ಸೊಸೆಯ ಪರಾಕ್ರಮ: ಅತ್ತೆ, ಪತಿಯ ಸಹೋದರನಿಗೆ ಗಾಯ

ಕಾಸರಗೋಡು: ಸೊಸೆಯ ಪರಾಕ್ರಮದಿಂದ ಅತ್ತೆ ಹಾಗೂ ಪತಿಯ ಸಹೋದರ ಗಾಯಗೊಂಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. ನಿನ್ನೆ ಸಂಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ಅಡುಗೆ ಕೋಣೆಯಿಂದ ಚಾಕು ತೆಗೆದ ಯುವತಿ ಪತಿಯ ತಾಯಿ ಮೇಲೆ ಆಕ್ರಮಿಸಿರುವುದಾಗಿ ಹೇಳಲಾಗುತ್ತಿದೆ. ಈ ವೇಳೆ ತಡೆಯಲು ಯತ್ನಿಸಿದ ಪತಿಯ ಸಹೋದರನಿಗೂ ಗಾಯಗಳಾಗಿದೆ. ಬೊಬ್ಬೆ ಕೇಳಿ ನೆರೆಮನೆ ನಿವಾಸಿಗಳು ತಲುಪಿ ಯುವತಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಚಾಕುವನ್ನು ಕೆಳಗಿಡಲು ಆಕೆ ತಯಾರಾಗಲಿಲ್ಲ. ಈ …

ಬೈಕ್‌ಗಳು ಢಿಕ್ಕಿ ಹೊಡೆದು ಇಬ್ಬರು ಮೃತ್ಯು

ಕಣ್ಣೂರು: ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೂತುಪರಂಬ ನೆರುವಳ್ಳಿ ತಿರುವಿನಲ್ಲಿ ಇಂದು ಮುಂಜಾನೆ ೧೨.೩೦ರ ವೇಳೆ ಅಪಘಾತ ಸಂಭವಿಸಿದೆ. ಎರಡು ಭಾಗದಿಂದ ಆಗಮಿಸಿದ ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಕೆಲವು ದಿನಗಳ ಹಿಂದೆಯಷ್ಟೇ ಗಲ್ಫ್‌ನಿಂದ ಬಂದ ಪಾನೂರು, ಪುತ್ತೂರು, ಓವ್‌ಪಾಲಂ, ಕಣ್ಣಂಗೋಡ್‌ನ ತಾಹ (೨೬), ಕೂತುಪರಂಬ ಪೇಟುಮ್ಮಲ್‌ನ ಮುಹಮ್ಮದ್ ಸಿನಾನ್ (೧೯) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಗಂಭೀರ ಗಾಯಗೊಂಡ ಈ ಇಬ್ಬರನ್ನು ಕೂಡಲೇ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ವಯನಾಡ್‌ನಲ್ಲಿ ಮತ್ತೆ ರಾಹುಲ್ ಗಾಂಧಿ ಸ್ಪರ್ಧೆ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಮಂಡಲದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸಲಿದ್ದಾರೆ. ಕೇರಳದ ಹೊಣೆ ಗಾರಿಕೆಯುಳ್ಳ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಈ ಬಗ್ಗೆ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕರ್ನಾಟಕ ಅಥವಾ ತಮಿಳುನಾಡಿ ನಲ್ಲಿ ಸ್ಪರ್ಧಿಸಲಿದ್ದಾರೆಂಬ ಪ್ರಚಾರಗಳ ಮಧ್ಯೆ ತಾರಿಖ್ ಅನ್ವರ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಪ್ರಸ್ತುತದ ಪರಿಸ್ಥಿತಿಯಲ್ಲಿ ವಯನಾಡು ಮಂಡಲ ಕಾಂಗ್ರೆಸ್‌ಗೆ ಸುರಕ್ಷಿತವಾ ಗಿದೆ. ಆದ್ದರಿಂದ ಬೇರೆ ಮಂಡಲದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಇಲ್ಲ …

ಅಪಹರಣಕ್ಕೊಳಗಾದ ಬಾಲಕಿ ಪತ್ತೆಯಾದರೂ ಅಪಹರಣಕಾರರ ಮಾಹಿತಿ ಇನ್ನೂ ಅಲಭ್ಯ

ಕೊಲ್ಲಂ: ಕೊಲ್ಲಂ  ಓಯೂರಿನಿಂದ ಕಾರಿನಲ್ಲಿ  ಬಂದ ತಂಡ ಅಪಹರಿಸಿದ ಆರು ವರ್ಷದ ಅಬಿಗೇಲ್ ಸಾರಾ ರೆಜಿ ಎಂಬ ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದರೂ, ಆಕೆಯನ್ನು ಅಪಹರಿಸಿದ ಅಪ ಹರಣಕಾರರ ಕುರಿತಾದ ಮಾಹಿತಿ ಪೊಲೀಸರಿಗೆ ಇನ್ನೂ ಲಭಿಲಿಲ್ಲ. ಮಾತ್ರವಲ್ಲ ಆ ಅಪಹರಣದಲ್ಲಿ ಕೆಲವೊಂದು ನಿಗೂಢತೆಗಳು ಅಡಗಿವೆಯೆಂಬ ಶಂಕೆಯೂ ಇನ್ನೊಂದೆಡೆ ಉಂಟಾಗಿದೆ. ಈ ತಿಂಗಳ ೨೭ರಂದು ಸಂಜೆ ಈ ಬಾಲಕಿ  ಸಹೋದರನ ಜತೆಗೆ ಟ್ಯೂಶನ್ ಕ್ಲಾಸ್‌ಗೆ ಹೋಗುತ್ತಿದ್ದ ದಾರಿ ಮಧ್ಯೆ ಕಾರಿನಲ್ಲಿ ಬಂದ ತಂಡ  ಅಪಹರಿಸಿ ಸಾಗಿತ್ತು. ಬಾಲಕಿಯ ಪತ್ತೆಗಾಗಿ …

ಜೋಡುಕಲ್ಲು- ಪರಂಬಳ ರಸ್ತೆ ಹದಗೆಟ್ಟು ಶೋಚನೀಯ: ದುರಸ್ತಿಗೆ ಒತ್ತಾಯ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಜೋಡುಕಲ್ಲು-ಪರಂಬಳ ಲೊಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹದಗೆಟ್ಟು ಶೋಚನೀಯ ವಸ್ಥೆಯಲ್ಲಿದ್ದು, ಸಂಚಾರ ದುಸ್ತರವಾ ಗಿರುವುದಾಗಿ ಸಾರ್ವಜನಿಕರು ದೂರಿ ದ್ದಾರೆ. ಸುಮಾರು ೪ ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಮೂರು ಕಿಲೋ ಮೀಟರ್ ರಸ್ತೆ ಅಲ್ಲಲ್ಲಿ ಶೋಚನೀಯ ವಸ್ಥೆಯಲ್ಲಿದೆ. ಡಾಮಾರು, ಜಲ್ಲಿಕಲ್ಲುಗಳು ಎದ್ದು ಹೊಂಡ ಸೃಷ್ಟಿಯಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗುತ್ತಿದೆ. ಜೊಡುಕಲ್ಲುನಿಂದ ಪರಂಬಳ ಸಹಿತ ವಿವಿಧ ಕಡೆ ಹತ್ತಿರದ ರಸ್ತೆ ಇದಾಗಿದೆ.. ಕೂಡಲೇ ಈ ರಸ್ತೆಯ ದುರಸ್ತಿಗೆ …

ಸುರಂಗದೊಳಗೆ ಸಿಲುಕಿ ಪುನರ್‌ಜನ್ಮ ಪಡೆದ ೪೧ ಕಾರ್ಮಿಕರಿಗೆ ಬಹುಮಾನ ಘೋಷಣೆ

ನವದೆಹಲಿ: ಬರೋಬ್ಬರಿ ೧೭ ದಿನಗಳ ಕಾಲ ಉತ್ತರಾಖಂಡದ ಸಿಲ್‌ಕ್ಕಾರಾ ಸುರಂಗದಲ್ಲಿ ಸಿಲುಕಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ೪೧ ಕಾರ್ಮಿಕರನ್ನು ಸತತ ೩೯೮ ಗಂಟೆಗಳ ಕಾಲ ಸತತವಾಗಿ ನಡೆದ ರಕ್ಷಣಾ ಕಾರ್ಯಾಚರಣೆ ಫಲವಾಗಿ ನಿನ್ನೆ ರಾತ್ರಿ ಪ್ರಾಣ ರಕ್ಷಿಸಿ ಅವರಿಗೆ ಪುನರ್‌ಜನ್ಮವನ್ನು ನೀಡುವಲ್ಲಿ  ಸಹಕರಿಸಿದ ಎಲ್ಲಾ ರಕ್ಷಣಾ ಕಾರ್ಯಾಚರಣೆ ತಂಡಕ್ಕೆ ಪ್ರಧಾನಮಂತ್ರಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸಾವಿನ ದವಡೆಯಿಂದ ಪಾರಾದ ೪೧ ಕಾರ್ಮಿಕರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಲಾ ೧ …

ಆರು ಲೀಟರ್ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ನೀಲೇಶ್ವರಕ್ಕೆ ಸಮೀಪದ ಕಾಟುಂಕವಲದ ಕುಳಮಲದಲ್ಲಿ ನೀಲೇಶ್ವರ ಅಬಕಾರಿ ರೇಂಜ್‌ನ ಪ್ರಿವೆಂಟಿವ್ ಆಫೀಸರ್ ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಲೀಟರ್ ಕೇರಳ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕುಳಮಲದ ಅನೀಶ್ (೩೯) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ಈತ ಈ ಪ್ರದೇಶದಲ್ಲಿ ಮದ್ಯ ಮಾರಾಟ ನಡೆಸುತ್ತಿರುವ ವ್ಯಕ್ತಿಯಾರುವುದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಸಿಇಒಗಳಾದ ಪ್ರಜ್ವಲ್ ಕುಮಾರ್, ಸುನಿಲ್ ಕುಮಾರ್, ಮಹಿಳಾ ಸಿಇಒ ತಜ್ಞ ಮತ್ತು ಚಾಲಕ ರಾಜೀವನ್ …

ಸೆಂಟ್ರಲ್ ಸ್ಕೂಲ್ ಸ್ಪೋರ್ಟ್ಸ್ ಮೀಟ್ ನವೋದಯ ಶಾಲೆಗೆ ಪ್ರಶಸ್ತಿ

ಹೊಸದುರ್ಗ: ಸೆಂಟ್ರಲ್ ಸ್ಕೂಲ್ ಸ್ಪೋರ್ಟ್ಸ್ ಮೀಟ್‌ನಲ್ಲಿ ಪೆರಿಯ ನವೋದಯ ಶಾಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಈ ಶಾಲೆಗೆ ೧೧೧ ಅಂಕಗಳು  ಲಭಿಸಿದಾಗ ಕಾಸ ರಗೋಡು ಚಿನ್ಮಯ ವಿದ್ಯಾಲಯಕ್ಕೆ ೬೭ ಅಂಕ ಗಳು ಲಭಿಸಿದೆ. ೪೮ ಅಂಕಗಳೊಂದಿಗೆ ಕೂಡ್ಲು ಚೈತನ್ಯ ಶಾಲೆ ತೃತೀಯ ಸ್ಥಾನ ಪಡೆದಿದೆ.

ಕೇಂದ್ರ ಸರಕಾರದ ಯೋಜನೆಗಳನ್ನು ಬುಡಮೇಲುಗೊಳಿಸುವುದು ರಾಜ್ಯ ಸರಕಾರದ ಕುಲ ಕಸುಬು- ಶ್ರೀಕಾಂತ್

ಪೈವಳಿಕೆ :ಕೇಂದ್ರ ಸರಕಾರ ಜಾರಿ ಮಾಡುವ ಎಲ್ಲಾ ಜನಪರ ಯೋಜನೆ ಗಳನ್ನು ಬುಡಮೇಲು ಗೊಳಿಸುವುದು, ಹೆಸರು ಬದಲಾಯಿಸಿ ಯೋಜನೆ ಜನತೆಗೆ ಸಿಗದಂತೆ ಮಾಡುವುದು ರಾಜ್ಯದ ¯ಥಿÁ್ತ¿್ನ ೆಜ¾್ಣ್ನವ್ವಿ ಸರಕಾರದ ಕುಲ ಕಸುಬು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆರೋಪಿಸಿದರು. ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ಮಂಗಳವಾರ ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ ಬಾಯರ್ ಪದವುನಲ್ಲಿ ಮಾತನಾಡಿದರು. ಖಜಾನೆ ಲೂಟಿ ಹÉÆಡೆದಿರುವ ರಾಜ್ಯ ಸರಕಾರ ರಾಜ್ಯ ದಲ್ಲಿ ಸಂಬಳ, ಪೆನ್ಸನ್, ಯಾವುದು ನೀಡುತ್ತಿಲ್ಲ ಎಂದು ಆರೋಪಿಸಿದರು.ಕೀರ್ತಿ …

ಮಾನ್ಯ-ಚರ್ಲಡ್ಕ ರಸ್ತೆ ಸ್ಥಿತಿ ಶೋಚನೀಯ: ವಾಹನ ಸಂಚಾರಕ್ಕೆ ಸಮಸ್ಯೆ ಕಾಂಗ್ರೆಸ್‌ನಿಂದ ಹೋರಾಟ ಮುನ್ನೆಚ್ಚರಿಕೆ

ಮಾನ್ಯ: ಬದಿಯಡ್ಕ ಪಂಚಾ ಯತ್ ವ್ಯಾಪ್ತಿಯ ಮಾನ್ಯ ವಿಜಯ ನಗರದಿಂದ ಚರ್ಲಡ್ಕಕ್ಕೆ ಸಂಪರ್ಕಿ ಸುವ ರಸ್ತೆಯ ಸ್ಥಿತಿ ಶೋಚನೀ  ಯವಾಗಿದ್ದು, ಇದರಿಂದ ವಾಹನ ಸಂ ಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ರಸ್ತೆಯ ಅಭಿವೃದ್ಧಿಗಾಗಿ ಸರಕಾರದಿಂದ ೨ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಇದರಂತೆ ಜೂನ್ ತಿಂಗಳಲ್ಲಿ ಕಾಮ ಗಾರಿ ಆರಂಭಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆಯೆಂದು ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಆರೋಪಿಸಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ಸ್ಥಿತಿ …