ಬ್ಯಾಂಕ್ ಸಾಲ ಕಂದಾಯ ಇಲಾಖೆಯ ಜಪ್ತಿ ಕ್ರಮಕ್ಕೆ ತಡೆ
ತಿರುವನಂತಪುರ: ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರು ಪಾವತಿಸಲು ಬಾಕಿಯಿರುವವರ ಭೂಮಿ ಹಾಗೂ ಮನೆಯನ್ನು ಜಪ್ತಿ ನಡೆಸುವ ರೆವೆನ್ಯೂ ರಿಕವರಿ ಕ್ರಮಗಳನ್ನು ನಿಲ್ಲಿಸುವಂತೆ ಸರಕಾರ ಆದೇಶವಿತ್ತಿದೆ. ಸಾಲ ತೀರಿಸಲು ಕಂತುಗಳ ಕಾಲಾ ವಕಾಶ ನೀಡುವ ವ್ಯವಸ್ಥೆಯನ್ನು ಸೇರಿಸಿ ರೆವೆನ್ಯೂ ರಿಕವರಿ ನಿಯಮದಲ್ಲಿ ತಿದ್ದುಪಡಿ ಸರಕಾರ ಪರಿಗಣಿಸುತ್ತಿದೆ. ಅದುವರೆಗೆ ಎಲ್ಲಾ ರಾಷ್ಟ್ರೀಕೃತ, ಶೆಡ್ಯೂಲ್ಡ್, ಕಮರ್ಶಿಯಲ್ ಬ್ಯಾಂಕ್‌ಗಳ ಸಾಲದ ಮೇಲೆ ಕಂದಾಯ ಇಲಾಖೆ ಮೂಲಕ ನಡೆಸುವ ಜಪ್ತಿ ಕ್ರಮ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ನಿರ್ದೇಶಿಸಿದೆ. ಇದೇ ವೇಳೆ …