ತೃಶೂರಿನಲ್ಲಿ ೧೨೦೦ ಲೀಟರ್ ಸ್ಪಿರಿಟ್, ನಕಲಿ ಮದ್ಯ ವಶ
ತೃಶೂರು: ತೃಶೂರಿನಲ್ಲಿ ೧೨೦೦ ಲೀಟರ್ ಸ್ಪಿರಿಟ್ ಹಾಗೂ ಭಾರೀ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ವೈದ್ಯನೆಂದು ಹೇಳಲಾಗುತ್ತಿರುವ ವ್ಯಕ್ತಿಯ ಸಹಿತ ೬ ಮಂದಿಯನ್ನು ಬಂಧಿಸಲಾಗಿದೆ. ಪೆರಿಂಙೋಟ್ ಕರ ಎಂಬಲ್ಲಿನ ಹೋಟೆಲ್‌ವೊಂ ದನ್ನು ಕೇಂದ್ರೀಕರಿಸಿ ನಕಲಿ ಮದ್ಯ ತಯಾ ರಿ ಕೇಂದ್ರ ನಡೆಯುತ್ತಿರುವು ದಾಗಿ ಅಬಕಾರಿ ಇಲಾಖೆಗೆ ಮಾಹಿತಿ ಲಭಿಸಿತ್ತು. ಇದರಂತೆ ಅಲ್ಲಿಗೆ ದಾಳಿ ನಡೆಸಿದಾಗ ಸ್ಪಿರಿಟ್ ಹಾಗೂ ಮದ್ಯ ಪತ್ತೆಯಾಗಿದೆ. ಸೆರೆಗೀಡಾದವರಲ್ಲಿ ಇರಿಂಙಾಲಕುಡ ನಿವಾಸಿ ಅನೂಪ್ ಎಂಬಾತನಿದ್ದು ಈತ ವೈದ್ಯನೆಂದು ಹೇಳಲಾಗುತ್ತಿದೆ. ಈತನ ನೇತೃತ್ವದಲ್ಲಿ …