ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಸೂತ್ರಧಾರನ ಸೆರೆ

ಮಂಜೇಶ್ವರ:  ಬೆಂಗಳೂರಿನಿಂದ ಕೇರಳಕ್ಕೆ ಮಾದಕವಸ್ತು ತಲುಪಿಸುತ್ತಿರುವ ಜಾಲದ ಪ್ರಧಾನ ಸೂತ್ರಧಾರನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಪಳ್ಳಿಕುನ್ನು ಚಕ್ಕರಪಾರ ನಿವಾಸಿ ಹಂಸ ಮುಸಾಮಿಲ್ (22) ಬಂಧಿತ ಆರೋಪಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ಸಿ.ಕೆ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್.ಇ ಎಸ್‌ಐ ರತೀಶ್‌ಗೋಪಿ, ಎಎಸ್‌ಐ ಅತುಲ್‌ರಾಮ್, ಸೀನಿ ಯರ್ ಸಿವಿಲ್ ಪೊಲೀಸ್ ಆಫೀಸರ್ ಧನೇಶ್, ಸಿಪಿಒಗಳಾದ ಸಂದೀಪ್ ಮತ್ತು ಪ್ರಶೋಬ್ ಎಂಬವರನ್ನೊಳ ಗೊಂಡ …

ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಕಾರು  ಅಪಘಾತ

ಕುಂಬಳೆ: ಕುಂಬಳೆ-ಬದಿಯಡ್ಕ ಕೆಎಸ್‌ಟಿಪಿ ರಸ್ತೆಯಲ್ಲಿ  ವಾಹನ ಅಪಘಾತ ಪದೇ ಪದೇ ಸಂಭವಿಸು ತ್ತಿರುವುದು ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನ  ಕುಂಬಳೆ ಭಾಸ್ಕರ ನಗರದಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಮೂವರು ಯುವಕರು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿ ದ್ದಾರೆ. ಸೀತಾಂಗೋಳಿ ಭಾಗದಿಂದ ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಭಾಸ್ಕರ ನಗರಕ್ಕೆ ತಲುಪಿದಾಗ ರಸ್ತೆಯಿಂದ ಹೊರಗೆ ಚಲಿಸಿ ಮಗುಚಿ ಬಿದ್ದಿದೆ. ಶಬ್ದ ಕೇಳಿ ತಲುಪಿದ ಸ್ಥಳೀಯರು ಕಾರಿನೊಳಗೆ ಸಿಲುಕಿಕೊಂಡವರನ್ನು ಹೊರಗೆ ತೆಗೆದು ರಕ್ಷಿಸಿದರು. ಭಾಸ್ಕರನಗರ ಹಾಗೂ ಸಮೀಪ …

ತಾಳಿಪಡ್ಪು ಸರ್ವೀಸ್ ರಸ್ತೆಯಲ್ಲಿ ಸಿಲುಕಿಕೊಂಡ ಲಾರಿ: ಮುಕ್ಕಾಲು ಗಂಟೆ ಸಾರಿಗೆ ಅಡಚಣೆ

ಕಾಸರಗೋಡು: ತಾಳಿಪಡ್ಪು ಸರ್ವೀಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಲಾರಿಯೊಂದು ಸಿಲುಕಿಕೊಂಡು ನಿಂತ ಪರಿಣಾಮ ಸುಮಾರು ಮುಕ್ಕಾಲು ಗಂಟೆ ಕಾಲ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿ ಸಲಾಯಿತು. ಇಂದು ಬೆಳಿಗ್ಗೆ 8.45ರ ವೇಳೆ ಘಟನೆ ನಡೆದಿದೆ. ಮಲಪ್ಪುರಂನಿಂದ ತಾಳಿಪಡ್ಪುವಿನ ಅಂಗಡಿಗೆ ಮಿಠಾಯಿ ತಂದ ಲಾರಿಯನ್ನು ತಿರುಗಿಸಲೆಂದು ಹಿಂದಕ್ಕೆ ಚಲಾಯಿಸಿದಾಗ ಅದರ ಪ್ಲೇಟ್ ಇಂಟರ್‌ಲಾಕ್‌ಗೆ  ಸಿಲುಕಿಕೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ.

ಕುಳೂರುಬೀಡು ದಾಸಣ್ಣ ಆಳ್ವ ನಿಧನ

ಮೀಂಜ: ಪ್ರಗತಿಪರ ಕೃಷಿಕ ಕುಳೂರು ಬೀಡು ಕೆ. ದಾಸಣ್ಣ ಆಳ್ವ (92) ನಿಧನ ಹೊಂದಿದರು. ಬಂಟರ ಸಂಘದ ಮಂಜೇಶ್ವರ ಫಿರ್ಕಾ ಅಧ್ಯಕ್ಷರಾಗಿದ್ದರು. ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮಾಗಣೆ ಪ್ರಮುಖರಾಗಿರುವ ಇವರು ಅವಿವಾಹಿತರಾಗಿದ್ದರು. ದಿ| ಪಕೀರ ಆಳ್ವ ಕೋಡಿಂಗಾರುಗುತ್ತು- ದಿ| ಕಮಲಮ್ಮ ಕುಳೂರುಬೀಡು ದಂಪತಿ ಪುತ್ರನಾಗಿದ್ದಾರೆ. ಇವರ ಸಹೋದರ ರಾದ ಜಗನ್ನಾಥ ಆಳ್ವ, ಜನಾರ್ದನ ಆಳ್ವ, ಸಹೋದರಿ ಸೋಮಾವತಿ ಹೆಗಡೆ ಈ ಹಿಂದೆ ನಿಧನ ಹೊಂದಿದ್ದಾರೆ.

ಹತ್ತು ದಿನಗಳ ಹಿಂದೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ

ಉಪ್ಪಳ: ಹತ್ತು ದಿನಗಳ ಹಿಂದೆ ಕೆಲಸಕ್ಕೆ ತೆರಳಿದ ಮಧ್ಯವಯಸ್ಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮಂಜೇಶ್ವರ ಬಳಿಯ ಹೊಸಂಗಡಿ ಬೆಜ್ಜದ ಮುಹಮ್ಮದ್(55) ನಾಪತ್ತೆಯಾದ ವ್ಯಕ್ತಿ. ಇವರು ಊರಿನಲ್ಲ್ಲಿ ಬಾವಿ ನಿರ್ಮಾಣ ಸಹಿತ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ಹತ್ತು ದಿನಗಳ ಹಿಂದೆ ಕೆಲಸಕ್ಕೆಂದು  ತಿಳಿಸಿ ಮುಹಮ್ಮದ್ ಮನೆಯಿಂದ ತೆರಳಿದ್ದರೆನ್ನಲಾಗಿದೆ. ದಿನಗಳು ಕಳೆದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಯಿತು. ಅಲ್ಲದೆ ಸಂಬಂಧಿಕರ ಮನೆಗಳಲ್ಲೂ ಹುಡು ಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ನಾಪತ್ತೆ ಬಗ್ಗೆ ವಾಟ್ಸಪ್‌ನಲ್ಲ್ಲಿ ಪ್ರಚಾರ ಮಾಡಿದರೂ ಪ್ರಯೋಜನವಾಗಿಲ್ಲ. …

ರೋಗಬಾಧಿತ ಪರಿಶಿಷ್ಟ ಜಾತಿ ಕುಟುಂಬದ ಮನೆ ಕುಸಿತ: 15 ದಿನಗಳ ಹಿಂದೆ ನಾಗರಿಕರು ಕುಟುಂಬವನ್ನು ಸ್ಥಳಾಂತರಿಸಿದುದರಿಂದ ತಪ್ಪಿದ ಭಾರೀ ದುರಂತ

ಕುಂಬಳೆ: ಕುಸಿದು ಬೀಳಲಾದ ಮನೆಯ  ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳದ ಅಧಿಕಾರಿಗಳು ಮನೆ ಕುಸಿದು ಬಿದ್ದಾಗ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಮನೆಯ ಸ್ಥಿತಿಯ ಬಗ್ಗೆ ವರದಿ ತಯಾರಿಸಿ ಕೂಡಲೇ ಮೇಲ ಧಿಕಾರಿಗಳಿಗೆ ಕಳುಹಿಸಿಕೊಡುವು ದಾಗಿ ತಿಳಿಸಿ ಅವರು ಮರಳಿದರು. ಹಲವು ವರ್ಷಗಳ ಹಿಂದೆ ಸರಕಾರದ ಯೋಜನೆಯಲ್ಲಿ ಮಂಜೂರಾಗಿ ನಿರ್ಮಿಸಲಾದ ಮನೆ ನಿನ್ನೆ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ.  ಪುತ್ತಿಗೆ ಪಂಚಾಯತ್ 11ನೇ ವಾರ್ಡ್‌ನ ಎಸ್‌ಸಿ ಕಾಲನಿಯಲ್ಲಿ ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿರುವ ಕಮಲ (60), …

ಅಡೂರು: ದೈವ ಕಲಾವಿದನ ಕೊಲೆ; ಆರೋಪಿಗೆ ರಿಮಾಂಡ್

ಅಡೂರು: ಉರುಡೂರು ಬಳಿಯ ಚಂದನಕ್ಕಾಡ್‌ನ ದೈವ ಕಲಾವಿದ ಟಿ. ಸತೀಶನ್‌ಯಾನೆ ಬಿಜು (46) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಚಂದನಕ್ಕಾಡ್‌ನ ಚಿದಾನಂದ (38) ಎಂಬಾತನನ್ನು  ಪೊಲೀಸರು ಬಂಧಿಸಿದ್ದಾರೆ. ಬಳಿಕ ಚಿದಾನಂದನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಕಳೆದ ಮಂಗಳವಾರ ಸಂಜೆ ಸತೀಶನ್ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ್‌ರ ಮನೆ ವರಾಂಡದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಬಳಿಕ ಅವರನ್ನು  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇದೊಂದು …

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಂಗಡಿ: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಪರಿಸರದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ನಿನ್ನೆ ವನಮಹೋತ್ಸವ ಕಾರ್ಯಕ್ರಮ ಜರಗಿತು. ಈ ವೇಳೆ ಮಾವು, ಹಲಸು, ಸಪೋಟ, ಪೇರಳೆ, ನೇರಳೆ ಮುಂತಾದ ಹಣ್ಣಿನ ಗಿಡಗಳನ್ನು ಸುಮಾರು ೫೫ ಮಂದಿಗೆ ವಿತರಿಸಲಾ ಯಿತು. ಅಬ್ದುಲ್ ನೌಶಾದ್‌ರಿಗೆ ಗಿಡ ನೀಡುವ ಮೂಲಕ ಡಾ| ಮುರಲೀ ಮೋಹನ ಚೂಂತಾರು ಉದ್ಘಾಟಿಸಿದರು. ಡಾ| ರಾಜಶ್ರೀ ಮೋಹನ್, ಡಾ| ಪ್ರಜ್ವಲ್, ರಮ್, ಚೈತ್ರ, ಸುಶ್ಮಿತಾ, ಜಯಶ್ರೀ ಉಪಸ್ಥಿತರಿದ್ದರು.

ಕೊಲ್ಲಿಯಿಂದ ಮರಳಿದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವಾರಗಳ ಹಿಂದೆ ಕೊಲ್ಲಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಹಿಂತಿರುಗಿದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಯಡ್ಕ, ಅನಿಞದ ದಿ| ಚಂದುಟ್ಟಿ ಮಣಿಯಾಣಿ- ಕಾವೇರಿ ದಂಪತಿ ಪುತ್ರ ಕಾಪುಂಕಯ ಉಣ್ಣಿಕೃಷ್ಣನ್ (37) ಮೃತಪಟ್ಟ ಯುವಕ. ನಿನ್ನೆ ಮುಂಜಾನೆ ಬೆಂಗಳೂರಿನ ಫ್ಲಾಟ್‌ನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಪತ್ನಿ ಅಂಜು ರಾತ್ರಿ ಪಾಳಿ ಕೆಲಸ ಮುಗಿಸಿ ಮುಂಜಾನೆ ಫ್ಲಾಟ್‌ಗೆ ತಲುಪಿದಾಗ ಪತಿ …

ಹೃದಯ ಬದಲಾವಣೆ ವೆಚ್ಚ ಭರಿಸಲು ನಾಡು ಸಿದ್ಧವಾದಾಗ ಮಣಿಪ್ರಸಾದ್ ನಿಧನ

ಕಾಸರಗೋಡು: ಹೃದಯ ಶಸ್ತ್ರಚಿಕಿತ್ಸೆಗಾಗಿ ಊರಿನವರೆಲ್ಲಾ ಜೊತೆಗೂಡಿದರೂ ಮಣಿ ಪ್ರಸಾದ್‌ರ ನಿಧನ ಸಂಭವಿಸಿದೆ. ಹೃದಯದ ವಾಲ್ವ್‌ಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಚೆಮ್ಮನಾಡು ಆಲಿಚ್ಚೇರಿ ಎರಿಂಞಿಕಾಲ್‌ನ ಎ. ಮಣಿಪ್ರಸಾದ್ (42) ಮೃತಪಟ್ಟ ಯುವಕ. ಇವರು ಕೊಲ್ಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆ ಯಲ್ಲಿ ಹೃದಯದ ವಾಲ್ವ್‌ಗೆ ತೊಂದರೆ ಇರುವುದನ್ನು ಪತ್ತೆಹಚ್ಚಲಾಗಿತ್ತು. ಅಲ್ಲಿ ಹಲವು ಕಾಲ ಚಿಕಿತ್ಸೆ ಮುಂದುವರಿಸಿ ದರೂ ರೋಗ ವಾಸಿಯಾಗದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಊರಿಗೆ ತಲುಪಿ ಕಣ್ಣೂರಿನ ಖಾಸಗಿ …