ಮುಳ್ಳೇರಿಯ: ಸಿಡಿಲಿನಿಂದ ಮನೆಗೆ ಹಾನಿ

ಮುಳ್ಳೇರಿಯ: ನಿನ್ನೆ ರಾತ್ರಿ ಸುರಿದ ಮಳೆ ವೇಳೆ ಉಂಟಾದ ಸಿಡಿಲಿನ ಆಘಾತದಿಂದ ಆದೂರು ಆಲಂತ ಡ್ಕದ ಜನಾರ್ದನನ್‌ರ ಮನೆಗೆ ಹಾನಿ ಉಂಟಾಗಿದೆ. ಜೊತೆಗೆ ಎರಡು ತೆಂಗು ಕೂಡಾ ಸುಟ್ಟಿದೆ. ಸಿಡಿಲಿನ ಆಘಾತ ದಿಂದ ಮನೆಯ ಮೈನ್ ಸ್ವಿಚ್  ಉರಿ ದಿದ್ದು, ವಯರಿಂಗ್‌ಗಳು ನಾಶವಾ ಗಿದೆ. ಗೋಡೆ ಬಿರುಕುಬಿಟ್ಟಿದೆ. ನಿನ್ನೆ ರಾತ್ರಿ ೩ ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸಿಡಿಲು ಉಂಟಾಗಿತ್ತು.

ರ‍್ಯಾಗಿಂಗ್: ಮೂವರು ವಿದ್ಯಾರ್ಥಿಗಳ ವಿರುದ್ಧ ಕೇಸು

ಕಾಸರಗೋಡು: ಪೆರಿಯಾದ ಡಾ. ಅಂಬೇಡ್ಕರ್ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿಯೋರ್ವನನ್ನು ರ‍್ಯಾಗಿಂಗ್ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೇಕಲ ಪೊಲೀಸರು ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಪೂಂಜಾವಿ ಬೈತಲ್ ಹೌಸ್‌ನ ಮುಹಮ್ಮದ್ ಆದಿಲ್ (೧೯) ಎಂಬಾತ ಈ ಬಗ್ಗೆ ದೂರು  ನೀಡಿದ್ದು, ಅದರಂತೆ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಅಜಾಸ್, ಆಸಿಫ್ ಮತ್ತು ಸಲಾಂ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಿರುವುದಾಗಿ …

ನವಕೇರಳ ಸಭೆ ನಾಳೆ ಮಂಜೇಶ್ವರದಿಂದ ಚಾಲನೆ:  ಮುಖ್ಯಮಂತ್ರಿ, ಸಚಿವರು ಕಾಸರಗೋಡಿಗೆ

ಮಂಜೇಶ್ವರ: ನವಕೇರಳ ಸಭೆಗೆ ನಾಳೆ ಮಂಜೇಶ್ವರದಿಂದ  ಚಾಲನೆ ದೊರಕಲಿದೆ. ಇದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ  ಎಲ್ಲಾ ಸಚಿವರು ಇಂದು ಸಂಜೆ ತಿರುವನಂತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸುವರು.  ಸಚಿವರುಗಳ ಪೈಕಿ ಚಿಂಜುರಾಣಿ ಹಾಗೂ ಅಹಮ್ಮದ್ ದೇವರ್‌ಕೋವಿಲ್ ಇಂದು ಸಂಜೆಯೇ ಕಾಸರಗೋಡಿಗೆ ಆಗಮಿಸುವರು. ಮುಖ್ಯ ಮಂತ್ರಿ  ಇಂದು ಸಂಜೆ ತಿರುವನಂ ತಪುರದಿಂದ ಕಣ್ಣೂರಿಗೆ ಆಗಮಿಸುವರು. ಅಲ್ಲಿಂದ ಅವರು ನಾಳ ಮಧ್ಯಾಹ್ನ ಕಾಸರಗೋಡಿಗೆ ತಲುಪುವರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂ ದನ್ ಕೂಡಾ ಅವರ ಜತೆಗಿರುವರು. ಮುಖ್ಯಮಂತ್ರಿ …

ಕಾಡುಹಂದಿಯನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದ ಇಬ್ಬರ ಸೆರೆ: ಕಾರು, ಬಂದೂಕು, ಗುಂಡು ವಶಕ್ಕೆ

ಕಾಸರಗೋಡು: ಅರಣ್ಯದಿಂದ ಕಾಡುಹಂದಿಯನ್ನು ಬೇಟೆಯಾಡಿ ಗುಂಡಿಕ್ಕಿ ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬೇಡಗ ಪೊಲೀಸ್ ಠಾಣೆ ಎಸ್‌ಐ ಗಂಗಾಧರನ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಬೇಡಗ ಪುತ್ಯಡ್ಕದ ಟಿ.ಕೆ. ಪ್ರಶಾಂತ್ ಕುಮಾರ್ (೩೭) ಮತ್ತು ಬೇಡಗ ಕಾಟಿಯಡ್ಕ ಕುವಾರ ಹೌಸ್‌ನ ರಾಧಾಕೃಷ್ಣನ್ ಕೆ. (೪೮) ಎಂಬವರು ಬಂಧಿತರಾದ ಆರೋಪಿಗಳು. ನಿನ್ನೆ ಮುಂಜಾನೆ ಕುಂಡಂಕುಳಿ  ಬೆದಿರ ಭಾಗದಿಂದ  ಮರುದಡ್ಕ ಭಾಗಕ್ಕೆ ತೆರಳುತ್ತಿದ್ದಾಗ ಬೇಟೆಗಾರರ ತಂಡ ಪೊಲೀಸರ ಸೆರೆಗೀಡಾಗಿದೆ. ಇವರು ಸಂ ಚರಿಸುತ್ತಿದ್ದ ಕಾರು, ಅದರೊಳಗಿದ್ದ ಹಂದಿ ಮಾಂಸ, …

ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದ ವೃದ್ದೆ ಮೃತ್ಯು

ಮಂಜೇಶ್ವರ: ದೀಪದಿಂದ ಸೀರೆಗೆ ಬೆಂಕಿ ತಗಲಿ ಸುಟ್ಟು ಗಾಯಗೊಂಡಿದ್ದ ವೃದ್ದೆ ಮೃತಪಟ್ಟರು. ಈ ತಿಂಗಳ ೧೪ರಂದು ದೇವರಕೋಣೆಯಲ್ಲಿ ಪ್ರಾರ್ಥನೆ ವೇಳೆ ಸೀರೆಗೆ ದೀಪದಿಂದ ಬೆಂಕಿ ತಗಲಿದೆ. ಕೂಡಲೇ ಮನೆಯವರು ಬೆಂಕಿ ನಂದಿಸಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ರಾತ್ರಿ ಮೃತಪಟ್ಟರು. ಕುಳೂರು ಪೊಯ್ಯೇಲು ನಿವಾಸಿ ದಿ| ಮದನಪ್ಪ ಶೆಟ್ಟಿಯವರ ಪತ್ನಿ ಸುನೀತಾ ಎಂ. (೮೪) ಮೃತಪಟ್ಟವರು. ಮೃತರು ಮಕ್ಕಳಾದ ಮೋಹನ ಶೆಟ್ಟಿ, ಯೋಗೀಶ ಶೆಟ್ಟಿ, ಸೊಸೆಯಂದಿರಾದ ಮಮತಾ, ಭಾರತಿ, ಪ್ರಫುಲ್ಲಾ, ಸಹೋದರಿ ರಾಜೀವಿ ಶೆಟ್ಟಿ ಕಂಬಳಬೆಟ್ಟು ಹಾಗೂ …

ಯುವಕನನ್ನು ಅಪಹರಿಸಿ ಹಲ್ಲೆಗೈದು ನಗದು, ಫೋನ್ ಎಗರಿಸಿದ ಪ್ರಕರಣ: ನಾಲ್ವರ ಬಂಧನ

ಕಾಸರಗೋಡು: ಯುವಕನನ್ನು ಅಪಹರಿಸಿ ಕೊಂಡೊಯ್ದು ಹಲ್ಲೆನಡೆಸಿ ಆತನ ಹಣ ಮತ್ತು ಮೊಬೈಲ್ ಫೋನನ್ನು ಎಗರಿಸಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಚಂದೇರ ಪೊಲೀಸ್ ಠಾಣೆಯ ಎಸ್.ಐ. ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಚೆರುವತ್ತೂರು ಮಲ್ಲಾಕುದಿರಿನ ಎಂ. ಝಲ್ಫಿಕರ್ (೨೭), ಮುಹಮ್ಮದ್ ಶರೀಫ್ (೩೦), ಚೆರುವತ್ತೂರು ಪಿಲಾವಳಪ್ಪಿನ ಮೊಹಮ್ಮದ್ ಅನಸ್ಸ್ (೨೦) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಸಿದ್ದೀಕ್ (೨೩) ಬಂಧಿತರಾದ ಆರೋಪಿಗಳು. ಪಿಲಿಕ್ಕೋಡ್ ಮಡಿವಯಲಿನ ವೆಂಬಿರಿಞ್ಞನ್ ನಿಧಿನ್ (೩೦) ಎಂಬ ವರನ್ನು ಮೊನ್ನೆ ರಾತ್ರಿ …

ಸ್ಕೂಟರ್ ಕಳವು

ಮಂಜೇಶ್ವರ: ಮನೆಯ ಮುಂಭಾಗ ನಿಲ್ಲಿಸಿದ್ದ ಸ್ಕೂಟರನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಹೊಸಬೆಟ್ಟು ಪೊಕ್ಕಿ ನಿವಾಸಿ ಅಬ್ದುಲ್ ಬಶೀರ್‌ರ ಮನೆಯ ಮುಂಭಾಗ ನಿಲ್ಲಿಸಿದ್ದ ಸಂಬಂಧಿಕರ ಸ್ಕೂಟರನ್ನು ೧೫ರಂದು ರಾತ್ರಿ ವೇಳೆ ಕಳವುಗೈದಿರು ವುದಾಗಿ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಲೈಂಗಿಕ  ಕಿರುಕುಳ ನೀಡಿದ ಪ್ರಕರಣ: ಆರೋಪಿ ದೋಷಿ

ಕಾಸರಗೋಡು: ಹದಿನೈದು ವರ್ಷದ ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ (೧)ರಲ್ಲಿ ನಡೆದ ವಿಚಾರಣೆ ಯಲ್ಲಿ ಸಾಬೀತುಗೊಂಡಿದ್ದು, ಆದ್ದರಿಂದ ಆತ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣದ ಘೋಷಣೆಯನ್ನು ನ್ಯಾಯಾಲಯ ಇಂದು ನಡೆಸಲಿದೆ. ಮೊಗ್ರಾಲ್ ಪುತ್ತೂರು ಕಂಬಾರ್ ನಿವಾಸಿ ಲೋಕೇಶ್ (೪೭) ಈ ಪ್ರಕರಣದ ಆರೋಪಿಯಾಗಿದ್ದು, ಆತ ತಪ್ಪಿತಸ್ಥನೆಂದು ತೀರ್ಪಿನಲ್ಲಿ ನ್ಯಾಯಾ ಲಯ ತಿಳಿಸಿದೆ. ೨೦೧೮ ಫೆಬ್ರವರಿ ೨೫ರಂದು ಬದಿಯಡ್ಕ …

ಶಬರಿಮಲೆ: ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ

ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ನಿನ್ನೆ ಸಂಜೆ ತೆರೆಯುವುದರೊಂದಿಗೆ ಈ ಬಾರಿಯ ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ ಲಭಿಸಿತು. ನಿನ್ನೆ ಸಂಜೆ ೫ ಗಂಟೆಗೆ ತಂತ್ರಿ ಕಂಠರ ಮಹೇಶ್ ಮೋಹನರ್ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಕೆ. ಜಯರಾಮನ್ ನಂಬೂದಿರಿ ಕ್ಷೇತ್ರದ ಬಾಗಿಲು ತೆರೆದು ದೀಪ ಬೆಳಗಿಸಿದರು. ಇಂದು ಮುಂಜಾನೆ ೩ ಗಂಟೆಗೆ ಮುಖ್ಯ ಅರ್ಚಕ ಪಿ.ಎನ್. ಮಹೇಶ್ ನಂಬೂದಿರಿ ಕ್ಷೇತ್ರದ ಬಾಗಿಲು ತೆರೆದರು. ಅನಂತರ ತುಪ್ಪಾಭಿಷೇಕ ಸಹಿತ ವಿವಿಧ ಸೇವೆಗಳು ಆರಂಭಗೊಂಡಿತು. ಕ್ಷೇತ್ರದ ಬಾಗಿಲು …

ಕಳಮಶ್ಶೇರಿ ಸ್ಫೋಟ: ಇನ್ನೋರ್ವ ಮೃತ್ಯು

ಕೊಚ್ಚಿ: ಕಳಮಶ್ಶೇರಿಯಲ್ಲಿ ಯಹೋವನ ವಲಯ ಸಮಾವೇಶ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇನ್ನೋರ್ವ ಮೃತಪಟ್ಟನು. ಮಲಯಾಟೂರು ಕಡವನ್ ಕುಡಿ ನಿವಾಸಿ ಪ್ರದೀಪನ್ ಎಂಬವರ ಪುತ್ರ ಪ್ರವೀಣ್ ಪ್ರದೀಪ್ (೨೩) ಮೃತಪಟ್ಟ ವ್ಯಕ್ತಿ.  ಇದರೊಂದಿಗೆ ಈ ಸ್ಫೋಟದಿಂದ ಸಾವಿಗೀಡಾದವರ ಸಂಖ್ಯೆ ಆರಕ್ಕೇರಿದೆ. ಸ್ಫೋಟದಲ್ಲಿ ಗಾಯಗೊಂಡಿದ್ದ ಪ್ರವೀಣ್‌ರ ತಾಯಿ ರೀನ ಜೋಸ್ (೪೫), ಸಹೋದರಿ ಲಿಬಿನ (೧೨) ಎಂಬಿವರು ಇತ್ತೀಚೆಗೆ ಮೃತಪಟ್ಟಿದ್ದರು. ಅಕ್ಟೋಬರ್ ೨೯ರಂದು ಬೆಳಿಗ್ಗೆ ೯ ಗಂಟೆ ವೇಳೆ ಹಾಲ್‌ನೊಳಗೆ  ಸ್ಫೋಟ ನಡೆದಿದೆ. ಸ್ಫೋಟ ವೇಳೆ …