ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ತೆಕ್ಕಿಲ್ ಚಟ್ಟಂಚಾಲ್ ಪಾದೂರು ಎಸ್.ಸಿ. ಕಾಲನಿಯ ನಿವಾಸಿ ಬೇತೂರು ಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಟೆಂಡರ್ ಚಂದ್ರನ್- ಎಂ. ಶ್ಯಾಮಲ ದಂಪತಿಯ ಪುತ್ರ ಪಿ. ಧನುಷ್(೧೯) ಸಾನ್ನಪ್ಪಿದ ಯುವಕ. ಗುರುವಾರ ಸಂಜೆ ೪.೩೦ರಿಂದ ಧನುಷ್ ನಾಪತ್ತೆಯಾಗಿರುವುದಾಗಿ ಆತನ ತಾಯಿ ಮೇಲ್ಪರಂಬ ಪೊಲೀ ಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿರು ವಂತೆಯೇ ಮನೆ ಹಿಂಭಾಗದ …

ಒಂದೂವರೆ ತಿಂಗಳ ಹಿಂದೆ ಸ್ಥಾಪಿಸಿದ ಸ್ಟ್ರೀಟ್ ಲೈಟ್  ಬೆಳಗಿಸಲು ಕ್ರಮವಿಲ್ಲ: ಕುಂಬಳೆ ಪೇಟೆ ಅಂಧಕಾರದಲ್ಲಿ

ಕುಂಬಳೆ: ಕುಂಬಳೆ ಪೇಟೆಯಲ್ಲಿ ನೂತನವಾಗಿ ಸ್ಟ್ರೀಟ್ ಲೈಟ್ ಅಳವ ಡಿಸಿ ಒಂದೂವರೆ ತಿಂಗಳಾದರೂ ಅದನ್ನು ಬೆಳಗಿಸಲು ಕ್ರಮ ಉಂಟಾ ಗಿಲ್ಲ. ಇದರಿಂದ  ರಾತ್ರಿ ಹೊತ್ತಿನಲ್ಲಿ ಪೇಟೆ ಅಂಧಕಾರದಿಂದ ಮುಳುಗಿರುತ್ತದೆ.ಕುಂಬಳೆ ಸರ್ಕಲ್‌ನಿಂದ ಅನಿಲ್ ಕುಂಬಳೆ ರಸ್ತೆವರೆಗೆ ಸ್ಥಿತಿ ಇದಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆ ಮೂರು ಹೈಮಾಸ್ಟ್ ಲೈಟ್, ೨ ಮಿನಿ ಮಾಸ್ಟ್ ಲೈಟ್‌ಗಳಲ್ಲದೆ ಸಣ್ಣ ಲೈಟ್‌ಗಳನ್ನು ಮರು ಸ್ಥಾಪಿಸಲಾಗುತ್ತಿದೆ. ಇದು ಬೆಳಗಿ ರಾತ್ರಿ ಪೇಟೆ ಬೆಳಕು ಪ್ರಕಾಶಿಸು ತ್ತಿತ್ತು. ಆದರೆ ರಸ್ತೆ ಅಭಿವೃದ್ಧಿ ಹಿನ್ನೆಲೆ ಯಲ್ಲಿ ಲೈಟ್‌ಗಳನ್ನು …

ಆಟೋ ರಿಕ್ಷಾ ಮಗುಚಿ ಚಾಲಕ ಮೃತ್ಯು

ಕಾಸರಗೋಡು: ಆಟೋ ರಿಕ್ಷಾ  ಅಪಘಾತಕ್ಕೀಡಾಗಿ ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ರಾಜಪುರ ಚಕ್ಕಾಲಕಲ್‌ನ ಬೇಬಿ-ಫಿಲೋಮಿನಾ ದಂಪತಿಯ ಪುತ್ರ ಅಭಿಲಾಷ್ ಬೇಬಿ (೪೦) ಸಾವನ್ನಪ್ಪಿದ ದುರ್ದೈವಿ. ಅಭಿಲಾಷ್ ಬೇಬಿ ರಾಜಪುರದ ಪೂಡಂಗಲ್‌ಗೆ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಪೈನಿಕರದಲ್ಲಿ ರಸ್ತೆ ಬದಿ ಇದ್ದ ಮಣ್ಣಿನ ರಾಶಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅಭಿಲಾಷ್‌ರನ್ನು ತಕ್ಷಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು …

ನಟ ಸುರೇಶ್ ಗೋಪಿಗೆ ಸಮನ್ಸ್

ತಿರುವನಂತಪುರ: ಮಹಿಳಾ ಪತ್ರಕರ್ತೆಯೋರ್ವೆ ನೀಡಿದ ದೂರಿನಂತೆ ನಟ  ಹಾಗೂ  ಬಿಜೆಪಿ ನೇತಾರ ಸುರೇಶ್ ಗೋಪಿಗೆ ಪೊಲೀಸರು ಸಮನ್ಸ್ ಜ್ಯಾರಿಗೊಳಿಸಿದ್ದಾರೆ. ಮಹಿಳಾ ಪತ್ರ ಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಆಕೆ ನೀಡಿದ ದೂರಿನಂತೆ  ಹೇಳಿಕೆ ದಾಖಲಿ ಸಲು ನ. ೧೮ರಂದು ತನಿಖಾಧಿ ಕಾರಿಯ ಮುಂದೆ ಹಾಜರಾಗುವಂತೆ ಸುರೇಶ್ ಗೋಪಿಗೆ ಈ ಸಮನ್ಸ್ ಜ್ಯಾರಿಗೊಳಿಸಲಾಗಿದೆ.

ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ನೇಣುಬಿಗಿದು ಮೃತ್ಯು

ಕಾಸರಗೋಡು: ಸಿಪಿಎಂನ ಅಂಬಲತ್ತರ ಗ್ರಾಮದ ಕಣಿಚ್ಚಿರ ಬ್ರಾಂಚ್ ಕಾರ್ಯದರ್ಶಿ, ಮಡಿಕೈ ಕುಂಡಯಂವಯಲ್ ನಿವಾಸಿ ಕೆ.ವಿ. ಕುಂಞಂಬು (೫೦) ಎಂಬವರು ನಿನ್ನೆ ಸಂಜೆ ಮನೆ ಪಕ್ಕದ ಕಮ್ಯೂನಿಟಿ ಹಾಲ್‌ನ ಕಿಟಿಕಿಯ ಸರಳಿನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಕುಂಞಂಬು  ನಾರ್ಕಳ-ಮಾಣಿಕುತ್ತಿ ದಂಪತಿಯ ಪುತ್ರನಾಗಿದ್ದಾರೆ.  ಮೃತರು ಪತ್ನಿ ಸತ್ಯಭಾಮ, ಮಕ್ಕಳಾದ ಮಿಥುನ, ಮಿಥುನ್‌ರಾಜ್, ಸಹೋದರ-ಸಹೋದರಿಯರಾದ ಬಾಲಕೃಷನ್, ಕೆ.ವಿ. ಪ್ರಮೋದ್ (ಮಡಿಕೈ ಪಂಚಾಯತ್ ಸದಸ್ಯ), ಲಕ್ಷ್ಮಿ, ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಡ್ಕಸ್ಥಳ ರೇಶನ್ ಅಂಗಡಿ ಮಾಲಕ ನಿಧನ

ಪೆರ್ಲ: ಅಡ್ಕಸ್ಥಳದಲ್ಲಿ ರೇಶನ್ ಅಂಗಡಿ ಹೊಂದಿರುವ ಪೆರ್ಲ ಪಳ್ಳಕಾನ ನಿವಾಸಿ ನಾರಾ ಯಣ ರೈ (೫೯) ನಿಧನ ಹೊಂದಿದರು.  ಮೃತರು ಪತ್ನಿ ವಿಶಾಲ, ಮಕ್ಕಳಾದ ಮನೀಶ್ ರೈ, ಹರ್ಷದೀಪ್ ರೈ, ಸಹೋ ದರರಾದ ವಿಶ್ವನಾಥ ರೈ, ಬಾಬು ರ, ಬಾಲಕೃಷ್ಣ ರೈ, ಸಹೋ ದರಿಯರಾದ ಲೀಲಾವತಿ, ರಾಜೀವಿ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.

ಅಂಗಡಿಮೊಗರು ನಿವಾಸಿ ಸೌದಿಯಲ್ಲಿ ಮೃತ್ಯು

ಪುತ್ತಿಗೆ: ಅಂಗಡಿಮೊಗರು ಎರ್ದುಂಕಲ್ಲು ನಿವಾಸಿ ಇ.ಕೆ. ಮೊಹಮ್ಮದ್ (೫೮) ಎಂಬವರು ಸೌದಿಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಇವರು ಕಳೆದ ಹಲವು ವರ್ಷಗಳಿಂದ ರಿಯಾದ್‌ನ ಕಂಪೆನಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು. ನಿನ್ನೆ ಬೆಳಿಗ್ಗೆ ಇವರು ವಾಸ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾ ಗದೆ ರಾತ್ರಿ ವೇಳೆ ಮೃತಪಟ್ಟಿರುವು ದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ಪತ್ನಿ ನಫೀಸ, ಮಕ್ಕಳಾದ ಹಸನ್, ಶಹರ್‌ಬಾನ್, ಶರೀಫ್, ರಹಿಯಾನ, ಬಾತಿಷ, ಅಳಿಯಂದಿರಾದ ಹನೀಫ್, ಸಿದ್ದಿಕ್,  …

ಲಷ್ಕರ್ ಎ ತೊಯ್ಬಾದ ಇನ್ನೋರ್ವ ಭಯೋತ್ಪಾದಕ ಹತ್ಯೆ

ನವದೆಹಲಿ: ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಲಷ್ಕರ್ ಎ ತೊಯ್ಬಾ ಭಯೋತ್ಪಾ ದಕ ಹಾಗೂ ಇರಾನಿಯನ್ ಇಂಟೆಲಿಜೆನ್ಸ್ ಮತ್ತು ಐಎಸ್‌ಐನ ಡಬ್ಬಲ್ ಏಜೆಂಟ್ ಆಗಿದ್ದ ಅಸ್ಮಿನ್ ಹಾಸ್ಮಿ ಎಂಬಾತ ತಾಂಜಾನಿಯದಲ್ಲಿ ಸಾವನ್ನಪ್ಪಿದ್ದಾನೆ. ಆತನನ್ನು ಅಜ್ಞಾತ ಬಂದೂಕುದಾರಿಗಳು ಗುಂಡಿಕ್ಕಿ ಹತ್ಯೆ ಗೈದಿರುವುದಾಗಿ ವರದಿಯಾಗಿದೆ.

ಎಂಡೋಸಲ್ಫಾನ್ ಸಂತ್ರಸ್ತ ಬಾಲಕ ಸಾವು

ಕಾಸರಗೋಡು: ಎಂಡೋಸ ಲ್ಫಾನ್ ಸಂತ್ರಸ್ತ ೧೩ರ ಹರೆಯದ ಬಾಲಕ ಚಿಕಿತ್ಸೆ ಮಧ್ಯೆ ಸಾವನ್ನಪ್ಪಿ ದ್ದಾನೆ. ಅಂಬಲತ್ತರ ಬಿತಿಯಾಲಿಯ ಸುಮತಿ-ಎಣ್ಣಪ್ಪಾರದ ಮೋಹನನ್ ದಂಪತಿ ಪುತ್ರ ಮಿಥುನ್ (೧೩) ಸಾವನ್ನಪ್ಪಿದ ಬಾಲಕ. ಎಂಡೋ ಸಲ್ಫಾನ್ ಸಂತ್ರಸ್ತನಾದ ಈ ಬಾಲಕ ಮಣಿಪಾಲ ಮೆಡಿಕಲ್ ಕಾಲೇಜಿ ನಲ್ಲಿ ಕಳೆದ ಒಂದು ತಿಂಗಳಿಂದ ವೆಂಟಿಲೇಟ ರ್‌ನಲ್ಲಿ ಚಿಕಿತ್ಸೆಯಲ್ಲಿ ದ್ದನು. ನಿನ್ನೆ ಆತ ಸಾವಿಗೆ ಶರಣಾಗಿದ್ದಾನೆ. ಈ ದಂಪತಿಯ ಪ್ರಥಮ ಪುತ್ರ ಜನಿಸಿದ ೧೦ ತಿಂಗಳಲ್ಲೇ ಸಾವನ್ನಪ್ಪಿದ್ದಾನೆ.

ಧರ್ಮತ್ತಡ್ಕ ಶಾಲೆಯಲ್ಲಿ ಕಲೋತ್ಸವಕ್ಕೆ ಸಂಭ್ರಮದ ತೆರೆ

ಎಚ್‌ಎಸ್‌ಎಸ್ ಜನರಲ್‌ನಲ್ಲಿ ಧರ್ಮತ್ತಡ್ಕ ಶಾಲೆ ಚಾಂಪಿಯನ್ಧರ್ಮತ್ತಡ್ಕ: ಮಂಜೇಶ್ವರ ಉಪ ಜಿಲ್ಲಾಮಟ್ಟದ ೬೨ನೇ ಶಾಲಾ ಕಲೋತ್ಸವದಲ್ಲಿ ಎಚ್.ಎಸ್.ಎಸ್ ಜನರಲ್ ವಿಭಾಗದಲ್ಲಿ ಧರ್ಮತ್ತಡ್ಕ ಎಸ್‌ಡಿಪಿಎಚ್‌ಎಸ್‌ಎಸ್ ಪ್ರಥಮ,  ಜಿಎಚ್‌ಎಸ್‌ಎಸ್ ಪೈವಳಿಕೆನಗರ ದ್ವಿತೀಯ ಸ್ಥಾನ ಪಡೆದಿದೆ.  ಯುಪಿ ಜನರಲ್‌ನಲ್ಲಿ ಕಯ್ಯಾರು ಡಿಬಿಎಯು ಪಿಎಸ್ ಪ್ರಥಮ, ಮಂಜೇಶ್ವರ ಎಸ್‌ಎಟಿಎಚ್‌ಎಸ್ ದ್ವಿತೀಯ ಸ್ಥಾನ ಪಡೆದಿದೆ. ಎಲ್‌ಪಿ ಜನರಲ್‌ನಲ್ಲಿ ಮಂಜೇಶ್ವರ ಎಸ್‌ಎಟಿಎಲ್‌ಪಿಎಸ್ ಪ್ರಥಮ ಹಾಗೂ ಕಯ್ಯಾರು, ಕುಬ ಣೂರು, ಕಳಿಯೂರು ಶಾಲೆಗಳು ಸಮಾನ ಅಂಕ ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿವೆ. ಸಂಸ್ಕೃತ ಎಚ್‌ಎಸ್ ನಲ್ಲಿ ಕೊಡ್ಲಮೊಗರು ಎಸ್‌ವಿವಿ …