ಮೀನುಗಾರಿಕಾ ವಲಯದಲ್ಲಿ ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿಸುತ್ತಿದೆ- ಪಿ.ಕೆ. ಕೃಷ್ಣದಾಸ್

ಕಾಸರಗೋಡು:  ರಾಜ್ಯದ ಪರಂಪರಾಗತ ಮೀನು ವಲಯದಲ್ಲಿ  ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿ ಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಆರೋಪಿಸಿದರು.  ತೀರದೇಶ ವಲಯದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜ್ಯಾರಿಗೊಳಿಸಬೇಕು, ರಾಜ್ಯ ಸರಕಾರದ ತೀರದೇಶ ಅವಗಣನೆ ಕೊನೆಗೊಳಿಸಬೇಕು, ಎಡಬಲ ಒಕ್ಕೂಟಗಳ ಅವಗಣನೆ ಕೊನೆಗೊಳಿಸ ಬೇಕು ಮೊದಲಾದ ಘೋಷಣೆಗಳನ್ನು ಎತ್ತಿಹಿಡಿದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನಡೆಸಿದ ತೀರದೇಶ ಯಾತ್ರೆಯ ಸಮಾರೋಪ ಸಮಾರಂಭ ವನ್ನು ಕಾಸರಗೋಡು ಕಸಬಾ ಕಡಪುರದಲ್ಲಿ ಉದ್ಘಾಟಿಸಿ ಅವರು …

ವಿನ್‌ಟಚ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ

ಕಾಸರಗೋಡು: ಕಾಸರಗೋಡು  ನಗರದ ಬ್ಯಾಂಕ್ ರೋಡ್‌ನಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾದ ವಿನ್‌ಟಚ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು.  ಫೌಂಡರ್ ಚೆಯರ್‌ಮೆನ್ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಸ್ವಾಗತಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ನಗರಸಭಾ ಚೆಯರ್‌ಮೆನ್ ವಿ.ಎಂ. ಮುನೀರ್, ಜಿಲ್ಲಾ ಪಂಚಾಯತ್  ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಗಳಾಗಿದ್ದರು.  ವಿನ್‌ಟಚ್ ಫೌಂಡರ್ ಡೈರೆಕ್ಟರ್‌ಗಳಾದ ಅಬ್ದುಲ್ ಕರೀಂ ಕೋಳಿಯಾಡ್, ಹನೀಫ್ ಅರಮನ, ಡೈರೆಕ್ಟರ್‌ಗಳಾದ ಡಾ| ಹಸೀನ …

ವರ್ಕಾಡಿ ವಿದ್ಯುತ್ ಕಚೇರಿಗೆ ಲೀಗ್ ಮಾರ್ಚ್

ವರ್ಕಾಡಿ: ವಿದ್ಯುತ್ ದರ ಏರಿಕೆ ಹಿಂತೆಗೆಯಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್ ರಾಜ್ಯ ವ್ಯಾಪಕವಾಗಿ ನಡೆಸುವ ಪ್ರತಿಭಟನೆಯಂಗವಾಗಿ ವರ್ಕಾಡಿ ಕೆಎಸ್‌ಇಬಿ ಕಚೇರಿಗೆ ಲೀಗ್ ಮೀಂಜ ಹಾಗೂ ವರ್ಕಾಡಿ ಪಂಚಾಯತ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಾರ್ಚ್ ನಡೆಸಲಾಯಿತು. ಪಕ್ಷದ ಮಂಡಲ ಕಾರ್ಯದರ್ಶಿ ಎ.ಕೆ. ಆರೀಫ್ ಉದ್ಘಾಟಿಸಿದರು. ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಇರ್ಷಾದ್ ಮೊಗ್ರಾಲ್, ಅಬ್ದುಲ್ ಮಾದೇರಿ, ಅಂದುಂಞಿ ಹಾಜಿ, ಕೆ.ಕೆ. ಖಾಲಿದ್, ವಾಹಿದ್ ಕೂಡಲ್, ಎಂ.ಎಸ್.ಎ. ಸತ್ತಾರ್, ಎ.ಕೆ. ಮರಬ್ಬ, ಬಾವ ಜಿ., ಮೂಸಾ ಕೆದುಂಬಾಡಿ, ಮೊಹಮ್ಮದ್ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ಕಾರಡ್ಕ ಶಾಲೆಯಲ್ಲಿ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಮುಳ್ಳೇರಿಯ: ಕಾರಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಡಿ. ೫ರಿಂದ ೯ರವರೆಗೆ ನಡೆಯುವ ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಸ್ವಾಗತ ಸಮಿತಿ ಕಚೇರಿಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಕಲೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಕಾರಡ್ಕ ಶಾಲೆಯ ಎನ್‌ಸಿಸಿ ಕೆಡೆಟ್‌ಗಳು ಸಂರಕ್ಷಿಸುವ ಕಲೋತ್ಸವ ನೆನಪಿನ ಮರವನ್ನು ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು ನೆಟ್ಟರು. ಇದೇ ವೇಳೆ ವಿವಿಧ ಸಮಿತಿಗಳ ಅವಲೋಕನಸಭೆ ಜರಗಿತು. ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, …

ಎಂಡಿಎಂಎ ಮಾರಾಟ: ಮಂಜೇಶ್ವರದ ಇಬ್ಬರು ಮಂಗಳೂರಿನಲ್ಲಿ ಸೆರೆ

ಮಂಜೇಶ್ವರ: ಮಾರಕ ಮಾದಕವಸ್ತುವಾದ ಎಂಡಿಎಂಎ ಮಾರಾಟಗೈಯ್ಯುತ್ತಿದ್ದ ಇಬ್ಬರು ಮಂಜೇಶ್ವರ ನಿವಾಸಿಗಳನ್ನು ಮಂಗಳೂರು ಸಿಬಿಐ ಪೊಲೀ ಸರು ಸೆರೆ ಹಿಡಿದಿದ್ದಾರೆ. ಹೊಸಬೆಟ್ಟು ಗುಡ್ಡೆಕೇರಿ ನಿವಾಸಿ ಮುಸ್ತಫಾ (೩೮) ಕುಂಜತ್ತೂರು ಮಜಲಗುಡ್ಡೆ ನಿವಾಸಿಯೂ ಪ್ರಸ್ತುತ ಕೋಟೆಕಾರ್ ಬೀರಿ ಸರಕಾರಿ ಶಾಲೆ ಬಳಿ ವಾಸಿಸುತ್ತಿರುವ ಶಂಸುದ್ದೀನ್ ಎ (೩೮) ಎಂಬವನು ಬಂಧಿತ ವ್ಯಕ್ತಿಗಳಾಗಿದ್ದಾರೆ. ತಲಪಾಡಿ ಹೆದ್ದಾರಿ ಬಳಿ ನಿನ್ನೆ ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಈ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಬಂಧಿತ ಆರೋಪಿಗಳ ಕೈಯಿಂದ ೧೫ ಗ್ರಾಂ ಎಂಡಿಎಂಎ, ಡಿಜಿಟಲ್ ತಕ್ಕಡಿ …

ಅಬಕಾರಿ ಕಾರ್ಯಾಚರಣೆ : ಎಂ.ಡಿ.ಎಂ.ಎ ಸಹಿತ ಮಹಿಳೆ ಸೆರೆ

ಕಾಸರಗೋಡು:  ಮೊಗ್ರಾಲ್ ಪುತ್ತೂರು ಎರಿಯಾಲ್ ಪಂಜದಗುಡ್ಡೆ ಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ಅವರ ನೇತೃತ್ವದಲ್ಲಿ  ನಡೆದ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕ ದ್ರವ್ಯವಾದ ೯.೦೨೧ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿ ಸಲಾಗಿದೆ. ಇದಕ್ಕೆ ಸಂಬಂಧಿಸಿ ಪಂಜದ ಗುಡ್ಡೆಯಲ್ಲಿ ವಾಸಿಸುತ್ತಿರುವ  ರಸೂನಾ ಎಸ್. (೩೦) ಎಂಬಾಕೆ ಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಎನ್‌ಡಿಪಿಎನ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾ ಗಿದೆ. ಬಂಧಿತಳನ್ನು ನಂತರ ನ್ಯಾಯಾಲಯದಲ್ಲಿ ಹಾಜರು ಪಡಿಸಿ, …

ಮಂಗಳೂರಿನಲ್ಲಿ ವ್ಯಾಪಕ ಚಿನ್ನ ಬೇಟೆ: ಒಂದು ವಾರದೊಳಗೆ ಕಾಸರಗೋಡು ನಿವಾಸಿ ಸಹಿತ ನಾಲ್ವರ ಸೆರೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅನಧಿಕೃತವಾಗಿ ಚಿನ್ನ ಸಾಗಾಟ ತೀವ್ರಗೊಂಡಿದೆ. ಒಂದು ವಾರದೊಳಗೆ ನಾಲ್ಕು ಮಂದಿಯನ್ನು ಚಿನ್ನ ಸಹಿತ ಸೆರೆಹಿಡಿಯಲಾಗಿದೆ. ಹೀಗೆ ಚಿನ್ನ ಸಾಗಾಟ ನಡೆಸುವವರಲ್ಲಿ ಕೇರಳೀಯರು ಒಳಗೊಂಡಿದ್ದಾರೆ.  ಅನಧಿಕೃತವಾಗಿ ವಿದೇಶಗಳಿಂದ ಚಿನ್ನ ಸಾಗಾಟ ನಡೆಸುವವರ ವಿರುದ್ಧ ಕಸ್ಟಮ್ಸ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ನವಂಬರ್ ೫ರಂದು ದುಬಾಯಿಂದ ಆಗಮಿಸಿದ ಕಾಸರಗೋಡು ಬಳಿಯ ಪಳ್ಳಿಕ್ಕೆರೆ ನಿವಾಸಿಯಾದ ಹಂಸ ಎಂಬಾತನ ಕೈಯಿಂದ ೪೨೦ ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಟ್ರಾಲಿ ಬ್ಯಾಗ್‌ನ್ನು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. …

ಮೋಸ್ಟ್ ವಾಂಟೆಡ್ ಲಷ್ಕರ್ ಎ ತೋಯ್ಬಾ ಮಾಜಿ ಕಮಾಂಡರ್ ಅಕ್ರಮ್ ವಾಜಿ ಗುಂಡಿಕ್ಕಿ ಹತ್ಯೆ

ನವದೆಹಲಿ: ಜಮ್ಮು-ಕಾಶ್ಮೀರ ಕಣಿವೆಯ ಹಲವೆಡೆಗಳಲ್ಲಿ ಪಾಕ್ ಉಗ್ರರನ್ನು ಭಾರತದೊಳಗೆ ನುಸುಳುವಂತೆ  ಮಾಡಿ ಅವರ ಮೂಲಕ  ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿಯನ್ನು ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು  ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಕ್ರಮ್ ಘಾಜಿ  ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ೨೦೧೮-೨೦೨೦ರ ಅವಧಿಯಲ್ಲಿ ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ವೇಳೆ ಈತ ಉದ್ಯೋಗದ ಹೆಸರಲ್ಲಿ ಯುವಕರನ್ನು …

ನಟ-ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫಾ ನಿಧನ

ಎರ್ನಾಕುಳಂ: ಮಲಯಾಳ ಸಿನಿಮಾ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫಾ (೬೪) ಕೊಚ್ಚಿಯಲ್ಲಿ ನಿನ್ನೆ ನಿಧನ ಹೊಂದಿದರು. ಇವರು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದರು.   ಉಸಿರಾಟ ತೊಂದರೆಯಿಂದ ಬುಧವಾರದಂದು ಅವರನ್ನು ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ  ಅವರು ನಿನ್ನೆ ಸಂಜೆ ನಿಧನ ಹೊಂದಿದರು. ಹನೀಫಾ ಸುಮಾರು ೩೫೦ ಮಲಯಾಳ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಹಾಸ್ಯ ಪಾತ್ರಗಳಾಗಿವೆ. ಮಾತ್ರವಲ್ಲ ೬೦ರಷ್ಟು ಧಾರಾವಾಹಿಗಳಲ್ಲೂ ನಟಿಸಿದ್ದರು. ಕಲಾಭವನ ತಂಡದ ಸದಸ್ಯರಾಗಿರುವ ಇವರು ಪ್ರಸಿದ್ಧ ಮಿಮಿಕ್ಸ್ ಪರೇಡ್ ಸಹಿತ …

ವಾಹನ ಅಪಘಾತ: ೭ ಮಂದಿಗೆ ಗಾಯ

ತೃಶೂರು:  ಗುರು ವಾಯೂರು ಕ್ಷೇತ್ರ ದರ್ಶನ ಕ್ಕಾಗಿ ತೆರಳುತ್ತಿದ್ದ ಕುಟುಂಬದ ವಾಹನ ಅಪಘಾತಕ್ಕೀ ಡಾಗಿ ೭ ಮಂದಿ ಗಾಯಗೊಂಡಿ ದ್ದಾರೆ. ರಾಷ್ಟ್ರೀಯ ಹೆದ್ದಾರಿ ತಳಿಕುನ ಎಂಬಲ್ಲಿ ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ತಿರುವನಂತಪುರ ನಿವಾಸಿಗಳಾದ ೭ ಮಂದಿಗೆ  ಗಾಯ ಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.