ಕಾಮಗಾರಿ ಅರ್ಧದಲ್ಲಿ ಮೊಟಕು: ಕಳತ್ತೂರು-ಕಿದೂರು-ಜೋಡುಕಟ್ಟೆ ರಸ್ತೆಯಲ್ಲಿ ಸಂಚಾರ ಸಮಸ್ಯೆ

ಕುಂಬಳೆ; ೫೦೦ ಮೀಟರ್ ರಸ್ತೆಗೆ ಡಾಮರೀಕರಣ ನಡೆಸಲು ಕಳೆದ ಎಪ್ರಿಲ್‌ನಲ್ಲಿ ಆರಂಭಿಸಿದ ಕಾಮಗಾರಿಯಿಂ ದಾಗಿ ನಾಗರಿಕರಿಗೆ ಆ ರಸ್ತೆ ಮೂಲಕ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂಬ ದೂರು ಉಂಟಾಗಿದೆ. ಕುಂಬಳೆ ಪಂಚಾಯತ್‌ನ ಕಳತ್ತೂರು-ಕಿದೂರು-ಜೋಡುಕಟ್ಟೆ ದೇವಸ್ಥಾನ ರಸ್ತೆಯಲ್ಲಿ ದೇವಸ್ಥಾನ ಸಮೀಪ ೫೦೦ ಮೀಟರ್ ರಸ್ತೆಗೆ ಮರು ಡಾಮರೀಕರಣ ನಡೆಸಲು ಪಂಚಾಯತ್ ಅನುಮತಿ ನೀಡಿರುತ್ತದೆ. ರಸ್ತೆ ನಿರ್ಮಿಸಿದ ಕಾಲದಲ್ಲಿ ನಡೆಸಿದ ಡಾಮರೀಕರಣ ಹಾನಿಗೀಡಾದ ಹಿನ್ನೆಲೆಯಲ್ಲಿ ಮರು ಡಾಮರೀಕರಣ ನಡೆಸಲು ಅನುಮತಿ ನೀಡಲಾಗಿದೆ ಎನ್ನಲಾಗುತ್ತಿದೆ. ಗುತ್ತಿಗೆ ಲಭಿಸಿದೊಡನೆ ಗುತ್ತಿಗೆದಾರ …

ಪೊಲೀಸರ ಮೇಲೆ ಹಲ್ಲೆ : ಆರೋಪಿಗೆ ೪ ತಿಂಗಳ ಸಜೆ

ಕಾಸರಗೋಡು: ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಹೊಸದುರ್ಗ ಸೌತ್ ಕೊವ್ವಲಿನ ನೌಶಾದ್ ಅಲಿಯಾಸ್ ಕಾರಾಟ್ ನೌಶಾದ್ (೩೫)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨)ದ ನ್ಯಾಯಾಧೀಶರಾದ ಟಿ. ಬಿಜು ಅವರು ನಾಲ್ಕು ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ೨೦೧೮ ಆಗಸ್ಟ್ ೨೦ರಂದು ರಾತ್ರಿ ಹೊಸದುರ್ಗ ರೈಲು ನಿಲ್ದಾಣದಲ್ಲಿ ದಾಂಧಲೆ ಸೃಷ್ಟಿಸಿದ್ದ ಆರೋಪಿ ಕಾರಾಟ್ ನೌಶಾದ್‌ನನ್ನು ಹೊಸದುರ್ಗ ಪೊಲೀಸರು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಒಯ್ದಿದ್ದರು. ಆಗ ಪೊಲೀಸ್ ಠಾಣೆಯಲ್ಲಿ  ಕರ್ತವ್ಯದಲ್ಲಿದ್ದ ಪೊಲೀಸ್‌ನೋರ್ವನ …

ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆ ರಾಮ್‌ನಗರ ನಿವಾಸಿ ಬಳ್ಳಂಬೆಟ್ಟು ಅಚ್ಯುತ ಪೈ (೬೩) ನಿಧನ ಹೊಂದಿದರು. ಇವರು ಈ ಹಿಂದೆ ಕುಂಬಳೆ ರೈಲು ನಿಲ್ದಾಣ ರಸ್ತೆಯಲ್ಲಿ ವ್ಯಾಪಾರಿಯಾಗಿದ್ದರು. ಅನಂತರ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿದ್ದರು.  ಇತ್ತೀಚೆಗಿನಿಂದ ಅಸೌಖ್ಯ ಬಾಧಿಸಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅಲ್ಲಿ ನಿಧನ ಸಂಭವಿಸಿದೆ. ಇವರ ಪತ್ನಿ ಆಶಾ ಪೈ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಅನಿತ, ದಿನೇಶ್ ಪೈ, ಸಹೋದರ- ಸಹೋದರಿಯರಾದ ರಾಮ್‌ದಾಸ್ ಪೈ, ಮಂಜುನಾಥ ಪೈ, ಜಯಂತಿ, ಪೂರ್ಣಿಮ ಹಾಗೂ ಅಪಾರ ಬಧು-ಮಿತ್ರರನ್ನು …

ವೃದ್ಧ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ವೃದ್ಧನೋರ್ವ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರಿಕ್ಕಾಡಿ ಪಾರೆಸ್ತಾನ ನಿವಾಸಿ ವಿಠಲ ಪೂಜಾರಿ (೭೨) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಬಂಬ್ರಾಣ ಭರಣಿಕಟ್ಟೆ  ಎಂಬಲ್ಲಿ ಬಡಗಿ ವೃತ್ತಿ ನಡೆಸುತ್ತಿದ್ದರು. ಮೊನ್ನೆ ಸಂಜೆ ಅಲ್ಲಿಗೆ ತೆರಳಿದ ಅವರು ಕೆಲಸದ ಶೆಡ್‌ನಲ್ಲಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಶೆಡ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಮೃತದೇಹದ ಮರಣೋ ತ್ತರ ಪರೀಕ್ಷ  ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ಕುಂಟಂಗೇರಡ್ಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾ ಯಿತು. …

ಜಪ್ತಿ ನೋಟೀಸು: ಹೈನುಗಾರಿಕಾ ಕೃಷಿಕ ಆತ್ಮಹತ್ಯೆಗೆ ಶರಣು

ಕಣ್ಣೂರು: ಬ್ಯಾಂಕ್‌ನಿಂದ ಜಪ್ತಿ ನೋಟೀಸು ಲಭಿಸಿದ ಹೈನುಗಾರಿಕಾ ಕೃಷಿಕ ಆತ್ಮಹತ್ಯೆಗೆ ಶರಣಾದ ಘಟನೆ ಕಣ್ಣೂರಿನ ಫೆರಾವೂರಿನಲ್ಲಿ ನಡೆದಿದೆ. ಫೆರಾವೂರು ಕೋಳಾಕಾಡಿನ ಮುಂಡಕ್ಕಲ್ ಎಂ.ಆರ್. ಅಲ್ಬರ್ಟ್ (೬೮) ಸಾವನ್ನಪ್ಪಿದ ವ್ಯಕ್ತಿ. ಇವರು ಇಂದು ಮುಂಜಾನೆ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ವೇಳೆ ಅವರ ಪತ್ನಿ ಇಗರ್ಜಿಗೆ ಹೋಗಿದ್ದರು.  ಸಾಲ ಪಡೆದು ಅದನ್ನು ಸಕಾಲದಲ್ಲಿ ಮರುಪಾವತಿಸದ ಕಾರಣ ನೀಡಿ ಕೇರಳ ಬ್ಯಾಂಕ್‌ನ  ಫೆರಾವೂರು ಶಾಖೆಯಿಂದ ಅಲ್ಬರ್ಟ್ ಮೊನ್ನೆ ಜಪ್ತಿ ನೋಟೀಸು ಲಭಿಸಿತ್ತು. ನ. ೨೮ರೊಳಗಾಗಿ ಸಾಲದ …

ಮೀನು ಹಿಡಿಯುತ್ತಿದ್ದ ಮಧ್ಯೆ ಹೊಳೆಗೆ ಬಿದ್ದ ಯುವಕ ಕರಾವಳಿ ಪೊಲೀಸರಿಂದ ರಕ್ಷಣೆ

ಕುಂಬಳೆ: ಮೀನು ಹಿಡಿಯುವ ಮಧ್ಯೆ ಕಾಲುಜಾರಿ ಹೊಳೆಗೆ ಬಿದ್ದ ಯುವಕನನ್ನು ಹಾಗೂ ರಕ್ಷಣೆಗಾಗಿ ಹೊಳೆಗೆ ಹಾರಿದ ವ್ಯಕ್ತಿಯನ್ನು ಕರಾವಳಿ ಪೊಲೀಸರು ರಕ್ಷಿಸಿದ್ದಾರೆ. ಮೇಲ್ಪರಂಬ ದೇಳಿ ಜಂಕ್ಷನ್ ನಿವಾಸಿ ಖಾಲಿದ್ (೪೭), ಅಶ್ರಫ್ (೪೭) ಎಂಬಿವರನ್ನು ರಕ್ಷಿಸಲಾಗಿದೆ. ನಿನ್ನೆ ಮುಂಜಾನೆ ೨ ಗಂಟೆ ವೇಳೆ ಕುಂಬಳೆ ಶಿರಿಯ ಹೊಳೆಯ ರೈಲ್ವೇ ಮೇಲ್ಸೇತುವೆಯ ಬಳಿ ಘಟನೆ ನಡೆದಿದೆ. ಗೆಳೆಯರ ಜೊತೆ ಸೇರಿ ಮೀನು ಹಿಡಿಯಲು ತಲುಪಿದ ಖಾಲಿದ್ ಮೇಲ್ಸೇತುವೆಯಲ್ಲಿ ನಿಂತು  ಮೀನು ಹಿಡಿಯುತ್ತಿದ್ದ ವೇಳೆ ಆಯತಪ್ಪಿ ಹೊಳೆಗೆ ಬಿದ್ದಿದ್ದಾರೆ. ಬಳಿಕ …

ಪುತ್ತಿಗೆಯಲ್ಲಿ ಬಸ್ ತಂಗುದಾಣದ  ಕೊರತೆ: ಪ್ರಯಾಣಿಕರಿಗೆ ಸಮಸ್ಯೆ

ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಪ್ರಧಾನ ಕೇಂದ್ರಗಳಲ್ಲಿ ಒಂದಾದ ಪುತ್ತಿಗೆಯಲ್ಲಿ ಬಸ್ ತಂಗುದಾಣದ ಕೊರತೆ ಪ್ರಯಾಣಿಕರು, ಸ್ಥಳೀಯರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಪುತ್ತಿಗೆಯಿಂದ ಸೀತಾಂಗೋಳಿ ಭಾಗಕ್ಕೆ ಸಂಚರಿಸುವವರು ಬಸ್‌ಗಾಗಿ ಕಾಯುವ ಸ್ಥಳದಲ್ಲಿ ಬಸ್ ತಂಗುದಾಣವಿಲ್ಲದಿರುವುದು ಇಲ್ಲಿನವರಿಗೆ ಸಮಸ್ಯೆ ಉಂಟುಮಾಡಿದೆ. ಹಲವು ವರ್ಷದಿಂದ ಇಲ್ಲಿ ಮಳೆ, ಬಿಸಿಲಿಗೆ ಜನರು ರಸ್ತೆ ಬದಿಯೇ ನಿಲ್ಲಬೇಕಾಗುತ್ತಿದೆ. ಇಲ್ಲದಿದ್ದರೆ ಪೆರ್ಲ ಭಾಗಕ್ಕೆ ತೆರಳುವ ಬಸ್‌ಗಳು ನಿಲ್ಲುವಲ್ಲಿ ಇರುವ ಬಸ್ ತಂಗುದಾಣವನ್ನು ಆಶ್ರಯಿಸಬೇಕಾಗುತ್ತಿದೆ. ಆದರೆ ಈ ತಂಗುದಾಣದಲ್ಲಿ ನಿಂತು ಬಸ್ ಬರುವಾಗ ಆಚೆ ಬದಿಗೆ ಓಡಬೇಕಾಗುತ್ತಿದ್ದು, ಇದು …

ಎಡರಂಗ ಸರಕಾರ ಜನರನ್ನು ಸಾಲದ ಕೂಪಕ್ಕೆ ತಳ್ಳಿದೆ- ನಿವೇದಿತಾ ಸುಬ್ರಹ್ಮಣ್ಯ

ಬದಿಯಡ್ಕ: ಕೃಷಿಕರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜ್ಯಾರಿಗೆ ತಂದರೂ ಎಡರಂಗ ನೇತೃತ್ವದ ಕೇರಳ ಸರಕಾರ ಅದನ್ನು ಜನರಿಗೆ ತಲುಪಿಸುವಲ್ಲಿ ಹಿಂದೇಟು ಹಾಕುತ್ತಿದೆ. ಕೇಂದ್ರದ ಯೋಜನೆಯನ್ನು ತನ್ನದೆಂದು ಸಾರಿಕೊಳ್ಳುತ್ತಾ ಜನರನ್ನು ವಂಚಿಸುವ ರಾಜ್ಯ ಸರಕಾರ ಜನರನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನಿವೇದಿತಾ ಸುಬ್ರಹ್ಮಣ್ಯ ಹೇಳಿದರು. ಎನ್‌ಡಿಎ ಬದಿಯಡ್ಕ ಈಸ್ಟ್ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಜರಗಿದ ಜನಪಂಚಾಯತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ನಾರಾಯಣ ಭಟ್ …

ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೆಯರ್  ಸಹಕಾರಿ ಸಂಘ ವಾರ್ಷಿಕ ಮಹಾಸಭೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೆಯರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕರ್ಮಂತೋಡಿಯಲ್ಲಿ ಜರಗಿದ್ದು, ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಕಾಡಗಂ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೆ. ಶಂಕರನ್, ಪಂ. ಸದಸ್ಯರಾದ ಎಂ. ತಂಬಾನ್, ಪ್ರಸೀಜ, ಸತ್ಯವತಿ, ಮಾಜಿ ಅಧ್ಯಕ್ಷರಾದ ವಿ. ಕುಂಞಿರಾಮನ್ ನಾಯರ್, ಪಿ. ಚಂದ್ರನಾಯರ್ ಆಡಳಿತ ಸಮಿತಿ ಸದಸ್ಯರು ಮಾತನಾಡಿದರು. ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿರುವ ಅಶ್ರಫ್‌ರ ಚಿಕಿತ್ಸೆಗಾಗಿ ಆಡಳಿತ ಸಮಿತಿ, ನೌಕರರ ಸಹಾಯಧನವನ್ನು ಚಿಕಿತ್ಸಾ ಸಮಿತಿ ಅಧ್ಯಕ್ಷ ಸಿಜಿ ಮ್ಯಾಥ್ಯುರಿಗೆ ಹಸ್ತಾಂತರಿಸಲಾಯಿತು. …

ಬಂದ್ಯೋಡಿನಲ್ಲಿ ಬಿಜೆಪಿಯಿಂದ ಜನ ಪಂಚಾಯತ್ ಸಾರ್ವಜನಿಕ ಸಭೆ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜನಪಂಚಾAiÀiತ್, ಸಾರ್ವಜನಿಕ ಸಭೆ ಬಂದ್ಯೋಡ್‌ನಲ್ಲಿ ಜರುಗಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಬಾಬು ಉದ್ಘಾಟಿಸಿ, ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳನ್ನು ವಿವರಿಸಿ, ಕೇರಳ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ,ಕೊಳಾರು ಸತೀಶ್ಚಂದ್ರ ಭಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಜಿಲ್ಲಾಸಮಿತಿ ಸದಸ್ಯರಾದ ಬಾಬು ಕೆ,ಜಯಂತಿ ಶೆಟ್ಟಿ, …