ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಸುಲ್ತಾನ್ ಗೋಲ್ಡ್‌ನಿಂದ ಟಿ.ವಿ ಹಸ್ತಾಂತರ

ಕಾಸರಗೋಡು: ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ವತಿಯಿಂದ ಟಿ.ವಿ ನೀಡಲಾಯಿತು. ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ೨೭ ಮಂದಿ ಡಯಾಲಿಸಿಸ್ ನಡೆಸುತ್ತಾರೆ. ರಾತ್ರಿ ಕಾಲದಲ್ಲೂ ಡಯಾಲಿಸಿಸ್ ನಡೆಸಲಿರುವ ಸಿದ್ಧತೆ ನಡೆಸಲಾಗುತ್ತಿದೆ. ಸೆಂಟರ್‌ಗೆ ಸುಲ್ತಾನ್‌ನ ಬ್ರಾಂಚ್ ಮೆನೇಜರ್ ಮುಬೀನ್ ಹೈದರ್ ಪರವನಡ್ಕ ಆಸ್ಪತ್ರೆಯ ಸುಪರಿಂಟೆಂ ಡೆಂಟ್ ಡಾ| ಜಮಾಲ್ ಅಹಮ್ಮದ್‌ರಿಗೆ ಟಿ.ವಿ ಹಸ್ತಾಂತರಿಸಿದರು. ನರ್ಸಿಂಗ್ ಸುಪರಿಂಟೆಂಡೆಂಟ್ ಮಿನಿ, ಮಾಹಿನ್ ಕುನ್ನಿಲ್, ಮಿಥುನ್, ಖಲೀಲ್ ಭಾಗವಹಿಸಿದರು.

ಭರದಿಂದ ಸಾಗುತ್ತಿರುವ ಬೇಕೂರು ಕುಟುಂಬ ಕ್ಷೇಮ ಕೇಂದ್ರದ ನೂತನ ಕಟ್ಟಡ ಕಾಮಗಾರಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು, ಊರವರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ಸುಮಾರು 60 ವರ್ಷಗಳ ಹಿಂದಿನ ಈ ಕಟ್ಟಡ ಶೋಚನೀಯವಸ್ಥೆಗೆ ತಲುಪಿ ಆತಂಕದಲ್ಲೇ ಕಟ್ಟಡದಲ್ಲಿ ಹಲವು ವರ್ಷಗಳ ಕಾಲ ಕುಟುಂಬ ಕ್ಷೇಮ ಕೇಂದ್ರ ಕಾರ್ಯವೆಸಗುತ್ತಿತ್ತು. ಊರವರ ಹಾಗೂ ವಾರ್ಡ್ ಪ್ರತಿನಿದಿsಗಳ ನಿರಂತರ ಒತ್ತಾಯದ ಫಲವಾಗಿ ನೂತನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಸುಮಾರು 20ಲಕ್ಷ ರೂ ಮಂಜೂರುಗೊAಡು ಕಾಮಗಾರಿ ಆರಂಭಿಸಲಾಗಿದ್ದು, ಈಗ ಮುಕ್ತಾಯದ ಹಂತಕ್ಕೆ ತಲುಪಿದೆ.ಒಂದು …

ವರ್ಕಾಡಿ ಪಂಚಾಯತ್ ಸದಸ್ಯರು, ನೌಕರರ ಪ್ರವಾಸ: ಅಪಪ್ರಚಾರ ವಿರುದ್ಧ ದೂರು ನೀಡಿದ ಪಂ. ಅಧ್ಯಕ್ಷೆ

ವರ್ಕಾಡಿ: ವರ್ಕಾಡಿ ಪಂಚಾ ಯತ್ ಆಡಳಿತ ಸಮಿತಿ ಹಾಗೂ ನೌಕರರು ಕುಟುಂಬ ಸಹಿತ ನಡೆಸಿದ ಪ್ರವಾಸ ಕೋರೆ, ಫ್ಯಾಕ್ಟರಿ ಮಾಲಕರ ಹಾಗೂ ಗುತ್ತಿಗೆದಾರರ ವೆಚ್ಚದಲ್ಲಿ ಎಂದು ಕೆಲವು ಪತ್ರಿಕೆ ಹಾಗೂ ಆನ್‌ಲೈನ್ ಮೀಡಿಯಾಗಳಲ್ಲಿ ನಡೆಸಿದ ಅಪಪ್ರಚಾರದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೈಬರ್ ಸೆಲ್‌ಗೂ ದೂರು ನೀಡಲಾಗಿ ದಯೆಂದು ಪಂ. ಅಧ್ಯಕ್ಷೆ ಭಾರತಿ ಎಸ್ ತಿಳಿಸಿದ್ದಾರೆ. ಪಂಚಾಯತ್ ಆಡಳಿತ ಸಮಿತಿ ಯ ತೀರ್ಮಾನ ಪ್ರಕಾರವಾಗಿದೆ ವಯನಾಡು, ಊಟಿ ಮೊದಲಾದ ಸ್ಥಳಗಳಿಗೆ ಪ್ರವಾಸ ನಡೆಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  …

ಡಾ| ಅಖಿಲ ಯಾನೆ ಹಾದಿಯ ನಾಪತ್ತೆಯಾಗಿರುವುದಾಗಿ ತಿಳಿಸಿ ತಂದೆಯಿಂದ ನ್ಯಾಯಾಲಯಕ್ಕೆ ಅರ್ಜಿ

ಕೊಚ್ಚಿ: ಡಾ| ಅಖಿಲ ಯಾನೆ ಹಾದಿಯ ಎಂಬಾಕೆ ನಾಪತ್ತೆಯಾಗಿದ್ದಾಳೆಂದು ತಿಳಿಸಿ ತಂದೆ ಅಶೋಕನ್ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದೆ. ಅಲ್ಲದೆ ಪ್ರತಿವಾದಿಗಳಾದ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಲಪ್ಪುರಂ ಎಸ್ಪಿಗೆ ನೋಟೀಸ್ ಜ್ಯಾರಿಗೊಳಿಸಿದೆ. ಈ ತಿಂಗಳ ೧೬ರಂದು ಮತ್ತೆ ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಲಿದೆ. ಪುತ್ರಿಯನ್ನು ಮಲಪ್ಪುರಂ ನಿವಾಸಿಯಾದ ಸೈನಬ ಎಂಬಾಕೆ ಸಹಿತ ಕೆಲವರು ದಿಗ್ಬಂಧನದಲ್ಲಿರಿಸಿ ದ್ದಾರೆಂದು ತಿಳಿಸಿ ಅಶೋಕನ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮಗಳ ಫೋನ್ ಸ್ವಿಚ್ ಆಫ್ …

ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವ ವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ- ರತ್ನಾಕರ ಮಲ್ಲಮೂಲೆ

ಬದಿಯಡ್ಕ: ಆರ್ಷೇಯ ಧರ್ಮದ ತಾತ್ವಿಕ ನಿಲುವುಗಳು ಮನುಷ್ಯತ್ವ ಮತ್ತು ಪ್ರಕೃತಿಗೆ ಹೆಚ್ಚು ಒತ್ತು ಕೊಟ್ಟಿದ್ದುವು. ದೇವರ ಪರಿಕಲ್ಪನೆ ಹಾಗೂ ಅದಕ್ಕೆ ಪೂರಕವಾದ ಆರಾಧನೆ ಭಯ ಭಕ್ತಿಗಳು ಮನುಷ್ಯನ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನ ಸುಸ್ಥಿತಿಗೂ ಸುಂದರವಾದ ಚೌಕಟ್ಟಿಗೂ ಕಾರಣವಾಗುತ್ತಿತ್ತು. ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ. ವೇದ ಕಾಲದಲ್ಲಿ ಇದ್ದ ಕೌಶಲ್ಯಾಧಾರಿತ ಬದುಕಿನ ನಡೆ ಮತ್ತು ಹಲವು ಧನಾತ್ಮಕ ವಿಷಯಗಳು ಇಂದಿಗೂ ಪ್ರಸ್ತುತ ಎಂದು ಕಾಸರಗೋಡು ಸರಕಾರೀ ಕಾಲೇಜಿನ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ …

ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಸಪ್ತಾಹ ೧೭ರಿಂದ

ಕಾಸರಗೋಡು:  ಶ್ರೀರಾಮ ಪೇಟೆಯ ಶ್ರೀವರದರಾಜ ವೆಂಕಟರಮಣ ದೇವಸ್ಥಾನದ ೧೧೩ನೇ ವರ್ಷದ ಸಂಕೀರ್ತನಾ ಸಪ್ತಾಹ ಈತಿಂಗಳ ೧೭ರಿಂದ ೨೪ರ ವರೆಗೆ ನಡೆಯಲಿದೆ. ೧೬ರಂದು  ಕ್ಷೇತ್ರದಲ್ಲಿ ಐದು ತೆಂಗಿನಕಾಯಿಯ ಶ್ರೀ ಗಣಪತಿಹೋಮ ಜರಗಲಿದೆ. ೧೭ರಂದು ಬೆಳಿಗ್ಗೆ ಶ್ರೀ ವರದರಾಜ ವೆಂಕಟರಮಣ ದೇವರಿಗೆ ಪೂಜೆ, ದೀಪ ಪ್ರಜ್ವಲನೆ, ಭಜನೆ ಪ್ರಾರಂಭವಾಗುವುದು. ಸಪ್ತಾಹದ ವೇಳೆ ಶ್ರೀ ವರದರಾಜ ವೆಂಕಟರಮಣ ದೇವರಿಗೆ ರಂಗಪೂಜೆ, ಶತಕಲಶಾಭಿಷೇಕ, ಭಾಗೀರಥಿ  ಕನಕಾಭಿಷೇಕ, ಸಾನಿಧ್ಯ ಹವನ ನಡೆಯುವುದು,.  ೨೩ರಂದು ಗೀತಾ ಜಯಂತಿ ಸಭಾ ಕಾರ್ಯಕ್ರಮ ನಡೆಯುವುದು. ನಡೆಸಲಾದ ಸ್ಪರ್ಧೆಯ ವಿಜೇತರಿಗೆ …

ಉಬ್ರಂಗಳ ವಾರ್ಷಿಕ ಪಾಟು ಉತ್ಸವ ಡಿಸೆಂಬರ್ ೧೬ರಿಂದ

ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಉತ್ಸವ, ಶ್ರೀಭೂತ ಬಲಿ ಉತ್ಸವ ಹಾಗೂ ಧೂಮಾವತಿ ದೈವದ ಕೋಲ ಡಿ.16ರಿಂದ ಡಿ.20ರ ತನಕ ಜರಗಲಿದೆ.ಡಿ.16ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, 7.30ಕ್ಕೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಾಟು ಉತ್ಸವ, ಸಂಜೆ 6 ಗಂಟೆಗೆ ದೀಪಾರಾಧನೆ, ಸಂಜೆ 6.30ಕ್ಕೆ ಕಾಟ್ನೂಜಿ ಶ್ರೀ ಶಾಸ್ತಾರ ಮೂಲಸ್ಥಾನದಿಂದ ಹುಲ್ಪೆ ಹೊರಡುವುದು, ಸಂಜೆ 6.30ರಿಂದ 7.30 ಭಜನೆ ಶ್ರೀನಿಕೇತನ ಭಜನಾ ತಂಡ ಬಂಟ್ವಾಳ …

ನಾಡಿಗಿಳಿದ ಕಾಡಹಂದಿಗಳು: ನಾಗರಿಕರಲ್ಲಿ ಹೆಚ್ಚಿದ ಭೀತಿ

ಕುಂಬಳೆ: ಶಾಲಾ ಮೈದಾನದಲ್ಲಿ ಕಾಡು ಹಂದಿಯನ್ನು ಕಂಡು ಓಡಿ ಅಪಾಯದಿಂದ ಪಾರಾಗಲು ಪ್ರಯತ್ನಿಸಿದ ಬಾಲಕಿ ಬಿದ್ದು ಗಾಯಗೊಂಡ ಘಟನೆಯ ಬೆನ್ನಲ್ಲೇ ಒಂದು ಡಜನ್‌ಗಿಂತಲೂ ಹೆಚ್ಚು ಹಂದಿಗಳು ರಸ್ತೆಯಲ್ಲಿ ಅಲೆದಾಡಿರುವುದು ಕಂಡು ಬಂದಿದೆ. ವಾಹನಗಳ ಸಂಚಾರಕ್ಕೂ ಕೂಡಾ ಅವಕಾಶ ನೀಡದೆ ರಸ್ತೆಯಲ್ಲಿ ಅಡಚಣೆ ಸೃಷ್ಟಿಸಿದ ಕಾಡು ಹಂದಿಗಳು ಬಳಿಕ ಸಮೀಪದ ಕಾಡು ಪೊದೆಯತ್ತ ಓಡಿ ಪರಾರಿಯಾಗಿವೆ. ನಿನ್ನೆ ರಾತ್ರಿ ಆರಿಕ್ಕಾಡಿ- ಬಂಬ್ರಾಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯಲ್ಲಿ ಒಂದು ಕಾರು ಸಂಚರಿಸುತ್ತಿದ್ದಾಗ ಮರಿಗಳ ಸಹಿತ ಒಂದು …

ಶಬರಿಮಲೆ: ಭಕ್ತರ ದರ್ಶನ ವಿಷಯ; ದೇವಸ್ವಂ ಮಂಡಳಿ-ಎಡಿಜಿಪಿ ನಡುವೆ ವಾಗ್ವಾದ

ಶಬರಿಮಲೆ: ಶಬರಿಮಲೆ ಕ್ಷೇತ್ರಕ್ಕೆ ಹರಿದುಬರುತ್ತಿರುವ ಭಕ್ತಜನರ ಪ್ರವಾಹ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಹದಿನೆಂಟು ಮೆಟ್ಟಿಲು ಮೂಲಕ  ಭಕ್ತರನ್ನು ಏರಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ಅಧ್ಯಕ್ಷರು ಮತ್ತು ಶಬರಿಮಲೆಯಲ್ಲಿ ಪೊಲೀಸ್ ಭದ್ರತೆಯ ಪ್ರಧಾನ ಸಂಯೋಜ ಕರಾಗಿ ನೇಮಿಸಲಾಗಿರುವ ಎಡಿಡಿಪಿ  ಎಂ.ಆರ್. ಅಜಿತ್ ಕುಮಾರ್ ಮಧ್ಯೆ ಇದೀಗ ಪರಸ್ಪರ ವಾಗ್ವಾದ ತಲೆಯೆತ್ತಿದೆ.   ಶಬರಿಮಲೆಯಲ್ಲಿ ಹದಿನೆಂಟು ಮೆಟ್ಟಿಲು ಮೂಲಕ ಪ್ರತೀ ನಿಮಿಷಕ್ಕೆ ತಲಾ ೬೦ರಂತೆ ಭಕ್ತರನ್ನು ಹತ್ತಿಸಲು ಮಾತ್ರವೇ ಸಾಧ್ಯವಾಗಲಿದೆಯೆಂದು ಎಡಿಜಿಪಿ ಅಜಿತ್ ಕುಮಾರ್ ಹೇಳಿದರೆ, ನಿಮಿಷಕ್ಕೆ ೭೫ಕ್ಕಿಂತಲೂ ಹೆಚ್ಚು …

ಬಾಲಕಿಗೆ ಕಿರುಕುಳ ಪ್ರಕರಣ: ಆಟೋ ಚಾಲಕ ಸೆರೆ

ಕುಂಬಳೆ: ಹದಿನೇಳರ ಹರೆಯದ ಬಾಲಕಿಗೆ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆಟೋ ಚಾಲಕನನ್ನು ಪೋಕ್ಸೋ ಪ್ರಕಾರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಬ್ರಾಣ ಬತ್ತೇರಿಯ ನಾಗರಾಜ್ (೨೨) ಎಂಬಾತ ಬಂಧಿತ ಆರೋ ಪಿಯಾಗಿದ್ದಾನೆ. ಕಿರುಕುಳಕ್ಕೊಳಗಾದ ಬಾಲಕಿ ಗರ್ಭಿಣಿಯಾಗುವುದರೊಂದಿಗೆ ಘಟನೆ ಬಹಿರಂಗಗೊಂಡಿದೆ. ಅನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ನಾಗರಾಜನ ವಿರುದ್ಧ ಪೋ ಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸ ಲಾಗಿದೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.