ಅಪರಿಚಿತ ವ್ಯಕ್ತಿಯ ಜೀರ್ಣಿಸಿದ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಕಣ್ವತೀರ್ಥ ಸಮೀಪ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ಪೂರ್ಣ ಜೀರ್ಣಗೊಂಡ ಸ್ಥಿತಿಯಲ್ಲಿದ್ದು, ಒಂದುವಾರ ಹಿಂದೆ ಮೃತಪಟ್ಟಿರಬ ಹುದೆಂದು ಅಂದಾಜಿಸಲಾಗಿದೆ.  ಕಣ್ವತೀರ್ಥ ಹೊಳೆ ಸಮೀಪದ ಕಾಡು ತುಂಬಿದ ಹಿತ್ತಿಲಲ್ಲಿ ಅಕೇಶಿಯಾ ಮರಕ್ಕೆ ಲುಂಗಿಯಿಂದ  ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮೃತವ್ಯಕ್ತಿ ಪುರುಷನಾಗಿದ್ದು, ೪೦-೫೦ ವರ್ಷ ಮಧ್ಯೆ ಪ್ರಾಯ ಅಂದಾಜಿಸಲಾಗಿದೆ. ಸಮೀಪದಲ್ಲೇ ಒಂದು ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಒಂದು ಲುಂಗಿ ಇತ್ತೆನ್ನಲಾಗಿದೆ. ಸ್ಥಳದ ಮಾಲಕ ವಾಮನ ಎಂಬವರು ನಿನ್ನೆ ಹಿತ್ತಿಲಿಗೆ ತೆರಳಿದಾಗ ಮೃತದೇಹ ಕಂಡುಬಂದಿದೆ. …

ಕೋಟ್ಯಂತರ ರೂ.ಗಳ ವಂಚನೆ: ಬದಿಯಡ್ಕದ ಠೇವಣಿ ಸಂಗ್ರಹ ಕೇಂದ್ರ ಮುಚ್ಚಿರುವುದಾಗಿ ಗ್ರಾಹಕರ ದೂರು

ಬದಿಯಡ್ಕ: ಬದಿಯಡ್ಕದಲ್ಲಿ ಭಾರೀ ಬಡ್ಡಿ ಭರವಸೆ ನೀಡಿ ದೊಟ್ಟ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ವಿತ್ತ ಸಂಸ್ಥೆಯನ್ನು ಮುಚ್ಚಿರುವುದಾಗಿ ದೂರಲಾಗಿದೆ. ಈ ಬಗ್ಗೆ ನೂರರಷ್ಟು ಗ್ರಾಹಕರು ಇತ್ತೀಚೆಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಅದರ ಬಳಿಕ ಹಣಕಾಸು ಸಂಸ್ಥೆಯನ್ನು ನಡೆಸುತ್ತಿದ್ದ ವ್ಯಕ್ತಿ ಠಾಣೆಗೆ ತಲುಪಿ ಸಂಸ್ಥೆಯನ್ನು ತೆರೆಯುವುದಾಗಿಯೂ, ಗ್ರಾಹಕರಿಗೆ ಹಣವನ್ನು ಸಮಯಾನುಸಾರ ನೀಡುವುದಾಗಿಯೂ ತಿಳಿಸಿರುವುದಾಗಿ ಹೇಳಲಾಗುತ್ತಿದೆ. ರೋಯಲ್ ಟ್ರಾವೆಂಕೂರು ಎಂಬ ಹೆಸರಲ್ಲಿ ಹಣಕಾಸು ಸಂಸ್ಥೆ ಒಂದು ವರ್ಷದ ಹಿಂದೆ ಬದಿಯಡ್ಕದಲ್ಲಿ ಚಟುವಟಿಕೆ ಆರಂಭಿಸಿತ್ತು. ಹಲವಾರು ಮಹಿಳೆಯರು ಕಲೆಕ್ಷನ್ ಏಜೆಂಟರಾಗಿ …

ಚಾಲಕ ಮದ್ಯದಮಲಿನಲ್ಲಿ ಚಲಾಯಿಸಿದ ಲಾರಿ ಆಟೋಗೆ ಢಿಕ್ಕಿ

ಕಾಸರಗೋಡು:  ಮದ್ಯದ ಅಮಲಿನಲ್ಲಿ ಚಾಲಕ ಓಡಿಸಿದ ಲಾರಿ ಪಿಕ್‌ಅಪ್ ಆಟೋಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.  ಹೆಚ್ಚಿನ ವಾಹನಗಳಿಗೆ ಢಿಕ್ಕಿ ಹೊಡೆಯುವ ಮೊದಲು ಲಾರಿಯನ್ನು ಸ್ಥಳದಲ್ಲಿದ್ದವರು ಹಾಗೂ ಪೊಲೀಸರು ತಡೆದು ನಿಲ್ಲಿಸಿದುದರಿಂದ ಹೆಚ್ಚಿನ ದುರಂತ ಸಂಭವಿಸಲಿಲ್ಲ. ಇಂದು ಬೆಳಿಗ್ಗೆ  ೧೦ ಗಂಟೆ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.  ಆಂಧ್ರ ಪ್ರದೇಶದ ನೋಂದಾವಣೆ ಹೊಂದಿರುವ  ಕಂಟೈನರ್ ಲಾರಿ  ಅಪಘಾತಕ್ಕೀಡಾಗಿದೆ. ಚಾಲಕ ಮದ್ಯದಮಲಿನಲ್ಲಿದ್ದುದೇ ಅಪಘಾತಕ್ಕೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು …

ಖಾಸಗಿ ಹಣಕಾಸು ಸಂಸ್ಥೆಗೆ ನುಗ್ಗಿ ಮೆನೇಜರ್‌ಗೆ ಹಲ್ಲೆ

ಕುಂಬಳೆ: ಖಾಸಗಿ  ಹಣಕಾಸು ಸಂಸ್ಥೆಗೆ ಅತಿಕ್ರಮಿಸಿ ನುಗ್ಗಿದ ಮಾಜಿ ನೌಕರ ಹಾಗೂ ಸಹೋದರ ಸೇರಿ ಮೆನೇಜರ್‌ಗೆ ಹೆಲ್ಮೆಟ್‌ನಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಕುಂಬಳೆಯ ಖಾಸಗಿ ಹಣಕಾಸು ಸಂಸ್ಥೆಯ ಮೆನೇಜರ್ ವಿದ್ಯಾನಗರ ಪನ್ನಿಪ್ಪಾರೆ ನಿವಾಸಿಯಾದ ಜೀವನ್ (೩೩) ಎಂಬವರಿಗೆ ಹಲ್ಲೆಗೈಯ್ಯಲಾಗಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ತಾನು ಕೆಲಸ ನಿರ್ವಹಿಸುವ ಸಂಸ್ಥೆಯ ಮಾಜಿ ನೌಕರ ಹಾಗೂ ಆತನ ಸಹೋದರ ಸೇರಿ ಹಲ್ಲೆಗೈದಿರುವುದಾಗಿ ಜೀವನ್ ಆರೋಪಿಸಿದ್ದಾರೆ. ಸ್ವಂತ ಇಷ್ಟ ಪ್ರಕಾರ …

೨೫.೯೨ ಲೀಟರ್ ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಪೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸೆಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಜೇಮ್ಸ್ ಅಬ್ರಹಾಂ ಕುರಿಯಾರ ನೇತೃತ್ವದ ತಂಡ ಕೂಡ್ಲು ರಾಮದಾಸನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೫.೯೨ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಗ್ರಾಮದ ಬೆದ್ರಡ್ಕ ಕಿನ್ನಿಗೋಳಿ ನಿವಾಸಿ ಸುರೇಶ್ ಬಿ.ಪಿ (೪೧) ಎಂಬಾತನ ನ್ನು ಬಂಧಿಸಿ  ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ  ಆತ ಸಂಚರಿಸುತ್ತಿದ್ದ ಸ್ಕೂಟರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು …

ನಾಳೆ ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲೆಯಲ್ಲಿ ೪೨ ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆ; ೯೧೫ ಮಂದಿ ಚಿಕಿತ್ಸೆಯಲ್ಲಿ

ಕಾಸರಗೋಡು: ನಾಳೆ ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುವುದು. ೨೦೨೨ ಎಪ್ರಿಲ್‌ನಿಂದ ೨೦೨೩ ಮಾರ್ಚ್ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಸಲಾದ ಏಡ್ಸ್ ರೋಗ ತಪಾಸಣೆಯಲ್ಲಿ ೪೨ ಮಂದಿಯಲ್ಲಿ ಎಚ್‌ಐವಿ ಸೋಂಕು ಖಾತರಿಪಡಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೩೪೦೯೭ ಮಂದಿಯನ್ನು ಎಚ್‌ಐವಿ  ರೋಗ ತಪಾಸಣೆಗೊಳಪಡಿಸಲಾಗಿತ್ತು. ಅದರಲ್ಲಿ ೯೨೫೪ ಮಂದಿ ಗರ್ಭಿಣಿಯರೂ ಒಳಗೊಂಡಿದ್ದರು. ಇದರಲ್ಲಿ ೪೨ ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಹಚ್ಚಲಾಗಿದೆ. ಇದರ ಹೊರತಾಗಿ ಕಳೆದ ಎಪ್ರಿಲ್‌ನಿಂದ ಅಕ್ಟೋಬರ್ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೧೫೦೨೯ ಮಂದಿಯನ್ನು ತಾಪಸಣೆಗೊಳಪಡಿಸಲಾಗಿದ್ದು, ಅದರಲ್ಲಿ …

ಮಿನಿಲಾರಿ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಇರಿಯಣ್ಣಿ ನಿವಾಸಿ ಮೃತ್ಯು

ಹೊಸದುರ್ಗ: ಮಿನಿ ಲಾರಿ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇರಿಯಣ್ಣಿ ನಿವಾಸಿ, ಹಲವು ವರ್ಷಗಳಿಂದ ಪೂಚಕ್ಕಾಡ್ ಆಲಿಕ್ಕೋಡನ್‌ನಲ್ಲಿ ವಾಸಿಸುತ್ತಿದ್ದ ವೈ. ಕೃಷ್ಣನ್ ಬೆಳ್ಚಪ್ಪಾಡ (೬೧) ಮೃತಪಟ್ಟರು. ಈ ತಿಂಗಳ ೯ರಂದು ರಾತ್ರಿ ೭.೩೦ಕ್ಕೆ ಪೂಚಕ್ಕಾಡ್‌ನಲ್ಲಿ ರಸ್ತೆ ಅಡ್ಡ ದಾಟುವಾಗ ಮಿನಿ ಲಾರಿ ಢಿಕ್ಕಿ ಹೊಡೆದು ಗಾಯಗೊಂಡಿ ದ್ದರು. ಬಳಿಕ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಹಲವು ದೈವಸ್ಥಾನಗಳಲ್ಲಿ ಬೆಳ್ಚಪ್ಪಾಡ ರಾಗಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ಚಾಂದಿನಿ, ಸಂಧ್ಯಾ, ಅಳಿಯಂದಿರಾದ ಜಯೇಂದ್ರನ್, ಮಧು, ಸಹೋದರಿಯರು …

ಬೆಳ್ಳೂರು ಬ್ಯಾಂಕ್ ಆಡಳಿತ ಸಮಿತಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಮುಳ್ಳೇರಿಯ: ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಸಮಿತಿಗೆ ಬಿಜೆಪಿ ನೇತೃತ್ವದ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾ ಯರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಜಯರಾಜ ರೈ ಇ.ಜಿ, ನಿರ್ದೇಶಕರಾಗಿ  ಸುಂದರ ರೈ, ಆಶೀರ್ವಾದ್ ಎಚ್.ಎಸ್, ಅಶೋಕ ಎಂ, ಮುರಳೀಧರ ಭೋಗಲ್ಕರ್, ಮುರಳೀಧರ ಎಸ್,  ಗೋಪಾಲನ್, ಪ್ರಶಾಂತಿ ಪಿ. ನಾಯ್ಕ್, ಶ್ಯಾಮಲ ಎಂ. ಬಲ್ಲಾಳ್, ಚಂದ್ರಕಲಾ ಎಚ್. ಎಂಬಿವರು ಆಯ್ಕೆಗೊಂಡಿದ್ದಾರೆ. ಚುನಾ ವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ ೧೮ …

ಉದ್ಯೋಗ ಖಾತರಿ: ಕುಟುಂಬಶ್ರೀ ಕಾರ್ಯಕರ್ತರು ಸರಕಾರದ ಗುಲಾಮರಲ್ಲ-ಕೆ.ಶ್ರೀಕಾಂತ್

ಬದಿಯಡ್ಕ: ಇತ್ತೀಚೆಗೆ ನಡೆದ ನವಕೇರಳ ಸಭೆಯಲ್ಲಿ ಪಾಲ್ಗೊಳ್ಳದೇ ಇರುವ ಉದ್ಯೋಗಖಾತರೀ ಯೋಜನೆಯ ಮಹಿಳಾ ಕಾರ್ಮಿಕರ ಮೇಲೆ ಪ್ರತೀಕಾರ ಕ್ರಮಕೈಗೊಳ್ಳಲು ಮುಂದಾದ ರಾಜ್ಯ ಸರಕಾರದ ಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಉದ್ಯೋಗ ಖಾತರಿ ಕೆಲಸಗಾರರು ಮತ್ತು ಕುಟುಂಬಶ್ರೀ ಕಾರ್ಯಕರ್ತರು ಪಿಣರಾಯಿ ಸರಕಾರದ ಗುಲಾಮರಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಭಾಗವಹಿಸದೇ ಇರುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ಪಿಣರಾಯಿ ಸರಕಾರವು ತಲೆತೂರಿಸುವುದು ಬಡವರ ಬಡತನವನ್ನು ಶೋಷಣೆ ಮಾಡಿದಂತೆ. ಭಾಗವಹಿಸದ ಕೆಲಸಗಾರರು ಹಾಗೂ ಕುಟುಂಬಶ್ರೀ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿ …

ಎನ್‌ಡಿಎ ನಗರಸಭಾ ಸಮಿತಿ ಜನಪಂಚಾಯತ್

ಕಾಸರಗೋಡು: ಬಿಜೆಪಿ ನಗರಸಭಾ ಸಮಿತಿ ಆಶ್ರಯದಲ್ಲಿ ಎನ್‌ಡಿಎ ಜನಪಂಚಾಯತ್ ಸಭೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಪಿ. ಪ್ರಕಾಶ್ ಬಾಬು ಉದ್ಘಾಟಿಸಿದರು. ಬಿಜೆಪಿ ನಗರಸಭಾ ವೆಸ್ಟ್ ಸಮಿತಿ ಅಧ್ಯಕ್ಷ ಎ. ಪ್ರೇಂಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುನ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರಂ, ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್, ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ, ಮುಖಂಡರಾದ ವರಪ್ರಸಾದ್ ಕೋಟೆಕಣಿ, ಎನ್. ಮಧು ಮಾತನಾಡಿದರು. ಕೆ. ಕಿಶೋರ್ ಕುಮಾರ್ ಸ್ವಾಗತಿಸಿ, ಕೆ.ಜಿ. ಮನೋಹರನ್ ವಂದಿಸಿದರು.