ಕುಂಬಳೆಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಾಳೆ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್  ಮುಸ್ಲಿಂ ಲೀಗ್‌ನ  ದುರಾಡಳಿತಕ್ಕೆದುರಾಗಿ,  ಕೇರಳ ರಾಜ್ಯದ ಎಡರಂಗ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ, ಮುಸ್ಲಿಂ ಲೀಗ್-ಕಾಂಗ್ರೆಸ್ ಪಕ್ಷಗಳ ಮತೀಯ ನೀತಿಗೆದುರಾಗಿ ಹಾಗೂ  ಕುಂಬಳೆ ಪೇಟೆಯ ಅಭಿವೃದ್ಧಿ ಹೆಸರಲ್ಲಿ ಜನರು ದಿನನಿತ್ಯ ಅನುಭವಿಸುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಯಪಡಿಸಲು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಸಭೆ ನಾಳೆ ಸಂಜೆ ೪ ಗಂಟೆಗೆ  ಕುಂಬಳೆ ಪೇಟೆಯಲ್ಲಿ ನಡೆಯಲಿದೆ ಯೆಂದು   ಸಂಬಂಧಪಟ್ಟ ವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾ ರ್ಯದರ್ಶಿ ಶ್ರೀಕಾಂತ್  ಮುಖ್ಯ …

ಶಾಲೆಗಳಲ್ಲಿ ಮಧ್ಯಾಹ್ನದೂಟ: ಕೇಂದ್ರದಿಂದ ೧೦೮ ಕೋಟಿ ರೂ. ಮಂಜೂರು

ತಿರುವನಂತಪುರ: ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ದೂಟ ವಿತರಣಾ ಯೋಜನೆಗಾಗಿ ಕೇಂದ್ರ ಸರಕಾರ ೧೦೮.೩೪ ಕೋಟಿ ರೂ. ಮಂಜೂರು ಮಾಡಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ಮಧ್ಯಾಹ್ನದೂಟ ಯೋಜನೆ ಬಗ್ಗೆ ಲೆಕ್ಕಪತ್ರ ನೀಡಿಲ್ಲವೆಂಬ ರೀತಿಯ ಪ್ರಚಾರ ಸರಿಯಲ್ಲ. ಈ ಯೋಜನೆ ಪ್ರಕಾರ ಕೇಂದ್ರ ಸರಕಾರದ ಪಾಲು ವತಿಯಿಂದ ಒಂದನೇ ಕಂತು ರೂಪದಲ್ಲಿ ಶೇ. ೬೦ ಮತ್ತು ದ್ವಿತೀಯ ಕಂತು ಆಗಿ ಶೇ. ೪೦ರಷ್ಟು ಹಣ ಲಭಿಸಬೇಕಾಗಿದೆ. ಆದರೆ ಈ ಬಾರಿ ಅದನ್ನು ತಲಾ …

ರಾಜ್ಯದಲ್ಲಿ ಕೊನೆಯ ಕಮ್ಯುನಿಸ್ಟ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್- ಯುವಮೋರ್ಚಾ

ಮಂಜೇಶ್ವರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸುವ ನವಕೇರಳ ಸಭೆಯಂಗವಾಗಿರುವ ಯಾತ್ರೆ ಅವರ ಕೊನೆಯ ಯಾತ್ರೆಯಾಗಿರಲಿದೆ ಎಂದು ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಪುಲ್ ಕೃಷ್ಣ ಅಭಿಪ್ರಾಯ ಪಟ್ಟರು. ಅಲ್ಪತನ, ಜಂಬದಿಂದ ರಾಜ್ಯದ ಕೊನೆಯ ಕಮ್ಯುನಿಸ್ಟ್ ಆಡಳಿತ ಇವರದ್ದಾಗಿರುತ್ತದೆ ಎಂದು ಅವರು ನುಡಿದರು. ಮಜೀರ್‌ಪಳ್ಳದಲ್ಲಿ ಬಿಜೆಪಿ ವರ್ಕಾಡಿ ಪಂ. ಸಮಿತಿ ಆಯೋಜಿಸಿದ್ದ ಜನಪಂಚಾಯತ್ ಸಾರ್ವಜನಿಕ ಸಭೆಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರದ ಶಾಸಕ ದುಬಾಯಿಯ ಶಾಸಕರಾಗಿ ಬದಲಾಗಿದ್ದಾರೆ ಎಂದವರು ತಿಂಗಳಲ್ಲಿ ೧೫ ದಿನ ವಿದೇಶದಲ್ಲಿರುವ ಶಾಸಕರಾಗಿದ್ದಾರೆ ಎಂದು …

ಸಹಕಾರ ಭಾರತಿಯಿಂದ ಸಹಕಾರಿ ಸಪ್ತಾಹ

ಕಾಸರಗೋಡು: ಸಹಕಾರ ಭಾರತಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ೭೦ನೆಯ ಅಖಿಲ ಭಾರತ ಸಹಕಾರಿ ವಾರಾಚರಣೆ ಕಾರ್ಯಕ್ರಮವು ಕಾಸರಗೋಡು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತಪ್ಪ ಮವಾರ್ ಅಧ್ಯಕ್ಷತೆ ವಹಿಸಿದರು. ಸಹಕಾರ ಭಾರತಿ ದಕ್ಷಿಣ – ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ ಎಸ್ ಆರ್ ಸತೀಶ್ ಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದರು. ಸಹಕಾರ ಭಾರತಿ …

ಹಿತ್ತಿಲಲ್ಲಿ ಕಡಿದು ಹಾಕಿದ್ದ ಮರಕ್ಕೆ ಬೆಂಕಿ

ಮಂಜೇಶ್ವರ: ಹಿತ್ತಿಲಿನಲ್ಲಿ ಕಡಿದು ಹಾಕಲಾಗಿದ್ದ ಮರಕ್ಕೆ ಅಕಸ್ಮಾತ್ ಬೆಂಕಿ ತಗಲಿದ್ದು, ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿಯನ್ನು ನಂದಿಸಿದೆ. ಸಂಭವಿಸಬಹುದಾದ ಅಪಾಯ ತಪ್ಪಿಸಿದೆ.. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಕಾಜೂರು ನಿವಾಸಿ ಅಶೋಕ್ ಕೆ .ಟಿ ಎಂಬವರ ಹಿತ್ತಿಲಿನಲ್ಲಿ ಕಡಿದು ಹಾಕಲಾದ ಅಕೇಶಿಯ ಮರಕ್ಕೆ ನಿನ್ನೆ ಮಧ್ಯಾಹ್ನ ಬೆಂಕಿ ತಗಲಿದೆ. ಕೂಡಲೇ ಉಪ್ಪಳದ ಅಗ್ನಿಶಾಮಕ ದಳದ ಸ್ಟೇಷನ್ ಆಫೀಸರ್ ರಾಜೇಶ್.ಸಿ.ಪಿ ಹಾಗೂ ಸೀನಿಯರ್ ಆಫೀಸರ್ ಸುನಿಲ್ ಕುಮಾರ್.ಕೆ.ವಿ ನೇತೃತ್ವದಲ್ಲಿ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ.

ಕುಂಬಳೆ: ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಅಳವಡಿಕೆ

ಕುಂಬಳೆ:  ಕುಂಬಳೆಯಲ್ಲಿರುವ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ಮೆಡಿಫೈತ್ ಟ್ರಸ್ಟ್‌ನ ಸಹಾಯದೊಂದಿಗೆ ಸಿಟಿ ಸ್ಕ್ಯಾನ್ ವ್ಯವಸ್ಥೆ ಅಳವಡಿಸಲಾಯಿತು. ಇದನ್ನು  ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್, ಕೇರಳ ತುಳು ಅಕಾ ಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಆಸ್ಪತ್ರೆ ಸಂಘದ ಅಧ್ಯಕ್ಷ ರಘುದೇವನ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಎಂ. ಸುಮತಿ, ಸಹಕಾರಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆ. ನಾಗೇಶ್, ಡಾ| ಮಹಮ್ಮದ್ ಶರೀಫ್, ಡಾ| ಸರ್ವೇಶ್ವರ ಭಟ್, ನಿರ್ದೇಶಕರಾದ ಟಿ.ಎಂ.ಎ. ಕರೀಂ, ಶಂಕರನ್, ಭರತ್ ಕುಮಾರ್, ಜಯಚಂದ್ರನ್ ಶುಭ ಕೋರಿ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಕಿರೀಟ

ಪೆರ್ಲ: ಪೇರಾಲ್ ಸರಕಾರಿ ಎಲ್.ಪಿ ಶಾಲೆಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯು ಹೈಯರ್ ಸೆಕೆಂಡರಿ ವಿಭಾಗದಲ್ಲಿ ೧೮೧ ಅಂಕದೊAದಿಗೆ ಚಾಂಪಿಯನ್ ಪಟ್ಟ ಪಡೆದಿದೆ.ಗ್ರೂಪ್ ಸ್ಪರ್ಧೆಗಳಾದ ತಿರುವಾದಿರ, ದಫ್ ಮುಟ್,ನಾಡನ್ ಪಾಟ್, ಗ್ರೂಪ್ ಡ್ಯಾನ್ಸ್, ವಂಜಿ ಪಾಟ್, ಒಪ್ಪನ, ಚೆಂಡೆ ಮೇಳ ಹಾಗೂ ಮೂಕಾಭಿನಯದಲ್ಲಿ ಎ ಗ್ರೇಡ್, ಇಂಗ್ಲಿಷ್ ಸ್ಕಿಟ್, ಕೋಲ್ಕಳಿ, ಎಂಬೀ ಸ್ಪರ್ಧೆಗಳಲ್ಲಿ ಬಿ ಮತ್ತು ಸಿ ಗ್ರೇಡ್ ಲಭಿಸಿದೆ, ವೈಯಕ್ತಿಕ ಸ್ಪರ್ಧೆಗಳಾದ ಉರ್ದು ಕಥಾ ರಚನೆ, …

ಕಾರು ತಡೆದು ನಿಲ್ಲಿಸಿ ನವದಂಪತಿಗೆ ಆಕ್ರಮಣ: ಮೂವರು ಆಸ್ಪತ್ರೆಯಲ್ಲಿ

ಕುಂಬಳೆ: ಕಾರು ತಡೆದು ನಿಲ್ಲಿಸಿ ನವದಂಪತಿ ಹಾಗೂ ವರನ  ಸಹೋದರನಿಗೆ  ಆಕ್ರಮಿಸಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂ ಡ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಸಮೀಪದ ಅಬ್ದುಲ್ ಲತೀಫ್, ಸಹೋದರ ಮುಹಮ್ಮದ್ ಅಲ್ತಾಫ್ (೨೨), ಪತ್ನಿ ಡಿ.ಎಂ. ಶಮ್ನ (೨೦) ಎಂಬಿವರನ್ನು  ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ಸಂಜೆ ಉಪ್ಪಳದಲ್ಲಿ ನಡೆದ ಘಟನೆ ಕುರಿತು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು ಈ ರೀತಿ ತಿಳಿಸುತ್ತಿದ್ದಾರೆ-“ಗಲ್ಫ್ ಉದ್ಯೋಗಿಯಾದ ಮುಹಮ್ಮದ್ ಅಲ್ತಾಫ್ ಹಾಗೂ ಚೌಕಿ ನಿವಾಸಿಯಾದ ಶಮ್ನರ ಮದುವೆ  ಮೂರು …

ಆಸ್ಪತ್ರೆ ಲಿಫ್ಟ್‌ನಲ್ಲಿ  ಹತ್ತರ ಹರೆಯದ  ಬಾಲಕಿಗೆ ಕಿರುಕುಳ ನೀಡಲೆತ್ನ

ಕುಂಬಳೆ:  ತಾಯಿಯೊಂ ದಿಗೆ  ವೈದ್ಯರನ್ನು ಕಾಣಲು ಹೋದ ೧೦ರ ಹರೆಯದ ಬಾಲಕಿಗೆ ಆಸ್ಪತ್ರೆಯ ಲಿಫ್ಟ್ ನೊಳಗೆ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. ತಾಯಿ ಔಷಧಿ ಖರೀದಿಸಲೆಂದು ಹೋದ ಸಂದರ್ಭದಲ್ಲಿ  ಬಾಲಕಿಯ ಸಮೀಪಕ್ಕೆ ತಲುಪಿದ ಯುವಕ   ಲಿಫ್ಟ್ ತೋರಿಸಿಕೊಡು ವುದಾಗಿ ತಿಳಿಸಿ ಆಕೆಯನ್ನು ಕರೆದೊಯ್ದು ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತಾಯಿ ಔಷಧಿ ಖರೀದಿಸಿ ಮರಳಿ …

ನವಕೇರಳ ಸಭೆ : ಯಾತ್ರೆ ಮಧ್ಯೆ ಸಿಎಂ ವಿರುದ್ಧ ಕಪ್ಪು ಪತಾಕೆ ಪ್ರದರ್ಶನ; ಯೂತ್ ಕಾಂಗ್ರೆಸ್, ಕೆ.ಎಸ್.ಯುನ ಏಳು ಮಂದಿಗೆ ಮಾರಣಾಂತಿಕ ಹಲ್ಲೆ

ಕಣ್ಣೂರು: ಜಿಲ್ಲೆಯ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ನವಕೇರಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ತಳಿಪರಂಬಕ್ಕೆ ಹೋಗುತ್ತಿರುವ ದಾರಿ ಮಧ್ಯೆ ಪಳಯಂಗಾಡಿ ಎರಿಪುರಂ ಕೆ.ಎಸ್.ಇ.ಬಿ ಕಚೇರಿ ಬಳಿಯ ರಸ್ತೆ ಬದಿ ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯುನ ಏಳು ಮಂದಿ ಕಾರ್ಯಕರ್ತರು ನಿನ್ನೆ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಮುಖ್ಯಮಂತ್ರಿ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಆ ವೇಳೆ ಅಲ್ಲಿದ್ದ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಸಿಪಿಎಂ ಕಾರ್ಯಕರ್ತರು …