೧೦.೪೭ ಲಕ್ಷ ರೂ. ಮೌಲ್ಯದ ಚಿನ್ನ ವಶ

ಕಾಸರಗೋಡು: ಕಲ್ಲಿಕೋಟೆ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ನಡೆಸಿದ ಕಾರ್ಯಾಚರಣೆ ಯಲ್ಲಿ ವಿದೇಶದಿಂದ ಅನಧಿಕೃತ ವಾಗಿ ಸಾಗಿಸಲಾಗಿದ್ದ ೧೦.೪೭ ಲಕ್ಷ ರೂ. ಮೌಲ್ಯದ ೧೭೦ ಗ್ರಾಂ ಚಿನ್ನವನ್ನು ಪತ್ತೆಹಚ್ಚಿ ವಪಡಿಸಲಾಗಿದೆ. ಮಸ್ಕತ್‌ನಿಂದ ಬಂದ ಕಾಸರ ಗೋಡು ಇಸ್ಮಾಯಿಲ್ ಪುತ್ತೂರು ಅಬ್ದುಲ್ಲ (೩೮) ಎಂಬಾತನಿಂದ ಈ ಚಿನ್ನ ವಶಪಡಿಸಲಾಗಿದೆ. ಚಿನ್ನವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಸಾಗಿಸಲಾಗುತ್ತಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ಸೀತಾಂಗೋಳಿ:  ವ್ಯಾಪಾರಿ ಯೊಬ್ಬರು ಕುಸಿದುಬಿದ್ದ್ದು ಮೃತಪಟ್ಟರು. ಊಜಂಪದವು ಬಿಸ್ಮಿಲ್ಲ ಮಂಜಿಲ್‌ನ ಮೊಹಮ್ಮದ್  ಪುತ್ತೂರು (೫೫) ಎಂಬವರು ಮೃತಪಟ್ಟ ದುರ್ದೈವಿ. ಇವರು ಶನಿವಾರ ಮಧ್ಯಾಹ್ನ ಸೀತಾಂಗೋಳಿ ಪೇಟೆಗೆ ಬಂದಿದ್ದರು. ಈ ವೇಳೆ ಅಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಆಯಿಶಾ, ಸಹೋದರ-ಸಹೋದರಿಯರಾದ ಅಬ್ದುಲ್ಲ, ಕುಂಞಿ ಅಲೀಮ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಉತ್ಸವ ಛಾಯೆಯಲ್ಲಿ ಕಾರಡ್ಕ ಗ್ರಾಮ : ನಾಳೆ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

ಮುಳ್ಳೇರಿಯ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋ ತ್ಸವಕ್ಕೆ ನಾಳೆ ಬೆಳಿಗ್ಗೆ ಧ್ವಜಾರೋಹಣ ದೊಂದಿಗೆ ಚಾಲನೆ ದೊರೆಯಲಿದೆ. ಡಿಡಿಇ ಎನ್. ನಂದಿಕೇಶನ್ ಧ್ವಜಾ ರೋಹಣಗೈಯ್ಯುವರು. ದ.೭ರಂದು ಸಂಜೆ ೪ ಗಂಟೆಗೆ ಔಪಚಾರಿಕ ಉದ್ಘಾಟನೆ ನಡೆಯಲಿದ್ದು, ವಿಧಾನ ಸಭಾ ಸ್ಪೀಕರ್ ಎ.ಎನ್. ಶಂಸೀರ್ ಉದ್ಘಾಟನೆ ನಿರ್ವಹಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕ ಎನ್.ಎ.  ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಭಾಗವಹಿಸುವರು. ಕಾರಡ್ಕ ಶಾಲೆಯಲ್ಲಿ ನಡೆಯುವ ಕಲೋತ್ಸವವನ್ನು ಊರಿನ ಉತ್ಸವವಾಗಿ ಬದಲಿಸಲು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಶಾಲೆಯನ್ನು …

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯಿ: ಕುಂಬಳೆಯಲ್ಲೂ ಹರ್ಷಾಚರಣೆ

ಕುಂಬಳೆ : ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾದಿsಸಿದ ಪ್ರಯುಕ್ತ ಕುಂಬಳೆ ನಗರದಲ್ಲಿ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಸುಡು ಮದ್ದು ಸಿಡಿಸುವ ಮೂಲಕ ವಿಜಯೋತ್ಸವ ವನ್ನು ಆಚರಿಸಲಾಯಿತು. ಬಿಜೆಪಿ ಕುಂಬಳೆ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯಾದವ ಉದ್ಘಾಟಿಸಿದರು. ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದೊಂದಿದೆ 3 ನೇ ಬಾರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದು …

ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯಿ: ಪ್ರತಾಪನಗರದಲ್ಲಿ ವಿಜಯೋತ್ಸವ

ಉಪ್ಪಳ: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ್Á್ತಜÀಗಳಲ್ಲಿ ಭಾರ ತೀಯ ಜನತಾ ಪಕ್ಷ ಬಹುಮತ ಗಳಿಸಿದ ಪ್ರಯುಕ್ತ ಪ್ರತಾಪನಗರದಲ್ಲಿ ಬಿಜೆಪಿ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ನಿನ್ನೆ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ, ಪಕ್ಷ ಕ್ಕೆ e್ರçಕಾರ ಹಾಕಿ ್ಚ್ಣಒº್ಣ´Ãೆ್ನ್ಛ¥್ಣÁ್ಣ್ನ. ಕಾರ್ಯಕ್ರಮ ದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಕಾರ್ಯದರ್ಶಿ ಧನರಾಜ್, ಗಣೇಶ್ ಕೆ.ಎನ್, ವಲ್ಸರಾಜ್, ಶ್ರೀಜಿತ್, ಪ್ರವೀಣ್, ರವೀಶ, ಮೋಹನ, ಸಂತೋಷ್, ಲೀಲಾಧರ, ಜಯರಾಜ್, ಅವಿನಾಶ್, …

ಹೊಸಂಗಡಿಯಲ್ಲಿ ಹೃದಯ ಚಿಕಿತ್ಸಾ ಶಿಬಿರ

ಮಂಜೇಶ್ವರ: ಚಕ್ರವರ್ತಿ ಹೊಸಂ ಗಡಿ ಇದರ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ ಮಂಗಳೂರು ಹಾರ್ಟ್ ಸ್ಕಾನ್ ಫೌಂಡೇಶನ್ ಇದರ ಆಶ್ರಯದಲ್ಲಿ ಹೊಸಂಗಡಿ ಪ್ರೇರಣ ಹಾಲ್ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮ ವನ್ನು ಹರೀಶ್ ಮಾಡ ಉದ್ಘಾಟಸಿ ದರು,ಡಾ. ಮುಕುಂದ, ಡಾ. ಅಮಿತ್ ಕಿರಣ್, ಡಾ. ವಿಜಯ ರೇವನ್ಕರ್ ಚಿಕಿತ್ಸೆಯ ಕುರಿತು ಅರಿವು ಮೂಡಿಸಿದರು. ಜಿ.ಆರ್.ಬಿ ರಾಮಪ್ಪ, ಕರುಣಾಕರ ಮಂಜೇಶ್ವರ, ಶುಭಾಶಂಸನೆ ಗೈದರು. ಎ.ಎಸ್ ಯಾದವ್, ಮೋತಿ ಕಿರಣ್, ಸುರೇಶ್ ಪರಂಕಿಲ, ಉಪಸ್ಥಿv Àರಿದ್ದರು. ಕ್ಲಬ್ಬಿನ ಅಧ್ಯಕ್ಷ …

ಆಂಬುಲೆನ್ಸ್ ಕಳವುಗೈದು ಸಾಗಿಸುತ್ತಿದ್ದಾಗ ಅಪಘಾತ: ಆರೋಪಿ ತಕ್ಷಣ ಸೆರೆ

ಮಂಜೇಶ್ವರ: ಆಸ್ಪತ್ರೆ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್‌ನ್ನು ವ್ಯಕ್ತಿಯೋರ್ವ ಕಳವುಗೈದು ಸಾಗಿಸುತ್ತಿದ್ದ ವೇಳೆ  ಅದು ಅಪಘಾತಕ್ಕೀಡಾಗಿದ್ದು, ಇದರಿಂದ ಆರೋಪಿಯನ್ನು ಸುಲಭದಲ್ಲಿ ಸೆರೆಹಿಡಿಯಲು ಪೊಲೀಸರಿಗೆ  ಸಾಧ್ಯವಾದ ಘಟನೆ ನಡೆದಿದೆ.  ಪತ್ವಾಡಿ ನೌಫಲ್ ಮಂಜಿಲ್ ನಿವಾಸಿ ಮೊಹಮ್ಮದ್ ನೌಫಲ್ ಯಾನೆ ಸವಾದ್ (೨೧) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪಚ್ಲಂಪಾರೆ ನಿವಾಸಿ ಮೊಹಮ್ಮದ್ ರಿಯಾಸ್ ಎಂಬವರ ಆಂಬುಲೆನ್ಸ್‌ನ್ನು ನಿನ್ನೆ ಸಂಜೆ ಉಪ್ಪಳದ  ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಲಾಗಿತ್ತು.  ಕೀಲಿಕೈಯನ್ನು ಅದರಲ್ಲೇ ಇರಿಸಿ ಮೊಹಮ್ಮದ್ ರಿಯಾಸ್ ಅಲ್ಲಿಂದ ತೆರಳಿದ್ದು, ಅಲ್ಪ ಹೊತ್ತಿನಲ್ಲೇ ಮರಳಿದ್ದರು.  ಆದರೆ ಅಷ್ಟರಲ್ಲಿ …

ಕಾರು ಢಿಕ್ಕಿ ಹೊಡೆದು ನಿವೃತ್ತ ರೈಲ್ವೇ ಸಿಬ್ಬಂದಿ ಮೃತ್ಯು

ನೆಲ್ಲಿಕಟ್ಟೆ: ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ   ರೈಲ್ವೇ ಇಲಾಖೆಯ ನಿವೃತ್ತ ಸಿಬ್ಬಂದಿಗೆ ಕಾರು ಢಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ನೆಲ್ಲಿಕಟ್ಟೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ನೆಕ್ರಾಜೆ ಚೂರಿಪಳ್ಳ ಹೌಸ್‌ನ ಐತ್ತಪ್ಪ ನಾಯ್ಕ (೬೦)  ಮೃತಪಟ್ಟ ದುರ್ದೈವಿ. ಇವರು ಇಂದು ಬೆಳಿಗ್ಗೆ ನೆಲ್ಲಿಕಟ್ಟೆ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಕಾರೊಂದು ಅವರಿಗೆ ಢಿಕ್ಕಿ ಹೊಡೆ ದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು …

ಬಾಲಕಿಯನ್ನು ಅಪಹರಿಸಿದ ಪ್ರಕರಣ:ದಂಪತಿ, ಪುತ್ರಿ ಸೆರೆ: ಕಾರು ವಶ ಅಪಹರಿಸಿದ್ದು ಹಣಕ್ಕಾಗಿ

ಕೊಲ್ಲಂ: ಕೊಲ್ಲಂನ ಓಯೂರಿನ ಆರು ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಮತ್ತು ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ಚಾತನ್ನೂರು ಮಾಂಬಿಳಿ ಕುನ್ನು ಕವಿತಾರಾಜ್  ನಿವಾಸದ ಕೆ.ಆರ್. ಪದ್ಮಕುಮಾರ್ (೫೨), ಆತನ ಪತ್ನಿ ಎಂ.ಆರ್. ಅನಿತಾ ಕುಮಾರಿ (೪೫) ಮತ್ತು  ಪುತ್ರಿ ಪಿ. ಅನುಪಮ (೨೦) ಬಂಧಿತ ಆರೋಪಿಗಳು. ಇವರನ್ನು ತಮಿಳುನಾಡಿನ ತೆಂಗಾಶಿಯಿಂದ ಪೊಲೀಸರು ಸೆರೆಹಿಡಿದಿದ್ದಾರೆ.  ಬಂಧಿತ ಆರೋಪಿ  ಪದ್ಮ ಕುಮಾರ್ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದನೆಂದೂ ಅದರಿಂದ ಹೊರಬರಲು ಆತ ಮತ್ತು ಕುಟುಂಬದವರು ಸೇರಿ  …

ನವಕೇರಳ ಸಭೆ: ಮುಖ್ಯಮಂತ್ರಿ ವಿರುದ್ಧ ವಾಟ್ಸಪ್‌ನಲ್ಲಿ ಅವಹೇಳನಾತ್ಮಕ ಸಂದೇಶ ರವಾನೆ: ಪ್ರಕರಣ ದಾಖಲು

ಮಂಜೇಶ್ವರ: ರಾಜ್ಯದಲ್ಲಿ ನಡೆಯುತ್ತಿರುವ ನವಕೇರಳಯಾತ್ರೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ  ವಾಟ್ಸಪ್‌ನಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಅವಹೇಳನಾತ್ಮಕ ರೀತಿಯ ಸಂದೇಶ ರವಾನಿಸಿದ ವ್ಯಕ್ತಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ತೋಟಂ ಹೌಸಿನ ಅಬ್ದುಲ್ ಮನಾಫ್ (೪೦) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿಯವ ನೇತೃತ್ವದಲ್ಲಿ ನಡೆಸಲಾಗುತ್ತಿರುವ ನವಕೇರಳ ಹಣಕ್ಕಾಗಿ ನಡೆಸಲಾಗುತ್ತಿರುವ ಯಾತ್ರೆಯಾಗಿದೆ ಎಂದೂ, ಕೊಲ್ಲಂನಲ್ಲಿ ಆರು ವರ್ಷದ ಬಾಲಕಿಯ ಅಪಹರಣದಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದೂ ಆರೋಪಿಸುವ ರೀತಿಯ ಅವಹೇಳನಾತ್ಮಕ ವಾಯ್ಸ್ ಸಂದೇಶವನ್ನು ಮಂಜೇಶ್ವರದ ವಾಟ್ಸಪ್ ಗ್ರೂಪ್ …