ಫ್ಯಾನ್‌ನಿಂದ ಶಾಕ್ ನಾಲ್ಕು ಮಕ್ಕಳು ಸಾವು

ಕಾನ್ಫುರ: ಮನೆಯ ಫ್ಯಾನ್‌ನಿಂದ ಶಾಕ್ ತಗಲಿ ನಾಲ್ಕು ಮಕ್ಕಳು ಮೃತಪಟ್ಟ ದಾರುಣ ಘಟನೆ ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಲಾಲ್‌ಮನ್ ಖೇದ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ ವೇಳೆ ಮನೆಯೊಳಗೆ ಮಕ್ಕಳು ಆಟವಾಡುತ್ತಿದ್ದಂತೆ ಈ ಘಟನೆ ನಡೆದಿದೆ. ಮನೆಯ ಹಿರಿಯರು ಕೆಲಸಕ್ಕಾಗಿ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಮಕ್ಕಳು ತಿಳಿಯದೆ ಫ್ಯಾನ್‌ನ ವಯರ್‌ನ್ನು ಸ್ಪರ್ಶಿಸಿದ್ದಾರೆ. ಅದ್ದರಿಂದ ವಿದ್ಯುತ್ ಹರಿದು ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತಪಟ್ಟ ಮಕ್ಕಳು ೧೦ಕ್ಕಿಂತ ಕೆಳ ಪ್ರಾಯದವರಾಗಿದ್ದಾರೆ.

ಮವ್ವಾರಿನಲ್ಲಿ ಬೀದಿ ದೀಪವಿಲ್ಲ: ಕತ್ತಲಾವರಿಸುತ್ತಿದೆ ಎಂದು ಸ್ಥಳೀಯರು

ಮವ್ವಾರು: ಪೇಟೆಯಲ್ಲಿ ಬೀದಿ ದೀಪದ ಕೊರತೆಯಿಂದ ಸಂಜೆಯಾಗುವಾಗಲೇ ಕತ್ತಲಾವರಿಸುತ್ತಿದೆ. ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ವಿವಿಧ ಕಡೆ ಬೀದಿ ದೀಪ ಅಳವಡಿಸಲಾಗಿದ್ದರೂ ಮವ್ವಾರ್ ಪೇಟೆಯ ಒಂದು ಭಾಗ ಕತ್ತಲಾವರಿಸುತ್ತಿದೆ. ಇಲ್ಲಿ ಚಿಕಿತ್ಸಾಲಯ, ವ್ಯಾಪಾರ ಕೇಂದ್ರಗಳು,  ಅಂಗನವಾಡಿ, ಹಿರಿಯ ನಾಗರಿಕರ ವಸತಿಗೃಹಗಳಿದ್ದು, ಕತ್ತಲೆ ಆವರಿಸುವ ಕಾರಣ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ರಸ್ತೆಯ ಅನಗತ್ಯ ಸ್ಥಳಗಳಲ್ಲೂ ಬೀದಿ ದೀಪ ಅಳವಡಿಸಿದ್ದು, ಕಂಡು ಬರುತ್ತಿದ್ದು, ಆದರೆ ಅಗತ್ಯದ ಕಡೆಯಲ್ಲಿ ಸ್ಥಾಪಿಸದಿರುವುದು  ಸರಿಯಲ್ಲವೆಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ ಕನಿಷ್ಟ ಮೂರು ದೀಪವನ್ನಾದರೂ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೪೬ ವರ್ಷ ಕಠಿಣ ಸಜೆ, ೩.೫ ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ೧೪ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಮೊಗ್ರಾಲ್ ಪುತ್ತೂರು, ಕಂಬಾರ್ ದೇಶಮಂಗಲ ನಿವಾಸಿ ಲೋಕೇಶ್ ಬಿ.ಎಸ್ (೪೭) ಎಂಬಾತನಿಗೆ ಪೋಕ್ಸೋ ಕಾನೂನು ಮತ್ತು ಐಪಿಸಿಯ ವಿವಿಧ ಸೆಕ್ಷನ್ ಗಳಲ್ಲಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಒಟ್ಟು ೪೬ ವರ್ಷ ಕಠಿಣ ಸಜೆ ಹಾಗೂ ಎರಡೂವರೆ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ೨೦೧೮ ಫೆಬ್ರವರಿ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಹೈಸ್ಕೂಲ್‌ನಲ್ಲಿ ಕಾರಡ್ಕಕ್ಕೆ ಕಿರೀಟ

ಕುಂಬಳೆ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದಲ್ಲಿ ಕಾರಡ್ಕ ಜಿವಿಎಚ್‌ಎಸ್ ಎಸ್ ೧೮೮ ಅಂಕ ಪಡೆದು ಚಾಂಪ್ಯನ್ ಆಗಿದೆ. ನೀರ್ಚಾಲ್ ಎಂಎಸ್‌ಸಿಎಚ್ ಎಸ್‌ಎಸ್‌ಗೆ ೧೬೭ ಅಂಕ ಲಭಿಸಿದೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಎಚ್‌ಎಸ್‌ಎಸ್ ೧೮೧ ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದರೆ, ಕುಂಬಳೆ ಜಿಎಚ್‌ಎಸ್ ಎಸ್ ೧೭೩ ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದೆ.  ಎಲ್‌ಪಿ ವಿಭಾಗದಲ್ಲಿ  ಚೆನ್ನಂಗೋಡು ಎಎಲ್‌ಪಿ, ಪೆರಡಾಲ ಎಲ್‌ಪಿಎ ಸ್‌ಗಳು ೬೩ ಅಕಗಳೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ.  ಬದಿಯಡ್ಕ ಭಾರತೀ …

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಲ್ಲಿ ಚಿಕಿತ್ಸೆ ಆರಂಭಿಸಲು ಒತ್ತಾಯ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮೊಟಕುಗೊಳಿಸಿದ ರಾತ್ರಿ ಐಪಿ, ತುರ್ತುನಿಗಾ ವಿಭಾಗವನ್ನು ಹಾಗೂ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಆರಂಭಿಸಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ವೈದ್ಯರ ಕೊರತೆಯಿಂದ ಕಳೆದ ತಿಂಗಳು ೩೦ರಿಂದ ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಲಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೀಡಾಗಿ ದ್ದಾರೆ. ಮಂಗಲ್ಪಾಡಿ, ಪೈವಳಿಕೆ, ಮಂಜೇಶ್ವರ ಮೊದಲಾದ ಪಂಚಾಯತ್ ವ್ಯಾಪ್ತಿಯಿಂದ ದಿನನಿತ್ಯ ನೂರಾರು ರೋಗಿಗಳು ತಲುಪುವ ಆಸ್ಪತ್ರೆ ಇದಾಗಿದೆ. ರಾತ್ರಿ ಕಾಲ ಚಿಕಿತ್ಸೆ ಸಾರ್ವಜನಿಕರಿಗೆ ಬಹಳ ಪ್ರಯೋಜನವಾಗಿತ್ತು. ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಿದ ಬಗ್ಗೆ ಹಾಗೂ ಇತರ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಇತ್ತೀಚೆಗೆ …

ಮಾವಿನಕಟ್ಟೆ ಶ್ರೀ ಅಯ್ಯಪ್ಪ ಮಂದಿರ ವಾರ್ಷಿಕೋತ್ಸವ ಆರಂಭ

ಬದಿಯಡ್ಕö: ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ೪೨ನೇ ವಾರ್ಷಿಕೋತ್ಸವ ಇಂದು ಹಾಗೂ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಇದರಂಗವಾಗಿ ಬೆಳಗ್ಗೆ ದೀಪೋಜ್ವಲನ, ಮಹಾಗಣಪತಿ ಹವನ, ಮುದ್ರಾಧಾರಣೆ, ಭಜನೆ, ಬಳಿಕ ಸಿಂಗಾರಿ ಮೇಳ ಪ್ರದರ್ಶನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆ ಯಿತು.ಅಪರಾಹ್ನ ಭಜನೆ, ಕುಣಿತ ಭಜನೆ, ಸಂಜೆ ನೂತನವಾಗಿ ನಿರ್ಮಿಸಿದ ಸಾಂಸ್ಕೃತಿಕ ಭವನದ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನಿರ್ವಹಿಸುವರು. ಮುಖ್ಯ …

ಪೈವಳಿಕೆಗೆ ಹರಿದುಬರತೊಡಗಿದ ಜನಪ್ರವಾಹ

ಮಂಜೇಶ್ವರ: ಜನರಿಂದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿ ೨೦ ಸಚಿವರು ಭಾಗವಹಿಸುವ ನವಕೇರಳ ಸಭೆ ಉದ್ಘಾಟನೆಗೆ ಪೈವಳಿಕೆಯಲ್ಲಿ ಕ್ಷಣಗಣನೆ ಆರಂಭಗೊಂಡಿದೆ. ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ಇಂದು ಅಪರಾಹ್ನ ೩.೩೦ಕ್ಕೆ ಆರಂಭಗೊಳ್ಳುವ ನವಕೇರಳ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸುವರು. ರಾಜ್ಯದ ೨೦ ಸಚಿವರುಗಳು ಇದರಲ್ಲಿ ಭಾಗವಹಿಸುವರು. ಸಚಿವರುಗಳು ಮಾತ್ರವಲ್ಲದೆ ರಾಜ್ಯ ಸರಕಾರದ …

ಪೊಲೀಸರ ಕ್ರಮ: ಕಾಸರಗೋಡಿನಲ್ಲಿ ಖಾಸಗಿ ಬಸ್‌ಗಳಿಂದ ಮಿಂಚಿನ ಮುಷ್ಕರ

ಕಾಸರಗೋಡು: ಪೊಲೀಸರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಬಸ್ ನೌಕರರು ಕಾಸರಗೋಡಿನಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಪೊಲೀಸರು  ತಲುಪಿ ನೌಕರರೊಂದಿಗೆ ಮಾತನಾಡಿ ತಾತ್ಕಾಲಿಕ ಪರಿಹಾರ ಕಂಡುಕೊಂಡ ಹಿನ್ನೆಲೆಯಲ್ಲಿ ಮುಷ್ಕರ ಕೊನೆಗೊಳಿಸಲಾಯಿತು. ಇಂದು ಬೆಳಿಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಕಾಸರಗೋಡು ರೈಲ್ವೇ ನಿಲ್ದಾಣ ಪರಿಸರದಲ್ಲಿ ಡಿವೈಎಸ್‌ಪಿ ಅಸಭ್ಯವಾಗಿ ನಿಂದಿಸಿದ್ದು, ಅಲ್ಲದೆ ಬಸ್ ಸಂಚಾರಕ್ಕೆ ಪ್ರತಿಕೂಲ ಸ್ಥಿತಿ ಸೃಷ್ಟಿಸಿದರೆಂದು ಆರೋಪಿಸಿ ನೌಕರರು ಇಂದು ಬೆಳಿಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ಮಿಂಚಿನ …

ಭಾರತ ವಿಶ್ವಕಪ್ ಗೆದ್ದರೆ ನಗ್ನವಾಗಿ ಬೀಚ್‌ನಲ್ಲಿ ಓಡುವುದಾಗಿ ನಟಿ ರೇಖಾ ಭೋಜ್

ವಿಶಾಖಪಟ್ಟಣ: ಭಾರತ ತಂಡ ಏಕದಿನ ವಿಶ್ವಕಪ್‌ಗೆ ಮುತ್ತು ನೀಡಿದರೆ ವಿಶಾಖಪಟ್ಟಣ ಬೀಚ್‌ನಲ್ಲಿ ನಗ್ನವಾಗಿ ಓಡುವುದಾಗಿ ತೆಲುಗು ನಟಿ ರೇಖಾ ಭೋಜ್ ಘೋಷಿಸಿದ್ದಾರೆ. ಇಬ್ಬರ ಎಫ್‌ಬಿಯಲ್ಲಿ ಈ ಘೋಷಣೆ ನಟಿ ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿಯ ಬಗ್ಗೆ ಕಮೆಂಟ್‌ಗಳೂ ಪ್ರತ್ಯಕ್ಷವಾಗಿವೆ. ಪ್ರಚಾರಕ್ಕಾಗಿ ಈಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಮೆಂಟಿಗರು ಆರೋಪಿಸಿದ್ದಾರೆ. ಆದರೆ ನನ್ನ ಈ ಘೋಷಣೆಯಿಂದ ಭಾರತದ ವಿರೋಧಿಗಳು ಕೂಡಾ ಭಾರತ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆಂದು ನಟಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಭಾರತ ತಂಡದೊಂದಿಗಿನ ಅಭಿಮಾನದಿಂದ ಈ …

೧೨೫.೨೮ ಲೀಟರ್ ಕರ್ನಾಟಕ ಮದ್ಯ ವಶ

ಕಾಸರಗೋಡು: ಕರಂದಕ್ಕಾಡಿನಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೧೨೫.೨೮ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಅದನ್ನು ಅಲ್ಲಿ ಬಚ್ಚಿಟ್ಟಿರುವುದು ಯಾಕೆಂಬುವುದು ಸ್ಪಷ್ಟಗೊಂಡಿಲ್ಲ. ಆ ಬಗ್ಗೆ  ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಎಕ್ಸೈಸ್ ಆಫೀಸರ್‌ಗಳಾದ ಅಜೀಷ್ ಸಿ, ಪ್ರಜಿತ್ ಕೆ.ಆರ್, ನಸರುದ್ದೀನ್ ಎ.ಕೆ, ಶಿಜಿತ್ ವಿ.ವಿ, …