ಸಂತಾನ ಭಾಗ್ಯ: ದಂಪತಿಯಿಂದ ೧೦೦೨ ಮದ್ಯ ಬಾಟ್ಲಿ ಕೊರಗಜ್ಜನಿಗೆ ಸಮರ್ಪಣೆ

ಮಂಗಳೂರು: ಸಂತಾನ ಭಾಗ್ಯವಿಲ್ಲದೆ ವ್ಯಸನದಲ್ಲಿದ್ದ ದಂಪತಿಗೆ ಮಗು ಜನಿಸಿದ ಸಂತೋಷದಿಂದ ಕೊರಗಜ್ಜ ದೈವಕ್ಕೆ ೧೦೦೨ ಬಾಟ್ಲಿ ಮದ್ಯ ಸಮರ್ಪಿಸಿದ್ದಾರೆ. ಉಡುಪಿಯ ಸ್ವಾಮಿ ಕೊರಗಜ್ಜ ದೈವದ ಕ್ಷೇತ್ರದಲ್ಲಿ ಮದ್ಯ ಸಮರ್ಪಣೆ ನಡೆಸಲಾಗಿದೆ. ಇಲ್ಲಿಗೆ ಸಮೀಪದ ದಂಪತಿ ಮಕ್ಕಳಿಲ್ಲದೆ ಕೊರಗಿ, ಸಂತಾನ ಭಾಗ್ಯಕ್ಕಾಗಿ ಈ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆಸಿದ್ದರು. ಮಗು ಜನಿಸಿದಂತೆ ೧೦೦೨ ಮದ್ಯ ಬಾಟ್ಲಿ ಸಮರ್ಪಿಸುವುದಾಗಿ ಹರಕೆ ಹೇಳಿದ್ದರು. ಬಳಿಕ ಇವರಿಗೆ  ಮಗು ಜನಿಸಿದ್ದು, ಈ ಸಂತೋಷದಲ್ಲಿ ಹರಕೆ ತೀರಿಸಿದ್ದಾರೆ.

ಟ್ಯಾಂಕರ್ ಲಾರಿಯಿಂದ ರಸ್ತೆಯಲ್ಲಿ ಟಾರು ಸೋರಿಕೆ

ಕಾಸರಗೋಡು: ಮಂಗಳೂರಿನಿಂದ ತಮಿಳುನಾಡಿಗೆ ಟ್ಯಾಂಕರ್ ಲಾರಿಯಲ್ಲಿ ಟಾರು ಸಾಗಿಸುತ್ತಿದ್ದ ದಾರಿ ಮಧ್ಯೆ ಚೆಮ್ನಾಡ್ ಸಮೀಪದ ಚಳಿಯಂಗೋ ಡಿನಲ್ಲಿ ನಿನ್ನೆ ರಾತ್ರಿ ಸುಮಾರು ೧೦ ಗಂಟೆಗೆ ಸೋರಿಕೆಯಾಗತೊಡಗಿದ್ದು, ಅದನ್ನು ಗಮನಿಸಿದ ಪ್ರಸ್ತುತ ಲಾರಿ ಚಾಲಕ ತಕ್ಷಣ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ  ಟಾರು ರಸ್ತೆಯ ಮಧ್ಯಭಾಗಕ್ಕೆ ಬೀಳುವುದನ್ನು ತಪ್ಪಿಸಿದ್ದಾರೆ. ಆ ಬಗ್ಗೆ ನೀಡಲಾದ ಮಾಹಿತಿ ಯಂತೆ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಎರಡು ಇಂಜಿನ್‌ಗಳಲ್ಲಾಗಿ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ …

ಕುಂಬಳೆಯಲ್ಲಿ ಮಡಿಕೈ ಕಮ್ಮಾರನ್ ಸ್ಮರಣೆ

ಕುಂಬಳೆ: ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರರಾಗಿದ್ದ ಕಾಸರಗೋಡು ಮಾಜಿ ಜಿಲ್ಲಾಧ್ಯಕ್ಷ, ಮಾಜಿ ರಾಜ್ಯ ಸಮಿತಿ ಉಪಾಧ್ಯಕ್ಷ ಮಡಿಕೈ ಕಮ್ಮಾರನ್Àರ ೬ನೇ ವರ್ಷದ ಸಂಸ್ಮರಣ ಕಾರ್ಯಕ್ರಮ ಕುಂಬಳೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ನಡೆಯಿತು. ಕುಂಬಳೆ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಕೆ. ರಮೇಶ ಭಟ್, ಪ್ರೇಮಲತಾ ಎಸ್, ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಯುವಮೋರ್ಚಾ ಕುಂಬಳೆ ಅಧ್ಯಕ್ಷ ಅಜಿತ್ ಕುಮಾರ್, ಜನಪ್ರತಿನಿದಿಗಳಾದ …

ಬಾಕ್ರಬೈಲ್‌ನಲ್ಲಿ ಲೀಗ್-ಎಸ್.ಟಿ.ಯು ಜಂಟಿ ಕಚೇರಿ ಉದ್ಘಾಟನೆ

ಬಾಕ್ರಬೈಲ್: ಬಾಕ್ರಬೈಲ್‌ನ ಮುಸ್ಲಿಂ ಲೀಗ್- ಎಸ್‌ಟಿಯು ಜಂಟಿ ಕಚೇರಿ ಯನ್ನು ಸೊಡಂಕೂರಿನಲ್ಲಿ ಉದ್ಘಾಟಿಸ ಲಾಯಿತು. ಶಾಖಾ ಅಧ್ಯಕ್ಷ ಉಮ್ಮರ್ ಬಾಕಿಮಾರ್‌ರ ಅಧ್ಯಕ್ಷತೆ ಯಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಿ.ಬಿ. ಅಬೂಬಕರ್, ಬಿ. ಅಹಮ್ಮದ್ ಕುಂಞಿ ಹಾಜಿ, ಕೆ.ಎಂ. ಮುಹಮ್ಮದ್ ಕುಂಞಿ, ಮೋನುಹಾಜಿ, ಡಿ.ಬಿ. ಅಹಮ್ಮದ್ ಕುಂಞಿ ಎಂಬಿವರನ್ನು ಗೌರವಿಸಲಾಯಿತು. ಕೆ. ಮುಹಮ್ಮದ್, ಬಾವಹಾಜಿ, ಮೂಸ, ಇಬ್ರಾಹಿಂ, ಸುಬೈರ್, ಲತೀಫ್, ಅಶ್ರಫ್, ಹಾರೀಸ್, ಬಿ.ಎ. ಅಬ್ದುಲ್ ಮಜೀದ್, ಡಿ.ಬಿ. ಅಬ್ದುಲ್ ಖಾದರ್ ಮಾತನಾಡಿದರು.

ಮಂಗಳೂರಿನಲ್ಲಿ ಜಾನಪದ ಸ್ಪರ್ಧಾಕೂಟ: ಕನ್ನೆಪ್ಪಾಡಿ ಬೊಳಿಕೆ ತಂಡಕ್ಕೆ ದ್ವಿತೀಯ ಸ್ಥಾನ

ಬದಿಯಡ್ಕ: ಮಂಗಳೂರಿನಲ್ಲಿ ನಡೆದ ಜಾನಪದ ಸ್ಪರ್ಧಾಕೂಟದಲ್ಲಿ ಮೊಗೇರರ ದುಡಿ ಕುಣಿತ ಮತ್ತು ದೂಪಬಲಿ ಪ್ರಸ್ತುತಪಡಿಸಿದ ಕನ್ನೆಪ್ಪಾಡಿ ಜಾನಪದ ಕಲಾಸಂಘಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ಕÀಲೋತ್ಸವ, ಜಾನಪದ ಕಲಾಪ್ರದರ್ಶನ, ಆಹಾರ ಮೇಳದಂಗ ವಾಗಿ ಸ್ಪರ್ಧೆಯನ್ನು ಏರ್ಪಡಿಸ ಲಾಗಿತ್ತು. ಮಂಗಳೂರು ಪುರಭವನ ದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ ನೇತೃತ್ವದ ಬೊಳಿಕೆ ಜಾನಪದ ಕಲಾಸಂಘದಲ್ಲಿ ಬಾಬು …

ಅಭಿವೃದ್ಧಿ ಕೆಲಸಗಳು ಸ್ಥಗಿತ: ಬದಿಯಡ್ಕ ಪಂ.ನಲ್ಲಿ ಅಸಿ. ಇಂಜಿನಿಯರ್ ಇಲ್ಲದೆ ಎಂಟು ತಿಂಗಳು

ಬದಿಯಡ್ಕ: ಬದಿಯಡ್ಕ ಪಂಚಾಯತ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಇಲ್ಲದೆ ಎಂಟು ತಿಂಗಳಾಯಿತು. ಇದರಿಂದಾಗಿ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ನಡೆಯಬೇಕಾಗಿದ್ದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ. ಜನಸಾಮಾನ್ಯರು ತಮ್ಮ ಅತಯಗತ್ಯ ಬೇಡಿಕೆಗಳಾದ ಮನೆ ನಂಬ್ರ, ಮನೆ ನಿರ್ಮಾಣಕ್ಕೆ ಅಗತ್ಯದ ಒಪ್ಪಿಗೆ ಲಭಿಸದೆ ಸಮಸ್ಯೆಯಲ್ಲಿದ್ದಾರೆ. ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ಇತರ ಅಗತ್ಯಗಳಿಗೆ ತಲುಪುವವರು ಪಂಚಾಯತ್ ಅಧಿಕಾರಿಗಳನ್ನು ಟೀಕಿಸುತ್ತಿದ್ದಾರೆ. ಈ ಪಂಚಾಯತ್ ಯಾಕಿರುವುದು ಎಂಬ ಜನರ ಪ್ರಶ್ನೆಯ ಮುಂದೆ ಪಂ. ಅಧಿಕಾರಿಗಳಿಗೆ ಉತ್ತರ ನೀಡಲಾಗದ ಸ್ಥಿತಿ ಇದೆ. ಇದೇ ಸಮಸ್ಯೆಯನ್ನು ಮುಂದಿಟ್ಟು ಪಂಚಾಯತ್ ಆಡಳಿತ …

ಯುವತಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಯುವತಿಯೋರ್ವೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪೆರ್ಲ ಅಡ್ಕಸ್ಥಳ ಪಾಂಡಿಗಯದ ಯೋಗೇಶ್ ನಾಯ್ಕ ಎಂಬವರ ಪತ್ನಿ ದಿವ್ಯಾ (೨೮) ಸಾವನ್ನಪ್ಪಿದ ಯುವತಿ. ದಿವ್ಯಾ ನಿನ್ನೆ ಸಂಜೆ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ಮನೆ ಪಕ್ಕದ ಆವರಣ ಇಲ್ಲದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆ ಬಗ್ಗೆ ನೀಡಲಾದ ಮಾಹಿತಿ ಪ್ರಕಾರ ಕಾಸರಗೋಡು ಅಗ್ನಿಶಾಮಕ ದಳ ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಬದಿಯಡ್ಕ …

ಕೊಲೆ ಪ್ರಕರಣದ ಆರೋಪಿ ಮಾದಕದ್ರವ್ಯದೊಂದಿಗೆ ಸೆರೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯಾದ ಪುತ್ತಿಗೆ ನಿವಾಸಿ ಮಾದಕ ದ್ರವ್ಯ ಸಹಿತ ಸೆರೆಗೀಡಾಗಿದ್ದಾನೆ. ಪುತ್ತಿಗೆ ಕಟ್ಟತ್ತಡ್ಕ  ರಾಹಿಲಾ ಮಂಜಿಲ್‌ನ  ಮುಹಮ್ಮದ್ ಹುಸೈನ್ (೨೬) ಎಂಬಾತನನ್ನು ಕಳಮಶ್ಶೇರಿ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ ೯.೩೩ ಗ್ರಾಂ ಮಾದಕ ವಸ್ತು ವಶಪಡಿಸಲಾಗಿದೆ. ವಲ್ಲಾರ್‌ಪಾಡಂ ಕಂಟೈನರ್ ರಸ್ತೆಯಲ್ಲಿ ಹುಸೈನ್ ಸೆರೆಗೀಡಾಗಿದ್ದಾನೆ. ಈ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಅಲ್ಲಿಗೆ ತಲುಪಿ  ಕಾರ್ಯಾಚರಣೆ ನಡೆಸಿತ್ತು. ಕಳೆದ ವರ್ಷ ಪಾಲಾರಿವಟ್ಟಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

ಅಪಾಯ ಭೀತಿ: ಕಂಚಿಕಟ್ಟೆ ಸೇತುವೆ ಮೂಲಕ ವಾಹನ ಸಂಚಾರ ನಿಷೇಧ

ಕುಂಬಳೆ: ಐದು ವರ್ಷಗಳ ಹಿಂದೆ ಅಪಾಯ ಭೀತಿಯಲ್ಲಿದೆಯೆಂದು ತಿಳಿಸಿ ಫಲಕ ಸ್ಥಾಪಿಸಿದ ಕಂಚಿಕಟ್ಟೆ ಸೇತುವೆ ಮೂಲಕ ವಾಹನ ಸಂಚಾರವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.  ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.  ಸೇತುವೆಯ ಕಾಂಕ್ರೀಟ್ ಕಂಬಗಳು ಬಲಹೀನಗೊಂಡಿದ್ದು, ಸರಳುಗಳು ತುಕ್ಕು ಹಿಡಿದು ಹೊರಗೆ ಗೋಚರಿಸುತ್ತಿವೆ. ಸೇತುವೆಯ ಆವರಣ ಕೂಡಾ ನಾಶದ ಹಂತದಲ್ಲಿದೆ.  ಐದು ವರ್ಷಗಳ ಹಿಂದೆಯೇ ಸೇತುವೆ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಅಂದು  ಕಾಸರಗೋಡಿನಿಂದ ಇಂಜಿನಿಯರ್‌ಗಳು ತಲುಪಿ ಸೇತುವೆ ಪರಿಶೀಲಿಸಿದ್ದು, ಅಪಾಯಕ್ಕೆ ಸಾಧ್ಯತೆ ಇದೆಯೆಂದು ಮುನ್ನೆಚ್ಚರಿಕೆ ನೀಡಿದ್ದರು. …

ಮುಖ್ಯಮಂತ್ರಿ-ರಾಜ್ಯಪಾಲರ ಮಧ್ಯೆ ಗುದ್ದಾಟ ತಾರಕಕ್ಕೆ

ಹೊಸದಿಲ್ಲಿ: ತಿರುವನಂತಪುರದಲ್ಲಿ ನಿನ್ನೆ ಸಂಜೆ ಎಸ್‌ಎಫ್‌ಐ ಕಾರ್ಯ ಕರ್ತರು ತನ್ನ ವಿರುದ್ಧ ನಡೆಸಿದ ಪ್ರತಿಭ ಟನೆ ಮುಖ್ಯಮಂತ್ರಿಯವರ ಅರಿವಿನೊಂ ದಿಗೆ ನಡೆದಿದೆ ಎಂದೂ ಅದರಲ್ಲಿ ಭಾರೀ ಒಳಸಂಚು ಕೂಡಾ ಹೂಡಲಾಗಿದೆ ಎಂದು ರಾಜ್ಯಪಾಲ ಆರೀಫ್ ಮೊಹ ಮ್ಮದ್ ಖಾನ್ ಗಂಭೀರ ಆರೋಪ ಹೊರಿಸಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಪ್ರತಿಭಟ ನೆಗಾರರು ತನ್ನ ಕಾರನ್ನು ಸುತ್ತುವರಿದು ತಡೆದ ವೇಳೆ ಪೊಲೀಸರು ಕೇವಲ ನೋಟಕ ವಸ್ತುವಿನಂತೆ ಅದನ್ನು ನೋ ಡುತ್ತಾ ನಿಂತಿದ್ದರು. ಪೊಲೀಸರ ಮೇಲೂ ತೀವ್ರ …