ಸಚಿವ ಸಂಪುಟ ಪುನರ್‌ರಚನೆ ಅಂತಿಮ ತೀರ್ಮಾನ ಇಂದು ಸಂಜೆ
ತಿರುವನಂತಪುರ: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತಾದ ಅಂತಿಮ ತೀರ್ಮಾನ ಇಂದು ಸಂಜೆ ಉಂಟಾಗಲಿದೆ. ಎಡರಂಗ ರಾಜ್ಯ ಸಮಿತಿ ಸಭೆ ಇಂದು ಸಂಜೆ ೪ ಗಂಟೆಗೆ ತಿರುವನಂತಪುರದಲ್ಲಿ ಕರೆಯಲಾಗಿದ್ದು, ಅದರಲ್ಲಿ ಈ ತೀರ್ಮಾನ ಉಂಟಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಕೂಡಾ ಇಂದು ಸಂಜೆ ಇನ್ನೊಂದೆಡೆ ನಡೆಯಲಿದೆ. ಮುಖ್ಯಮಂತ್ರಿಯ ನೇತೃತ್ವದಲ್ಲಿ ನವೆಂಬರ್ ೧೮ರಂದು ಆರಂಭಗೊಳ್ಳಲಿರುವ ನವಕೇರಳ ಸದಸ್ ಕಾರ್ಯಕ್ರಮ ಸಮಾಪ್ತಿಗೊಂಡ ಬಳಿಕವಷ್ಟೇ ಸಚಿವ ಸಂಪುಟದ ಪುನರ್ ರಚನೆ ನಡೆಯಲಿದೆ. ಪಿಣರಾಯಿ ವಿಜಯನ್ ನೇತೃತ್ವದ …