ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ ವಿಜೇತರಿಗೆ ಸಹಕಾರ ಭಾರತಿ ಅಭಿನಂದನೆ

ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಹೊಳ್ಳರನ್ನು ಆಯ್ಕೆ ಮಾಡಲಾಗಿದೆ. ನವಂಬರ್ ೪ರಂದು ಪೈವಳಿಕೆ ಬ್ಯಾಂಕ್‌ನ ಆಡಳಿತ ಸಮಿತಿ ಚುನಾವಣೆಯಲ್ಲಿ ಜಯಗಳಿಸಿದ ಸಹಕಾರ ಭಾರತಿ ಅಭ್ಯರ್ಥಿಗಳಾದ ಗಣಪತಿ ಭಟ್ ಪುಂಡಾರಿ, ಶಾಲಿನಿ ಕುಮಾರಿ, ಆಶಾದೇವಿ, ಶ್ರೀಧರ ಹೊಳ್ಳರನ್ನು ಅಭಿನಂದಿಸಲಾಯಿತು. ಪಂಚಾಯತ್ ಸಮೀಪದ ಸಭಾಂ ಗಣದಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಸಹಕಾರ ಭಾರತೀಯ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, …

ಸೇವ್ ಅನಂತಪುರ ಸತ್ಯಾಗ್ರಹ ಹಿಂತೆಗೆತ

ಸೀತಾಂಗೋಳಿ: ಅನಂತಪುರ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ವಿರುದ್ಧ ಸೇವ್ ಅನಂತಪುರ ಕ್ರಿಯಾ ಸಮಿತಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ನಿನ್ನೆ ಸಂಜೆ ತಾತ್ಕಾಲಿಕವಾಗಿ ಕೊನೆಗೊಳಿಸಲಾ ಯಿತು.  ಇದೇ ಸಂದರ್ಭದಲ್ಲಿ ಶಾಸಕ ಎಕೆಎಂ ಅಶ್ರಫ್ ಸತ್ಯಾಗ್ರಹ ಸ್ಥಳಕ್ಕೆ ತಲುಪಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ಲಾಂಟ್‌ನಿಂದ ಸೃಷ್ಟಿಯಾಗಿರುವ  ತ್ಯಾಜ್ಯ ಸಮಸ್ಯೆಗೆ ಎರಡು ತಿಂಗಳೊಳಗೆ ಪರಿಹಾರ ಕಾಣುವುದಾಗಿ  ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ. ಸಮಸ್ಯೆಗೆ ಪರಿಹಾರವುಂಟಾಗದಿದ್ದಲ್ಲಿ ಸತ್ಯಾಗ್ರಹ ಪುನರಾರಂಭಿಸುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.

ಮಂಗಲ್ಪಾಡಿ ಆಸ್ಪತ್ರೆಯಲ್ಲಿ ೧೦ ದಿನಗಳೊಳಗೆ ರಾತ್ರಿ ಕಾಲ ಚಿಕಿತ್ಸೆ ಆರಂಭ- ಸಚಿವೆ ಭರವಸೆ

ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲೂ ರೋಗಿಗಳ ತಪಾಸಣೆ ನಡೆಸಬೇಕೆಂಬ ಬೇಡಿಕೆಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಂ ದಿಸಿದ್ದಾರೆ. ಇಂದು ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿದ ಅವರು ರಾತ್ರಿ ವೇಳೆಯಲ್ಲೂ ಚಿಕಿತ್ಸಾ ವ್ಯವಸ್ಥೆ ಕೈಗೊಳ್ಳುವುದಾಗಿ ತಿಳಿಸಿದ್ದು, ೧೦ ದಿನದೊಳಗೆ ಇದಕ್ಕೆ ಪರಿಹಾರ ಉಂಟಾಗಲಿದೆ ಎಂದು ತಿಳಿಸಿದ್ದಾರೆ.  ಜೊತೆಗೆ ಆಸ್ಪತ್ರೆಯಲ್ಲಿ  ಡಯಾಲಿಸಿಸ್‌ಗೆ ನೂತನ ಕಟ್ಟಡ, ಶುದ್ಧ ಜಲ ವಿತರಣೆಗೆ ವ್ಯವಸ್ಥೆ, ಸ್ಟಾಫ್ ಕ್ವಾರ್ಟರ್ಸ್, ಡಾಕ್ಟರ್ ಸಹಿತ ನೌಕರರ ಕೊರತೆ ಪರಿಹಾರ ಮೊದಲಾದವುಗಳ ಬಗ್ಗೆ ಭರವಸೆ ನೀಡಿದರು. …

ಯುವತಿ ಮತ್ತು ಮಗಳ ಸಾವು: ಸ್ನೇಹಿತ ಅಧ್ಯಾಪಕ  ಆತ್ಮಹತ್ಯಾ ಪ್ರೇರಣೆ ಪ್ರಕರಣದಲ್ಲಿ ಬಂಧನ

ಕಾಸರಗೋಡು: ಯುವತಿ ಮತ್ತು ಆಕೆಯ ಪುತ್ರಿ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸ್ನೇಹಿತನಾದ ಅಧ್ಯಾಪಕನ ವಿರುದ್ಧ ಆತ್ಮಹತ್ಯಾ ಪ್ರೇರಣೆ ಮತ್ತು ಪುರಾವೆಗಳ ನಾಶಗೊಳಿಸಿದ ಆರೋ ಪದಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಮೇಲ್ಪರಂಬಕ್ಕೆ ಸಮೀಪದ  ಬಾರ  ಎರೋಳ್ ಜುಮಾ ಮಸೀದಿ ಬಳಿಯ  ನಿವಾಸಿ ಹಾಗೂ ಖಾಸಗಿ ಶಾಲೆಯೊಂದರ ಅಧ್ಯಾಪಕ ಸಫ್ವಾನ್ ಆದೂರು (೨೯) ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಟಿ. ಉತ್ತಮ್‌ದಾಸ್ ಬಂಧಿಸಿದ್ದಾರೆ. ಆರೋಪಿಯನ್ನು ನಂತರ  ವೈದ್ಯಕೀಯ …

ಆರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡಯಟ್ ಸಿಬ್ಬಂದಿ ಸೇವೆಯಿಂದ ವಜಾ

ಕಾಸರಗೋಡು:  ವಿವಿಧ ಶಾಲೆಗಳ ವಿದ್ಯಾರ್ಥಿನಿ ಯರಿಗೆ ಲೈಂಗಿಕ ಕಿರುಕುಳ ನೀಡಿದ ಆರು ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರೋಪಿ ಮಾಯಿಪ್ಪಾಡಿ ಡಯಟ್‌ನ ಸಿಬ್ಬಂದಿ ಕೆ. ಚಂದ್ರಶೇಖರನ್‌ನನ್ನು ಆ ಸೇವೆಯಿಂದ ವಜಾಗೈಯ್ಯಲಾಗಿದೆ. ಈತ ಈ ಹಿಂದೆ ಹಲವು ಶಾಲೆಗಳಲ್ಲಿ ಪಾರ್ಟ್ ಟೈಮ್ ಕಂಟೀಜೆಂಟ್ ನೌಕರನಾಗಿ ಸೇವೆ ಸಲ್ಲಿಸಿದ್ದನು. ಆ ಅವಧಿ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ಆತನಿಗೆ ಪೋಕ್ಸೋ ಕಾನೂನು ಪ್ರಕಾರ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಆತ ಈಗ ಜೈಲು …

ನೇಶನಲ್ ಹೆರಾಲ್ಡ್ ಪ್ರಕರಣ ರಾಹುಲ್, ಸೋನಿಯಾಗಾಂಧಿಯನ್ನು ಮತ್ತೆ ವಿಚಾರಣೆಗೊಳಪಡಿಸಲು ಇ.ಡಿ ತೀರ್ಮಾನ

ದೆಹಲಿ: ನೇಶನಲ್ ಹೆರಾಲ್ಡ್  ಪ್ರಕರಣದಲ್ಲಿ ಕಾಂಗ್ರೆಸ್ ನೇತಾರರಾದ ಸೋನಿಯಾಗಾಂಧಿ ಹಾಗ ರಾಹುಲ್ ಗಾಂಧಿಯನ್ನು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್  (ಇಡಿ) ಮತ್ತೆ ವಿಚಾರಣೆ ಗೊಳಪಡಿಸಲು ತೀರ್ಮಾನಿಸಿದೆ. ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲು ಇ.ಡಿ ತೀರ್ಮಾನಿಸಿದ್ದು, ಅದರ ಮೊದಲು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯನ್ನು ಮತ್ತೆ ವಿಚಾರಣೆಗೊಳಪಡಿಸಲು ತೀರ್ಮಾ ನಿಸಿದೆ. ಅದರಂತೆ ಈ ಇಬ್ಬರು ನೇತಾರರಿಗೆ ಸಮನ್ಸ್ ಜ್ಯಾರಿಗೊಳಿಸಲು ಇ.ಡಿ ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಸೋನಿಯಾಗಾಂಧಿಯನ್ನು ಇ.ಡಿ ಮೂರು ದಿನಗಳ ತನಕ ಹಾಗೂ …

ಹೆಲ್ಮೆಟ್ ಧರಿಸದೆ ಕ್ಯಾಮರಾ ಮುಂದೆ ಸಂಚರಿಸಿದುದು ೧೫೫ ಬಾರಿ: ಬೈಕ್ ಸವಾರನಿಗೆ ಅತೀ ದೊಡ್ಡ ಮೊತ್ತ ದಂಡ

ಕಣ್ಣೂರು: ಹೆಲ್ಮೆಟ್ ಧರಿಸದೆ ಎಐ ಕ್ಯಾಮರಾ ಮುಂದೆ ೧೫೫ ಬಾರಿ ಸಂಚರಿಸಿದ ಬೈಕ್ ಸವಾರನಿಗೆ ಮೋಟಾರ್ ವಾಹನ ಇಲಾಖೆ ೮೬,೫೦೦ ರೂಪಾಯಿ ದಂಡ ಹೇರಿದೆ. ಅಲ್ಲದೆ ಒಂದು ವರ್ಷಕ್ಕೆ ಯುವಕನ ಲೈಸನ್ಸ್ ಅಮಾನತುಗೊಳಿಸಲಾಗಿದೆ. ಪಳಯಂಗಾಡಿ ಮಾಟೂಲ್ ನಿವಾಸಿಯಾದ ಯುವಕನಿಗೆ ಈ ಬಗ್ಗೆ ತಿಳಿಸಿ ನೋಟೀಸ್ ಲಭಿಸಿದ್ದು, ಆವಾಗಲೇ ಆತನಿಗೆ ವಿಷಯ ಅರಿವಿಗೆ ಬಂದಿದೆ. ಇದು ರಾಜ್ಯದಲ್ಲೇ ಕ್ಯಾಮರಾ ಮೂಲಕ ಹೇರಿದ ಅತೀ ದೊಡ್ಡ ದಂಡವಾಗಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದುದರ ಹೊರತು ಎಐ ಕ್ಯಾಮರಾ ಮುಂದೆ ನಿಂತು …

ಕೋಳಿತ್ಯಾಜ್ಯ ಪ್ಲಾಂಟ್ ಸಮಸ್ಯೆಗೆ ಎರಡು ತಿಂಗಳೊಳಗೆ ಶಾಶ್ವತ ಪರಿಹಾರ- ಜಿಲ್ಲಾಧಿಕಾರಿ ಭರವಸೆ

ಸೀತಾಂಗೋಳಿ: ಅನಂತಪುರ ಕೈಗಾ ರಿಕಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೈಗಾರಿಕಾ ಕೇಂದ್ರದ ಪರಿಸರದಲ್ಲಿ ನಡೆಯುತ್ತಿರುವ ಸತ್ಯಾಗ್ರಹವನ್ನು ಇಂದು ಸಂಜೆ ತಾತ್ಕಾಲಿಕವಾಗಿ ನಿಲುಗಡೆಗೊಳಿ ಸಲಾಗುವುದು. ಕ್ರಿಯಾ ಸಮಿತಿ ಪದಾಧಿ ಕಾರಿಗಳಿಗೆ ಜಿಲ್ಲಾಧಿಕಾರಿ ನೀಡಿದ ಭರ ವಸೆಯ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲುಗಡೆ ಗೊಳಿಸಲು ನಿರ್ಧರಿಸಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಕೋಳಿತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ನಿಂದ ಉಂಟಾಗಿರುವ ಸಮಸ್ಯೆಗೆ ಎರಡು ತಿಂಗಳೊಳಗೆ ಪೂರ್ಣವಾಗಿ …

ನಾಮಪತ್ರದಲ್ಲಿ ಕೇಸಿನ ವಿಷಯ ಮರೆಮಾಚಿದ ಪ್ರಕರಣ: ಪಂಚಾಯತ್ ಸದಸ್ಯನ ಗೆಲುವನ್ನು ಅಸಿಂಧುಗೊಳಿಸಿ ತೀರ್ಪು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಳೆದಬಾರಿ ನಡೆದ ಚುನಾ ವಣೆ ವೇಳೆ ಕೇಸಿನಲ್ಲಿ ಒಳಪಟ್ಟಿರುವ ವಿಷಯವನ್ನು ನಾಮಪತ್ರದ ಜೊತೆಗೆ ಸಲ್ಲಿಸದ ಗ್ರಾಮ ಪಂಚಾಯತ್ ಸದಸ್ಯನ ಗೆಲುವನ್ನು ಕಾಸರಗೋಡು ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯ ಅಸಿಂಧುಗೊಳಿಸಿ ತೀರ್ಪು ನೀಡಿದೆ. ಉದುಮ ಪಂಚಾಯತ್‌ನ ೧೩ನೇ ವಾರ್ಡ್ (ಅಂಗಕಳರಿ)ನ ಮುಸ್ಲಿಂ ಲೀಗ್ (ಯುಡಿಎಫ್) ಸದಸ್ಯ ಮೊಹಮ್ಮದ್ ಹ್ಯಾರಿಸ್‌ರ ಗೆಲುವನ್ನು ನ್ಯಾಯಾಲಯ  ಅಸಿಂಧುಗೊಳಿಸಿ ತೀರ್ಪು ನೀಡಲಾಗಿದೆ. ಮಾತ್ರವಲ್ಲ ಈ ತೀರ್ಪನ್ನು ರಾಜ್ಯ ಚುನಾವಣಾ ಆಯೋಗ ಹಾಗೂ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ತಿಳಿಸುವಂತೆ ನ್ಯಾಯಾಲಯ ನಿರ್ದೇಶ …

ಆಧಾರ್ ಲಿಂಕ್ ಮಾಡಿಸದ ೧೧.೫ ಕೋಟಿ ಪಾನ್‌ಕಾರ್ಡ್‌ಗಳು ನಿಷ್ಕ್ರಿಯ- ಆರ್.ಟಿ.ಐ

ನವದೆಹಲಿ: ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಸುಮಾರು ೧೧.೫ ಕೋಟಿ ಪಾನ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (ಸಿ.ಬಿ.ಡಿ.ಟಿ) ಮಾಹಿತಿ ಹಕ್ಕು (ಆರ್.ಟಿ.ಐ) ನೀಡಿದ ಉತ್ತರದಲ್ಲಿ ತಿಳಿಸಿದೆ. ಪಾನ್‌ಕಾರ್ಡ್‌ನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ನೀಡಲಾದ ಗಡುವು ಈ ವರ್ಷದ ಜೂನ್ ೩೦ರಂದು ಕೊನೆಗೊಂ ಡಿತ್ತು. ಭಾರತದಲ್ಲಿ ೭೦.೨೪ ಕೋಟಿ ಪಾನ್‌ಕಾರ್ಡ್ ಮಂದಿ ತಮ್ಮ ಪಾನ್‌ಕಾರ್ಡ್‌ನ್ನು ಆಧಾರ್‌ನೊಂ ದಿಗೆ ಲಿಂಕ್ ಮಾಡಿದ್ದಾರೆ. ೧೨ ಕೋಟಿಗೂ ಹೆಚ್ಚು ಮಂದಿ ಪಾನ್‌ಕಾರ್ಡ್ ನ್ನು ಆಧಾರ್‌ನೊಂ ದಿಗೆ ಜೋಡಣೆ …