ನಾಲ್ಕು ವಿಭಾಗಗಳ ಕಲ್ಯಾಣ ಪಿಂಚಣಿ ಹೆಚ್ಚಳ
ಕಾಸರಗೋಡು: ರಾಜ್ಯದಲ್ಲಿ ನಾಲ್ಕು ವಿಭಾಗಗಳ ಕಲ್ಯಾಣ ಪಿಂಚಣಿಗಳನ್ನು ೧೬೦೦ರೂ.ನಂತೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ತಿಳಿಸಿದ್ದಾರೆ. ಇದರಂತೆ ವಿಶ್ವಕರ್ಮ, ಸರ್ಕಸ್, ಅನಾರೋಗ್ಯ ಸ್ಥಿತಿಯಲ್ಲಿರುವ ಕ್ರೀಡೆ ಮತ್ತು ಕಲಾಗಾರರಿಗೆ ನೀಡಲಾಗುವ ಕಲ್ಯಾಣ ಪಿಂಚಣಿ ೧೬೦೦ ರೂ.ನಂತೆ ಹೆಚ್ಚಿಸಲಾಗಿದೆ. ಈ ನಾಲ್ಕು ವಿಭಾಗಗಳಲ್ಲಿ ಅನಾರೋಗ್ಯ ಸ್ಥಿತಿಯಲ್ಲಿರುವ ಕಲಾಗಾರರಿಗೆ ಈಗ ೧೦೦೦ ರೂ.ನಂತೆ ಕಲ್ಯಾಣ ಪಿಂಚಣಿ ಲಭಿಸುತ್ತದೆ. ಅನಾರೋಗ್ಯಪೀಡಿತ ಕ್ರೀಡಾ ಪಟುಗಳಿಗೆ ತಲಾ ೧೩೦೦ ರೂ.ನಂತೆಯೂ, ಸರ್ಕಸ್ ಕಲಾವಿಧರಿಗೆ ತಲಾ ೧೨೦೦ ರೂ. ಹಾಗೂ ವಿಶ್ವಕರ್ಮ ಪಿಂಚಣಿಯಾಗಿ ತಲಾ ೧೪೦೦ …