ನಿರ್ಮಾಣ ಪೂರ್ತಿಗೊಂಡ ಮನೆಯ ಬದಿ ಗುಡ್ಡೆ ಜರಿದು ಗೋಡೆ ಬಿರುಕು: ಅಜಕ್ಕೋಡ್‌ನಲ್ಲಿ ಘಟನೆ

ಎಡನೀರು: ನಿರ್ಮಾಣ ಪೂರ್ತಿ ಗೊಳಿಸಿ ಹೊಸಮನೆಯಲ್ಲಿ ವಾಸ ಮಾಡಬೇಕೆಂಬ ಕನಸಿಗೆ ವಿಧಿ ಗುಡ್ಡೆಯ ರೂಪದಲ್ಲಿ ಮಣ್ಣು ಹಾಕಿದೆ. ಎಡನೀರು ಪಾಡಿ ಅಜಕ್ಕೋಡು ನಿವಾಸಿ ಅಜಿತ್ ಕುಮಾರ್ ನೂತನವಾಗಿ ನಿರ್ಮಿಸುವ ಮನೆಯ ಹಿಂಬದಿಯ ಗುಡ್ಡೆ ಜರಿದು ಹೊಸ ಮನೆಯ ಗೋಡೆ ಬಿರುಕು ಬಿಟ್ಟಿದೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಪಂಚಾಯತ್‌ನಿಂದ ಲಭಿಸಿದ ಮೊತ್ತದಿಂದ ಮನೆ ನಿರ್ಮಿಸಲಾರಂಭಿ ಸಿದ್ದು, ಕೆಲಸ ಬಹುತೇಕ ಪೂರ್ತಿ ಗೊಂಡಿತ್ತು. ಇನ್ನು ಉಳಿದ ಕೆಲಸಗಳನ್ನು ಮುಗಿಸಲು ಹೆಣ ಗಾಡುತ್ತಿದ್ದ ಮಧ್ಯೆ ಗುಡ್ಡೆ ಕುಸಿದಿದೆ. ಸ್ಥಳಕ್ಕೆ ಪಂಚಾಯತ್ …

ಮಲಾಪರಂಬ್ ಸೆಕ್ಸ್ ರ‍್ಯಾಕೆಟ್: ಆರೋಪಿಗಳಾದ ಇಬ್ಬರು ಪೊಲೀಸರು ಕಸ್ಟಡಿಯಲ್ಲಿ

ಕಲ್ಲಿಕೋಟೆ: ಮಲಾಪರಂಬ್ ಸೆಕ್ಸ್‌ರ‍್ಯಾಕೆಟ್ ಪ್ರಕರಣದಲ್ಲಿ ಆರೋಪಿ ಗಳಾದ ಇಬ್ಬರು ಪೊಲೀಸರನ್ನು ಕಸ್ಟಡಿಗೆ ತೆಗೆಯಲಾಗಿದೆ. ಚಾಲಕರಾದ ಶೈಜಿತ್, ಸನಿತ್‌ರನ್ನು ಕಸ್ಟಡಿಗೆ ತೆಗೆಯಲಾಗಿದೆ. ತಾಮರಶ್ಶೇರಿಯಲ್ಲಿ ಇವರನ್ನು ನಡಕ್ಕಾವ್ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿ ಸೇವೆಯಿಂದ ಇವರನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇವರು ತಲೆಮರೆಸಿಕೊಂಡಿದ್ದರು. ಇವರಿಗೆ ಸೆಕ್ಸ್‌ರ‍್ಯಾಕೆಟ್‌ನೊಂದಿಗೆ ನೇರ ಸಂಪರ್ಕವಿರುವುದಾಗಿಯೂ, ಆರ್ಥಿಕ ವ್ಯವಹಾರಗಳನ್ನು ನಡೆಸಿರುವುದಾಗಿಯೂ ಪತ್ತೆಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ತನಿಖಾವಿದೇಯವಾಗಿ ಅಮಾನತುಗೊಳಿಸಲಾಗಿದ್ದು, ಬಳಿಕ ಇವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೇ ವೇಳೆ ಸೆರೆಯಾದ ವಯನಾಡ್ …

ಹೆಚ್ಚಿದ ಉತ್ಪಾದನೆ ಖರ್ಚು: ಹೆಚ್ಚದ ಹಾಲಿನ ದರ; ಕೃಷಿಕರು ಸಂಕಷ್ಟದಲ್ಲಿ

ಕಾಸರಗೋಡು: ಉತ್ಪಾದನೆ ಖರ್ಚಿಗೆ ಅನುಸರಿಸಿ ಹಾಲಿಗೆ ಬೆಲೆ ಲಭಿಸದಿರುವುದು ಹೈನುಗಾರಿಕೆ ಕೃಷಿಕರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಬೆಲೆ ಸಹಿತ ಸೌಲಭ್ಯಗಳನ್ನು ಹೆಚ್ಚಿಸದಿದ್ದಲ್ಲಿ ಈ ಕೃಷಿಯೊಂದಿಗೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುವುದಾಗಿ ಕೃಷಿಕರು ತಿಳಿಸುತ್ತಿದ್ದಾರೆ. ಹಾಲುತ್ಪಾದನೆಗೆ ತಗಲುವ ಖರ್ಚು ಹಾಗೂ ಕೃಷಿಕರಿಗೆ ಲಭಿಸುವ ಆದಾಯದ ಕುರಿತು ಮಿಲ್ಮಾ ಕೊನೆಯದಾಗಿ 2019ರಲ್ಲಿ ಅಧ್ಯಯನ ನಡೆಸಿತ್ತು. ಆ ಅಧ್ಯಯನ ವರದಿಯಲ್ಲಿ 305 ದಿನ ಹಾಲು ಕರೆಯುವ ಕೃಷಿಕರಿಗೆ ಒಂದು ಲೀಟರ್‌ಗೆ 48.68 ರೂಪಾಯಿ ಉತ್ಪಾದನೆ ಖರ್ಚು ತಗಲುತ್ತದೆ ಎಂದು ತಿಳಿಸಲಾಗಿತ್ತು. …

ಭಾರತೀಯ ಅಭಿಭಾಷಕ ಪರಿಷತ್ ಸದಸ್ಯತನ ಕಾರ್ಯಾಗಾರಕ್ಕೆ ಚಾಲನೆ

ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸದಸ್ಯತನ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಭಾರತೀಯ ಅಭಿಭಾಷಕ ಪರಿಷತ್ ರಾಜ್ಯ ಕಾರ್ಯದರ್ಶಿ ನ್ಯಾ| ಪಿ.ಪಿ. ಸಂದೀಪ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾ| ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾ| ಬಿ. ರವೀಂದ್ರನ್, ಕೆ. ಕರುಣಾಕರನ್ ನಂಬ್ಯಾರ್, ಕೆ.ಜಿ. ಅನಿಲ್, ಎಂ. ಕುಸುಮ, ಸಚಿನ್ ಶೆಣೈ, ಕೆ.ಎಂ. ಬೀನಾ, ಭಾರತ್ ವೆಂಕಟೇಶ್ ಮಾತನಾಡಿದರು. ಜಿಲ್ಲಾ ಪ್ರಧಾನ …

ಜಿಲ್ಲಾ ಕುಲಾಲ ಸಂಘದಿಂದ ಅಶಕ್ತ ಕುಟುಂಬಕ್ಕೆ ಸಹಾಯ ಹಸ್ತ

ಉಪ್ಪಳ: ಅಶಕ್ತ ಕುಲಾಲ ಕುಟುಂಬದ ಸದಸ್ಯರಿಗಾಗಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಂಗಲ್ಪಾಡಿ ಶಾಖೆ ರೂಪಿಸಿದ ಬೆಳಕು ಎಂಬ ಯೋಜನೆಯ ಮೊದಲ ಸಹಾಯ ಹಸ್ತವನ್ನು ಕೊಂಡೆವೂರು ಜಯನಗರದ ದಿ| ತಿಮ್ಮಪ್ಪ ಮೂಲ್ಯರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೌರವಾಧ್ಯಕ್ಷ ವಾಸು ಕುಲಾಲ್ ಬೊಳ್ಳಾರ್, ಕಾರ್ಯದರ್ಶಿ  ರವೀಂದ್ರ ಬೊಳ್ಳಾರ್, ಕೃಷ್ಣ ಎಸ್.ಎಲ್. ಕುಬಣೂರು, ಸದಾನಂದ ಕೆ.ಆರ್. ಬೇಕೂರು, ಸಂಚಾಲಕ ಎನ್.ಕೆ. ಕುಲಾಲ್ ಬೇಕೂರು, ಪುನಿತ್ ಬಾಯಾರು, ಶ್ರವಣ್ ಕೊಂಡೆವೂರು, ವನಿತಾ ರಾಜೇಶ್ ಕುಲಾಲ್ ಕೊಂಡೆವೂರು ಉಪಸ್ಥಿತರಿದ್ದರು.

ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಲ್ಪಾಡಿ: ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಜುಲೈ 5ರಂದು ಲೋಕ ಕಲ್ಯಾಣಾರ್ಥವಾಗಿ ಜರಗುವ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಹೊಳ್ಳ ಪ್ರಾರ್ಥನೆ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಮಿತಿಯ ಪದಾಧಿಕಾರಿಗಳಾದ ಎಚ್. ಕುಂಞಣ್ಣ ಶೆಟ್ಟಿಹಿತ್ತಿಲು ಮನೆ, ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಬಾಲಕೃಷ್ಣ ಅಂಬಾರು, ಸಮಂತ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ರೈ ಮಲ್ಲಂಗೈ, ಮಹಿಳಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ …

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಯುವತಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಉಪತಹಶೀಲ್ದಾರ್ ಅಮಾನತು; ಆರೋಪಿಗೆ ಸರಕಾರಿ ಸೇವೆಯಲ್ಲಿ ಮುಂದುವರಿಯಲು ಅರ್ಹತೆ ಇಲ್ಲ-ಸರಕಾರಕ್ಕೆ ವರದಿ ಸಲ್ಲಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪತ್ತನಂತಿಟ್ಟ ನಿವಾಸಿ ನರ್ಸ್ ಆಗಿರುವ ರಂಜಿತಾ ಜಿ. ನಾಯರ್ ಬಗ್ಗೆ ಸೋಶ್ಯಲ್ ಮೀಡಿಯಾದಲ್ಲಿ ಅವಹೇಳನಕಾರಿ ರೀತಿಯ ವಾಕ್ಯ ಬಳಸಿ ಪೋಸ್ಟ್ ಮಾಡಿದ ವೆಳ್ಳರಿಕುಂಡ್ ತಾಲೂಕು ಕಚೇರಿಯ ಉಪ ತಹಶೀಲ್ದಾರ್ (ಜ್ಯೂನಿಯರ್ ಸುಪರಿನ್‌ಟೆಂಡೆಂಟ್) ಮೂಲತಃ ಹೊಸದುರ್ಗ ಮಾವುಂಗಾಲ್ ನಿವಾಸಿ ಹಾಗೂ ಈಗ ನೀಲೇಶ್ವರ ತೀರ್ಥಂಗಯದಲ್ಲಿ ವಾಸಿಸುತ್ತಿರುವ ಎ. ಪವಿತ್ರನ್ (53)ರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಿ.ಎಸ್.ಎಸ್‌ನ 75, 79, 67 (ಎ) ಸೆಕ್ಷನ್‌ಗಳ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. …

ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ಗುಜರಾತಿನ ಅಹ ಮ್ಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಮಾರ್ಗದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ಕಾರಣಗಳನ್ನು ತನಿಖೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದೆ.  ಈ ಅಪಘಾತಕ್ಕೆ ಕಾರಣವಾದ ಸಂದರ್ಭ ಗಳನ್ನು ಸಮಿತಿ ನಿರ್ಣಯಿಸಲಿದೆ. ಜ್ಯಾರಿಯಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್‌ಒಪಿ) ಮತ್ತು ಸುರಕ್ಷಾ ಮಾರ್ಗಸೂಚಿಗಳನ್ನು ಈ ಸಮಿತಿ ಮೌಲ್ಯಮಾಪನ ನಡೆಸಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತನ್ನ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಇದೇ ರೀತಿಯ ವಾಯುಯಾನ ಘಟನೆಗಳನ್ನು …

ಆಟೋ ಚಾಲಕ ಆಸಿಡ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲು: ಬಾಲಕಿ ದೂರಿನಂತೆ ಪೋಕ್ಸೋ ಕೇಸು ದಾಖಲು

ಮುಳ್ಳೇರಿಯ: ಆಟೋ ಚಾಲಕ ನೋರ್ವ ಆಸಿಡ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ವಾಸಿಸುವ 22ರ ಹರೆಯದ ಯುವಕ ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ. ಈತನ ಎರಡೂ ಕಿಡ್ನಿಗಳು ಹಾನಿಗೀಡಾಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಹೇಳಲಾಗುತ್ತಿದೆ. ಕಳೆದ ದಿನ ಆಟೋ ಚಾಲಕನಾದ ಯುವಕ ಆಸಿಡ್ ಸೇವಿಸಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು, ಪ್ರೇಮ ವೈಫಲ್ಯವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆಸಿಡ್ ಸೇವಿಸಿ ಮನೆಯೊಂದಕ್ಕೆ ತಲುಪಿದ ಯುವಕ ವಾಂತಿ …

ನ್ಯಾಯಾಲಯ ಖುಲಾಸೆಗೊಳಿಸಿದ ಯುವಕನ ವಿರುದ್ಧ ಬೆದರಿಕೆ: ಇಬ್ಬರ ವಿರುದ್ಧ ಕೇಸು: ಓರ್ವ ಕಸ್ಟಡಿಯಲ್ಲಿ

ಕುಂಬಳೆ: ಪ್ರಕರಣ ವೊಂ ದರಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿದ   ಯುವಕನಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಂತೆ ಇಬ್ಬರ ವಿರುದ್ದ ಕುಂಬಳೆ ಪೊಲೀಸರು  ಕೇಸು ದಾಖಲಿ ಸಿಕೊಂಡಿದ್ದಾರೆ. ಹಕೀಂ, ಇಮ್ತಿಯಾಸ್ ಎಂಬಿ ವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈಪೈಕಿ ಇಮ್ತಿಯಾಸ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.  ಎಡನಾಡು ಕಟ್ಟತ್ತಡ್ಕ ಮಣಪ್ಪುರತ್ ಹೌಸ್‌ನ ವಿ.ಎಂ. ಅರುಣ್ ಕುಮಾರ್ ನೀಡಿದ ದೂರಿನಂತೆ ಈ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.  ಅರುಣ್ ಕುಮಾರ್‌ರನ್ನು ಈ ಹಿಂದೆ ದಾಖಲಿಸಿಕೊಂಡ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿತ್ತೆಂದೂ, ಈ ದ್ವೇಷದಿಂದ …