ಕೂಲಿ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಬೆದ್ರಡ್ಕ ರಾಮನಗರ ಕಾವಿಲ್ ಹೌಸ್ ನಿವಾಸಿ ಎನ್. ವಿನೋದ್ ಕುಮಾರ್ (೪೬) ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಕೂಲಿ ಕಾರ್ಮಿಕನಾಗಿದ್ದರು. ಮೃತರು ತಂದೆ ನಾರಾಯಣನ್- ತಾಯಿ ಹೇಮಲತಾ, ಪತ್ನಿ ಸುಜಾತ, ಮಗಳು ಸ್ನೇಹ, ಸಹೋದರರಾದ ಉದಯನ್, ಉತ್ತಮನ್, ಸಹೋದರಿ ಇಂದುಲೇಖ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯುಪಿಎಸ್‌ಟಿ ಉದ್ಯೋಗಾರ್ಥಿಗಳಿಂದ ಮುಖ್ಯಮಂತ್ರಿಗೆ ಮನವಿ

ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆ ಯುಪಿಎಸ್‌ಟಿ ಕನ್ನಡ ವಿಭಾಗ ಹುದ್ದೆಗೆ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದ್ದು, ಆದರೆ ಇದಕ್ಕೆ ಅರ್ಜಿ ಸಲ್ಲಿಸಲು ಕೆಲವು ತೊಂದರೆಗಳು ಇದೆ ಎಂದು ಉದ್ಯೋಗಾರ್ಥಿಗಳು ತಿಳಿಸಿದ್ದಾರೆ. ಯುಪಿ ಶಾಲೆಗೆ ಅಧ್ಯಾಪಕ ನೇಮಕ ಕೆಟಗರಿ ನಂಬ್ರ ೪೭೮/೨೦೨೩ರಂತೆ ಆಹ್ವಾನಿಸಿದ ಅರ್ಜಿಯಲ್ಲಿ ತಿಳಿಸಿದ ಸೂಚನೆಗಳು ಹಾಗೂ ಪಿಎಸ್‌ಸಿ ಸೈಟ್‌ನಲ್ಲಿರುವ ಸೂಚನೆಗಳು ವಿಭಿನ್ನವಾಗಿದ್ದು, ಇದರಿಂದ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ ಎಂದು ಉದ್ಯೋಗಾರ್ಥಿಗಳು ತಿಳಿಸುತ್ತಾರೆ. ಕಾಸರಗೋಡಿನ ಕನ್ನಡ ಮಾಧ್ಯಮ ಅಧ್ಯಾಪಕರು ಹಲವು ಕಾಲದಿಂದ ಈ ಹುದ್ದೆಗಾಗಿ ಕಾಯುತ್ತಿದ್ದು, ಆದರೆ …

ಟ್ಯಾಂಕರ್ ಲಾರಿ-ಸ್ಕೂಟರ್ ಢಿಕ್ಕಿ ಆಸ್ಪತ್ರೆ ನೌಕರನಿಗೆ ಗಂಭೀರ

ಕುಂಬಳೆ: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಆಸ್ಪತ್ರೆ ನೌಕರನೋರ್ವ ಗಂಭೀರ ಗಾಯಗೊಂ ಡಿದ್ದಾರೆ. ಪನಯಾಲ್ ಪಾಕದ ನಾರಾಯಣನ್ ಎಂಬವರ ಪುತ್ರ ಹರಿಪ್ರಸಾದ್ (೨೪) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹರಿಪ್ರಸಾದ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಟ್ಯಾಂಕರ್ ಲಾರಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ  ನೌಕರನಾದ ಹರಿಪ್ರಸಾದ್ ನಿನ್ನೆ ಬೆಳಿಗ್ಗೆ  ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತ ಬಗ್ಗೆ ಹರಿಪ್ರಸಾದ್ ತಂದೆ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ೪.೯೫ ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ. ಈ ಸಂಬಂಧ ಕೊಯಿಪ್ಪಾಡಿ ವಿಲ್ಲೇಜ್‌ನ ಬಟ್ರಂಪಳ್ಳ ನಿವಾಸಿ ಕುಮಾರ (೫೩) ಎಂಬಾತನನ್ನು ಬಂಧಿಸಲಾಗಿದೆ. ಈತ ನ. ೧೬ರಂದು ಸ್ಕೂಟರ್‌ನಲ್ಲಿ ಮದ್ಯ ಸಾಗಿಸುತ್ತಿದ್ದಾಗ ಅಬಕಾರಿದಳದ ಸ್ಕ್ವಾಡ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ ವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ನವಕೇರಳ ಸಭೆ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿ ೨೦ ಸಚಿವರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪರ್ಯಟನೆ ನಿನ್ನೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಂದಿನಿಂದ ಕಣ್ಣೂರು ಜಿಲ್ಲೆಯ ಪರ್ಯಟನೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ನವಕೇರಳ ಸಭೆಯಲ್ಲಿ ಜನರಿಂದ ೧೯೦೮ ದೂರುಗಳು ಲಭಿಸಿದೆ. ಕಾಸರಗೋಡಿ ನಿಂದ ೩೪೫೧, ಉದುಮ ೩೭೩೩, ಹೊಸದುರ್ಗ ೩೦೦೦ ಮತ್ತು ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ನವ ಕೇರಳ ಸಭೆಯಲ್ಲಿ ೨೫೧೦ ದೂರುಗಳು ಸೇರಿದಂತೆ ಒಟ್ಟು ೧೪,೬೦೨ದೂರುಗಳು ಜನರಿಂದ …

೧.೫ ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ: ಕಾಸರಗೋಡು ನಿವಾಸಿಯೂ ಸೇರಿದಂತೆ ನಾಲ್ವರು ವಶಕ್ಕೆ

ಕಾಸರಗೋಡು: ಕಲ್ಲಿಕೋಟೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಕಳ್ಳಸಾಗಾಟ ಮೂಲಕ ತರಲಾದ ೧.೫ ಕೋಟಿ ರೂ. ಮೌಲ್ಯದ ಒಟ್ಟು ೩.೪೨೦ ಕಿಲೋ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ನಿಜಾಮುದ್ದೀನ್ (೩೨), ಬಾಲಶ್ಶೇರಿ ನಿವಾಸಿ ಇ.ಎಂ. ಅಬು ನೌಫಿನ್ (೩೬), ತೇನಿಪಾಲದ ಸಜ್ಜಾದ್ ಕಾಮಿನ್ (೨೬) ಮತ್ತು ಮಲಪ್ಪುರ ಎಡಕ್ಕರದ ಸಿ.ಕೆ. ಪ್ರಜಿನ್ (೨೩) ಎಂಬವರನ್ನು  ಕಸ್ಟಮ್ಸ್ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ನಾಲ್ವರ ಪೈಕಿ ನಿಜಾಮುದ್ದೀನ್ …

ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಹಲ್ಲೆ:  ಮೂಗಿಗೆ  ಗಂಭೀರಗಾಯ

ಮುಳ್ಳೇರಿಯ: ಬೈಕ್ ತಡೆದು ನಿಲ್ಲಿಸಿ  ಯುವಕನ  ಮೂಗಿಗೆ ಗಂಭೀರ ಗಾಯಗೊಳಿಸಿರುವುದಾಗಿ ದೂರಲಾಗಿದೆ. ಅಡೂರು ಪಳ್ಳಂಗೋಡಿನ ಶಮೀರ್ (೨೫)ಗೆ ಹಲ್ಲೆಗೈಯ್ಯಲಾಗಿದೆ. ಇವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಸ್ನೇಹಿತನನ್ನು ದೇವರಡ್ಕದ ಮನೆಯಲ್ಲಿ ಬಿಟ್ಟು ಮರಳಿ ಬರುತ್ತಿದ್ದಾಗ ಮೂರು ಮಂದಿ ರಸ್ತೆಗೆ ಅಡ್ಡವಾಗಿ ಬೈಕ್ ಗಳನ್ನು ನಿಲ್ಲಿಸಿ ತಡೆಯೊಡ್ಡಿ ಹಲ್ಲೆಗೈದಿದ್ದಾರೆಂದು ದೂರಲಾಗಿದೆ. ತಂಡ ಬೆಂಕಿ ಪೆಟ್ಟಿಗೆ ಕೇಳಿದೆಯೆಂದೂ ಆಗ ಅಲ್ಲವೆಂದು ತಿಳಿಸಿದಾಗ ಅಸಬ್ಯವಾಗಿ ನಿಂದಿಸಿ ದ್ವೇಷ ಮೂಡಿಸುವ ರೀತಿಯಲ್ಲಿ ಮಾತನಾಡಿ  ಹಲ್ಲೆಗೈದಿರುವುದಾಗಿ ಶಮೀರ್ …

ಮನೆ ಹಿತ್ತಿಲಲ್ಲಿ ಬೃಹತ್  ಕಾಳಿಂಗ ಸರ್ಪ

ಕಾಸರಗೋಡು: ಮನೆ ಹಿತ್ತಿಲಲ್ಲಿ ಬೃಹತ್ ಕಾಳಿಂಗಸರ್ಪವೊಂದು ದಿಢೀರ್ ಪ್ರತ್ಯಕ್ಷಗೊಂಡಿದ್ದು, ಅರಣ್ಯಪಾಲಕರು ಅದನ್ನು ಸೆರೆಹಿಡಿದ ಘಟನೆ ನಡೆದಿದೆ. ಭೀಮನಡಿ ಎಳೇರಿತ್ತಟ್ ಕಡುಪ್ಪಿಲ್ ಸಾಬು ಎಂಬವರ ಹಿತ್ತಿಲಲ್ಲಿ ನಿನ್ನೆ ರಾತ್ರಿ  ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿದೆ. ಅದು ಸುಮಾರು ನಾಲ್ಕು ಮೀಟರ್ ಉದ್ದವಿತ್ತು. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಭೀಮನಡಿ ಸೆಕ್ಷನ್‌ನ ಅರಣ್ಯಾಧಿಕಾರಿ ಕೆ.ಎನ್. ಲಕ್ಷ್ಮಣನ್ ನೀಡಿದ ನಿರ್ದೇಶ ಪ್ರಕಾರ ಅರಣ್ಯ ಇಲಾಖೆಯ ರೆಸ್ಕ್ಯೂಗಳಾದ  ಸುನಿಲ್ ಸುರೇಂದ್ರನ್ ಕೋಟಪ್ಪಾರ, ಅನೂಪ್ ಚೀಮೇನಿ, ಗೌತಂ, ಮುರಳಿ ಕೆ ಮಟ್ಟಲಾಯಿ,  ಹರಿಕೃಷ್ಣನ್, ಎಸ್.ಎನ್. ಸಂದೀಪ್ …

ಗಡಿನಾಡಿನ ಶಾಲೆ ಮಕ್ಕಳು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಗಳು ಮುಂದಾಗಬೇಕು-ಮಾಜಿ ಕೇಂದ್ರ ಸಚಿವ

ಪೈವಳಿಕೆ: ಗಡಿನಾಡಿನ ಶಾಲೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಗಳು ಗಮನಹರಿಸಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಚಂದಪ್ಪ ಜಿಗಜಿಣಗಿ ಅಭಿಪ್ರಾಯಪಟ್ಟಿದ್ದಾರೆಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ನಿನೆ್ನ ಮೀಯಪದವು ಪ್ರಶಾಂತಿ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾನು ಗಡಿನಾಡಿನವನಾಗಿ ಗಡಿನಾಡಿನ ಜನರ ಭಾವನೆಗಳನ್ನು, ಪರಿಸ್ಥಿತಿಯನ್ನು, ಶಾಲೆಗಳು ಮತ್ತು ಮಕ್ಕಳು ಎದುರಿಸು ತ್ತಿರುವ ಸಮಸ್ಯೆಗಳನ್ನು ಚೆನ್ನಾಗಿ …

೨೧ ಲಕ್ಷ ಟಿನ್ ಅರವಣ ಪ್ರಸಾದ ದಾಸ್ತಾನು

ಶಬರಿಮಲೆ: ಶಬರಿಮಲೆ ತೀರ್ಥಾಟನಾ ಋತು ಆರಂಭಗೊಂ ಡಿರುವಂತೆಯೇ ೨೧ ಲಕ್ಷ ಟಿನ್ ಅರವಣ ಪಾಯಸ ಪ್ರಸಾದ ಹಾಗೂ  ೩.೨೫ ಲಕ್ಷ ಅಪ್ಪ ಪ್ರಸಾದವನ್ನು ಈಗಾಗಲೇ ತಯಾರಿಸಿ ದಾಸ್ತಾನಿರಿ ಸಲಾಗಿದೆಯೆಂದು ಮುಜರಾಯಿ ಮಂಡಳಿ ತಿಳಿಸಿದೆ. ಇದರ ಹೊರತಾಗಿ ಪ್ರತಿದಿನ ಒಂಟು ಲಕ್ಷಟಿನ್‌ನಂತೆ ಅರವಣ ಪಾಯಸ ಉತ್ಪಾದಿಸಲಾಗುತ್ತಿದೆ. ತೀರ್ಥಾಟನಾ ಋತು ನವಂಬರ್ ೧೭ರಿಂದ ಆರಂಭಗೊಂಡಿರುವಂ ತೆಯೇ ಅಂದಿನಿಂದಲೇ ತುಪ್ಪಾಭಿಷೇಕ ಸೇವೆಗೂ ಚಾಲನೆ ನೀಡಲಾಗಿದೆ. ದೈನಂದಿನ  ರಾತ್ರಿ ೧೧ ಗಂಟೆ ತನಕ ಈ ಸೇವೆ ನಡೆಯಲಿದೆ. ಶಬರಿಮಲೆಗೆ ಈ ಬಾರಿ ಹರಿದು …