ಪಚ್ಚಂಬಳದಲ್ಲಿ ಮನೆಗೆ ನುಗ್ಗಿದ ಕಳ್ಳರು

ಕುಂಬಳೆ:  ಪಚ್ಚಂಬಳದಲ್ಲಿ ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿದ್ದಾರೆ. ಪಚ್ಚಂಬಳ ಕಾಂದಲ್‌ನ ಅಬ್ದುಲ್ ರಹ್ಮಾನ್‌ರ ಮನೆಗೆ ಕಳ್ಳರು ನುಗ್ಗಿದ್ದಾರೆ. ಅಬ್ದುಲ್ ರಹ್ಮಾನ್ ಮನೆಗೆ ಬೀಗ ಜಡಿದು ಕುಟುಂಬ ಸಮೇತ ಮೊನ್ನೆ ಪುತ್ರನ ಮನೆಗೆ ತೆರಳಿದ್ದರು.ನಿನ್ನೆ ಅವರು ಮgಳಿದಾಗ ಮನೆಗೆ ಕಳ್ಳರು ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಪಿಕ್ಕಾಸು ಬಳಸಿ ಬಾಗಿಲಿನ ಬೀಗ ಮುರಿದಿರುವುದಾಗಿ ತಿಳಿದುಬಂದಿದೆ. ಮನೆಯೊಳಗೆ ಚೆಲ್ಲಾಪಿಲ್ಲಿಗೊಳಿಸಿದ್ದು ಆದರೆ ಯಾವುದೇ ವಸ್ತುಗಳು ಕಳವಿಗೀಡಾಗಿಲ್ಲವೆನ್ನಲಾಗಿದೆ.

ಅಂಗಡಿಗೆ ನುಗ್ಗಿ ದಾಂಧಲೆ ಓರ್ವನ ವಿರುದ್ಧ ಕೇಸು

ಕುಂಬಳೆ: ತೆಂಗಿನಕಾಯಿ ಖರೀದಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಂತೆ ಕಟ್ಟತ್ತಡ್ಕದ ಗಣೇಶನ್ ಎಂಬಾತನ ವಿರುದ್ಧ ಕುಂಬಳ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಟ್ಟತ್ತಡ್ಕದಲ್ಲಿರುವ ತೆಂಗಿನಕಾಯಿ ಖರೀದಿ ಅಂಗಡಿಗೆ ನಿನ್ನೆ ಬೆಳಿಗ್ಗೆ ಅತಿಕ್ರಮಿಸಿ  ನುಗ್ಗಿದ ಗಣೇಶನ್ ಅಲ್ಲಿನ ಗಾಜು ಪುಡಿಗೈದು ನಾಶನಷ್ಟ ಸೃಷ್ಟಿಸಿರುವುದಾಗಿ ದರಲಾಗಿದೆ. ಈ ಬಗ್ಗೆ ಅಂಗಡಿಯ ಮಾಲಕ ಕನ್ಯಪ್ಪಾಡಿಯ ಅಬ್ದುಲ್ಲ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ಹಾಲಿನ ಲಾರಿ ಢಿಕ್ಕಿ ಪಾದಚಾರಿಗೆ ಗಾಯ

ಕುಂಬಳೆ: ಹಾಲು ಸಾಗಾಟದ ಲಾರಿ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ. ಆರಿಕ್ಕಾಡಿ ನಿವಾಸಿ ಅಬ್ದುಲ್ಲ (೬೯) ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಇವರು ಆರಿಕ್ಕಾಡಿ ಜಂಕ್ಷನ್‌ನಲ್ಲಿ ನಡೆದು ಹೋಗುತ್ತಿದ್ದಾಗ ಆಗಮಿಸಿದ ಲಾರಿ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಈ ಬಗ್ಗೆ ಅಬ್ದುಲ್ಲರ ಪುತ್ರ ಮೊಹಮ್ಮದ್ ಅಶ್ರಫ್ ನೀಡಿದ ದೂರಿನಂತೆ ಲಾರಿ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ.

ಬಂದರೂ ಸೇರಿದಂತೆ ಇಡೀ ಗಾಝಾ ಇಸ್ರೇಲ್ ಸೇನೆಯ ಹಿಡಿತದಲ್ಲಿ

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡು ಇಂಗಿದೆ೪೨ನೇ ದಿನ ಕಳೆದರೂ ಇನ್ನೂ ಮುಂದುವರಿಯುತ್ತಿದೆ. ಈ ಮಧ್ಯೆ ಇಸ್ರೇಲ್ ಸೇನೆ ಗಾಝಾ ಬಂದರು ಸೇರಿದಂತೆ ಇಡೀ ಗಾಝಾವನ್ನು ತನ್ನ ಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಇಸ್ರೇಲ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜ್ಞಾನವಾಪಿ ಸರ್ವೇ ಮುಕ್ತಾಯ: ವರದಿ ಇಂದು ನ್ಯಾಯಾಲಯಕ್ಕೆ ಸಲ್ಲಿಕೆ

ಲಕ್ನೋ: ಉತ್ತರ ಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡ ನಡೆಸಿದ ನಿರಂತರ ಸಮೀಕ್ಷೆ ಕಾರ್ಯ ಪೂರ್ಣಗೊಂ ಡಿದ್ದು, ಅದರ ವರದಿಯನ್ನು ಎಎಸ್‌ಐ ಮುಚ್ಚಿದ ಲಕೋಟೆಯಲ್ಲಿ ಇಂದು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

ಶಾಲಾ ಕಲೋತ್ಸವಕ್ಕೆ ಸಸ್ಯಾಹಾರ ಮಾತ್ರ

ಕೊಲ್ಲಂ: ಈ ಸಲದ ರಾಜ್ಯ ಶಾಲಾ ಕಲೋತ್ಸವದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಸಸ್ಯಾಹಾರ ಆಹಾರವನ್ನು ಮಾತ್ರವೇ ಬಡಿಸಲಾಗುವುದೆಂದೂ, ಮಾಂಸಾಹಾರ ನೀಡಲಾಗುವುದಿಲ್ಲವೆಂದು ರಾಜ್ಯ ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ರಾಜ್ಯ ಶಾಲಾ ಕಲೋತ್ಸವದಲ್ಲಿ ಮಾಂಸಾಹಾರ ಬಡಿಸಿರುವುದು ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಅದರಿಂದ ಈ ಬಾರಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟನೆ

ಕುಂಬಳೆ: ಶಾಲಾ ಕಲೋತ್ಸವ ಗಳ ಮೂಲಕ ಸಮಾಜದಲ್ಲಿ ಪ್ರತಿಭೆ ಗಳನ್ನು ಸೃಷ್ಟಿಸಲು, ಸೌಹಾರ್ದವನ್ನು ಬೆಳೆಸಲು ಕಾರಣವಾಗುತ್ತದೆ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಪೇರಾಲು ಜಿಜೆಬಿಎಸ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರ ಅಧ್ಯಕ್ಷತೆ ವಹಿಸಿದರು. ಸ್ವಾಗತಸಮಿತಿ ಸಂಚಾಲಕ ಹರ್ಷ ಸ್ವಾಗತಿಸಿದರು. ಎಇಒ ಶಿಧರ ಎಂ. ವರದಿ ಮಂಡಿಸಿದರು. ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್, ನಸೀಮ ಖಾಲಿದ್,  ಎಂ. ಸಬೂರ, ಬಿ.ಎ. ರಹ್‌ಮಾನ್ ಆರಿಕ್ಕಾಡಿ, ತಾಹಿರ …

ನವಕೇರಳ ಸಭೆ: ಸಿಪಿಎಂನ ಚುನಾವಣಾ ಪ್ರಚಾರ ಯಾತ್ರೆ- ಬಿಜೆಪಿ

ಕಾಸರಗೋಡು: ನಾಳೆ ಮಂಜೇಶ್ವರದಿಂದ ಆರಂಭಗೊಳ್ಳಲಿರುವ ಸರಕಾರಿ ಮಟ್ಟದ ನವಕೇರಳ ಸಭೆ (ಸದಸ್ಸ್) ಸಿಪಿಎಂನ ಒಂದು ಚುನಾವಣಾ ಪ್ರಚಾರ ಯಾತ್ರೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ. ಕೆ. ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸರಕಾರಿ ಸವಲತ್ತುಗಳನ್ನು ಉಪಯೋಗಿಸಿ ಸಿಪಿಎಂನ ಚುನಾವಣಾ ನಿಧಿಗೆ ಜನರಿಂದ ಹತ್ತು ಕೋಟಿ ರೂ.ವನ್ನು ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾಗುತ್ತಿದೆ. ಯಾವುದೇ ರೀತಿಯ ಲೆಕ್ಕ ಪತ್ರಗಳನ್ನಾಗಲೀ, ತಯಾರಿಸದೆ ಸ್ಥಳೀಯಾಡಳಿತ ಸಂಸ್ಥೆಗಳು, ಸಾರ್ವಜನಿಕರು, ವ್ಯಾಪಾರಿ ಸಮೂಹ, ಮರಳು- ಶ್ರೀಗಂಧ ಮತ್ತು ಕೋರೆ ಮಾಫಿಯಾಗಳಿಂದಲೂ ಇದರ ಹೆಸರಲ್ಲಿ ಹಣ …

ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಶ್ರೀ ಧರ್ಮಶಾಸ್ತ ಸೇವಾ ಸಂಘದ ಆಶ್ರಯದಲ್ಲಿ ಡಿಸೆಂ ಬರ್ 7ರಿಂದ 10ರತನಕ ಶ್ರೀ ಮಲ್ಲಿ ಕಾರ್ಜುನ ದೇವಸ್ಥಾನದ ವಠಾರದಲ್ಲಿ ಜರಗುವಂತಹ 58ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪನ್ ದೀಪೆÆÃ ತ್ಸವದ ಆಮಂತ್ರಣ ಪತ್ರಿಕೆಯನ್ನು ಮಂದಿರದಲ್ಲಿ ಬಿಡುಗಡೆ ಮಾಡಲಾ ಯಿತು. ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಸುರೇಶ್ ಉಪಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ , ಲವ ಮೀಪುಗುರಿ, ಪ್ರಧಾನ ಕಾರ್ಯದರ್ಶಿ ಧನಂಜಯ ಮಾನ್ಯ, ಮಹೇಶ್ ನೆಲ್ಲಿ ಕುಂಜೆ ಕೋಶಾಧಿಕಾರಿ ಅನಂತರಾಜ್, ಗುರುಸ್ವಾಮಿಯವರಾದ ಬಾಲಕೃಷ್ಣ, ಕರುಣಾಕರ, ಭವಾನಿಶಂಕರ ಬಾಬು, ಪುರುಷೋತ್ತಮ …

ಕುಂಬ್ಡಾಜೆ ಪಂ. ಬಿಎಂಎಸ್ ಧರಣಿ

ಮವ್ವಾರು: ಕೃಷಿ ಕಾರ್ಮಿಕರನ್ನು ಕೇರಳ ಸರಕಾರ ಅವಗಣಿಸುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಪಂಚಾಯತ್ ಮುಂಭಾಗ ಬಿಎಂಎಸ್ ನಡೆಸುವ ಧರಣಿಯಂತೆ ಕುಂಬ್ಡಾಜೆ ಪಂ.ನಲ್ಲಿ ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ರಾಮಕೃಷ್ಣ ಪೊಡಿಪ್ಪಳ್ಳ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ವಲಯ ಅಧ್ಯಕ್ಷ ಆನಂದ ಸಿ.ಎಚ್., ಕಾರ್ಯದರ್ಶಿ ಸದಾಶಿವ, ನಾರಾಯಣ ಪದ್ಮಾರ್ ಶುಭ ಕೋರಿದರು. ದುರ್ಗಾ ಪ್ರಸಾದ್ ಸ್ವಾಗತಿಸಿ, ಶಿವಪ್ಪ ನಾಯ್ಕ್ ವಂದಿಸಿದರು.