ಡಿವೈಎಸ್‌ಪಿ ಸಿಬಿ ಥೋಮಸ್‌ರ ತಂದೆ ಎ.ಎಂ. ಥೋಮಸ್ ನಿಧನ

ಕಾಸರಗೋಡು: ಕಾಸರಗೋಡು ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ ಸಿಬಿ ಥೋಮಸ್‌ರ ತಂದೆ ವೆಳ್ಳರಿಕುಂಡ್ ಚುಳ್ಳಿ ಅರಕ್ಕಲ್ ಎ.ಎಂ. ಥೋಮಸ್ (೮೨) ನಿಧನಹೊಂದಿ ದರು. ಮೃತರು ಪತ್ನಿ ಮುಕ್ಕುಳಿ ಮಣ್ಣಾಲಯ ಕುಟುಂಬ ಸದಸ್ಯ ಲೀಲಮ್ಮ ಥೋಮಸ್, ಇತರ ಮಕ್ಕಳಾದ ಫಾದರ್ ಟೋಮ್ ಅರಕ್ಕಲ್, ಸಿ.ಎಂ.ಐ ಜಗದಲ್ ಪುರ್ ಡೋಲಿ ರೋಯ್, ಕರುವಂಬಾಲ್ ಸಚಿ ಥೋಮಸ್, ಅಳಿಯ ಮತ್ತು ಸೊಸೆಯಂದಿರಾದ ರೋಯ್ ಪುಳಕ್ಕಲ್ ಸಜಿ ಮೋಳ್ ಲುಕೋಸ್, ಪನಚ್ಚಿಕ್ಕಲ್ ಎಲಿಜಬೆತ್ತ್ ಜೇಕಬ್, ಪನತ್ತೋಟಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಾಪತ್ತೆಯಾದ ಮೀನು ಕಾರ್ಮಿಕನ ಮಾಹಿತಿ ಅಲಭ್ಯ: ಶ್ವಾನದಳದಿಂದ ಶೋಧ

ಮಂಜೇಶ್ವರ: ಕಳೆದ ಆರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ರೋಷನ್ ಮೊಂತೆರೋ (೪೨)ರ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ.  ನಿನ್ನೆ ಶ್ವಾನದಳವನ್ನು ಕರೆತಂದು ಶೋಧ ನಡೆಸಲಾಗಿದೆ. ಮನೆ ಬಳಿಯ ಸಮುದ್ರ ಕಿನಾರೆಯಲ್ಲಿ  ಶೋಧ ನಡೆಸಿದ್ದು ಆದರೆ ಯಾವುದೇ ಸುಳಿವು ಸಂಗ್ರಹಿಸಲಾಗಲಿಲ್ಲ. ಕಳೆದ ಶನಿವಾರ ರಾತ್ರಿ ೧೧.೪೫ರ ಬಳಿಕ ರೋಷನ್ ಕ್ರಾಸ್ತ ಮನೆಯಿಂದ ನಾಪತ್ತೆಯಾಗಿದ್ದರು. ಮೊಬೈಲ್, ಪರ್ಸ್, ಚಪ್ಪಲಿ, ಉಂಗುರ ಮೊದಲಾದವುಗಳನ್ನು  ಮನೆಯಲ್ಲಿರಿಸಲಾಗಿದೆ. ಆದಿತ್ಯವಾರದಿಂದಲೇ ಅವರಿಗಾಗಿ ಶೋಧ ಆರಂಭಿಸಲಾಗಿದೆ. ಮಂಜೇಶ್ವರ ಪೊಲೀಸರು ಹಾಗೂ …

ಅಸೌಖ್ಯದಿಂದ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿದ್ದ ಬಸ್ ಕಾರ್ಮಿಕ ಸಾವು

ಮಾನ್ಯ: ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಖಾಸಗಿ ಬಸ್ಸು ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮಾನ್ಯದ ಲಕ್ಷಂವೀಡ್ ಕಾಲನಿಯ ನಾರಾಯಣ- ಗಿರಿಜಾ ದಂಪತಿಯ ಪುತ್ರ ಅಭಿಲಾಷ್ ಎಂ.(೨೯) ಸಾವನ್ನಪ್ಪಿದ ಯುವಕ. ಇವರು ಕಾಸರಗೋಡು -ಆಲಂಪಾಡಿ- ಮಾನ್ಯ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿದ್ದರು.  ಅಸೌಖ್ಯದ ನಿಮಿತ್ತ ಅವರನ್ನು  ಕಾಸರಗೋಡಿನ ಆಸ್ಪತ್ರೆಯಲ್ಲೂ, ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಅವರು ಕೊನೆಯು ಸಿರೆಳೆದರು. ಮೃತದೇಹವನ್ನು ಇಂದು ಬೆಳಿಗ್ಗೆ ಊರಿಗೆ ತರಲಾಯಿತು.  ಮೃತರು …

ಅನಧಿಕೃತ ಮೀನುಗಾರಿಕೆ ಎರಡು ಬೋಟು ವಶ, ಐದು ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಕೇರಳದ ವ್ಯಾಪ್ತಿಗೆ ಒಳಪಟ್ಟ ಸಮುದ್ರ ಪ್ರದೇಶದಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿ ಕೆಯಲ್ಲಿ ತೊಡಗಿದ್ದ ಕರ್ನಾಟಕದ ಎರಡು ಮೀನುಗಾರಿಕಾ  ದೋಣಿಗಳನ್ನು ರಾಜ್ಯ ಮೀನುಗಾರಿಕಾ ಇಲಾಖೆ, ಮರೈನ್ ಎನ್‌ಫೋರ್ಸ್‌ಮೆಂಟ್ ಮತ್ತು ಕರಾವಳಿ ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಲಾದ ಈ ಎರಡು ಬೋಟ್‌ಗಳಿಗೆ ಕಾನೂನು ಪ್ರಕಾರವಾದ ದಾಖಲು ಪತ್ರಗಳಾಗಲೀ, ಸಮುದ್ರದಡ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಅಗತ್ಯದ ದಾಖಲು ಪತ್ರಗಳಾಗಲಿ ಹೊಂದಿರಲಿಲ್ಲ. ಆದ್ದರಿಂದ ಕೇರಳ ಸಮುದ್ರ ಮೀನು ಗಾರಿಕಾ ನಿಯಂತ್ರಣ ಕಾನೂನು ಪ್ರಕಾರ ಈ …

೯ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ೪೧ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಒಂಭತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರಾದ ಸಿ. ದೀಪು ಅವರು ಪೋಕ್ಸೋ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೪೧ ವರ್ಷ ಸಜೆ ಹಾಗೂ ೨೧೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಂಬಳೆಗೆ ಸಮೀಪದ ಪೆರ್ಣೆ ಎಡನಾಡಿನ ಗೋಪಾಲಕಷ್ಣ (೬೭) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳು, ಹತ್ತು ದಿನಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ …

ಕಣ್ಣೂರಿನಲ್ಲಿ ಬೃಹತ್ ಮಾದಕದ್ರವ್ಯ ಬೇಟೆ: ಗಾಯಕಿ ಸೇರಿದಂತೆ ನಾಲ್ವರ ಸೆರೆ

ಕಣ್ಣೂರು: ಕಣ್ಣೂರಿನಲ್ಲಿ ಪೊಲೀಸರು ಬೃಹತ್ ಮಾದಕದ್ರವ್ಯ ಬೇಟೆ ನಡೆಸಿದ್ದು, ಅದಕ್ಕೆ ಸಂಬಂಧಿಸಿ ಗಾಯಕಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಿಂದ ೧೬೬.೨೧ ಗ್ರಾಂ ಎಂಡಿಎಂಎ, ೧೧೧.೮ ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು ೩ ಮೊಬೈಲ್ ಫೋನ್‌ಗಳನ್ನು ಪೊಲೀಸರು  ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಣ್ಣೂರು ಪುದಿಯತೆರುವಿನ ಪಿ.ಎ. ರಿಸ್ವಾನ್ (೨೨), ಕಣ್ಣೂರು ಸಿಟಿಯ ವರಕಾಡತ್ ದಿಲ್ಶಾದ್ (೩೦), ಹೋಟೆಲ್ ಮಾಲಕ ಯಾಸಿರ್ (೩೦) ಮತ್ತು  ಗಾಯಕಿ  ಮರಕ್ಕಾಕಂಡಿ ತೈಯ್ಯಿಲ್ ನಿವಾಸಿ ಅಪರ್ಣಾ ಅನೀಶ್ (೨೩) ಎಂಬಿವರು ಬಂಧಿತ ಆರೋಪಿಗಳಾಗಿ …

ಶಾಲೆಗೆ ನುಗ್ಗಿ ಅಡುಗೆ ಮಾಡಿ ತಿಂದು ತೇಗಿ ಹಿಂತಿರುಗಿದ ಕಳ್ಳ

ಕಾಸರಗೋಡು: ಶಾಲೆಗೆ ಕಳವಿಗೆಂದು ನುಗ್ಗಿದ ಕಳ್ಳ ಅಲ್ಲಿ ಕದಿಯಲು  ಏನೂ ಸಿಗದಿದ್ದಾಗ ಅಲ್ಲೇ ಅಡುಗೆ ಮಾಡಿ ತಿಂದು ತೇಗಿ ಹಿಂತಿರುಗಿದ ಸ್ವಾರಸ್ಯಕರ ಘಟನೆ ನಡೆದಿದೆ.ತೃಕ್ಕರಿಪುರ ಕುಲೇರಿ ಜಿಎಲ್‌ಪಿ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಶಾಲೆಗೆ ನುಗ್ಗಿದ ಕಳ್ಳರು ಅಲ್ಲಿ ಲ್ಯಾಪ್ ಟಾಪ್ ಇದ್ದರೂ ಅದನ್ನು ಅಲ್ಲೇ ಉಪೇಕ್ಷಿಸಿ  ಹಣಕ್ಕಾಗಿ ಹುಡುಕಾಟ ನಡೆಸಿದ್ದನ. ಆದರೆ ಅದು ಲಭಿಸಲಿಲ್ಲ. ಕೊನೆಗೆ ಆತ ಶಾಲಾ ಮಕ್ಕಳಿಗೆ  ಆಹಾರ ತಯಾರಿಸಲೆಂದು ತಂದಿರಿಸಲಾಗಿದ್ದ ಸಾಮಗ್ರಿಗಳನ್ನು ಉಪಯೋಗಿಸಿ ಅಲ್ಲೇ ಅಡುಗೆ ಮಾಡಿದ ಬಳಿಕ ಅದನ್ನು ತಿಂದು …

ನವಕೇರಳ ಸಭೆ ಯಾತ್ರೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಜ್ಯ ಮಾನವ ಹಕ್ಕು ಆಯೋಗ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಯಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಿಸುವಂತೆ ಮಾಡಿದ ಕ್ರಮದ ವಿರುದ್ಧ ರಾಜ್ಯ ಬಾಲಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ನವಕೇರಳ ಯಾತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಿಸುವಂತೆ ತಿರೂರಂಗಾಡಿ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಅವರು ನಿರ್ದೇಶ ಹೊರಡಿಸಿದ್ದರು. ಅದರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇದರ ಹೊರತಾಗಿ ಮಕ್ಕಳನ್ನು ಪಾಲ್ಗೊಳಿಸಿದ ಬಗ್ಗೆ ಮಲಪ್ಪುರಂ ಶಿಕ್ಷಣ ಉಪ ನಿರ್ದೇಶಕರೂ, ಡಿಇಒರಿಂದ ಸ್ಪಷ್ಟೀಕರಣ ಕೇಳಿದ್ದಾರೆ. ಒಂದು ವಾರದೊಳಗಾಗಿ ಸ್ಪಷ್ಟೀಕರಣ ನೀಡುವಂತೆ …

ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆಯಲೆತ್ನ: ಇಬ್ಬರು ಸೆರೆ

ಕೊಚ್ಚಿ: ನೆಡುಂಬಾಶೇರಿಯಿಂದ ಬೆಂಗಳೂರಿಗೆ ತೆರಳುವ ವಿಮಾನದ ಎಮರ್ಜೆನ್ಸಿ ಬಾಗಿಲನ್ನು ಇಬ್ಬರು ವ್ಯಕ್ತಿಗಳು ತೆರೆಯಲು ಯತ್ನಿಸಿದ ಘಟನೆ ನಡೆದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಈ ಸಂಬಂಧ ಕರ್ನಾಟಕ ನಿವಾಸಿಗಳಾದ ರಾಮುಜಿ ಕೋರೆಯಿಲ್, ರಮೇಶ್ ಕುಮಾರ್ ಎಂಬಿವರನ್ನು ಸೆರೆ ಹಿಡಿಯಲಾಗಿದೆ. ವಿಮಾನ ನಿಲ್ದಾಣ ಅಧಿಕಾರಿಗಳು ಈ ಇಬ್ಬರನ್ನು ನೆಡುಂಬಾಶೇರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪಂಪಾದಲ್ಲಿ ದೈನಂದಿನ ೨೪ ತಾಸುಗಳ ತನಕ ಇರುಮುಡಿ ಕಟ್ಟು ಸೌಕರ್ಯ

ಶಬರಿಮಲೆ: ಶಬರಿಮಲೆ ತೀರ್ಥಾಟನೆಗೆ ಹೋಗುವ ಭಕ್ತರಿಗೆ ಅಗತ್ಯದ ‘ಇರುಮುಡಿ ಕಟ್ಟು’ ಲಭಿಸುವಂತೆ ಮಾಡುವ ಸೌಕರ್ಯ ವನ್ನು ಪಂಪಾದಲ್ಲಿ ಮುಜರಾಯಿ (ದೇವಸ್ವಂ) ಮಂಡಳಿ ಏರ್ಪಡಿಸಿದೆ. ಇದಕ್ಕೆ ದೇವಸ್ವಂ ಮಂಡಳಿಯ ಕೌಂಟರ್‌ನಲ್ಲಿ ೩೦೦ ರೂ. ಪಾವತಿಸಬೇಕು. ಇರುಮುಡಿ ತುಪ್ಪ ತುಂಬಿಸಿದ ತೆಂಗಿನಕಾಯಿ ತುಪ್ಪ, ಅಕ್ಕಿ ಮತ್ತಿತರ ಅಗತ್ಯದ ಹರಕೆ ಸಾಮಗ್ರಿಗಳು ಇರುಮುಡಿ ಕಟ್ಟದಲ್ಲಿ ಒಳಗೊಳ್ಳಲಿದೆ. ಆದರೆ ಇರುಮುಡಿ ಯನ್ನು ತಲೆಮೇಲೆ ಕಟ್ಟಲು ಅಗತ್ಯದ ಬಟ್ಟೆಯನ್ನು ಭಕ್ತರೇ ಹೊಂದಿರಬೇಕು. ಇರುಮುಡಿ ತುಂಬಿಸಲು ಪಂಪಾದಲ್ಲಿ ಮೂವರು ಅರ್ಚಕರನ್ನು ನೇಮಿಸಲಾಗಿದೆ. ಇರುಮುಡಿ ಯೊಂ ದಿಗೆ …