ಮುಳ್ಳೇರಿಯ, ಬೆಳ್ಳೂರು ಮೂಲಕ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ಮುಳ್ಳೇರಿಯ: ಕಾಸರಗೋಡಿನಿಂದ ಮುಳ್ಳೇರಿಯ, ಬೆಳ್ಳೂರು ಮೂಲಕ ಕರ್ನಾಟಕದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಏರ್ಪಡಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ ಗೋಳಿಕಟ್ಟೆ ಅವರು   ಕಾಸರಗೋಡಿನಲ್ಲಿ ನಡೆದ ನವಕೇರಳ ಸಭಾದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಮುಳ್ಳೇರಿಯ-ಬೆಳ್ಳೂರು ರೂಟ್‌ನಲ್ಲಿ ಪುತ್ತೂರಿಗೆ ಯಾವುದೇ ಬಸ್ ಸಂಚಾರವಿಲ್ಲ. ಮುಳ್ಳೇರಿಯ ಭಾಗದಿಂದ ಪ್ರತಿದಿನ ಹಲವು ಮಂದಿ ವಿವಿಧ ಅಗತ್ಯಗಳಿಗಾಗಿ ಪುತ್ತೂರಿಗೆ ತೆರಳುವವರಿದ್ದಾರೆ. ಅವರು ಇದೀಗ ತೀವ್ರ ಸಂಚಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಬೆಳ್ಳೂರು, ಕಾರಡ್ಕ, ಮುಳಿಯಾರು, ಕುಂಬ್ಡಾಜೆ ಪಂಚಾಯತ್‌ಗಳಲ್ಲಿ ಹಲವು ಮಂದಿ ಎಂಡೋಸಲ್ಫಾನ್ …

ವಾಸು ಬಾಯಾರ್‌ಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಾಸರಗೋಡು:  ಹಿರಿಯ ರಂಗನಟ, ಯಕ್ಷಗಾನ ಕಲಾವಿದ, ಚಿತ್ರನಟ ವಾಸು ಬಾಯಾರ್ ಅವರ ಸಾಧನೆಗಳನ್ನು ಗುರುತಿಸಿ ಅವರಿಗೆ  ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ೨೦೨೩ ನೀಡಿ ಗೌರವಿಸಲಾ ಯಿತು. ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ ದಲ್ಲಿ ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಯೋಜಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಸಾಧ್ವಿ ಶ್ರೀ ಮಾತಾನಂದಮಯಿ ಒಡಿಯೂರು ಹಾಗೂ ಮಾಜಿಕೇಂದ್ರ ಸಚಿವ, ಸಂಸದ ರಮೇಶ್ ಚಂದಪ್ಪ ಜಿಗಜಿಣಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು ಗ.ಸಾ.ಸಾ ಅಕಾಡೆಮಿ ಸಂಸ್ಥಾಪಕ …

ಮಹಿಳಾ- ಪುರುಷ ಕಬಡ್ಡಿ ಚಾಂಪ್ಯನ್‌ಶಿಪ್

ಕಾಸರಗೋಡು: ದಶಂಬರ್ ೩ರಿಂದ ಕೊಲ್ಲಂನಲ್ಲಿ ನಡೆಯಲಿರುವ ರಾಜ್ಯ ಸೀನಿಯರ್ ಕಬಡ್ಡಿ ಚಾಂಪ್ಯನ್‌ಶಿಪ್‌ಗಿರುವ ಜಿಲ್ಲಾ ತಂಡವನ್ನು ಆಯ್ಕೆ ಮಾಡಲು ಜಿಲ್ಲಾ ಪುರುಷ- ಮಹಿಳಾ ಸೀನಿಯರ್ ಕಬಡ್ಡಿ ಚಾಂಪ್ಯನ್‌ಶಿಪ್ ಈ ತಿಂಗಳ ೨೭ರಂದು ಪಾಲಕುನ್ನುನಲ್ಲಿ ನಡೆಯಲಿದೆ. ಭಾಗವಹಿಸುವ ತಂಡಗಳು ಅಂದು ಬೆಳಿಗ್ಗೆ ೧೦ರ ಮುಂಚಿತ ನೋಂದಾಯಿಸಬೇಕೆಂದು ಆಟಗಾರರ ಭಾರ ೮೫ ಕಿಲೋಗಿಂತ ಹೆಚ್ಚಾಗಬಾರದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ೯೭೪೭೫೨೦೩೨೫ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.

ಬಂದ್ಯೋಡಿನಲ್ಲಿ ಬಿಜೆಪಿಯಿಂದ ಜನ ಪಂಚಾಯತ್ ಸಾರ್ವಜನಿಕ ಸಭೆ ೨೫ರಂದು

ಉಪ್ಪಳ: ಕೇಂದ್ರ ಸರಕಾರದ ಯೋಜನೆಯ ವಿವರ ಮತ್ತು ಕೇರಳ ಸರಕಾರದ ಜನ ವಿರೋಧಿ ನೀತಿ, ಆಡಳಿತ ವೈಫಲ್ಯದ ವಿರುದ್ದ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಬಿಜೆಪಿ ಜನ ಪಂಚಾಯತ್ ಸಾರ್ವಜನಿಕ ಸಭೆ ಈ ತಿಂಗಳ 25ರಂದು ಸಂಜೆ 4ಗಂಟೆಗೆ ಬಂದ್ಯೋಡಿನಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಉಪಾಧ್ಯಾಕ್ಷ ಅಡ್ವಕೇಟ್ ಪ್ರಕಾಶ್ ಬಾಬು ಪ್ರಧಾನ ಭಾಷಣ ಮಾಡುವರು.ಪಕ್ಷದ ಕಾರ್ಯಕರ್ತರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊ ಳಿಸಬೇಕೆಂದು ಬಿಜೆಪಿ ಪಂಚಾಯತ್ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಬೆಳೇರಿಯಲ್ಲಿ ಬಸ್ ತಂಗುದಾಣ ಲೋಕಾರ್ಪಣೆ

ಬೆಳ್ಳೂರು: ಬದಿಯಡ್ಕ-ಸುಳ್ಯಪದವು ರಸ್ತೆಯ ದೊಂಪತ್ತಡ್ಕ ಬೆಳೇರಿಯಲ್ಲಿ ಶಿವಾಜಿ ಫ್ರೆಂಡ್ಸ್ ಸರ್ಕಲ್ ಬಸ್ ತಂಗುದಾಣವನ್ನು ನಿರ್ಮಿಸಿದೆ. ಇದೇ ಸ್ಥಳದಲ್ಲಿ ಉದ್ಯಮಿ ಶ್ರವಣ್ ರೈ ಪಿಂಡಗ ಕೊಡುಗೆಯಾಗಿ ನೀಡಿದ ಸೋಲಾರ್ ಲ್ಯಾಂಪ್‌ನ್ನು ಸ್ಥಾಪಿಸಲಾಯಿತು. ಬಸ್ ತಂಗುದಾ ಣವನ್ನು, ದೀಪವನ್ನು ನಿನ್ನೆ ಸಂಜೆ ಲೋಕಾರ್ಪಣೆಗೊಳಿಸಲಾಯಿತು. ಕಿಶೋರ್ ಬೈಲಮೂಲೆ, ಬಾಲಚಂದ್ರ ಬೈಲಮೂಲೆ, ಪ್ರವೀಣ್ ಬೆಳೇರಿ ಮಾತನಾಡಿದರು. ಊರಿನ ಸಹೃದ ಯರ  ಸಹಕಾರದೊಂದಿಗೆ ಫ್ರೆಂಡ್ಸ್ ಸರ್ಕಲ್ ತಂಗುದಾಣವನ್ನು ನಿರ್ಮಿಸಿದೆ.

ಹಂಪಿ ನಗರಿಯಲ್ಲಿ ರಂಗ ಚೇತನದ ಚಿಣ್ಣರ ಕಲರವ

ಮಂಜೇಶ್ವರ: ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹಂಪಿ ಇಲ್ಲಿ ಜರಗಿದ ಅಖಿಲ ಭಾರತ ಕಲಾ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನ ವಾಣಿ ವಿಜಯ ಹೈಸ್ಕೂಲಿನ ರಂಗ ಚೇತನ ಕಾಸರಗೋಡು ಇದರ ಚಿಣ್ಣರ ತಂಡದಿAದ ಸದಾಶಿವ ಬಾಲಮಿತ್ರ ರಚಿಸಿ ನಿರ್ದೇಶಿಸಿದ ಒಪ್ಪಂದ ನಾಟಕ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆಗುವ ಪ್ರಯೋಜನವನ್ನು, ನವೀನ ಯುಗದ ನವ್ಯ ಆಹಾರ ಪದ್ಧತಿ ತರುವ ಆರೋಗ್ಯ ಸಮಸ್ಯೆಗಳ ಸುತ್ತ ಹೆಣೆದ ‘ಒಪ್ಪಂದ’ ನಾಟಕದಲ್ಲಿ ಶರಣ್ಯ, ಸ್ವಾತಿ ಶೆಟ್ಟಿ, …

ನವಕೇರಳ ಸಭೆ: ಯುಡಿಎಫ್, ಲೀಗ್‌ನಲ್ಲಿ ಗೊಂದಲ

ಕಾಸರಗೋಡು: ನವಕೇರಳ ಸಭೆ  ಕಾಸರ ಗೋಡು ಜಿಲ್ಲೆಯ ಪರ್ಯಟನೆ ಪೂರ್ತಿ ಗೊಳಿಸಿದ ಬೆನ್ನಲ್ಲೇ ರಾಜ್ಯ ರಾಜಕೀಯ  ಗೊಂದಲದಲ್ಲಿ ಸಿಲುಕಿಕೊಂಡಿದೆ.  ಐಕ್ಯರಂ ಗದ ಘಟಕ ಪಕ್ಷಗಳಾದ  ಕಾಂಗ್ರೆಸ್, ಮುಸ್ಲಿಂಲೀಗ್‌ನಲ್ಲಿ ಆತಂಕ ತೀವ್ರಗೊಂಡಿರುತ್ತದೆ. ಸಿಪಿಐ ಕಾರ್ಯಕರ್ತರಲ್ಲ್ಲೂ ಗೊಂದಲ ಸೃಷ್ಟಿಯಾಗಿರುವುದಾಗಿ ಸೂಚನೆಯಿದೆ. ಕೊನೆಯದಾಗಿ ನವಕೇರಳ ಸಭೆಯಲ್ಲಿ ಲೀಗ್ ನೇತಾರ  ಭಾಗವಹಿಸಿರುವುದೇ ಯುಡಿಎಫ್ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ. ನವಕೇರಳ ಸಭೆಯ ಅಂಗವಾಗಿ ನಿನ್ನೆ ಬೆಳಿಗ್ಗೆ ಕಾಸರಗೋಡು ಗೆಸ್ಟ್ ಹೌಸ್‌ನಲ್ಲಿ ನಡೆದ  ಬೆಳಗ್ಗಿನ ಚರ್ಚೆಯಲ್ಲಿ ಮುಸ್ಲಿಂ ಲೀಗ್ ನೇತಾರನೂ, ಲೀಗ್ ರಾಜ್ಯ ಕೌನ್ಸಿಲ್ …

ಕೆಲಸದ ಮಧ್ಯೆ ಬಿದ್ದು ಕಲ್ಲು ಕಟ್ಟುವ ಮೇಸ್ತ್ರಿ ಮೃತ್ಯು

ಮುಳ್ಳೇರಿಯ: ನಿರ್ಮಾಣ ಕಾರ್ಮಿಕನಾಗಿದ್ದ ಕಾರಡ್ಕ ಮುಡಾಂಕುಳಂ ನಿವಾಸಿ ಕೆಲಸದ ವೇಳೆ ಬಿದ್ದು ಮೃತಪಟ್ಟರು. ಕಲ್ಲು ಕಟ್ಟುವ ಮೇಸ್ತ್ರಿಯಾಗಿದ್ದ ಮುಡಾಂಕುಳಂ ನಿವಾಸಿ ಎಂ. ನಾರಾಯಣನ್ (೬೪) ಮೃತಪಟ್ಟವರು. ಮುಂಡೋಳು ಜಂಕ್ಷನ್ ಬಳಿಯಲ್ಲಿ ಮನೆಯೊಂದರ ಮಹಡಿ ನಿರ್ಮಾಣ ವೇಳೆ ಆಯ ತಪ್ಪಿ ಶನಿವಾರ ಬಿದ್ದಿದ್ದಾರೆ. ಕೂಡಲೇ ಇವರನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಆದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ. ಮೃತರು ಪತ್ನಿ ನಳಿನಿ, ಮಕ್ಕಳಾದ ಶ್ರೀನ, ಶ್ರೀಮನೋಜ್, ಶೀಬಾ, ಅಳಿಯಂದಿರಾದ ಅಜಯನ್, ಅರುಣ್ ಕುಮಾರ್, ಸೊಸೆ ಸುಜಿಶಾ, ಸಹೋದರ …

ಕೇರಳ ನಕ್ಸಲರ ಪ್ರಧಾನ ಕೇಂದ್ರವಾಗುತ್ತಿದೆ: ಗುಪ್ತಚರ ಮುನ್ನೆಚ್ಚರಿಕೆ

ಕಾಸರಗೋಡು: ಕೇರಳ ಮಾವೋ ವಾದಿಗಳ(ನಕ್ಸಲ್) ಪ್ರಧಾನ ಕೇಂದ್ರ ವಾಗಿ ಬದಲಾಗತೊಡಗಿದೆ ಎಂದು ಕೇಂದ್ರ ಗುಪ್ತಚರ ವಿಭಾಗ ಕೇಂದ್ರ ಸರಕಾ ರಕ್ಕೆ ವರದಿ ಸಲ್ಲಿಸಿದೆ. ೨೦೨೨ ದಶಂಬರ್ ೧೮ರಂದು ಸಲ್ಲಿಸಲಾದ ವರದಿಯಲ್ಲಿ ಈ ಮುನ್ನೆಚ್ಚರಿಕೆ ನೀಡಲಾಗಿದೆ. ಕೇರಳ ಮಾತ್ರವಲ್ಲ, ನೆರೆ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿಗೂ ಈ ಮುನ್ನೆಚ್ಚರಿಗೆ ನೀಡಲಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ.  ದಕ್ಷಿಣ ಭಾರತದ ಈ ಮೂರು ರಾಜ್ಯಗಳು ಮಾತ್ರವಲ್ಲ ತೆಲಂಗಾನ ಮತ್ತು ಛತ್ತೀಸ್‌ಗಢದಲ್ಲೂ ಕೇಂದ್ರಪಡೆ ಗಳ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕಾದ ಅಗತ್ಯವಿದೆ. ನಕ್ಸಲರು …

ಬೈಕ್ ಕಳವು ಆರೋಪಿ ಸೆರೆ

ಮಂಜೇಶ್ವರ: ಕಳವುಗೈದ  ಬೈಕ್ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ದೇರಳಕಟ್ಟೆ ನಿವಾಸಿ ಹುಸೈನ್ ಸೈದ್ (೨೫) ಬಂಧಿತ ಆರೋಪಿ. ಹೊಸಬೆಟ್ಟು ಪೊಕ್ಕಿ ಎಂಬಲ್ಲಿನ ಅಬ್ದುಲ್ ಬಷೀರ್‌ರ  ಮನೆ ಬಳಿ  ನಿಲ್ಲಿಸಿದ್ದ  ಅವರ ಸಂಬಂಧಿಕರ ಬೈಕ್  ಈ ತಿಂಗಳ ೧೫ರಂದು ರಾತ್ರಿ ಕಳವಿಗೀಡಾಗಿತ್ತು. ಈಬಗ್ಗೆ ಅಬ್ದುಲ್ ಬಷೀರ್ ಪೊಲೀಸರಿಗೆ ದೂರು ನೀಡಿದ್ದರು. ಈಬಗ್ಗೆ ತನಿಖೆ ನಡೆಸಿದ ಪೊಲೀಸರು ಮೇಲಿನ ತಲಪ್ಪಾಡಿ ಯಿಂದ  ಸಂಶಯದ ಮೇರೆಗೆ ಹುಸೈ ನ್ ಸೈದ್‌ನನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಬೈಕ್  ಕಳವುಗೈದ …