ಉಡುಪಿಯಲ್ಲಿ ನಾಲ್ವರ  ಕೊಲೆಗೈದ ಆರೋಪಿ ಬಂಧನ

ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು  ಪ್ರತ್ಯೇಕ ತನಿಖಾ ತಂಡ ಸೆರೆ ಹಿಡಿದಿದೆ. ಮಹಾ ರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪ್ರವೀಣ್ ಅರುಣ್ ಚೌಗಾಲೆ ಯಾನೆ ಪ್ರವೀಣ್ ಚೌಗಾಲೆ (೩೫) ಎಂಬಾತನನ್ನು ಬೆಳಗಾವಿಯಿಂದ ಬಂಧಿಸಿರುವುದಾಗಿ ತಿಳಿಸಲಾಗಿದೆ. ನೆಜಾರು ಸಮೀಪದ ಕೆಮ್ಮಣ್ಣು ಹಂಪನಕಟ್ಟೆಯ ನಿವಾಸಿ ನೂರ್ ಮುಹಮ್ಮದ್‌ರ ಪತ್ನಿ ಹಸೀನ, ಮಕ್ಕಳಾದ ಅಫ್ಸಾನ್,  ಐನಾಸ್, ಅಸೀನ್ ಎಂಬಿವರನ್ನು ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಬೆಳಗಾವಿ ರಾಯಭಾಗ ತಾಲೂಕಿನ ಕುಡಚ್ಚಿ ಎಂಬಲ್ಲಿ ಪ್ರವೀಣ್ ಚೌಗಾಲೆಯನ್ನು ಉಡುಪಿ …

ಅರಣ್ಯದಲ್ಲಿ ಬಚ್ಚಿಡಲಾಗಿದ್ದ  ಹುಳಿರಸ, ಮದ್ಯ ಪತ್ತೆ

ಮುಳ್ಳೇರಿಯ: ಆದೂರಿಗೆ ಸಮೀಪದ ಪೆರಿಯಡ್ಕದ ಅರಣ್ಯದಲ್ಲಿ ಬದಿಯಡ್ಕ ಅಬಕಾರಿ ರೇಂಜ್ ಇನ್ಸ್ ಪೆಕ್ಟರ್ ಎಚ್. ಬಿನುರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾ ರಿಸಲು ಬಚ್ಚಿಡಲಾಗಿದ್ದ ೧೦೦ ಲೀಟರ್ ಹುಳಿರಸ ಮತ್ತು ಒಂದು ಲೀಟರ್ ಕಳ್ಳಬಟ್ಟಿ ಸಾರಾಯಿ ಪತ್ತೆಹಚ್ಚಿದೆ. ಈ ಮಾಲುಗಳನ್ನು ಬಳಿಕ ಅಲ್ಲೇ ನಾಶಪಡಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಐ.ಬಿ. ಪಿ.ಒ ಜೇಕಬ್, ಮಹಿಳಾ ಎಕ್ಸೈಸ್ ಆಫೀಸರ್ ಶಾಲಿನಿ, ಸಿವಿಲ್ …

ಸಿಪಿಎಂ ರೂಪೀಕರಿಸಿದ ಮುಖಂಡರಲ್ಲಿ ಓರ್ವರಾದ ಶಂಕರಯ್ಯ ನಿಧನ

ಚೆನ್ನೈ: ಸಿಪಿಎಂ ರೂಪೀಕರಿಸಿದ ಹಿರಿಯ ಮುಖಂಡರಲ್ಲಿ ಓರ್ವರಾದ ಎನ್. ಶಂಕರಯ್ಯ (೧೦೨) ನಿಧನ ಹೊಂದಿದರು. ಅಸೌಖ್ಯ ತಗಲಿ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿದ್ದರು. ೧೯೬೪ ಎಪ್ರಿಲ್ ೧೧ರಂದು ಸಿಪಿಐ ರಾಷ್ಟ್ರೀಯ ಕೌನ್ಸಿಲ್‌ನಿಂದ ವಿ.ಎಸ್. ಅಚ್ಯುತಾನಂದ್‌ರ ಜೊತೆಗೆ ಹೊರ ಬಂದ ಇವರು ಸಿಪಿಎಂಗೆ ರೂಪು ನೀಡಿದವರಲ್ಲಿ ಓರ್ವರಾಗಿದ್ದಾರೆ. ೧೯೬೭, ೧೯೭೭, ೧೯೮೦ರಲ್ಲಿ ಸಿಪಿಎಂನ ಸದಸ್ಯರಾಗಿ ತಮಿಳುನಾಡು ವಿಧಾನಸಭೆಗೆ ತಲುಪಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಕಾರಣ ಶಿಕ್ಷಣ ಪೂರ್ತಿಗೊಳಿಸಲು   ಬ್ರಿಟೀಷ್ ಸರಕಾರ ಅನುಮತಿ ನೀಡದೆ ಅವರನ್ನು ಕಾರಾಗೃಹದಲ್ಲಿರಿಸಿತ್ತು. ೮ ವರ್ಷ …

ನವಕೇರಳ ಸಭೆ: ೧೮, ೧೯ರಂದು ಮುಖ್ಯಮಂತ್ರಿ, ಸಚಿವರು ಜಿಲ್ಲೆಯಲ್ಲಿ

ಕಾಸರಗೋಡು:  ರಾಜ್ಯ ಸರಕಾರದ ಅಭಿವೃದ್ಧಿ ಸಾಧನೆಗಳು, ಭವಿಷ್ಯದ ಯೋಜನೆಗಳ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಅಂಗವಾಗಿ ರಾಜ್ಯದಲ್ಲಿ ಹಮ್ಮಿಕೊಂಡ ನವಕೇರಳ ಸಭೆ ಕಾಸರಗೋಡು ಜಿಲ್ಲೆಯಲ್ಲಿ ನ. ೧೮ ಹಾಗೂ ೧೯ರಂದು ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಸಭೆ ೧೮ರಂದು ಮಧ್ಯಾಹ್ನ ೨ ಗಂಟೆಗೆ  ಪೈವಳಿಕೆ ನಗರ ಶಾಲೆಯ ವಠಾರದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ೩.೩೦ಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಸಾರ್ವಜನಿಕರೊಂದಿಗೆ …

ನವ ಕೇರಳ ಸಭೆ ಪ್ರಚಾರಾರ್ಥ ಬೀದಿ ಬದಿ ಚಿತ್ರ ರಚನೆ

ಉಪ್ಪಳ: ನವಕೇರಳ ಸಭೆ ಕಾರ್ಯ ಕ್ರಮದ ಪ್ರಚಾರಾರ್ಥ ಬೀದಿ ಬದಿ ಚಿತ್ರರಚನೆ ಕಾರ್ಯಕ್ರಮ ನಿನ್ನೆ ಸಂಜೆ ಪೈವಳಿಕೆ ನಗರದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದರು. ಆರ್.ಡಿ.ಒ ಅಥುಲ್ ಸ್ವಾಮಿನಾಥನ್, ತಹಶೀಲ್ದಾರರಾದ ಸಜೀತಿ, ಮೋಹನ್ ರಾಜ್, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಜನಪ್ರತಿನಿಗಳಾದ ಅಬ್ದುಲ್ಲ, ಶ್ರೀನಿವಾಸ ಭಂಡಾರಿ, ಪೈವಳಿಕೆ ನಗರ ಶಾಲೆಯ ಮುಖ್ಯೋಪಧ್ಯಾಯ ಇಬ್ರಾಹಿಂ, ಪ್ರಾಂಶುಪಾಲ ರಘುರಾಮ ಆಳ್ವ ಉಪಸ್ಥಿತರಿದ್ದರು. ಶ್ಯಾಮ್ ಭಟ್ ಸ್ವಾಗತಿಸಿ, ಹಾರೀಸ್ …

ಅನಂತಪುರ ಕ್ಷೇತ್ರದಲ್ಲಿ ಮಕರ ಸಂಭ್ರಮ ೧೭ರಂದು

ಕುಂಬಳೆ: ಅನಂತಪುರ ಕ್ಷೇತ್ರದ ಸರೋವರದಲ್ಲಿ ಇತ್ತೀಚೆಗೆ ಮೊಸಳೆಯೊಂದು ಪ್ರತ್ಯಕ್ಷಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಕರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಈ ತಿಂಗಳ ೧೭ರಂದು ಬೆಳಿಗ್ಗೆ ೧೦ಕ್ಕೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಅಪರಾಹ್ನ ೨.೩೦ಕ್ಕೆ ಊರ ಭಕ್ತ ಜನರ ಸಮಾಲೋಚನಾ ಸಭೆ ನಡೆಯಲಿದ್ದು, ಎರಡೂ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ ವಿನಂತಿಸಿದ್ದಾರೆ.

ಉದ್ಯಮಿ, ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ವಾಹನ ಕೊಡುಗೆ

ಮೀಯಪದವು: ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿಗಳಾದ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಗೆ ವ್ಯಾನ್ ಕೊಡುಗೆ ನೀಡಿದರು. ಶಾಲೆಯು ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಕೆ. ಶೆಟ್ಟಿ ಕುಳೂರು ಹಾಗೂ ರಘುರಾಮ್ ಕೆ. ಶೆಟ್ಟಿ ಕುಳೂರು ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರ ಹಸ್ತಾಂತರ ಕಾರ್ಯಕ್ರಮ ಶಾಲೆಯಲ್ಲಿ ನಡೆದಿದ್ದು, ಲೀಲಾವತಿ ಪಕೀರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಮಾಲತಿಯವರಿಗೆ ವಾಹನ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ವಾರ್ಡ್ …

ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗೆ ಬೀಳ್ಕೊಡುಗೆ

ಕಾಸರಗೋಡು: ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ನೀಡಲಾಯಿತು. ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್  ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆ ವಹಿಸಿದರು. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕಾಪಾ ಪ್ರಕರಣಗಳನ್ನು ಲೋಪದೋಷವಿಲ್ಲದೆ ಜ್ಯಾರಿಗೊಳಿಸಲು ಸಾಧ್ಯವಾಗಿರುವುದು ಜಿಲ್ಲಾ ಪೊಲೀಸ್ ಹಾಗೂ ಆಡಳಿತದ ಒಟ್ಟಾದ ಪ್ರಯತ್ನದಿಂದ ಎಂದೂ, ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನೇತೃತ್ವ ಪ್ರಶಂಸನೀಯವೆಂದು ಜಿಲ್ಲಾಧಿಕಾರಿ ನುಡಿದರು. ಎಡಿಎಂ ಕೆ. ನವೀನ್‌ಬಾಬ, ಸಹಾಯಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಆರ್‌ಡಿಒ ಅಥುಲ್ …

ಶಿಶು ದಿನಾಚರಣೆ: ರ‍್ಯಾಲಿಯಲ್ಲಿ ನಾಯಮ್ಮಾರ್‌ಮೂಲೆ ಶಾಲೆ ಪ್ರಥಮ

ವಿದ್ಯಾನಗರ: ಶಿಶು ದಿನಾಚರಣೆಯಂಗವಾಗಿ ಜಿಲ್ಲಾ ಶಿಶು ಕ್ಷೇಮ ಸಮಿತಿ ನಡೆಸಿದ ಜಿಲ್ಲಾ ಮಟ್ಟದ ರ‍್ಯಾಲಿಯಲ್ಲಿ ನಾಯಮ್ಮಾರ್‌ಮೂಲೆ ತನ್‌ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ಎಸ್.ಪಿ.ಸಿ. ಘಟಕ ಪ್ರಥಮ ಸ್ಥಾನ ಗಳಿಸಿದೆ. ವಿಜೇತರಿಗೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಟ್ರೋಫಿ ವಿತರಿಸಿದರು. ಜಿಲ್ಲಾ ಇನ್‌ಫರ್ಮೇಶನ್ ಅಧಿಕಾರಿ ಕೆ. ಮಧುಸೂದನನ್, ಆರ್ಯ ಪಿ ರಾಜ್, ಶಿಕ್ಷಣ ಉಪ ನಿರ್ದೇಶಕ ಕೆ. ನಂದಿಕೇಶನ್, ಟಿ.ಎಂ.ಎ. ಕರೀಂ, ಸಿ.ವಿ. ಗಿರೀಶನ್, ಸಚಿತ ರೈ, ಜಯನ್ ಕಾರಡ್ಕ ಭಾಗವಹಿಸಿದರು.

ಡಿಎಡಬ್ಲ್ಯುಎಫ್ ಮಂಜೇಶ್ವರ ಏರಿಯಾ ಸಮಾವೇಶ

ಪೈವಳಿಕೆ: ಡಿಎಡಬ್ಲ್ಯುಎಫ್ ಮಂಜೇಶ್ವರ ಏರಿಯಾ ಸಮಾವೇಶ ಮಂಜೇಶ್ವರದಲ್ಲಿ ಜರಗಿತು. ಮೊಯ್ದೀನ್ ಕುಟ್ಟಿ ಮಂಜೇಶರ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಉದ್ಘಾಟಿಸಿದರು. ಕಾರ್ಯದರ್ಶಿ ವರದಿ ಮಂಡಿಸಿದರು. ಜಿಲ್ಲಾ  ಸಮಾವೇಶಕ್ಕೆ  ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಏರಿಯಾ ಅಧ್ಯಕ್ಷರಾಗಿ ಮೊಯ್ದೀನ್ ಕುಟ್ಟಿ ಯವರನ್ನು ನೇಮಿಸಲಾಯಿತು. ಚಂದ್ರ ನಾಕ್ ಸ್ವಾಗತಿಸಿ, ಚಂದ್ರಾವತಿ ವಂದಿಸಿದರು.