ಕಾರಡ್ಕ ಶಾಲೆಯಲ್ಲಿ ಜಿಲ್ಲಾ ಕಲೋತ್ಸವಕ್ಕೆ ಸಿದ್ಧತೆ : ಬಸ್ ಸೌಕರ್ಯ ಕೊರತೆ ಪರಿಹರಿಸಲು ಆಗ್ರಹ

ಮುಳ್ಳೇರಿಯ: ಜಿಲ್ಲಾ ಶಾಲಾ ಕಲೋತ್ಸವಕ್ಕೆ ಕಾರಡ್ಕದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಆದರೆ ಪ್ರಯಾಣ ಸೌಕರ್ಯದ ಕೊರತೆ ಸಮಸ್ಯೆಯಾಗಬಹುದೆಂದು ಭೀತಿ ಪಡಲಾಗಿದೆ. ಕಾರಡ್ಕ ವೊಕೇಶನಲ್ ಶಾಲೆಗೆ ಕಲೋತ್ಸವಕ್ಕಾಗಿ  ಜಿಲ್ಲೆಯ ವಿವಿಧ ಕಡೆಗಳಿಂದ ಸುಮಾರು ೫೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ಶಾಲೆಗೆ ತಲುಪಲು, ಶಾಲೆಯಿಂದ ರಾತ್ರಿ ವೇಳೆ ಹಿಂತಿರುಗಲು ಬಸ್ ಸೌಕರ್ಯದ ಕೊರತೆ ಕಂಡು ಬರಬಹುದೆಂದು ಸಂಬಂಧಪಟ್ಟವರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಗೆ ತಲುಪಲು ನೆಲ್ಲಿಕಟ್ಟೆ ಮುಳ್ಳೇರಿಯ ರಸ್ತೆ ಸೂಕ್ತವಾಗಿದ್ದು, ಆದರೆ ಈ ರೂಟ್‌ನಲ್ಲಿ ಬಸ್ ಸೌಕರ್ಯ …

ಪಾತೂರಿನಲ್ಲಿ ಚೆರ್ಕಳ ಅಬ್ದುಲ್ಲ, ಪಿ.ಬಿ. ಅಬ್ದುಲ್ ರಜಾಕ್ ಸಂಸ್ಮರಣೆ

ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಾತೂರು ಶಾಖೆಯ ವತಿಯಿಂದ ಮುಸ್ಲಿಂ ಲೀಗ್ ನೇತಾರ ಮಂಜೇಶ್ವರ ಮಾಜಿ ಶಾಸಕರಾಗಿದ್ದ ಚೆರ್ಕಳ ಅಬ್ದುಲ್ಲ, ಪಿ.ಬಿ. ಅಬ್ದುಲ್ ರಜಾಕ್ ಸಂಸ್ಮರಣೆ, ನೂತನ ಕಚೇರಿಯ ಉದ್ಘಾಟನೆ ಪಾತೂರಿನಲ್ಲಿ ಜರಗಿತು. ಖಾಝಿ  ಪಿ.ಎಂ. ಅಹ್ಮದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಐಯುಎಂಎಲ್ ರಾಜ್ಯ ಸಮಿತಿ ಕೌನ್ಸಿಲ್ ಸದಸ್ಯ ಪಿ.ಬಿ. ಅಬೂಬಕರ್ ಪಾತೂರು ಉದ್ಘಾಟಿಸಿದರು. ಯೂತ್ ಲೀಗ್ ನೇತಾರ ಝುಬೈರ್ ಮಾಸ್ತರ್ ಮಾತನಾಡಿದರು. ನೇತಾರರಾದ ಟಿ.ಎಂ. ಮೂಸ ಕುಂಞಿ ಹಾಜಿ ತೋಕೆ, ಎ. ಮಹಮ್ಮದ್ ಪಾವೂರು, ಉಮರಬ್ಬ …

ಪಳ್ಳತ್ತಡ್ಕ ಶ್ರೀ ಅಯ್ಯಪ್ಪಮಂದಿರ ವಾರ್ಷಿಕೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ: ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ೪೮ ನೇ ವಾಷಿ ðಕೋತ್ಸವದ ಅಂಗವಾಗಿ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ ಹಾಗೂ ಅಯ್ಯಪ್ಪ ದೀಪೆÆÃತ್ಸವ ಡಿಸೆಂಬರ್ ೨೪ರಿಂದ ೨೬ರವರÉಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗುರುಸ್ವಾಮಿಗಳ ಸಂಗಮ ಕಾರ್ಯ ಕ್ರಮ ನಡೆಯಿತು. ಧಾರ್ಮಿಕ ಮುಂ ದಾಳು, ಉದ್ಯಮಿ ಬಿ. ನಿತ್ಯಾನಂದ ಶೆಣೈ ಬದಿಯಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಮುಖ್ಯ ಅತಿಥಿಯÁಗಿ ಭಾಗವಹಿಸಿದರು. ಉದಯಕೇಶವ …

ಶಾಲಾ ವಿದ್ಯಾರ್ಥಿನಿಗೆ ಹಲವರಿಂದ ಕಿರುಕುಳ ೧೫ ಮಂದಿ ವಿರುದ್ಧ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಶಾಲಾ ವಿದ್ಯಾರ್ಥಿನಿಯಾದ ಹದಿನೈದರ ಹರೆಯದ ಬಾಲಕಿ ಹಲವರಿಂದ ಕಿರುಕುಳಕ್ಕೊಳಗಾಗಿರುವುದಾಗಿ ದೂರಲಾಗಿದೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ   ಬಾಲಕಿ ಹಲವರಿಂದ ಕಿರುಕುಳಕ್ಕೊಳಗಾಗಿದ್ದಳೆನ್ನಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬೇಡಗಂ ಪೊಲೀಸರು ಇದುವರೆಗೆ ಒಟ್ಟು ೧೫ ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಬಾಲಕಿ  ಕಿರುಕುಳ ಕ್ಕೊಳಗಾದ ವಿಷಯ ಬಹಿರಂಗಗೊಂ ಡಿದೆ. ಈ ಬಗ್ಗೆ ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ದೂರಿನಂತೆ ಬೇಡಗಂ ಪೊಲೀಸರು  ಆರಂಭದಲ್ಲಿ ೮ ಕೇಸುಗಳನ್ನು ದಾಖಲಿಸಿಕೊಂ ಡಿದ್ದರು.  ಈ ಸಂಬಂಧ …

ವ್ಯಕ್ತಿಯ ಮೃತದೇಹ ಉರಿದ ಸ್ಥಿತಿಯಲ್ಲಿ ರಸ್ತೆ ಬದಿ ಪತ್ತೆ 

ಪತ್ತನಂತಿಟ್ಟ: ಪತ್ತನಂತಿಟ್ಟದ ಓಮಲ್ಲೂರು ಎಂಬಲ್ಲಿ ವ್ಯಕ್ತಿಯೋರ್ವ ನ ಮೃತದೇಹ ಹೊತ್ತಿ ಉರಿದ ಸ್ಥಿತಿಯ ಲ್ಲಿ ಪತ್ತೆಯಾಗಿದೆ. ರಸ್ತೆ ಬದಿಯಲ್ಲೇ ಮೃತದೇಹವಿದ್ದು, ಇಂದು ಬೆಳಿಗ್ಗೆ ಅರಿವಿಗೆ ಬಂದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಹಿಳೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಮಹಿಳೆ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೆರ್ಲ ಸಮೀಪದ  ನಲ್ಕ ನಿವಾಸಿ ನಾರಾಯಣ ಪಾಟಾಳಿ ಯವರ ಪತ್ನಿ ಯಶೋಧ (೫೧) ಸಾವನ್ನಪ್ಪಿದ ಮಹಿಳೆ. ಬದಿಯಡ್ಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ದರು. ಮೃತದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿ ಲಾಯಿತು. ಐತ್ತಪ್ಪ ಪಾಟಾಳಿ-ಸಂಜೀವಿ ದಂಪತಿಯ ಪುತ್ರಿಯಾಗಿ ರುವ ಯಶೋಧ ಮಕ್ಕಳಾದ ಮಣಿಕಂಠ, ಅಜಿತ್, ಶ್ರೀದುರ್ಗಾ, ಸಹೋದರ-ಸಹೋದರಿಯರಾದ ಅಪ್ಪು ಪಾಟಾಳಿ, ಮಾಧವ ಪಾಟಾಳಿ, ಮಾಲತಿ, ಪ್ರೇಮ, ಪದ್ಮಾವತಿ, ಸಾವಿತ್ರಿ ಹಾಗೂ ಅಪಾರ …

ಸಾಲದ ಹೊರೆ ಸಹಿಸಲಾಗದೆ ರಾಜ್ಯದಲ್ಲಿ ಕೃಷಿಕ ಆತ್ಮಹತ್ಯೆ

ಆಲಪ್ಪುಳ: ಸಾಲದ ಹೊರೆಯನ್ನು ಸಹಿಸಲಾಗದೆ ರಾಜ್ಯದಲ್ಲಿ ಕೃಷಿಕನೋರ್ವ ಆತ್ಮಹತ್ಯೆ ಮಾಡಿಕೊಂಡ  ಅತೀ ದಾರುಣ ಘಟನೆ ನಡೆದಿದೆ. ಕುಟ್ಟನಾಡ್ ಬಳಿಯ ತಗಳಿ ನಿವಾಸಿಯೂ ಕಿಸಾನ್ ಸಂಘ ಜಿಲ್ಲಾ ಅಧ್ಯಕ್ಷರಾದ ಪ್ರಸಾದ್ ಎಂಬವರು ಆತ್ಮಹತ್ಯೆ ಮಾಡಿಕೊಂಡ  ವ್ಯಕ್ತಿಯಾಗಿದ್ದಾರೆ. ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪ್ರಸಾದ್ ಕೃಷಿ ಅಗತ್ಯಗಳಿಗಾಗಿ ಸಾಲ ಪಡೆಯಲು ಬ್ಯಾಂಕ್‌ವೊಂದಕ್ಕೆ ಸಮೀಪಿಸಿದ್ದರೆನ್ನಲಾಗಿದೆ. ಆದರೆ ಪಿ.ಆರ್.ಎಸ್ ಸಾಲ ಪಾವತಿಸಲು ಬಾಕಿಯಿರುವುದರಿಂದ ಸಾಲ ಲಭಿಸದೆಂದು ಬ್ಯಾಂಕ್ ಅಧಿಕಾರಿಗಳು  ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಮನನೊಂದು ಪ್ರಸಾದ್ …

ಪಿ. ಬಿಜೋಯ್ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ

ಕಾಸರಗೋಡು: ರಾಜ್ಯದ ಒಂಭತ್ತು ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳನ್ನು ಅತ್ತಿತ್ತ ವರ್ಗಾ ಯಿಸಲಾಗಿದೆ. ಇದರಂತೆ ಈಗ ತಿರುವನಂತಪುರ ರೇಂಜ್ ಸ್ಪೆಷಲ್ ಬ್ರಾಂಚ್‌ನ ಎಸ್‌ಪಿ ಆಗಿರುವ ಬಿ. ಬಿಜೋಯ್‌ರನ್ನು ಅಲ್ಲಿಂದ ವರ್ಗಾವಣೆ ನೀಡಿ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇವರು ಶೀಘ್ರ ಕಾಸರಗೋಡಿನಲ್ಲಿ ಅಧಿಕಾರ ವಹಿಸಲಿದ್ದಾರೆ. ಈಗಿನ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾರನ್ನು ಇಲ್ಲಿಂದ ಎರ್ನಾಕುಳಂ ರೂರಲ್ ಎಸ್‌ಪಿಯಾಗಿ ನೇಮಿಸಲಾಗಿದೆ. ಅಂದು ಮಂಜೇಶ್ವರ ಎಸ್.ಐ. ಇಂದು ಜಿಲ್ಲಾ ಪೊಲೀಸ್ ಅಧಿಕಾರಿ ಕಾಸರಗೋಡು …

ರಾಮ ಮಂದಿರ ಮೇಲೆ ಪಾಕ್ ಭಯೋತ್ಪಾದಕರ ದಾಳಿಗೆ ಸಂಚು: ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಅಗತ್ಯದ ಪೂರ್ವ ತಯಾರಿಗಳು ನಡೆಯುತ್ತಿವೆ. ಅಕ್ಷತಪೂಜೆ ಈಗಾಗಲೇ ನೆರವೇರಿ ಸಲಾಗಿದೆ. ಅಂತಿಮ ಹಂತದ ಕಾಮಗಾರಿಗಳು ಈಗ ನಡೆಯುತ್ತಿವೆ. ಜನವರಿಯಿಂದ ಪೂಜಾ ಕೈಂಕರ್ಯ ಗಳನ್ನು ಆರಂಭಿಸಲಾಗಿದೆ. ಜನವರಿ ೨೨ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀರಾಮ ಮಂದಿರವನ್ನು ಉದ್ಘಾಟಿಸಲಿರುವರು. ಶ್ರೀರಾಮ ಮಂದಿರದ ಉದ್ಘಾಟನೆಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಂತೆಯೇ ಈ ಮಧ್ಯೆ ಆತಂಕದ ಮಾಹಿತಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ  ಅಲ್ ಖೈದಾ ಹಾಗೂ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘ ಟನೆಗಳು …

ಮಗಳ ಮನೆಗೆ ಬಂದ ವ್ಯಕ್ತಿ ಆನೆ ದಾಳಿಯಿಂದ ಸಾವು

ಪಾಲಕ್ಕಾಡ್:  ಮಗಳ ಮನೆಗೆ ಬಂದ ತಮಿಳುನಾಡು ನಿವಾಸಿಯನ್ನು ಆನೆ ಮೆಟ್ಟಿ ಕೊಲೆಗೈದ ದಾರುಣ ಘಟನೆ ನಡೆದಿದೆ. ತಮಿಳುನಾಡಿನ ಚಿನ್ನತ್ತಡಾಗಂ ನಿವಾಸಿ ರಾಜಪ್ಪನ್ ಎಂಬವರು ಮೃತಪಟ್ಟ ವ್ಯಕ್ತಿ. ಇವರು  ಅಟ್ಟಪ್ಪಾಡಿಯಲ್ಲಿರುವ ಮಗಳ ಮನೆಗೆ ಬಂದಿದ್ದರು. ಮನೆಗೆ ಹೊಂದಿಕೊಂಡಿರುವ ಶೆಡ್‌ನಲ್ಲಿ ಇವರು ನಿದ್ರಿಸಿದ್ದರು. ನಿನ್ನೆ ರಾತ್ರಿ ವೇಳೆ ಕಾಡಾನೆ ಸಮೀಪದ ಕೃಷಿ ಸ್ಥಳಕ್ಕೆ ದಾಳಿ ನಡೆಸಿದೆ. ಶಬ್ದ ಕೇಳಿ ರಾಜಪ್ಪನ್ ಹೊರಗಿಳಿದಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ.  ರಾಜಪ್ಪನ್ ತಕ್ಷಣ ಮೃತಪಟ್ಟಿದ್ದಾರೆ.