ಸೋಮೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ: ನಾಡಿನಲ್ಲಿ ಶೋಕಸಾಗರ

ಮಂಜೇಶ್ವರ: ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಬಲವಾದ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (೧೭)ನ ಮೃತದೇಹವನ್ನು  ದೇವಿಪುರದ ಸ್ಮಶಾನದಲ್ಲೂ, ಕುಂಜತ್ತೂರು ಮಜಲ್‌ನ ಯುವರಾಜ್ (೧೭)ನ ಮೃತದೇಹವನ್ನು ಕುಂ ಜತ್ತೂರಿನ ಮಹಾಲಿಂಗೇಶ್ವರ ಸ್ಮಶಾನದಲ್ಲಿ  ಸಂಬಂಧಿಕರ ಸಹಿತ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಉಳ್ಳಾಲ ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ವರ್ಷ ಪಿಯುಸಿ ವಿದ್ಯಾರ್ಥಿಗಳಾದ ಇಬ್ಬರು ಮೊನ್ನೆ ಸಂಜೆ ಸಮುದ್ರದಲ್ಲಿ ಅಪಘಾತಕ್ಕೀಡಾಗಿದ್ದರು. …

ರಾಷ್ಟ್ರೀಯ ಹೆದ್ದಾರಿ: ಕುಂಬಳೆ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್‌ಆಗಿರುವ ತಲಪ್ಪಾಡಿ-ಚೆಂಗಳ  ರಸ್ತೆಯಲ್ಲಿರುವ್ಲ ಕುಂಬಳೆ ಸೇತುವೆಯನ್ನು ಇಂದು ವಾಹನ ಸಂಚಾರಕ್ಕಾಗಿ ತೆರೆದುಕೊಡ ಲಾಯಿತು.  ಇದರಿಂದ ಎರಡೂ ಭಾಗಗಳಿಗೆ  ವಾಹನಗಳಿಗೆ ಸುಗಮವಾಗಿ   ಸಂಚರಿಸಲು ಸೌಕರ್ಯ ಉಂಟಾಗಿದೆ.  ಈ ಸೇತುವೆ ಸಮೀಪವಿರುವ  ಹಳೆ ಸೇತುವೆಯನ್ನು  ಮುರಿದು ತೆಗೆದು  ದ್ವಿಪಥ ರಸ್ತೆಗೆ  ಸೌಕರ್ಯವಾಗುವ ರೀತಿಯಲ್ಲಿ ಮತ್ತೊಂದು ಸೇತುವೆ ಯನ್ನು   ನಿರ್ಮಿಸಲು  ಆ ಮೂಲಕ  ದ ವಾಹನ ಸಂಚಾರಕ್ಕೆ ಹೊಸ ಸೇತುವೆ ಮೂಲಕ ನಡೆಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ತಲಪ್ಪಾಡಿ-ಚೆಂಗಳ ಒಂದನೇ ರೀಚ್ ನಲ್ಲಿ ಏಳು ಸೇತುವೆಗಳಿವೆ. ಮಂಜೇಶ್ವರ-ಹೊಸಬೆಟ್ಟು, …

ಕೇರಳವನ್ನು ಕ್ರಿಮಿನಲ್ ಮನಸ್ಸಿನವರು ಆಳುತ್ತಿದ್ದಾರೆ-ವಿಪಕ್ಷ ನಾಯಕ

ಕಾಸರಗೋಡು: ನವಕೇರಳ ಸಭೆಯ ಹೆಸರಲ್ಲಿ ಸಿಪಿಎಂನ ಕೆಲವು ಕ್ರಿಮಿನಲ್‌ಗಳು ವ್ಯಾಪಕ ದಾಂಧಲೆ ನಡೆಸುತ್ತಿದ್ದಾರೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಕ್ರಿಮಿನಲ್ ಮನಸ್ಸು  ಹೊಂದಿರುವವರು ಕೇರಳವನ್ನು ಆಳುತ್ತಿದ್ದಾರೆ. ಇಂತಹ ಹಿಂಸಾಚಾರಗಳಿಗೆ ಮುಖ್ಯಮಂತ್ರಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ಸ್ಟಾಲಿನ್ ರೀತಿ ವರ್ತಿಸುತ್ತಿದ್ದಾರೆ, ಮಾತ್ರವಲ್ಲ ಮುಖ್ಯಮಂತ್ರಿ ಸಾಡಿಸ್ಟ್ ಮನೋಭಾವ ಹೊಂದಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಸಂಚರಿಸುತ್ತಿದ್ದ ಬಸ್ಸಿನ ಮೇಲೆ ಚಪ್ಪಲಿ ಎಸೆದಿದ್ದು ಒಂದು ಸಾಮಾನ್ಯ ಪ್ರತಿಕ್ರಿಯೆ ಮಾತ್ರವೇ ಆಗಿದೆ. ಅದರ ಹೆಸರಲ್ಲಿ ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ನರಹತ್ಯಾ ಪ್ರಕರಣ ದಾಖಲಿಸಿಕೊಂಡಿ …

ಪೊಲೀಸ್‌ನೊಂದಿಗೆ ಸಂಚರಿಸುತ್ತಿದ್ದಾಗ  ಮೆಕ್ಯಾನಿಕ್ ಹೃದಯಾಘಾತದಿಂದ ಮೃತ್ಯು

ಕಾಸರಗೋಡು:  ಸ್ನೇಹಿತನಾದ ಪೊಲೀಸ್‌ನೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಮೆಕ್ಯಾನಿಕ್ ಹೃದಯಾಘಾತದಿಂದ ಮೃತಪಟ್ಟರು. ಆದೂರು ಮಲ್ಲಾವರದ ಕೃಷ್ಣಯ್ಯ ಬಲ್ಲಾಳ್- ನಿರ್ಮಲಾ ಕುಮಾರಿ ದಂಪತಿಯ ಪುತ್ರನೂ, ವಿದ್ಯಾನಗರ ಉದಯಗಿರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ವಿಜೇತ (೩೨) ಎಂಬವರು ಮೃತ ಪಟ್ಟ ವ್ಯಕ್ತಿ. ಮೊಗ್ರಾಲ್‌ನ ಖಾಸಗಿ ಕಾರು ಶೋರೂಂನಲ್ಲಿ ಇವರು ಮೆಕ್ಯಾನಿಕ್ ಆಗಿದ್ದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತ ರತೀಶ್‌ನೊಂದಿಗೆ ಮಂಜೇಶ್ವರಕ್ಕೆ ತೆರಳಿ ಕಾರಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಮೀಪುಗುರಿಗೆ ತಲುಪಿದಾಗ ಘಟನೆ ನಡೆದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ …

ಅಯೋಧ್ಯೆಯಲ್ಲಿ ಪೂಜಿಸಿದ ಅಕ್ಷತೆ ಪ್ರಸಾದ ಜಿಲ್ಲೆಗೆ: ಜ. ೧ರಿಂದ ಪ್ರತಿ ಮನೆಗೂ ವಿತರಣೆ

ಹೊಸದುರ್ಗ: ರಾಮಮಂತ್ರ ಧ್ವನಿಯೊಂದಿಗೆ ಅಯೋಧ್ಯೆಯಲ್ಲಿ ಪೂಜಿಸಿದ ಅಕ್ಷತೆ ಪ್ರಸಾದ ಜಿಲ್ಲೆಗೆ ತಲುಪಿತು. ಜ. ೨೨ರಂದು ಅಯೋಧ್ಯೆಯ ಶ್ರೀರಾಮ ಕ್ಷೇತ್ರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಅಂಗವಾಗಿ  ಜಿಲ್ಲೆಯ ಎಲ್ಲಾ ಮನೆಗಳಿಗೆ ಈ ಪ್ರಸಾದ ವಿತರಿಸಲಾಗುವುದು.  ಇಂದು ಬೆಳಿಗ್ಗೆ ಮಾವುಂಗಲ್ ಶ್ರೀರಾಮ ಕ್ಷೇತ್ರಕ್ಕೆ ತಲುಪಿದ ಪ್ರಸಾದವನ್ನು ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ್ ಬಿ. ಉಣ್ಣಿಕೃಷ್ಣನ್ ಸ್ವೀಕರಿಸಿದರು. ಜ. ೧ರಂದು ಪ್ರಭಾತಬೇರಿ ನಡೆಯಲಿದೆ. ಮಾವುಂಗಲ್ ಕ್ಷೇತ್ರದಲ್ಲಿರುವ ಅಕ್ಷತೆ ಪ್ರಸಾದವನ್ನು ಜ. ೧ರಿಂದ ೧೫ರ ವರೆಗೆ ಜಿಲ್ಲೆಯ ಎಲ್ಲಾ ಮನೆಗಳಿಗೂ ವಿತರಿಸಲಾಗುವುದು. ಅಯೋಧ್ಯೆಯ ಪ್ರಾಣ …

ಗುತ್ತಿಗೆದಾರ, ಸ್ನೇಹಿತನನ್ನು ಅಪಹರಿಸಿ ೫೦ ಲಕ್ಷ ರೂ. ದರೋಡೆ: ತನಿಖೆ ಕಾಸರಗೋಡಿಗೆ

ಕಾಸರಗೋಡು: ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಕಾರಿನಲ್ಲಿ ಊರಿಗೆ ಮರಳುತ್ತಿದ್ದ ಮಲಪ್ಪುರಂ ನಿವಾಸಿಗಳನ್ನು ಕಾರು ಸಹಿತ ಅಪಹರಿಸಿ ಕೊಂಡೊಯ್ದು ೫೦ ಲಕ್ಷ ರೂಪಾಯಿ ದರೋಡೆ ಗೈದ ಪ್ರಕರಣದ ತನಿಖೆಯನ್ನು ಕಾಸರಗೋಡು ಹಾಗೂ ಕಣ್ಣೂರಿಗೆ ವಿಸ್ತರಿಸಲಾಗಿದೆ. ಮಲಪ್ಪುರಂ ತಿರುರಂಗಾಡಿಯ ಗುತ್ತಿಗೆದಾರ ಕೆ. ಶಂಜದ್ (೨೮), ಸ್ನೇಹಿತ ಹಾಗೂ ವಿದ್ಯಾರ್ಥಿಯೂ ಆದ ಅಫ್ನು (೧೮) ಎಂಬಿವರನ್ನು ನಿನ್ನೆ ಮುಂಜಾನೆ ಕೊಡಗು  ತಿತಿಮತ್ತಿ ಭದ್ರಗೋಳ ಸಮೀಪದಿಂದ ಅಪಹರಿಸಲಾಗಿದೆ. ತನ್ನ ಕೈವಶವಿದ್ದ ೭೫೦ ಗ್ರಾಂ ಚಿನ್ನವನ್ನು ಮೈಸೂರಿನಲ್ಲಿ ಮಾರಾಟ ನಡೆಸಿ ಹಣದೊಂದಿಗೆ ಶಂಜದ್ …

ಸಿಪಿಎಂ ಹಿರಿಯ ನೇತಾರ ಎ.ಕೆ. ನಾರಾಯಣನ್ ನಿಧನ

ಕಾಸರಗೋಡು: ಸಿಪಿಎಂನ ಮಾಜಿ ಜಿಲ್ಲಾ ಕಾರ್ಯದರ್ಶಿ ಹೊಸದುರ್ಗ ಅಧಿಯಾಂಬೂರ್ ಬಳಿಯ ಕಾಲಿಕ್ಕಡವು ವೀಡ್‌ನ ಎ.ಕೆ. ನಾರಾಯಣನ್ (೮೫) ಅಸೌಖ್ಯದ ನಿಮಿತ್ತ ಹೊಸದುರ್ಗ ಸಹಕಾರಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ನಿಧನ ಹೊಂದಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯರೂ,  ಸಿಐಟಿಯುನ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಕನ್ಸ್ಯೂಮರ್ ಫೆಡ್‌ನ ಹಾಲಿ ಅಧ್ಯಕ್ಷರೂ ಆಗಿದ್ದರು. ಇವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಸಿಪಿಎಂನ ಹೊಸದುರ್ಗ ಏರಿಯಾ ಸಮಿತಿ ಕಚೇರಿಯಲ್ಲೂ, ಬಳಿಕ ಅಧಿಯಾಂಬೂರು  ಬಾಲಬೋಧಿನಿ ವಾಚನಾಲಯದಲ್ಲಿ ಅಂತಿಮ   ದರ್ಶನಕ್ಕಿರಿಸಲಾಯಿತು. ಸಿಪಿಎಂ ಹಾಗೂ ಇತರ …

ಬಿನೋ ವಿಶ್ವಂ ಸಿಪಿಐ ಹಂಗಾಮಿ ಕಾರ್ಯದರ್ಶಿ

ಕೋಟ್ಟಯಂ: ಕಾನಂ ರಾಜೇಂ ದ್ರನ್ ಅವರ ನಿಧನದಿಂದಾಗಿ ತೆರವುಗೊಂಡ ಸಿಪಿಐ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಬಿನೋ ವಿಶ್ವಂ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸಿಪಿಐ ಅಖಿಲ ಭಾರತ ಅಧ್ಯಕ್ಷ ಡಿ. ರಾಜಾ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಈ ಆಯ್ಕೆ ನಡೆಸಲಾಗಿದೆ.

ಸಂಶಯಾಸ್ಪದರ ಪತ್ತೆ ಇಬ್ಬರು ಸೆರೆ

ಮಂಜೇಶ್ವರ: ಮಧ್ಯರಾತ್ರಿ ಬಳಿಕ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.ಸೋಂಕಾಲ್ ಆಶಿಕ್ ಮಂಜಿ ಲ್‌ನ  ಆಶಿಕ್ ಅಬ್ದುಲ್ಲ ಯೂಸಫ್ (೩೭), ಸೋಂಕಾಲ್ ಅಜ್ಮಲ್ ಮಂಜಿಲ್‌ನ ಯೂಸಫ್ (೩೨) ಎಂಬಿವರು ಬಂಧಿತ ವ್ಯಕ್ತಿಗಳು. ಈ ಇಬ್ಬರು  ಇಂದು ಮುಂಜಾನೆ ೧ ಗಂಟೆ ವೇಳೆ ಮಣ್ಣಂಗುಳಿ ಸ್ಟೇಡಿಯಂ  ಪರಿಸರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಎಸ್‌ಐ ನಿಖಿಲ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ

ದೇಶದ ಭವಿಷ್ಯ ಮಹಿಳೆಯರ ಕೈಯಲ್ಲಿ -ಸಚಿವೆ ಶೋಭಾ ಕರಂದ್ಲಾಜೆ

ಕಾಸರಗೋಡು: ದೇಶದ  ಭವಿಷ್ಯ ಹೊಸ ತಲೆಮಾರಿನ ಕೈಯಲ್ಲಿದೆ ಎಂದೂ, ಮಹಿಳಾ ಸಬಲೀಕರಣ ರಾಷ್ಟ್ರಶಕ್ತಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಹಿಳಾ ಸಮನ್ವಯ ವೇದಿಕೆಯ ಆಶ್ರಯದಲ್ಲಿ ನಿನ್ನೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆದ ‘ಸ್ತ್ರೀ ಶಕ್ತಿ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವೆ ಮಾತನಾಡುತ್ತಿದ್ದರು. ಭಾರತದ ರಾಷ್ಟ್ರೀಯ ಶಕ್ತಿ  ಬಗ್ಗೆ ಅವಲೋಕನೆ ನಡೆಸಿದಾಗ ಅದರಲ್ಲಿ ಮಹಿಳೆಯರ ಅಪಾರ ಕೊಡುಗೆಗಳನ್ನು ನಾವು ಕಾಣಬಹುದಾಗಿದೆ. ಮಹಿಳೆಯರು ಅಧ್ಯಾವುದೇ ಕ್ಷೇತ್ರಗಳಿಗೆ ಧುಮುಕಿ ಕಾರ್ಯವೆಸಗಿದ್ದರೂ, ಅದರಲ್ಲಿ ಅವರೇ ಪ್ರಥಮ ಸ್ಥಾನಕ್ಕೇರಲಿದ್ದಾರೆಂಬ ಧೃಡ …