ಯೂತ್ ಲೀಗ್ ಯೂತ್ ಮಾರ್ಚ್ ಉಪ್ಪಳದಲ್ಲಿ ಸಮಾಪ್ತಿ

ಉಪ್ಪಳ: ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ನಡೆಸಿದ ಯೂತ್ ಮಾರ್ಚ್ ಮಂಜೇಶ್ವರ ಮಂಡಲದಲ್ಲಿ ಪರ್ಯಟನೆ ಪೂರ್ತಿಗೊಳಿಸಿ ಉಪ್ಪಳದಲ್ಲಿ ಸಮಾಪ್ತಿಯಾಯಿತು. ಉಪ್ಪಳದಲ್ಲಿ ನಡೆದ ಸಾರ್ವಜನಿಕ ಸಮ್ಮೇಳನವನ್ನು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಶಾಜಿ ಉದ್ಘಾಟಿಸಿದರು. ಯೂತ್ ಲೀಗ್ ಜಿಲ್ಲಾ ಅಧ್ಯಕ್ಷ ಅಸೀಸ್ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಸೀಫ್ ಸ್ವಾಗತಿಸಿದರು. ಮುಖಂಡರಾದ ಪಿ.ಕೆ. ಫಿರೋಜ್,  ಟಿ.ಪಿ. ಅಶ್ರಫಲಿ, ಸಿ.ಟಿ. ಅಹಮ್ಮದಲಿ, ಕಲ್ಲಟ್ರ ಮಾಹಿನ್ ಹಾಜಿ, ಎ. ಅಬ್ದುಲ್ ರಹಿಮಾನ್, ಅಶ್ರಫ್ ಎಡನೀರು, ಶಾಸಕ ಎಕೆಎಂ …

ಹೋಟೆಲ್‌ಗೆ ನುಗ್ಗಿ ಬೆದರಿಕೆ, ಮಾನ ಹಾನಿಗೆ ಯತ್ನಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಹೋಟೆಲ್‌ಗೆ ನುಗ್ಗಿ ಅದರ ಮಾಲಕನ ಪತ್ನಿಗೆ ಕೊಲೆ ಬೆದರಿಕೆ ಒಡ್ಡಿ ಹಾಗೂ ಮಾನ ಹಾನಿಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ನಾಲ್ಕೂವರೆ ವರ್ಷ ಸಜೆ ಮತ್ತು ೩೫,೦೦೦ ರೂ. ಜುಲ್ಮಾನೆ ಹಾಗೂ ೨೫೦೦೦ ರೂ. ನಷ್ಟ ಪರಿಹಾರ ಪಾವತಿಸುವಂತೆ ನಿರ್ದೇಶಿಸಿ ವಿಧಿಸಿ ತೀರ್ಪು ನೀಡಿದೆ. ಎಡನೀರು ಕೆಮ್ಮಂಗಯದ ಶಿವ ಅಲಿಯಾಸ್ ಶಿವಪ್ರಸಾದ್ (೩೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ೨೦೧೮ ಜೂನ್ ೧೩ರಂದು ಎಡನೀರಿನ …

ಪೆರ್ಮುದೆಯಲ್ಲಿ ಬಿಜೆಪಿ ಜನ ಪಂಚಾಯತ್ ಸಭೆ

ಪೈವಳಿಕೆ: ಬಿಜೆಪಿ ಪೈವಳಿಕೆ ಸೌತ್ ಸಮಿತಿ ಜನ ಪಂಚಾಯತ್ ಕಾರ್ಯ ಕ್ರಮ ಪೆರ್ಮುದೆ ಪೇಟೆಯಲ್ಲಿ ಜರಗಿದ್ದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಿಸಿ ದರು. ಅವರು ಮಾತನಾಡಿ ಮಂಜೇ ಶ್ವರ ಶಾಸಕ ಎಕೆಎಂ ಅಶ್ರಫ್ ನಿರಂತರ ವಿದೇಶ ಯಾತ್ರೆ ನಡೆಸುತ್ತಿದ್ದು, ಇದರ ಉದ್ದೇಶ ನಿಗೂಢವಾಗಿದೆಯೆಂದು  ಆರೋಪಿಸಿದರು. ರಾಜ್ಯ ಸರಕಾರ ಮಂಜೇಶ್ವರ ಮಂಡಲವನ್ನು ನಿರಂತರ ಅವಗಣಿಸುತ್ತಿದ್ದು, ಪೈವಳಿಕೆ ಪಂ.ನಲ್ಲಿ  ಕಾರ್ಯದರ್ಶಿ ಇಲ್ಲದ ಕಾರಣ ಹಲವಾರು ಯೋಜನೆಗಳ ಫಂಡ್ ನಷ್ಟವಾಗಿದೆಯೆಂದವರು ದೂರಿದರು. ವಿಘ್ನೇಶ್ವರ ಮಾಸ್ತರ್ ಕೆದುಕೋಡಿ ಅಧ್ಯಕ್ಷತೆ ವಹಿಸಿದರು. …

ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ  ಹೊಸದುರ್ಗ  ಪೊಲೀಸ್‌ಗೆ ಚಿನ್ನದ ಪದಕ

ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಎಂ.ಟಿ.ಪಿ ಸೈಫುದ್ದೀನ್‌ರಿಗೆ ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ. ೫೦ ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನ, ೫೦ ಮೀಟರ್ ಪ್ರೀ ಸ್ಟೈಲ್‌ನಲ್ಲಿ ಬೆಳ್ಳಿ, ೫೦ ಮೀಟರ್ ಬಟರ್ ಫ್ಲೈಯಲ್ಲಿ  ಕಂಚಿನ ಪದಕ ಇವರಿಗೆ ಲಭಿಸಿದೆ. ಮಾಜಿ ಇಂಟರ್ ನೇಶನಲ್ ಈಜು ಪಟುವಾದ ಇವರು  ಹಲವೆಡೆಗಳಲ್ಲಿ  ಈಜು ತರಬೇತಿ ನೀಡುತ್ತಿದ್ದಾರೆ.

ಪೊಸಡಿಗುಂಪೆಯನ್ನು ಹಸಿರು ಟೂರಿಸಂ ಕೇಂದ್ರವಾಗಿಸಲು ತೀರ್ಮಾನ

ಪೈವಳಿಕೆ:  ಜಿಲ್ಲೆಯ ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರವಾದ ಪೊಸಡಿಗುಂಪೆಯನ್ನು ಮಾಲಿನ್ಯ ಮುಕ್ತ ಹಸಿರು ಟೂರಿಸಂ ಕೇಂದ್ರವಾಗಿಸಲು ತೀರ್ಮಾನಿಸಲಾಗಿದೆ.  ಪೈವಳಿಕೆ ಪಂಚಾಯತ್ ಹಾಲ್‌ನಲ್ಲಿ ನಡೆದ ನವಕೇರಳ ಕ್ರಿಯಾ ಯೋಜನೆ ಪಂಚಾಯತ್ ಮಟ್ಟದ ಸಭೆಯಲ್ಲಿ ಪೈವಳಿಕೆ ಪಂಚಾಯತ್ ಅಧಕ್ಷೆ ಜಯಂತಿ ಕೆ ಅವರ ಅಧ್ಯಕ್ಷತೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ.  ನವಕೇರಳ ಕ್ರಿಯಾ ಯೋಜನೆ ಜಿಲ್ಲ್ಲಾ  ಕೋ-ಆರ್ಡಿನೇಟರ್ ಕೆ. ಬಾಲಕೃಷ್ಣನ್ ಹಸಿರು  ಟೂರಿಸಂ ಯೋಜನೆಯ ಮುಂದಿನ ಕ್ರಮಗಳನ್ನು  ಹಾಗೂ ಪ್ರವಾಸಿಗರನ್ನು ಸೆಳೆಯಲು ಬೇಕಾಗಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಡಿಟಿಪಿಸಿ ಕಾರ್ಯದರ್ಶಿ ಲಿಜೂ  …

ಕ್ರಿಸ್ಮಸ್‌ಗೆ ಸ್ಪೆಷಲ್ ಅಕ್ಕಿ

ತಿರುವನಂತಪುರ: ಕ್ರಿಸ್ಮಸ್ ಹಬ್ಬದ ಸಲುವಾಗಿ ನೀಲಿ ಮತ್ತು ಬಿಳಿ ಬಣ್ಣದ ರೇಶನ್ ಕಾರ್ಡ್‌ಗಳಿಗೆ ಸ್ಪೆಷಲ್ ಅಕ್ಕಿ ವಿತರಿಸಲು ರಾಜ್ಯ ಸರಕಾರ ತೀರ್ಮಾ ನಿಸಿದೆ. ಇದರಂತೆ ನೀಲಿ ಬಣ್ಣದ ರೇಶನ್ ಕಾರ್ಡ್‌ನ ಪ್ರತೀ ಸದಸ್ಯರಿಗೆ ತಲಾ ಎರಡು ಕಿಲೋ ಅಕ್ಕಿಯನ್ನು ಕಿಲೋಕ್ಕೆ ೪ ರೂ. ದರದಲ್ಲೂ, ೧೦.೯೦ ರೂ. ದರದಲ್ಲಿ  ಮೂರು ಕಿಲೋ ಅಕ್ಕಿ ವಿತರಿಸಲಾಗುವುದು. ಇದೇ ರೀತಿ ಬಿಳಿ ಕಾರ್ಡುದಾರರಿಗೆ ಕಿಲೋಗೆ ೧೦.೯೦ ರೂ. ದರದಲ್ಲಿ ತಲಾ ಆರು ಕಿಲೋದಂತೆ ಅಕ್ಕಿ ವಿತರಿಸಲಾಗುವುದೆಂದು ನಾಗರಿಕ ಸರಬರಾಜು ಇಲಾಖೆ …

ಪ್ರತಾಪನಗರದಲ್ಲಿ ಉಚಿತ ಆಯುರ್ವೇದ ಶಿಬಿರ

ಉಪ್ಪಳ: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪ್ರತಾಪ ನಗರ ಸರಕಾರಿ ಆಯುರ್ವೇದ ಆಸ್ಪತ್ರೆ ಮಂಗಲ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದ ಶಿಬಿರ ಹಾಗೂ ಔಷಧಿ ವಿತರಣೆ ನಿನ್ನೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್‌ನಲ್ಲಿ÷ನಡೆಯಿತು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮೊಕ್ತೇಸರ ಶಿವರಾಮ ಪಕಳ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂ. ಸದಸ್ಯೆ ಸುಧಾ ಗಣೇಶ್ ಅಧ್ಯಕ್ಷತೆ ವಹಿಸಿದರು.ಮಂಗಲ್ಪಾಡಿ ಸರಕಾರಿ ಆಯುರ್ವೇದ ವೈದ್ಯ ರಶ್ಮಿ ಮಾಹಿತಿ ನೀಡಿದರು. ಕ್ಲಬ್‌ನ ಅಧ್ಯಕ್ಷ ಗಣೇಶ್, ಆಸ್ಪತ್ರೆ ಸಿಬ್ಬಂದಿಗಳಾದ ಶ್ರುತಿ, ಉಷಾ ಹಾಗೂ ಕ್ಲಬ್‌ನ ಸದಸ್ಯರು, …

ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಜಕೂಡ್ಲಿನ ಪ್ರತಿಭೆ

ಪೆರ್ಲ: ತಾಲೂಕು ಮಟ್ಟದ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ ಮಂಜೇಶ್ವರ ತಂಡದ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ತಂಡ ಜಯಭೇರಿ ಬಾರಿಸಿದೆ. ಫೈನಲ್ ಪಂದ್ಯಾಟದಲ್ಲಿ ಬೌಲಿಂಗ್ ನಡೆಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಂಕಿತ್ ಬಜಕೂಡ್ಲು ಜಿಲ್ಲಾ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ಕೇರಳ ರಾಜ್ಯ ಶಾಲಾ ಮಟ್ಟದ ಕ್ರಿಕೆಟ್’ನಲ್ಲಿ ಕಾಸರಗೋಡು ಜಿಲ್ಲಾ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಪೆರ್ಲ ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಅಂಕಿತ್ ಅವರನ್ನು …

ಬಂಟ್ವಾಳದಿಂದ ಪರಾರಿಯಾದ ಫಾರ್ಮಸಿ ವಿದ್ಯಾರ್ಥಿನಿ, ಪ್ರಿಯತಮ ಕಾಞಂಗಾಡ್‌ನಲ್ಲಿ ಸೆರೆ

ಹೊಸದುರ್ಗ: ಪರಾರಿಯಾಗಿ ಕಾಞಂಗಾಡ್‌ಗೆ ತಲುಪಿದ ಕೂಲಿ ಕಾರ್ಮಿಕನಾದ ಪ್ರಿಯತಮ ಹಾಗೂ ಫಾರ್ಮಸಿ ವಿದ್ಯಾರ್ಥಿನಿಯಾದ ಪ್ರಿಯತಮೆಯನ್ನು ಕರ್ನಾಟಕ ಪೊಲೀಸರು  ಸೆರೆಹಿಡಿದಿದ್ದಾರೆ. ಬಂಟ್ವಾಳ ಉದ್ದೋಟ್ ನಿವಾಸಿಯೂ, ದೇರಳಕಟ್ಟೆಯಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾದ ಆಯಿಶತ್ ರಸ್ಮಾ (೧೮), ಪ್ರಿಯತಮ ಮುಹಮ್ಮದ್ ಸಿನಾನ್ (೨೩) ಎಂಬಿವರನ್ನು  ಕಾಞಂಗಾಡ್‌ನಿಂದ ಸೆರೆಹಿಡಿಯಲಾಗಿದೆ. ಈ ಇಬ್ಬರು ದೀರ್ಘಕಾಲದಿಂದ ಪ್ರೇಮದಲ್ಲಿದ್ದರೆಂದು ಹೇಳಲಾಗುತ್ತಿದೆ. ಅನಂತರ ಮುಹಮ್ಮದ್ ಸಿನಾನ್ ಗಲ್ಫ್‌ಗೆ ತೆರಳಿದ್ದನು. ಆದರೆ ಪ್ರಿಯತಮೆ ತನ್ನಿಂದ ದೂರವಾಗಬಹುದೆಂಬ ಸಂಶಯದಿಂದ  ಗಲ್ಫ್‌ನಿಂದ ಊರಿಗೆ ತಲುಪಿದ ಮುಹಮ್ಮದ್ ಸಿನಾನ್ ಕೂಲಿ ಕೆಲಸ ನಡೆಸುತ್ತಿದ್ದನು. ಈ ಮಧ್ಯೆ …

ಕಾಸರಗೋಡಿನ ಎರಡು ಕಡೆಗಳಲ್ಲಿ ಕಾಳಧನ ಬೇಟೆ: ೭ ಲಕ್ಷ ರೂ. ಸಹಿತ ಇಬ್ಬರ ಸೆರೆ

ಕಾಸರಗೋಡು: ನಗರದ ಎರಡು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಲಕ್ಷ ರೂಪಾಯಿ ಕಾಳಧನ ಸಹಿತ ಇಬ್ಬರನ್ನು ಬಂಧಿಸಲಾಗಿದೆ.  ಕಾಸರಗೋಡು  ತಳಂಗರೆ ಪಳ್ಳಿಕ್ಕಾಲ್‌ನ  ಪಿ.ಎ. ಬಿಲಾಲ್ (೪೦), ಬಾಡೂರು ಕಂದಲ್  ದರ್ಹಾ ಹೌಸ್‌ನ ಅಬ್ದುಲ್ ರಹ್ಮಾನ್ ಡಿ (೪೭) ಎಂಬಿವರನ್ನು ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ   ಇಂದು ಬೆಳಿಗ್ಗೆ  ಬಂಧಿಸಿದೆ.  ಅಬ್ದುಲ್ ರಹ್ಮಾನ್‌ನನ್ನು ನೆಲ್ಲಿಕುಂಜೆ ರಸ್ತೆಯ  ಗೀತಾ ಟಾಕೀಸ್ ಜಂಕ್ಷನ್ ಮುಂಭಾಗ ದಿಂದ ಬಂಧಿಸಲಾಗಿದೆ. ಯಾರಿಗೋ ನೀಡಲೆಂದು ಕೈಯಲ್ಲಿ ಇರಿಸಿಕೊಂಡಿದ್ದ ೩,೦೮,೦೦೦ …