೮.೬೪ ಲೀಟರ್ ಕರ್ನಾಟಕ ಮದ್ಯ ವಶ: ಯುವತಿ ಸೆರೆ

ಕಾಸರಗೋಡು: ಬೇಳ ನೀರ್ಚಾಲ್‌ನಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಟೇರಿಯ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೬೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನೀರ್ಚಾಲಿನ ಕ್ವಾರ್ಟ ರ್ಸ್‌ವೊಂದರಲ್ಲಿ ವಾಸಿಸುತ್ತಿರುವ ವಸಂತಿ ಎನ್. (೨೬) ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜೇಶ್ ಪಿ. ನಾಯರ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಗೀತ …

ನಾಲ್ಕರ ಹರೆಯದ ಬಾಲಕನನ್ನು ಕುತ್ತಿಗೆ ಬಿಗಿದು ಕೊಲೆಗೈದ ದೊಡ್ಡಮ್ಮ

ಪಾಲಕ್ಕಾಡ್: ನಾಲ್ಕರ ಹರೆಯದ ಬಾಲಕನನ್ನು ಹತ್ತಿರದ ಸಂಬಂಧಿಕೆಯಾದ ಯುವತಿ ಕುತ್ತಿಗೆ ಬಿಗಿದು ಕೊಲೆಗೈದ ಅತೀ ದಾರುಣ ಕೃತ್ಯ ಪಾಲಕ್ಕಾಡ್‌ನಲ್ಲಿ ನಡೆದಿದೆ.  ಪಾಲಕ್ಕಾಡ್ ಕೊಳಿಂಞಂಬಾರವಣ್ಣಾ ಮಡ ಎಂಬಲ್ಲಿ ಈ ಭೀಕರ ಕೃತ್ಯ ನಡೆದಿದೆ. ಇಲ್ಲಿನ ಮಧುಸೂದನನ್- ಆದಿರ ದಂಪತಿಯ ಪುತ್ರ ಋತ್ವಿಕ್ ಕೊಲೆಗೈಯ್ಯಲ್ಪಟ್ಟ ಬಾಲಕನಾಗಿದ್ದಾನೆ. ಮಧುಸೂದನನ್‌ರ ಅಣ್ಣ ಬಾಲಕೃಷ್ಣನ್‌ರ ಪತ್ನಿ ದೀಪ್ತಿದಾಸ್ (೨೯) ಎಂಬಾಕೆ ಈ ಬಾಲಕನನ್ನು ಕೊಲೆಗೈದಿರುವುದಾಗಿ ದೂರಲಾಗಿದೆ. ಬಾಲಕನನ್ನು ಕೊಲೆಗೈದ ಬಳಿಕ ದೀಪ್ತಿದಾಸ್ ಸ್ವತಃ ತನ್ನ ದೇಹಕ್ಕೂ ಗಾಯ ಮಾಡಿಕೊಂಡಿದ್ದಾಳೆ. ನಿನ್ನೆ ರಾತ್ರಿ ಈ ದಾರುಣ …

ರಾಜ್ಯಕ್ಕೆ ಬರುವವರನ್ನು ಸ್ವಾಗತಿಸಲು ತಲಪ್ಪಾಡಿಯಲ್ಲಿ ಕಾದು ನಿಂತಿವೆ ತುಕ್ಕು ಹಿಡಿದಿರುವ ಲಾರಿಗಳು

ಮಂಜೇಶ್ವರ:  ರಾಜ್ಯದ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ತುಕ್ಕು ಹಿಡಿದು ನಾಶದಂಚಿನಲ್ಲಿರುವ ಲಾರಿಗಳನ್ನು ನಿಲ್ಲಿಸಿದ್ದು ಇದು ರಾಜ್ಯಕ್ಕೆ ಆಗಮಿಸುವವರಿಗೆ ಸ್ವಾಗತ ನೀಡಲಾಗಿ ದೆಯೇ ಎಂದು ಜನರು ಆಶ್ಚರ್ಯವ್ಯಕ್ತ ಪಡಿಸುತ್ತಿದ್ದಾರೆ. ತಲಪ್ಪಾಡಿಯಲ್ಲಿ  ಅರಣ್ಯ, ಆರ್‌ಟಿಒ ಕಚೇರಿಗಳ ಮಧ್ಯೆಗಿನ ಸರಕಾರಿ ಸ್ಥಳದಲ್ಲಿ ಲಾರಿಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿವೆ. ಎರಡು ಲಾರಿಗಳಲ್ಲೊಂದು ಪೂರ್ಣವಾಗಿ ತುಕ್ಕು ಹಿಡಿದಿದೆ. ಇನ್ನೊಂದು ತುಕ್ಕು ಆವರಿಸತೊಡಗಿದೆ. ಇದೇ ವೇಳೆ ಲಾರಿಗಳು ಹೊರಗೆ ಕಾಣಿಸದಂತೆ ಅದರ ಸುತ್ತಲೂ ಕಾಡು ಪೊದೆಗಳು ಬೆಳೆದು ನಿಂತಿದೆ. ರಾಜ್ಯದಲ್ಲಿ  ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸಬೇಕಾಗಿ …

ಎರಿಯಾಲ್ ಆಬೀದ್ ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ

ಕಾಸರಗೋಡು: ಹದಿನಾರು ವರ್ಷಗಳ ಹಿಂದೆ ಕೂಡ್ಲಿನಲ್ಲಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದ ಐದು ಮಂದಿ ಆರೋಪಿಗಳ ಮೇಲಿನ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ)ಯನ್ನು ಕಾಸರಗೋಡು ಪೊಲೀಸರು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೩)ಕ್ಕೆ ಸಲ್ಲಿಸಿದ್ದಾರೆ. ೨೦೦೭ ನವೆಂಬರ್ ೨೦ರಂದು ಸಂಜೆ ೫.೩೦ಕ್ಕೆ ಕೂಡ್ಲು ಎರಿಯಾಲ್ ಬಳ್ಳೀರಿನಲ್ಲಿ ಕೂಡ್ಲು ಎರಿಯಾಲ್ ನಿವಾಸಿ ಆಬೀದ್ (೨೮) ಎಂಬಾತನನ್ನು ಬೈಕ್‌ನಲ್ಲಿ ಬಂದ ಅಕ್ರಮಿಗಳ ತಂಡ ಇರಿದು ಬರ್ಬರವಾಗಿ ಕೊಲೆಗೈದಿತ್ತು. ಇದಕ್ಕೆ ಸಂಬಂಧಿಸಿ, ಕೂಡ್ಲಿನ ಶಂಸುದ್ದೀನ್ (೪೦), ರಫೀಕ್ (೪೩), ಕೆ.ಎಂ. …

ಭಾರತೀಯ ನ್ಯಾಯ ಸಂಹಿತಾ ಬಿಲ್ ಸೇರಿ ಮೂರು ಕ್ರಿಮಿನಲ್  ಮಸೂದೆಗಳನ್ನು

ಹಿಂಪಡೆದ ಕೇಂದ್ರನವದೆಹಲಿ: ದೇಶದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಲೋಕಸಭೆಯಲ್ಲಿ ಪರಿಚಯಿಸಿದ ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ನಂತರ ಕೇಂದ್ರ ಸರಕಾರ ಹಿಂತೆಗೆದುಕೊಂಡಿದೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಸೂದೆಗಳ ಹೊಸ ಆವೃತ್ತಿಗಳನ್ನು ರಚಿಸಲಾಗುವುದು. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಎಂಬ ಮೂರು ಬ್ರಿಟೀಷ್ ಯುಗದ ಕಾನೂನುಗಳನ್ನು ಬದಲಿಸಲು ಭಾರತೀಯ ನ್ಯಾಯ ಸಂಹಿತಾ ಮಸೂದೆ- ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- ೨೦೨೩ …

ನಳ್ಳಿಯಲ್ಲಿ ಗಾಳಿ, ರಸ್ತೆಯಲ್ಲಿ ನೀರು: ಕಷ್ಣನಗರದಲ್ಲಿ ಕುಡಿಯುವ ನೀರು ಪೋಲು

ಬೇಕೂರು: ಕುಡಿಯಲು ನೀರು ವಿತರಿಸಲು ಮನೆಗಳಿಗೆ ಸಂಪರ್ಕ ನೀಡಿದ ನಳ್ಳಿಗಳಲ್ಲಿ ನೀರು ಬರದಿದ್ದರೂ   ನೀರು ವಿತರಿಸಲು ಹಾಕಿದ ಪೈಪ್‌ನಿಂದ ಸೋರಿಕೆಯಾಗಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಮಂಗಲ್ಪಾಡಿ ಪಂ.ನ ೭ನೇ ವಾರ್ಡ್ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿದೆ. ಕಳೆದ ೫ ತಿಂಗಳಿನಿಂದ ದಿನವೂ ನೀರು ರಸ್ತೆಯಲ್ಲೇ ಹರಿಯುತ್ತಿರುವುದನ್ನು ಕಂಡು ಸ್ಥಳೀಯರು ಸಹಿ ಹಾಕಿದ ಮನವಿಯನ್ನು ಕಾಸರಗೋಡಿನ ಜಲ ಪ್ರಾಧಿಕಾರದ  ಅಧಿಕಾರಿಗಳಿಗೆ ನೀಡಿದ್ದರು. ಆದರೆ ಪೈಪ್ ದುರಸ್ತಿಗೆಂದು ಹೊಂಡ ತೋಡಿ ಬಳಿಕ ಅದನ್ನು ಹಾಗೇ ಉಪೇಕ್ಷಿಸಿರುವುದು ಕಂಡು ಬರುತ್ತಿದ್ದು, ತೋಡಿದ ಹೊಂಡದಲ್ಲಿ ನೀರು …

ಕಾಸರಗೋಡು ಜಿಲ್ಲೆಗೆ ಅಯೋಧ್ಯೆಯ ಮಂತ್ರಾಕ್ಷತೆ

ಬದಿಯಡ್ಕ: ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಪೂಜಿಸಲ್ಪಟ್ಟ ಪವಿತ್ರ ಮಂತ್ರಾಕ್ಷತೆ ಎಡನೀರು ಮಠಕ್ಕೆ ಆಗಮಿಸಿದ ಸಂದರ್ಭ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಶೀರ್ವಾದ ಗಳೊಂದಿಗೆ ಸ್ವೀಕರಿಸಲಾಯಿತು. ಆರ್‌ಎಸ್‌ಎಸ್ ಮುಖಂಡರಾದ ಲೋಕೇಶ್ ಜೋಡುಕಲ್ಲು , ಪುರುಷೋತ್ತಮ ಪ್ರತಾಪನಗರ, ಸುನಿಲ್ ಕುದ್ರೆಪ್ಪಾಡಿ, ವಿಶ್ವಹಿಂದೂ ಪರಿಷತ್ ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ಯಾದವ ಕೀರ್ತೇಶ್ವರ, ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಹರೀಶ್ ಸ್ಕಂದ, ರಂಜಿತ್ ಚೆಟ್ಟಿಯಾರ್, ಶ್ರೀಮಠದ ಭಕ್ತರು, ಹಿಂದೂ ಬಾಂಧವರು ಈ ಸಂದರ್ಭ ಹಾಜರಿದ್ದರು. ಜನವರಿ ೧ರಿಂದ ೧೫ರ ತಾರೀಕಿನ …

ಸಿಐಟಿಯು ಪೈವಳಿಕೆ ಪಂಚಾಯತ್ ಸಮಾವೇಶ

ಪೈವಳಿಕೆ: ಸಿಐಟಿಯು ಪೈವಳಿಕೆ ಪಂಚಾಯತ್ ಸಮಾವೇಶ ಪಂಚಾ ಯತ್ ಕುಟುಂಬಶ್ರೀ ಹಾಲ್‌ನಲ್ಲಿ ಸರೋಜಾ ಸಾಂತ್ಯೋಡು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಿಐಟಿಯು ಏರಿಯಾ ಕಾರ್ಯ ದರ್ಶಿ ಪ್ರಶಾಂತ್ ಕನಿಲ ಉದ್ಘಾಟಿಸಿದರು. ಸಿಐಟಿಯು ಏರಿಯಾ ಉಪಾಧ್ಯ ಚಂದ್ರ ನಾಕ್ ಮಾನಿಪ್ಪಾಡಿ ಮಾತನಾಡಿ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅಂಗನವಾಡಿ  ಕಾರ್ಯಕರ್ತೆ ಯರನ್ನು ಆಶಾವರ್ಕರ್ಸ್‌ರನ್ನು ಗಂಜಿ ತಯಾರಿಸುವ ಕಾರ್ಮಿಕರನ್ನು ಖಾಯಂ ಉದ್ಯೋಗಿಯಾಗಿ ನೇಮಿಸಿಲ್ಲ. ಅವರಿಗೆ ಕೇಂದ್ರದಿಂದ ಸಿಗಬೇಕಾದ ಸಂಬಳದ ಪಾಲು ದೊರೆಯುವುದಿಲ್ಲ ಎಂದು ಆರೋಪಿಸಿದರು. ಇದರ ವಿರುದ್ಧ ಹೋರಾಟ …

ಕೊಂಡೆವೂರಿನಲ್ಲಿ ಗೋ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರ

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬಯಿಯ ದಿನೇಶ್ ಬಾಹ್ರಾ ಫೌಂಡೇಶನ್ ಸಹಯೋಗದಲ್ಲಿ ಪಶುಪಾಲನೆಯವರಿಗಾಗಿ ಗೋ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮತ್ತು ಮಾಹಿತಿ ಶಿಬಿರವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಪಶುವೈದ್ಯ ಮನೋ ಹರ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.  ಶ್ರೀಗಳು ತಮ್ಮ ಆಶೀರ್ವಚನ ನೀಡಿದರು.  ಕಾಮದುಘಾ ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ …

ಬಂದಡ್ಕ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ೧೫ರಿಂದ

ಬಂದಡ್ಕ: ಬಂದಡ್ಕ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಡಿ. ೧೫ರಿಂದ ೧೭ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ೧೫ರಂದು ಬೆಳಿಗ್ಗೆ ೧೦ಕ್ಕೆ ಹೊರೆಕಾಣಿಕೆ ಮೆರವಣಿಗೆ ವಿವಿಧ ಭಾಗಗಳಿಂದ ಆಗಮಿಸಲಿದೆ. ೧೧ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿರುವರು. ಹಲವರು ಗಣ್ಯರು ಉಪಸ್ಥಿತರಿರುವರು. ಸಂಜೆ ೬.೩೦ಕ್ಕೆ ದೀಪಾರಾಧನೆ, ಶರಣಂವಿಳಿ, ೭ಕ್ಕೆ ಭಜನೆ, ರಾತ್ರಿ ೮ಕ್ಕೆ …