ಚಿನ್ನದ ಬೆಲೆಯಲ್ಲಿ ಕುಸಿತ

ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿದ್ದ ಚಿನ್ನದ ದರ ಕುಸಿದು ಆಭರಣಪ್ರಿಯ ರಿಗೆ ಸಂತಸ ನೀಡಿದೆ. ಇರಾನ್ ಚರ್ಚೆಗೆ ಸಿದ್ಧ ಎಂದು ಜಿಸಿಸಿ ದೇಶಗಳ ಮೂಲಕ ಅಮೆರಿಕಕ್ಕೆ ತಿಳಿಸಿರುವುದು ಚಿನ್ನದ ಬೆಲೆಯಲ್ಲಿ ಕಡಿತ ಉಂಟಾಗಲು ಕಾರಣವೆನ್ನಲಾಗಿದೆ. ಇಂದು ಪವನ್ಗೆ 840 ರೂ. ಕುಸಿದು 73600 ರೂ. ಬೆಲೆಯಾಗಿದೆ. ಗ್ರಾಂಗೆ 105 ರೂ. ಕಡಿಮೆಯಾಗಿದೆ. ಶನಿವಾರ ಚಿನ್ನದ ಬೆಲೆಯಲ್ಲಿ ಪವನ್ಗೆ 200 ರೂ. ಹೆಚ್ಚಳವಾಗಿತ್ತು. ಸತತ ನಾಲ್ಕು ದಿನದಿಂದ ಚಿನ್ನದ ಬೆಲೆ …

ರಸ್ತೆಗೆ ಮರ ಬಿದ್ದು ಬಸ್ ಸಂಚಾರ ಮೊಟಕು

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚಿಪ್ಪಾರು ಕಡೆಂಕೋ ಡಿಯಲ್ಲಿ ರಸ್ತೆಗೆ ಮರ ಮುರಿದು ಬಿದ್ದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇಂದು ಬೆಳಿಗ್ಗೆ ರಸ್ತೆ ಬದಿಯ ಮರ ತುಂಡಾಗಿ ವಿದ್ಯುತ್ ತಂತಿ ಮೇಲೆ  ಸಿಲುಕಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ಉಪ್ಪಳ-ಲಾಲ್‌ಬಾಗ್-ಕುರುಡಪದವು ರೂಟ್‌ನಲ್ಲಿ ಬಸ್ ಸಂಚಾರ ಮೊಟಕುಗೊಂಡಿದೆ. ಸಣ್ಣ ವಾಹನಗಳು ಸಂಚರಿಸುತ್ತಿವೆ. ಮರ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ತರೆವುಗೊಳಿಸಲು ವಿಳಂಬವಾಗಿದೆ. ವಿದ್ಯುತ್ ಕಚೇರಿಯಿಂದ ನೌಕರರು ತಲುಪಿ ಮರವನ್ನು ತೆರವುಗೊಳಿಸಿದ ಬಳಿಕವೇ ಬಸ್ ಸಂಚಾರ ಪುನರಾರಂಭಗೊಳ್ಳಲಿದೆ.

ಬಂಬ್ರಾಣ, ಉಳುವಾರಿನಿಂದ ಹಲವು ಕುಟುಂಬಗಳ ಸ್ಥಳಾಂತರ

ಕುಂಬಳೆ: ಉಳುವಾರು, ಬಂಬ್ರಾಣಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಈ ಪ್ರದೇಶಗಳಿಂದ ಹಲವು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಳುವಾರಿ ನಿಂದ 15 ಕುಟುಂಬಗಳನ್ನು, ಬಂಬ್ರಾಣ ಬಯಲು ಪ್ರದೇಶದಿಂದ 10 ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸ ಲಾಗಿದೆ. ಮಳೆ ತೀವ್ರಗೊಂಡರೆ ಇನ್ನಷ್ಟು ಕುಟುಂಬಗಳನ್ನು ತೆರವುಗೊಳಿಸಬೇಕಾಗಿ ಬರಲಿದೆ.

ಕೊಯಿಪ್ಪಾಡಿ ಸಮುದ್ರ ಕಿನಾರೆಯಲ್ಲಿ ಮತ್ತೆ ಎರಡು ಬ್ಯಾರಲ್ ಪತ್ತೆ

ಕುಂಬಳೆ: ಕುಂಬಳೆ ಸಮೀಪದ ಕೊಯಿಪ್ಪಾಡಿ ಕಡಪ್ಪುರ ಸಮುದ್ರ ಕಿನಾರೆಯಲ್ಲಿ ನಿನ್ನೆ ಮತ್ತೆ ಎರಡು ಬ್ಯಾರಲ್‌ಗಳು ಪತ್ತೆಯಾಗಿವೆ. ಇದು ಆಳ ಸಮುದ್ರದಲ್ಲಿ ಸರಕು ಹಡಗಿನ ಕಂಟೈನರ್‌ಗಳಿಂದ ಬಿದ್ದು ನೀರಿನಲ್ಲಿ ತೇಲಿ ದಡ ಸೇರಿದ ಬ್ಯಾರಲ್ ಗಳಾಗಿರಬಹುದೆಂದು ಶಂಕಿಸಲಾಗುತ್ತಿದೆ. ಇದ ನೈಟ್ರಿಕ್ ಆಸಿಡ್ ಒಳಗೊಂಡಿರುವ ಬ್ಯಾರಲ್ ಎಂದು ಶಂಕಿಸಲಾಗುತ್ತಿದೆ. ಆ ಬಗ್ಗೆ ಮಾಹಿತಿ ಲಭಿಸಿದ  ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ  ಬ್ಯಾರಲ್‌ಗಳನ್ನು ಅಲ್ಲಿಂದ  ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಸೇರಿದ ಸ್ಥಳಕ್ಕೆ ಕಂದಾಯ ಇಲಾಖೆಯ ನಿರ್ದೇಶ ಪ್ರಕಾರ ಸ್ಥಳಾಂತರಿಸಿ ಸುರಕ್ಷಿತ ಸ್ಥಳದಲ್ಲಿರಿಸಿದ್ದಾರೆ. ಜೂನ್ …

ತುಂಡಾಗಿ ಬಿದ್ದ ವಯರ್‌ನಿಂದ ಶಾಕ್ ತಗಲಿ 5 ಹಸುಗಳು ಸಾವು

ಹೊಸದುರ್ಗ: ತುಂಡಾಗಿ ಬಿದ್ದ  ವಯರ್‌ನಿಂದ ಶಾಕ್ ತಗಲಿ 5 ಹಸುಗಳು ಸಾವಿಗೀಡಾಗಿವೆ. ಇಂದು ಬೆಳಿಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದ ಮಹಿಳೆಗೂ ಶಾಕ್ ತಗಲಿದೆ. ಚಪ್ಪಾರಪ್ಪಡವ್, ಕಣಾರಂವಯಲ್‌ನ ಹೈನುಗಾರಿಕೆ ಕೃಷಿಕರಾದ ದಾಮೋದರನ್- ಶ್ಯಾಮಳ ದಂಪತಿಯ ೫ ಹಸುಗಳು ಸಾವಿಗೀಡಾಗಿವೆ. ಇಂದು ಮುಂಜಾನೆ ಶ್ಯಾಮಳ ಹಾಲು ಕರೆಯಲೆಂದು ಕೊಟ್ಟಿಗೆಗೆ ತೆರಳಿದ್ದರು. ಹಟ್ಟಿಯ ಬಲ್ಬ್‌ನ ಸ್ವಿಚ್ ಅದುಮಿದಾಗ ಶ್ಯಾಮಳಾರಿಗೆ ಶಾಕ್ ತಗಲಿದೆ.  ಬಳಿಕ ನೋಡಿದಾಗ ಹಟ್ಟಿಯಲ್ಲಿ ಅಳವಡಿಸಿದ್ದ ಬಲ್ಬ್‌ಗೆ ಸಂಪರ್ಕ ಕಲ್ಪಿಸಿದ ವಯರ್ ತುಂಡಾಗಿ ಬಿದ್ದಿರುವುದು ಹಾಗೂ ಹಸುಗಳು ಸಾವಿಗೀಡಾಗಿರುವುದು …

ಹಿರಿಯ ವ್ಯಾಪಾರಿ ನಿಧನ

ಹೊಸಂಗಡಿ: ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಜ್ಯೋತಿ ನಿವಾಸದ ಹಿರಿಯ ವ್ಯಾಪಾರಿ ಮಾಧವ (80) ನಿನ್ನೆ ಮಧ್ಯಾಹ್ನ ಮನೆಯಲ್ಲಿ ಹೃದ ಯಾಘಾತದಿಂದ ನಿಧನರಾದರು. ಇವರು ಕಳೆದ 40 ವರ್ಷಗಳಿಂದ ಮನೆ ಪರಿಸರದಲ್ಲಿ ದಿನಸಿ ಅಂಗಡಿ ವ್ಯಾಪಾರಿಯಾಗಿದ್ದರು. ಮೃತರು ಪತ್ನಿ ಪುಷ್ಪಾವತಿ, ಮಕ್ಕಳಾದ ಭಾರತಿ, ವಿಜಯ್, ಬಾಲಚಂದ್ರ, ಜ್ಯೋತಿ, ಸರಿತಾ, ಅಕ್ಷಿತಾ, ರಾಕೇಶ್, ಸೊಸೆಯಂ ದಿರಾದ ಸುಜÁತ, ಪ್ರಜಿತಾ, ಸುಸ್ಮಿತಾ, ಅಳಿಯಂದಿರಾದ ರಮೇಶ ಉಪ್ಪಳ, ಅಶೋಕ ಪುತ್ತಿಗೆ, ಅಶೋಕ ತೊಕ್ಕೋಟು, ಉಮೇಶ ಕಾಸರಗೋಡು, ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು …

ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಅಸ್ಥಿಪಂಜರ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಸ್ಥಿಪಂಜರ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮೆಡಿಕಲ್ ಕಾಲೇಜಿನ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನ ಸಮೀಪ ನಿನ್ನೆ ಮಧ್ಯಾಹ್ನ ತಲೆ ಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿದೆ. ದೊಡ್ಡದಾದ ಚೀಲದಲ್ಲಿ ಇದನ್ನು ಇರಿಸಲಾಗಿತ್ತು. ಬಳಿಕ ಸುರಕ್ಷಾ ನೌಕರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಪೊಲೀಸರು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದರು. ಅಸ್ಥಿಪಂಜರದಲ್ಲಿ ಮಾರ್ಕರ್ ಪೆನ್ನು ಉಪಯೋಗಿಸಿ ಗುರುತು ಹಾಕಲಾಗಿದೆ. ಕಲಿಕೆಯ ಅಗತ್ಯಕ್ಕಾಗಿ ಉಪಯೋಗಿಸಿರುವುದಾಗಿರಬೇಕೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಅಶೋಕ್ ಅಂಬಾರ್ ನಿಧನ

ಉಪ್ಪಳ:ಐಲ ಮೈದಾನ ಬಳಿಯ ನಿವಾಸಿ ದಿ| ಶ್ರೀಧರ ಅಂಬಾರ್ ರವರ ಪುತ,್ರ ಆರ್.ಎಸ್.ಎಸ್‌ನ ಹಿರಿಯ ಕಾರ್ಯಕರ್ತ ಅಶೋಕ್ ಅಂಬಾರ್ (56) ನಿಧನ ಹೊಂದಿದ್ದಾರೆ. ನಿನ್ನೆ ಸಂಜೆ ಹೃದಯÁಘಾತ ಉಂಟಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಮಂಗಳೂರಿನಲ್ಲಿ ಪ್ಲಂಬಿAಗ್‌ನ ಗುತ್ತಿಗೆ ದಾರರಾಗಿ ಕೆಲಸ ನಿರ್ವಹಿಸುತಿ ್ತದ್ದರು. ಆರ್.ಎಸ್.ಎಸ್‌ನ ಮುಖ್ಯ ಶಿಕ್ಷಕ್, ಮಂಜೇಶ್ವರ ತಾಲೂಕು ಘೋಷ್ ಪ್ರಮುಖ್‌ರಾಗಿದ್ದರು. ಅಲ್ಲದೆ ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಟ್ರಸ್ಟಿ, ಚೆರುಗೋಳಿ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಐಲ …

ಇರಾನ್-ಇಸ್ರೇಲ್ ಉದ್ವಿಗ್ನತೆ: ಅರ್ಮೇನಿಯಾ ಗಡಿ ದಾಟಿದ 100 ಭಾರತೀಯರು

ನವದೆಹಲಿ: ಇರಾನ್- ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಅದರ ಪರಿಣಾಮ ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಪ್ರತ್ರಿಯೆ ಆರಂಭಿಸಲಾಗಿದೆ. ಇದರಂತೆ ಇರಾನ್‌ನಲ್ಲಿರುವ ಸುಮಾರು 100 ಭಾರತೀಯರ ಮೊದಲ ಬ್ಯಾಚನ್ನು ಅರ್ಮೇನಿಯಾ ಗಡಿ ದಾಟಿಸಲಾಗಿದೆ. ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭದ್ರತಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮತ್ತು ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದೆ. ಅವರನ್ನೂ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುವುದೆಂದು ರಾಯಭಾರಿ ಕಚೇರಿ ತಿಳಿಸಿದೆ.

ಧಾರಾಕಾರ ಮಳೆ: ಮಂಜೇಶ್ವರ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ನಾಶನಷ್ಟ

ಮಂಜೇಶ್ವರ: ಧಾರಾಕಾರ ಮಳೆಗೆ ವಿವಿಧೆಡೆ ನಾಶನಷ್ಟ ಸಂಭವಿಸಿದ್ದು, ಮಂಜೇಶ್ವರ ತಾಲೂಕಿನಾದ್ಯಂತ ಗುಡ್ಡೆ ಜರಿತ, ಮನೆ ಕುಸಿತಗಳು ಸಂಭವಿಸಿವೆ. ನಿನ್ನೆ ಮಧ್ಯಾಹ್ನ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ 10ನೇ ಮೈಲ್ ನಿವಾಸಿ ನಾಸರ್ ಎಂಬವರ ಹೆಂಚು ಹಾಸಿದ ಮನೆ ಸಂಪೂರ್ಣ ಕುಸಿದಿದೆ. ಮನೆಯೊಳಗಿದ್ದವರು ಈ ವೇಳೆ ಹೊರಗೆ ಓಡಿಹೋದ ಕಾರಣ ದುರಂತ ತಪ್ಪಿದೆ. ಸ್ಥಳಕ್ಕೆ ಸ್ಥಳೀಯರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ತಲುಪಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಪೈವಳಿಕೆ ಪಂಚಾಯತ್‌ನ ೧೮ನೇ ವಾರ್ಡ್‌ಗೊಳಪಟ್ಟ ಬಂಡಾರ ಎಂಬಲ್ಲಿ ಮೊಹಮ್ಮದ್ ರಫೀಕ್ ಎಂಬವರ ಎರಡು …