ಬಾಲಕಿ ಮತ್ತು ಆಕೆಯ ಇಬ್ಬರು ಸಹೋದರರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ೧೮೯ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಏಳು ವರ್ಷದ ಬಾಲಕಿ ಹಾಗೂ ಪ್ರಾಯಪೂರ್ತಿ ಯಾಗದ ಆಕೆಯ ಇಬ್ಬರು ಸಹೋದರ ರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾದ ಸಿ. ಸುರೇಶ್ ಕುಮಾರ್ ಅವರು ಪೋಕ್ಸೋ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ೧೮೯ ವರ್ಷ ಸಜೆ ಹಾಗೂ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.  ಬಳಾಲ್ ಅರಿಂಙಲ್‌ನ ಟಿ.ಜಿ. ಸುಧೀಶ್ ಅಲಿಯಾಸ್ ಪಪ್ಪು (೨೫) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾ ಗಿದೆ. ಏಳು ವರ್ಷದ …

ಮಲಯಾಳ ಸಿನೆಮಾದ ಹಿರಿಯಜ್ಜಿ ಸುಬ್ಬಲಕ್ಷ್ಮಿ ನಿಧನ

ತಿರುವನಂತಪುರ: ಮಲೆಯಾಳ ಸಿನೆಮಾದ ಹಿರಿಯಜ್ಜಿ ಎಂದೇ ಕರೆಯಲಾಗುತ್ತಿರುವ ಹಿರಿಯ ಹಾಗೂ ಬಹುಭಾಷಾ ನಟಿ ಆರ್. ಸುಬ್ಬಲಕ್ಷ್ಮಿ (೮೭) ನಿಧನ ಹೊಂದಿದರು. ಅಸೌಖ್ಯದ ನಿಮಿತ್ತ ಅವರಿಗೆ ಅವರನ್ನು  ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ಮೃತಪಟ್ಟರು. ನಂದನಂ, ಕಲ್ಯಾಣರಾಮನ್ ಸೇರಿದಂತೆ ೭೦ಕ್ಕೂ ಅಧಿಕ ಸಿನೆಮಾದಲ್ಲಿ ಸುಬ್ಬಲಕ್ಷ್ಮಿ ನಟಿಸಿದ್ದಾರೆ. ಸಿನೆಮಾರಂಗಕ್ಕೆ ಪ್ರವೇಶಿಸುವ ಮೊದಲು ಅವರು ೯೫೧ರಲ್ಲಿ ಉತ್ತರ ದಕ್ಷಿಣ ಭಾರತದ ಬಾನುಲಿ ಕೇಂದ್ರದಲ್ಲಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ಆಕಾಶವಾಣಿ ನಿಲಯದಲ್ಲಿ ಸಂಯೋಜಕರಾಗಿ ಸೇವೆ ಸಲ್ಲಿಸಿದ …

ಎರಡೆಡೆ ವಾಹನ ಅಪಘಾತ:  ಮೂವರು ಮಹಿಳೆಯರಿಗೆ ಗಾಯ

ಕಾಸರಗೋಡು: ಎರಡು ಘಟನೆಗಳಲ್ಲಾಗಿ ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದು ಮೂವರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ. ಮೇಲ್ಪರಂಬ ತಲಕ್ಲಲಾಯಿ ಬಳಿ ಸ್ಕೂಟರ್‌ಗಳೆ ರಡು ಪರಸ್ಪರ ಢಿಕ್ಕಿ ಹೊಡೆದು ಆ ಪೈಕಿ ಒಂದು ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ತಲಕ್ಲಲಾಯಿಯ ಶ್ರೀ ನಿಲಯದ ಕುಸುಮ ಕುಮಾರಿ (೪೩) ಮತ್ತು ಪೆರುಂಬಳ ತಂಡನ್ ತೊಟ್ಟಿಯಿಲ್‌ನ ಸಜಿತ (೨೫) ಗಾಯಗೊಂಡಿದ್ದಾರೆ. ಇದೇ ರೀತಿ ಚಳಿಯಂಗೋಡಿನಲ್ಲಿ ಸ್ಕೂಟರ್ ಗಳೆರಡು ಢಿಕ್ಕಿ ಹೊಡೆದು ಸ್ಕೂಟ ರೊಂದರಲ್ಲಿ ಪ್ರಯಾಣಿಸುತ್ತಿದ್ದ ಕಳನಾಡು ಕಟ್ಟಕ್ಕಲ್‌ನ ಕ್ವಾರ್ಟ ರ್ಸ್ ಒಂದರಲ್ಲಿ ವಾಸಿಸುತ್ತಿರುವ  ಆಯಿಷ …

ಮಧ್ಯಾಹ್ನದೂಟಕ್ಕೆ ಕೆಸುವಿನ ಗಡ್ಡೆ ಪದಾರ್ಥ ಮಕ್ಕಳಿಗೆ ತುರಿಕೆಯೆಂದು ದೂರು

ಬದಿಯಡ್ಕ: ಮಧ್ಯಾಹ್ನದೂಟಕ್ಕೆ ಕೆಸುವಿನ ಗಡ್ಡೆ (ಮುಂಡಿ)ಯಿಂದ ತಯಾರಿಸಿದ ಪದಾರ್ಥ ತಿಂದು ನೀರ್ಚಾಲ್‌ನ ಒಂದು ಶಾಲೆಯ ಮಕ್ಕಳಿಗೆ ತುರಿಕೆ ಉಂಟಾಗಿದೆ ಎಂದು ದೂರಲಾಗಿದೆ. ತರಗತಿಯಲ್ಲಿ ಮಕ್ಕಳು ತುರಿಸುತ್ತಿದ್ದರೂ ಅಧ್ಯಾಪಕರು ಮಕ್ಕಳನ್ನು ಆಸ್ಪತ್ರೆಗೆ ಕೊಂಡು ಹೋಗಲಿಲ್ಲ ಎಂದು ದೂರಲಾಗಿದೆ. ಬಳಿಕ ಹೆತ್ತವರು ತಲುಪಿ ೫ ಮಕ್ಕಳನ್ನು ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಬದಿಯಡ್ಕ ಆರೋಗ್ಯ  ಕೇಂದ್ರದ ನೌಕರರು ತಲುಪಿ ಪ್ರಾಥಮಿಕ ಹೇಳಿಕೆ ದಾಖಲಿಸಿದ್ದಾರೆ. ಮಧ್ಯಾಹ್ನದೂಟಕ್ಕೆ ತರಕಾರಿಗಳನ್ನು ಮನೆಯಿಂದ ತರಬೇಕೆಂದು ಅಧಿಕಾರಿಗಳು ಮಕ್ಕಳಿಗೆ ಸೂಚಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಕ್ಕಳು ಕೆಸುವಿನ …

ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಏರಿಕೆ

ನವದೆಹಲಿ: ಸಾರ್ವಜನಿಕ ವಲ ಯದ ತೈಲ ಮಾರುಕಟ್ಟೆ ಕಂಪೆನಿಗಳು ೧೯ ಕೆಜಿ ವಾಣಿಜ್ಯ ಧ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಪ್ರತೀ ಯೂನಿಟ್‌ಗೆ ತಲಾ ೨೧ ರೂ.ನಂತೆ ಇಂದಿನಿಂದ ಹೆಚ್ಚಿಸಿವೆ. ಆತಿಥ್ಯ ಉದ್ಯಮಗಳು, ಹೋಟೆಲ್‌ಗಳು ಹಾಗೂ ಅಡುಗೆಗಾಗಿ ವಾಣಿಜ್ಯ ಎಲ್‌ಪಿಜಿ ಅಡುಗೆ ಗಳನ್ನೇ ಸಾಮಾನ್ಯವಾಗಿ ಅವಲಂಬಿಸಿರುವ ಬೀದಿ ಆಹಾರ ಮಾರಾಟಗಾರರಿಗೆ ಇದು ಹೆಚ್ಚಿನ ಹೊರೆ ಆಗಲಿದೆ. ಈ ಹೆಚ್ಚಳಕ್ಕೂ ಮುನ್ನ ನವೆಂಬರ್ ೧೬ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ೫೭ ರೂಪಾಯಿಗಳಷ್ಟು ಕಡಿಮೆ ಮಾಡ ಲಾಗಿತ್ತು …

ಬದಿಯಡ್ಕದ ಠೇವಣಿ ವಂಚನೆ ತಂಡ ಕುಂಬಳೆಯಲ್ಲೂ ವಂಚನೆ ನಡೆಸಿರುವುದಾಗಿ ದೂರು

ಕುಂಬಳೆ: ಭಾರೀ ಬಡ್ಡಿಯ ಭರವಸೆಯೊಡ್ಡಿ ಠೇವಣಿದಾರರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳನ್ನು ಲಪಟಾಯಿಸಿ ತಲೆಮರೆಸಿಕೊಂಡ ಬದಿಯಡ್ಕದ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್‌ನ ಕುಂಬಳೆ ಶಾಖಾ ನೌಕರರಾದ ಐದು ಮಂದಿ ಯುವತಿಯರು ವಂಚನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಶ್ರುತಿ, ಸಫ್ನ, ಅರ್ಪಿತ ವಿ.ಪೈ, ರಮ್ಯ, ಸುಶ್ಮಿತ ಎಂಬಿವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಕುಂಬಳೆಯ ಸಂಸ್ಥೆಯ ಗೋಡೆಯಲ್ಲಿ ಇವರು ಅಂಟಿಸಿದ್ದಾರೆ. ೬ ತಿಂಗಳ ಹಿಂದೆ ಕುಂಬಳೆಯಲ್ಲಿ ಕಾರ್ಯಾರಂಭಿಸಿದ ಸಂಸ್ಥೆ ೪೦ …

೧೭ ವರ್ಷದಾಕೆಗೆ ಗರ್ಭದಾನ: ಆಟೋ ಚಾಲಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: ೧೭ ವರ್ಷ ದಾಕೆಯನ್ನು ಗರ್ಭಿಣಿಯಾಗಿಸಿದ ದೂರಿನಂತೆ ಆಟೋ ರಿಕ್ಷಾ ಚಾಲಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ೧೭ ವರ್ಷದಾಕೆ ನೀಡಿದ ದೂರಿನಂತೆ ಆಟೋ ಚಾಲಕನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಗರ್ಭಿಣಿಯಾದ ವಿಷಯವನ್ನು ಆಕೆ ಮೊದಲು  ಯಾರಲ್ಲೂ ತಿಳಿಸಿರಲಿಲ್ಲವೆಂದೂ ಬಳಿಕ ಆಕೆ ಆರು ತಿಂಗಳ ಗರ್ಭಿಣಿಯಾದ ಬಳಿಕವಷ್ಟೇ  ಮನೆಯವರ ಗಮನಕ್ಕೆ ಬಂದಿತ್ತು. ಆ ಬಳಿಕವಷ್ಟೇ ಆಕೆ ಆ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಮೆಟ್ಟಿಲು ಪೂಜೆಗೆ ಈಗ ಬುಕ್ ಮಾಡಿದಲ್ಲಿ ಅವಕಾಶ ೨೦೩೮ಕ್ಕೆ

ಶಬರಿಮಲೆ: ಶಬರಿಮಲೆ ಕ್ಷೇತ್ರದಲ್ಲಿ ಅತೀ ಹೆಚ್ಚು ವೆಚ್ಚ ತಗಲುವ ಮೆಟ್ಟಿಲು ಪೂಜೆಗೆ ಈಗ ಮುಂಗಡ ಬುಕ್ಕಿಂಗ್ ನಡೆಸಿದಲ್ಲಿ ಅದನ್ನು ಈಡೇರಿಸುವ ಭಾಗ್ಯ ೨೦೩೮ರ ವೇಳೆಯಲ್ಲಷ್ಟೇ ಲಭಿಸಲಿದೆ. ಬುಕ್ ಮಾಡಿದವರು ಆ ತನಕ ಕಾದು ನಿಲ್ಲಬೇಕಾಗಿ ಬರಲಿದೆ. ಶಬರಿಮಲೆಯಲ್ಲಿ ಮೆಟ್ಟಿಲು ಪೂಜೆಗೆ ೧,೩೭,೯೦೦ ರೂ. ಹಾಗೂ ಉದಯಾಸ್ತಮಾನ ಪೂಜೆಗೆ ೬೧,೮೦೦ ರೂ.ವನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಬೇಕಾಗಿದೆ. ಶಬರಿಮಲೆಗೆ ಈ ವರ್ಷ ಹರಿದು ಬರುತ್ತಿರುವ ಭಕ್ತ ಪ್ರವಾಹದಲ್ಲಿ ಭಾರೀ ಹೆಚ್ಚಳ ಉಂಟಾಗತೊಡಗಿದ್ದು, ಅದರಿಂದಾಗಿ ಭಕ್ತರ ಭಾರೀ ನಿಬಿಢತೆಯನ್ನು ಪರಿಗಣಿಸಿ …

ಟಿ.ಪಿ. ರಾಮಕೃಷ್ಣನ್ ಸಿಐಟಿಯು ರಾಜ್ಯ ಅಧ್ಯಕ್ಷರಾಗಿ ಆಯ್ಕೆ

ತಿರುವನಂತಪುರ: ಸಿಐಟಿಯು ರಾಜ್ಯ ಅಧ್ಯಕ್ಷರಾಗಿ ಶಾಸಕ ಟಿ.ಪಿ. ರಾಮಕೃಷ್ಣನ್‌ರನ್ನು ನೇಮಿಸಲಾಗಿದೆ. ಪ್ರಸ್ತುತ ಸಂಘಟನೆಯ ರಾಜ್ಯ ಉಪಾಧ್ಯಕ್ಷರೂ, ಅಖಿಲ ಭಾರತ್ ವರ್ಕಿಂಗ್ ಕಮಿಟಿ ಸದಸ್ಯನಾಗಿರುವ ಇವರು ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಸದಸ್ಯರೂ, ಪಾರ್ಲಿಮೆಂಟರಿ ಪಾರ್ಟಿ ಕಾರ್ಯದರ್ಶಿಯೂ ಆಗಿದ್ದಾರೆ. ಪೇರಾಂಬ್ರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಥಮ ಪಿಣರಾಯಿ ವಿಜಯನ್ ಸರಕಾರದಲ್ಲಿ ಉದ್ಯೋಗ, ಅಬಕಾರಿ ಖಾತೆ ಸಚಿವರಾಗಿದ್ದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಂಜೇಶ್ವರದಲ್ಲಿ

ಮಂಜೇಶ್ವರ :ಕೇಂದ್ರ ಯೋಜನೆಗಳ ಸಮಗ್ರ ಮಾಹಿತಿ ನೀಡುವ ವಿಡಿಯೋ ಸಹಿತ ಫಲÁನುಭವಿಗಳ ಜೊತೆ ಮೋದಿ ಸಂಭಾಷಣೆ ನಡೆಸುವ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವ ವಿಕಾಸಿತಾ ಭಾರತ ಸಂಕಲಲಿ ಜಾಥಾ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿ ವಿಂಡುನಲ್ಲಿ ಅಧಿಕಾರಿ ಗಳ ಸಮ್ಮುಖದಲ್ಲಿ ಜರಗಿತು. ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಎ. ಸುಧೀರ್ ಅಧ್ಯಕ್ಷತೆ ವಹಿಸಿದ್ದರು, ಭರತ್ ಶೆಟ್ಟಿ ನೇತೃತ್ವ ನೀಡಿದರು. ಕೇಂದ್ರ ಯೋಜನೆಗಳ ಫಲÁನುಭವಿಗಳು ಅಭಿಪ್ರಾಯ ಹಂಚಿಕೊAಡರು. ಕೇಂದ್ರ ಯೋಜನೆಗಳ ವಿವಿಧ ಇಲಾಖೆ ಗಳ ಅಧಿಕಾರಿಗಳು ಉಪಸ್ಥಿತರಿದ್ದರು. …