ಕರಂದಕ್ಕಾಡ್-ರೈಲು ನಿಲ್ದಾಣ ರಸ್ತೆ ನವೀಕರಿಸಿದ ಕಾಮಗಾರಿಯಲ್ಲಿ ಅವ್ಯವಹಾರ ಪತ್ತೆ ಮಾಡಬೇಕು, ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು-ಬಿಎಂಎಸ್

ಕಾಸರಗೋಡು: ನಗರದ ಪ್ರಧಾನ ರಸ್ತೆಯಾದ ಕರಂದಕ್ಕಾಡ್- ರೈಲ್ವೇ ನಿಲ್ದಾಣ ರಸ್ತೆ ನವೀಕರಿಸಿ ಕೆಲವೇ ದಿನಗಳೊಳಗೆ ಹಾನಿಗೊಂಡಿರುವುದರಲ್ಲಿ ಭ್ರಷ್ಟಾಚಾರವನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾಸರಗೋಡು ನಗರದ ಶೋಚನೀಯಗೊಂಡ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಯೋಗ್ಯಗೊಳಿ ಸಬೇಕು, ನಗರದಲ್ಲಿ ಉಂಟಾಗುತ್ತಿ ರುವ ಟ್ರಾಫಿಕ್ ಬ್ಲೋಕ್ ಪರಿಹರಿಸಬೇಕು, ಚರಂಡಿಗಳನ್ನು ಪುನರ್ ನಿರ್ಮಿಸಬೇಕು, ಹೊಸ ಬಸ್ ನಿಲ್ದಾಣದಲ್ಲಿ ಕಟ್ಟಿ ನಿಲ್ಲುವ ಮಲಿನ ಜಲವನ್ನು ತೆರವುಗೊಳಿಸಲಿರುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು …

ಸಂಚರಿಸುತ್ತಿದ್ದ ಕಂಟೈನರ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ: ಸೃಷ್ಟಿಯಾದ ಆತಂಕ

ಕಾಸರಗೋಡು: ಸಂಚರಿಸುತ್ತಿದ ಕಂಟೈನರ್ ಲಾರಿಗೆ  ವಿದ್ಯುತ್ ತಂತಿ ಸ್ಪರ್ಶಿಸಿ ಅದರಿಂದ ಬೆಂಕಿ ತಗಲಿ ಭಾರೀ ಆತಂಕ ಸೃಷ್ಟಿಸಿದ ಘಟನೆ ಕಾಸರಗೋಡು- ಹೊಸದುರ್ಗ ರಾಜ್ಯ ಹೆದ್ದಾರಿಯ ಮೇಲ್ಪರಂಬ ಕೂವತ್ತಡಿ ಯಲ್ಲಿ ನಿನ್ನೆ ಸಂಜೆ ನಡೆದಿದೆ.ಪುಣೆಯಿಂದ ರೆಫ್ರಿಜರೇಟರ್ ಹೇರಿಕೊಂಡು ಕಲ್ಲಿಕೋಟೆಗೆ ಸಾಗುತ್ತಿದ್ದ ಕಂಟೈನರ್ ಲಾರಿ ಕೂವತ್ತಡಿಗೆ ತಲುಪಿದಾಗ ಆ ರಸ್ತೆಯ ಮೇಲ್ಭಾಗದ ಮೂಲಕ ಹಾದು ಹೋಗುತ್ತಿರುವ ವಿದ್ಯುತ್ ಲೈನ್ ಸ್ಪರ್ಶಿಸಿ ಅದರಿಂದ ಲಾರಿಗೆ ಬೆಂಕಿ ತಗಲಿಕೊಂಡಿದೆ. ಆ ವೇಳೆ ಅಲ್ಲಿದ್ದ ಬೇಕಲ ಪೊಲೀಸರು ನೀಡಿದ  ಮಾಹಿತಿಯಂತೆ ಸ್ಟೇಷನ್ ಆಫೀಸರ್ ಕೆ. …

ದತ್ತು ಸ್ವೀಕರಿಸಿದ ಐದರ ಬಾಲಕಿಗೆ ಸಾಕು ತಂದೆಯಿಂದ ಲೈಂಗಿಕ ದೌರ್ಜನ್ಯ

ತಿರುವನಂತಪುರ: ಪಾರಶಾಲದಲ್ಲಿ ದತ್ತು ಸ್ವೀಕರಿಸಿದ 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯಗೈದ ತಂದೆ ಸೆರೆಯಾಗಿದ್ದಾನೆ. ಶಿಶು ಕ್ಷೇಮ ಸಮಿತಿಯಿಂದ ದತ್ತು ತೆಗೆದ ಮಗುವಿಗೆ 52ರ ಹರೆಯದ ಸಾಕುತಂದೆ ಲೈಂಗಿಕ ದೌರ್ಜನ್ಯಗೈದಿದ್ದಾನೆ. ಮಗು ತಾಯಿಯಲ್ಲಿ ದೌರ್ಜನ್ಯದ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ಬಾಲಕಿಯನ್ನು ವೈದ್ಯ ತಪಾಸಣೆಗೊಳಪಡಿಸಲಾಗಿದೆ. ಡಾಕ್ಟರ್ ದೌರ್ಜನ್ಯದ ಬಗ್ಗೆ ಖಚಿತಪ ಡಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಮಗುವಿನ ಹೇಳಿಕೆ ದಾಖಲಿಸಲಾಗಿದೆ. ಆರೋಪಿಯನ್ನು ನೈಯ್ಯಾಟಿಂಗರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

ಸೆಕ್ಸ್ ರ‍್ಯಾಕೆಟ್: ತಲೆಮರೆಸಿಕೊಂಡ ಪೊಲೀಸರಿಗಾಗಿ ಶೋಧ

ಕಲ್ಲಿಕೋಟೆ: ಮಲಾಪರಂಬ್ ಸೆಕ್ಸ್ ರ‍್ಯಾಕೆಟ್ ಪ್ರಕರಣದಲ್ಲಿ ತಲೆಮರೆಸಿಕೊಂಡ ಪೊಲೀಸರ ವಿರುದ್ಧ ಲುಕೌಟ್ ಸರ್ಕ್ಯುಲರ್ ಹೊರಡಿಸಲು ತನಿಖಾ ತಂಡ ನಿರ್ಧರಿಸಿದೆ. ಕಲ್ಲಿಕೋಟೆ ಕಂಟ್ರೋಲ್ ರೂಂನ ಚಾಲಕನಾಗಿದ್ದ ಕೆ. ಶೈಜಿತ್,  ಕೆ. ಸನಿತ್ ಎಂಬಿವರ ವಿರುದ್ಧ ಲುಕೌಟ್ ಸರ್ಕ್ಯುಲರ್ ಹೊರಡಿಸಲಾಗುವುದು. ಸೆಕ್ಸ್ ರ‍್ಯಾಕೆಟ್ ಕೇಂದ್ರ ನಡೆಸುತ್ತಿದ್ದ ಬಾಲುಶ್ಶೇರಿ ವಟ್ಟೋಳಿ ಬಜಾರ್ ನಿವಾಸಿ  ಅಮನೀಶ್ ವಿರುದ್ಧವೂ ಲುಕೌಟ್ ಸರ್ಕ್ಯುಲರ್ ಹೊರಡಿಸುವ ಸಾಧ್ಯತೆ ಇದೆ. ಈ ಮೂರು ಮಂದಿಯ ಫೋನ್‌ಗಳು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ

ಪ್ರೊ. ಎ. ಶ್ರೀನಾಥ್‌ರಿಗೆ ಕಯ್ಯಾರ ಪ್ರಶಸ್ತಿ ಪ್ರದಾನ 18ರಂದು

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಜನಪದ ತಜ್ಞ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್‌ರನ್ನು ಕಯ್ಯಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು, ಕಯ್ಯಾರು ಕುಟುಂಬಶ್ರೀ ಘಟಕದ ಸಹಯೋಗ ದಲ್ಲಿ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಈ ತಿಂಗಳ 18ರಂದು ಬೆಳಿಗ್ಗೆ 9ರಿಂದ ನಡೆಯುವ ನಾಡೋಜ ಡಾಕ್ಟರ್ …

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿ: ಸಮಿತಿ ರೂಪೀಕರಣ ಸಭೆ ನಾಳೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವ ಸಮಾಲೋಚನೆ ಹಾಗೂ ಸಮಿತಿ ರೂಪೀಕರಣ ಸಭೆ ನಾಳೆ ಅಪರಾಹ್ನ 3 ಗಂಟೆಗೆ ಕ್ಷೇತ್ರ ಪರಿಸರದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಉಪಸ್ಥಿತಿ ಯಲ್ಲಿ ನಡೆಯಲಿದೆ. 2011 ಎಪ್ರಿಲ್ ನಲ್ಲಿ ಕ್ಷೇತ್ರದ ನವೀಕರಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತ್ತು. ಇದೀಗ 15 ವರ್ಷಗಳ ಬಳಿಕ 2026 ಎಪ್ರಿಲ್ ತಿಂಗಳಲ್ಲಿ  ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ತಂತ್ರಿ ವರ್ಯರ ಉಪಸ್ಥಿತಿಯಲ್ಲಿ ಕ್ಷೇತ್ರ ಆಡಳಿತ ಸಮಿತಿ ತೀರ್ಮಾನಿಸಿದೆ. ಈ ಸಂಬಂಧ …

ಮಾದಕ ದ್ರವ್ಯ ವಿರೋಧಿ ಸೈಕಲ್ ಯಾತ್ರೆಗೆ ಪೈವಳಿಕೆ ನಗರ ಶಾಲೆಯಲ್ಲಿ ಸ್ವಾಗತ

ಪೈವಳಿಕೆ: ಮಾದಕದ್ರವ್ಯ  ವಿರುದ್ಧ ಅಭಿಯಾನದಂಗವಾಗಿ ನಿವೃತ್ತ ಎಸ್‌ಐ ಶಾಜಹಾನ್ ಕೊಲ್ಲಂನಿಂದ ಸೈಕಲ್‌ನಲ್ಲಿ ಆರಂಭಿಸಿದ ಯಾತ್ರೆಗೆ ಪೈವಳಿಕೆ ನಗರ ಶಾಲೆಯಲ್ಲಿ ಸ್ವಾಗತ ನೀಡಲಾಯಿತು.  ಮಾದಕದ್ರವ್ಯಗಳು ಉಂಟು ಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅವರು ಮಕ್ಕಳಿಗೆ ತಿಳಿಸಿದರು. ಮುಖ್ಯೋಪಾಧ್ಯಾಯಿನಿ ರಾಧಾಲಕ್ಷ್ಮಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ಲತೀಫ್, ರಾಜೇಶ್, ರೈನಾ ಡಿಸೋಜಾ, ಬಬಿತಾ ಉಪಸ್ಥಿತರಿದ್ದರು.

ಕೆಪಿಎಸ್‌ಟಿಎ ಸದಸ್ಯತನ ಅಭಿಯಾನ ಆರಂಭ

ಮೀಯಪದವು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್‌ಟಿಎ) ಇದರ ಸದಸ್ಯತನ ವಿತರಣೆಯ ಮಂಜೇಶ್ವರ ಉಪಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಿತು. ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಇವರಿಗೆ ಕೆಪಿಎಸ್‌ಟಿಎ ಉಪಜಿಲ್ಲಾ ಕಾರ್ಯದರ್ಶಿ ಒ.ಎಂ. ರಶೀದ್ ಸದಸ್ಯತನ ನೀಡಿದರು. ಕಂದಾಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜನಾರ್ದನನ್ ಕೆ.ವಿ, ಜಿಲ್ಲಾ ಜೊತೆ ಕಾರ್ಯದರ್ಶಿ ವಿಮಲ್ ಅಡಿಯೋಡಿ, ಉಪಜಿಲ್ಲಾ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಮೀಯಪದವು, ಶ್ರೀನಿವಾಸ ಕೆ.ಎಚ್. ಧರ್ಮತ್ತಡ್ಕ, ಸೌಮ್ಯಾ ಪಿ, ರವಿಶಂಕರ ಕೆ. ಭಾಗವಹಿಸಿದರು.

ವಿಮಾನ ದುರಂತ: ಮೃತರ ಸಂಖ್ಯೆ 294ಕ್ಕೇರಿಕೆ; ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ, ಉನ್ನತ ಮಟ್ಟದ ತನಿಖೆ ಆರಂಭ

ಅಹಮ್ಮದಾಬಾದ್: ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 294ಕ್ಕೇರಿದೆ. ಇದರಲ್ಲಿ 241 ಮಂದಿ ಪ್ರಯಾಣಿಕರು ಹಾಗೂ ಉಳಿದವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಅಹಮ್ಮದಾಬಾದ್‌ನ ಏರ್ ಪೋರ್ಟ್‌ನಿಂದ ನಿನ್ನೆ ಮಧ್ಯಾಹ್ನ ಲಂಡನ್‌ಗೆ ಹೊರಟ ಏರ್ ಇಂಡಿಯಾದ ಬೋಯಿಂಗ್  ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಪಥನಗೊಂಡು ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ …

ವಯನಾಡಿನಲ್ಲಿ ಬೈಕ್‌ಗೆ ಜೀಪು ಢಿಕ್ಕಿ ಹೊಡೆದು ಗೃಹಿಣಿ ಸಾವಿಗೀಡಾದ ಪ್ರಕರಣ: ಕಾಸರಗೋಡಿನ ಐದು ಮಂದಿ ಸೆರೆ

ಕಾಸರಗೋಡು: ವಯನಾಡಿ ನಲ್ಲಿ ಬೈಕ್‌ಗೆ ಜೀಪು ಢಿಕ್ಕಿ ಹೊಡೆದು ಗೃಹಿಣಿ ಸಾವಿಗೀಡಾದ ಪ್ರಕರಣಕ್ಕೆ ಸಂ ಬಂಧಿಸಿ ಕಾಸರಗೋಡಿನ ಐದು ಮಂದಿ ಯನ್ನು  ಬಂಧಿಸಲಾಗಿದೆ. ಚೆಮ್ನಾಡ್ ಪೆರುಂಬಳದ ಅಖಿಲ್ (26), ಅರಮಂ ಗಾನ ಪುದಿಯ ವಳಪ್ಪ್ ವೀಡ್‌ನ  ಪ್ರಶಾಂತ್ (21), ಪೆರುಂಬಳ ವಯ ಲಾಂಕುಳಿಯ ನಿತಿ (20), ಪೆರುಂಬಳದ ನಿತಿನ್‌ನಾರಾ ಯಣನ್ (22) ಹಾಗೂ 17ರ ಹರೆಯದ ಇನ್ನೋರ್ವನನ್ನು ವಯನಾಡ್ ಮೇಪಾಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ.ಯು. ಜಯಪ್ರಕಾಶ್ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ. ಜೂನ್ ೮ರಂದು ವಯನಾಡು ಮೇಪಾಡಿ …