈ ಹಿಂದೆ ಮರ ವ್ಯಾಪಾರ ನಡೆಸುತ್ತಿದ್ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು.  ಮೃತರು ಪತ್ನಿ ಆಯಿಷಾ, ಮಕ್ಕಳಾದ ತಾಹಿರ, ಶಫೀಕ್ ಗೋಳಿತ್ತಡ್ಕ, ಸಫ್ವಾನ, ಸಹೋದರರಾದ ಇಬ್ರಾಹಿಂ, ಮೊಹಮ್ಮದ್ ಕುಂಞಿ, ಅಬ್ದುಲ್ಲ, ಸಹೋದರಿಯರಾದ ಖದೀಜ, ಸುಹರಾ, ನಬೀಸ, ಅಳಿಯಂದಿರಾದ ಅಬ್ದುಲ್ ರಜಾಕ್ ನಲ್ಕ, ಅಬ್ದುಲ್ ಲತೀಫ್ ಪಳ್ಳಪ್ಪಾಡಿ, ಸೊಸೆ ಫಾತಿಮತ್ ಮನ್ಸೂರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಚೆಂಗಳ ಇಂದಿರಾನಗರದಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೦೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಚೆಂಗಳ ಕೆಟ್ಟುಂಗಲ್ಲು ಮಸೂದ್ ಮಂಜಿಲ್‌ನ  ಅಬ್ದುಲ್ ಮನಾಸ್ (೩೦) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಕೈವಶವಿರಿಸಿದ ವ್ಯಕ್ತಿಯ ಸೆರೆ

ಕಾಸರಗೋಡು: ಪಡನ್ನ ಗ್ರಾಮದ ಆಲಕ್ಕಲ್‌ನಲ್ಲಿ ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಸುಧೀರ್ ಕೆ.ಕೆ.ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೫೦ ಗ್ರಾಂ ಗಾಂಜಾ ಕೈವಶವಿರಿಸಿದ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ರತೀಖ್ ಪಿ. ಬಂಧಿತ ಆರೋಪಿ.