ಸಿಮ್‌ಕಾರ್ಡ್ ಮಾರಾಟ: ನಾಳೆಯಿಂದ ಕಠಿಣ ನಿಯಂತ್ರಣ

ಕಾಸರಗೋಡು: ಆರ್ಥಿಕ ವಂಚನೆ, ದೇಶದ್ರೋಹಿ ಚಟುವಟಿಕೆಗಳಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವುದನ್ನು ತಡೆಯಲು ಕೇಂದ್ರ ಸರಕಾರ ಕಠಿಣ ಷರತ್ತುಗಳನ್ನು ಏರ್ಪಡಿಸಲಿದೆ. ಈ ಷರತ್ತುಗಳು ದೇಶವ್ಯಾಪಕವಾಗಿ ನಾಳೆಯಿಂದ ಜ್ಯಾರಿಗೆ ಬರಲಿದೆ. ದೇಶದ್ರೋಹ ಚಟುವಟಿಕೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ. ಸಿಮ್ ಕಾರ್ಡ್ ಮಾರಾಟಗಾರರ ದಾಖಲೆಗಳನ್ನು ಪರಿಶೀಲಿಸುವುದು, ಹಲವು ಸಂಪರ್ಕಗಳನ್ನು ಏಕಕಾಲದಲ್ಲಿ ನೀಡುವುದನ್ನು ತಡೆಯುವುದು, ಟೆಲಿಕಾಂ ಕಂಪೆನಿಗಳು ಅವರ ಫ್ರಾಂಚೈಸಿಗಳನ್ನು ಮಾರಾಟ ಗಾರರನ್ನು ನೋಂದಣಿ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸುವುದು, ಹೊಸ ಸಿಮ್‌ಗೆ ಕೆ.ವೈಸಿ ಕಠಿಣಗೊಳಿಸುವುದು ಎಂಬಿವು ಹೊಸ ಷರತ್ತುಗಳಲ್ಲಿ ಸೇರಿದೆ.

ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಧ್ವಜಸ್ತಂಭ ಮೆರವಣಿಗೆ: ವಿವಿಧೆಡೆ ಸ್ವಾಗತ

ನಾರಂಪಾಡಿ: ಇಲ್ಲಿನ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭದ   ಮೆರವಣಿಗೆ ನಿನ್ನೆ ಮೂಲಕ ಭಕ್ತಿ ಸಂಭ್ರಮದಿಂದ ನಡೆಯಿತು. ಈಶ್ವರಮಂಗಲ ಪುಂಡಿಕಾಯಿ ಚರವು ಎಂಬಲ್ಲಿನ ಪ್ರಶಾಂತ್ ಕೃಷ್ಣ ಭಟ್‌ರ ಸ್ಥಳದಿಂದ ಮರವನ್ನು ಮೆರವಣಿಗೆ ಮೂಲಕ ನಾರಂಪಾಡಿ ಕ್ಷೇತ್ರಕ್ಕೆ ತರಲಾಗಿದೆ. ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ವೈದಿಕ ಕಾರ್ಯಗಳಿಗೆ ಅರ್ಚಕ ಶಂಕರ ನಾರಾಯಣ ಕೆದಿಲ್ಲಾಯರು ಭಾಗವ ಹಿಸಿದರು. ಅಂಕುರ ಎಂಟರ್‌ಪ್ರೈಸಸ್ ನವರು ವಾಹನದ ವ್ಯವಸ್ಥೆ ಮಾಡಿದ್ದರು. ಮೆರವಣಿಗೆ ಸಾಗಿದ ಸ್ಥಳದಲ್ಲಿ ವಿವಿಧ ಸಂಘ-ಸಂಸ್ಥೆಗಳು, …

ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆದು ಇಂದಿಗೆ ೧೦ ವರ್ಷ: ಪೂರ್ಣಗೊಳ್ಳದ ಕಟ್ಟಡ ನಿರ್ಮಾಣ

ಬದಿಯಡ್ಕ: ಕಾಸರಗೋಡಿನ ಜನತೆಯ ಕನಸಾದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನಡೆದು ಇಂದಿಗೆ ಭರ್ತಿ ಹತ್ತು ವರ್ಷ ಪೂರ್ತಿಗೊಂಡಿತು. ಆದರೆ ಇದುವರೆಗೆ ಆಸ್ಪತ್ರೆ ನಿರ್ಮಾಣ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಉತ್ತಮ  ಸೌಕರ್ಯಗಳೊಂದಿಗೆ ಆಸ್ಪತ್ರೆ ನಿರ್ಮಾಣ ಮಾಡುವ ಗುರಿಯೊಂದಿಗೆ ಜ್ಯಾರಿಗೊಳಿಸಿದ ಯೋಜನೆ ಮೂಲೆಗುಂಪಾಗುತ್ತಿದೆ. ಮೆಡಿಕಲ್  ಕಾಲೇಜಿಗೆ ಶಿಲಾನ್ಯಾಸ ನಡೆಸಿದ ಬಳಿಕ ಇದುವರೆಗೆ ಅಕಾಡೆಮಿಕ್ ಬ್ಲೋಕ್ ಹಾಗೂ ಆಡಿಟೋರಿಯಂನ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಕೋವಿಡ್ ಕಾಲದಲ್ಲಿ ಇದರಲ್ಲಿ  ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿರುವುದು ಮಾತ್ರವೇ ಇದುವರೆಗಿನ ಏಕೈಕ ಸಾಧನೆಯಾಗಿದೆ.  ಅನಂತರ …

ಬೇಕೂರು ರಸ್ತೆಗೆ ಬಾಗಿಕೊಂಡಿರುವ ಮರದ ರೆಂಬೆಗಳು: ಅಪಾಯ ಭೀತಿ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಬೇಕೂರು ಶಾಲಾ ಪರಿಸರದ ಬಸ್ ನಿಲ್ದಾಣ ಸಮೀಪದಲ್ಲಿ ಬೃಹತ್ ಮರವೊಂದರ ರೆಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ. ಬಸ್ ಸಹಿತ ದೊs್ಣu ವಾಹನಗಳು ಈ ರೆಂಬೆಗಳು ಬಡಿಯುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ದಿನನಿತ್ಯ ನೂರಾರು ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ಜನರು ನಡೆದು ಹೋಗುತ್ತಿದ್ದಾರೆ. ಅಲ್ಲದೆ ಈ ಪರಿಸರ ದಿಂದ ವಿದ್ಯುತ್ ತಂತಿ ಹಾದು ಹೋಗಿದೆ. ಮರ ಮುರಿದು ಬಿದ್ದಲ್ಲಿ ದುರಂತ ಸಂಭವಿಸಬ ಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕೈಕಂಬ-ಬಾಯಾರು …

ಬೀದಿ ವ್ಯಾಪಾರ: ಯೂನಿಯನ್ ಮುಖಂಡನ  ಬಣ್ಣ ಬಹಿರಂಗ- ಮರ್ಚೆಂಟ್ಸ್ ಅಸೋಸಿಯೇಶನ್

ಕಾಸರಗೋಡು: ಬೀದಿ ಬದಿ ವ್ಯಾಪಾರ ನಾವು ನಡೆಸುವಾಗ ಕಾನೂನು ವಿಧೇಯ ಹಾಗೂ ಇತರರು ನಡೆಸಿದ ಕಾನೂನು ವಿರುದ್ಧವಾಗಿದೆ ಎಂದು ಕಳವಳ ಪಡುವ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಮುಖಂಡ ಎ. ಅಬ್ದುಲ್ ರಹ್‌ಮಾನ್‌ರ ಹೇಳಿಕೆ ಬೀದಿ ಬದಿ ವ್ಯಾಪಾರ ಮಾಫಿಯಾಗಳನ್ನು ನಿಯಂತ್ರಿಸುವುದು ತಾನೆಂದು ಸುತ್ತುಬಳಸಿ ಹೇಳಿದಂತಾಗಿದೆ ಎಂದು ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎ. ಇಲ್ಯಾಸ್ ನುಡಿದರು. ವ್ಯಾಪಾರಿಗಳು ಹೇಳುತ್ತಿರುವುದು ಸ್ಥಳೀಯರಾದ ಬೀದಿ ಬದಿ ವ್ಯಾಪಾರಿಗಳನ್ನು ಬೇರೆಡೆಯಲ್ಲಿ ವ್ಯಾಪಾರ ನಡೆಸಲು ವ್ಯವಸ್ಥೆ ಮಾಡಬೇಕೆಂದೂ, ಅನ್ಯ ರಾಜ್ಯದ ಅನಧಿಕೃತ …

ಕೇಂದ್ರ ಸರಕಾರದ ಮಹತ್ವದ ಕ್ರಮ: ಉಚಿತ ರೇಶನ್ ಯೋಜನೆ ಇನ್ನೂ ಐದು ವರ್ಷತನಕ ವಿಸ್ತರಣೆ

ಹೊಸದಿಲ್ಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ರಕಾರ ವಿರುವ ಉಚಿತ ರೇಶನ್  ಆಹಾರ ಧಾನ್ಯಗಳ ವಿತರಣೆಯನ್ನು ೨೦೨೪ ಜನವರಿ ೧ರಿಂದ ಮುಂದಿನ ಐದು ವರ್ಷದ ತನಕ ವಿಸ್ತರಿಸುವ ಮಹತ್ವದ ತೀರ್ಮಾನ ಕೇಂದ್ರ ಸಚಿವ ಸಂಪುಟ ಸಭೆ ಕೈಗೊಂಡಿದೆ. ಪಂಚ ರಾಜ್ಯಗಳಿಗೆ ನಡೆದ ಚುನಾವಣಾ ಪ್ರಚಾರದ ವೇಳೆ  ಉಚಿತ ರೇಶನ್  ವಿತರಣೆಯನ್ನು ಇನ್ನೂ ಐದು ವರ್ಷ ತನಕ ವಿಸ್ತರಿಸಲಾಗುವು ದೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದರು. ಅದನ್ನು ಈಗ ಕೇಂದ್ರ ಸರಕಾರ ಸಾಕಾರಗೊಳಿಸಿದೆ. ಈ ಯೋಜನೆಯ ಪ್ರಕಾರ ರೇಶನ್ …

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಅಭಿವಂದನೆ

ಧರ್ಮತ್ತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ನವೆಂಬರ್ 7 ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಈ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳನ್ನು ಗೌರವಿಸುವ ಕಾರ್ಯಕ್ರಮವು ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿದರು. ವ್ಯವಸ್ಥಾಪಕ . ಶಂಕರನಾರಾಯಣ ಭಟ್, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ , ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ್ …

ನವಕೇರಳ ಸಭೆಗೆ ದೇಣಿಗೆ ನೀಡಬೇಕೆಂಬ ಸರಕಾರದ ನಿರ್ದೇಶವನ್ನು ತಿರಸ್ಕರಿಸಿದ ವರ್ಕಾಡಿ ಪಂಚಾಯತ್

ವರ್ಕಾಡಿ: ನವಕೇರಳ ಸಭೆಗೆ ದೇಣಿಗೆ ನೀಡಬೇಕೆಂಬ ಸರಕಾರದ ವಿನಂತಿಯನ್ನು ಎಡಪ್ರಜಾಪ್ರ ಭುತ್ವರಂಗದ ಆಡಳಿತೆ ಇರುವ ವರ್ಕಾಡಿ ಪಂಚಾಯತ್ ನಿರಾಕರಿ ಸಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ನಿನ್ನೆ ನಡೆದ ಪಂಚಾಯತ್ ಆಡಳಿತ ಸಮಿತಿ ಅದರ ವಿರುದ್ದ ೧೦ ಮತಗಳ ಅಂತರದಲ್ಲಿ ಸರಕಾರದ ನಿರ್ದೇಶವನ್ನು ತಳ್ಳಿದೆ. ೧೬ ಸದಸ್ಯ ಬಲದ ವರ್ಕಾಡಿ ಪಂ.ನಲ್ಲಿ ಆಡಳಿತ ನಡೆಸುವ ಎಡರಂಗಕ್ಕೆ ಆರು ಸದಸ್ಯರು ಮಾತ್ರವೇ ಇರುವುದು. ಮೂರು ಸಿಪಿಎಂ ಸದಸ್ಯರು,  ಇಬ್ಬರು ಸಿಪಿಐ ಸದಸ್ಯರು, ಓರ್ವ ಎಡರಂಗ ಬೆಂಬಲಿ ತ …

ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ-ಆರೋಪ: ಕೇಂದ್ರ ವಿ.ವಿ. ಅಧ್ಯಾಪಕ ಅಮಾನತು

ಪೆರಿಯ: ವಿದ್ಯಾರ್ಥಿನಿಯೊಂ ದಿಗೆ ಲೈಂಗಿಕ ಅತಿಕ್ರಮಣ ನಡೆಸಿ ರುವುದಾಗಿ ಲಭಿಸಿದ ದೂರಿನಂತೆ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾ ಪಕನನ್ನು ಅಮಾನತು ಮಾಡ ಲಾಗಿದೆ. ಇಂಗ್ಲಿಷ್ ತುಲನಾತ್ಮಕ ಅಧ್ಯಯನ ವಿಭಾಗದ ಅಸಿ. ಪ್ರೊಫೆ ಸರ್ ಇಫ್ತಿಕರ್ ಅಹಮ್ಮದ್‌ರನ್ನು ತನಿಖಾ ವಿಧೇಯವಾಗಿ ಅಮಾನತು ಗೊಳಿಸಲಾಗಿದೆ. ದೂರಿನ ಕುರಿತು ವಿಶ್ವವಿದ್ಯಾ ಲಯ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ದೂರಿನಲ್ಲಿ ಸತ್ಯಾವಸ್ಥೆ ಇದೆಯೆಂದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಅಧ್ಯಾಪಕ ಎರಡು ವಾರ ತರಗತಿ ನಡೆಸುವುದನ್ನು ತಡೆಹಿಡಿಯಲಾಗಿದೆ. ಅಮಾನತು ಕ್ರಮದ ಮಧ್ಯೆ …

ಚಿನ್ನದ ದರ ದಾಖಲೆಯತ್ತ ಇಂದು ಪವನ್‌ಗೆ ೬೦೦ ರೂ. ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಹೊಸ ದಾಖಲೆಯತ್ತ ನೆಗೆಯುತ್ತಿದೆ. ಇಂದು ಒಂದು ಪವನ್‌ಗೆ ೬೦೦ ರೂ.ಗಳ ಏರಿಕೆ ಯಾಗಿ ೪೬,೪೮೦ ರೂ.ಗೆ ತಲುಪಿದೆ. ಇದಕ್ಕಿಂತ ಮೊದಲು ಗರಿಷ್ಠ ಬೆಲೆ ೪೫,೯೨೦ ರೂಪಾಯಿ ಆಗಿತ್ತು. ಈ ತಿಂಗಳ ೧ರಂದು ಒಂದು ಪವನ್ ಚಿನ್ನದ ದರ ೪೫,೧೨೦ ರೂ. ಆಗಿತ್ತು. ಅನಂತರ ಬೆಲೆಯಲ್ಲಿ ಏರು-ಪೇರು ಕಂಡುಬಂದಿತ್ತು. ಇಂದು ಮತ್ತೆ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದೇ ವೇಳೆ ಚಿನ್ನದ ದರ ಒಮ್ಮೆ ಲೇ ೬೦೦ ರೂಪಾಯಿ  ಹೆಚ್ಚಳವಾಗ ಲು ಕಾರಣವೇನೆಂದು ತಿಳಿದುಬಂದಿಲ್ಲ. ಕೇರಳದಲ್ಲಿ …