ಇಬ್ಬರು ಮಾವೋವಾದಿಗಳ ಸೆರೆ : ಓರ್ವನಿಗೆ ಗುಂಡೇಟು; ಮೂವರು ಪರಾರಿ

ಕಾಸರಗೋಡು: ಮಾನಂತವಾಡಿ ದಟ್ಟಾರಣ್ಯದಲ್ಲಿ  ಮಾವೋವಾದಿಗಳ ಗುಪ್ತ ಚಟುವಟಿಕೆಗಳು ನಡೆಯುತ್ತಿವೆ ಯೆಂಬ ಬಗ್ಗೆ  ಖಚಿತ ಮಾಹಿತಿ ಲಭಿಸಿ ದನ್ವಯ ಅದನ್ನು ಪತ್ತೆಹಚ್ಚಲು ಕೇರಳ ಪೊಲೀಸರ ವಿಶೇಷ ತಂಡವಾದ ತಂ ಡರ್ ಬೋಲ್ಟ್ ಪಡೆ ಕಾರ್ಯಾ ಚರಣೆಗಿಳಿದಾಗ ಅವರು ಮತ್ತು ಮಾವೋ ವಾದಿಗಳ ಮಧ್ಯೆ ಪರಸ್ಪರ  ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ಮಾವೋವಾದಿಗೆ ಗುಂಡೇಟು ತಗಲಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು,   ಮೂವರು  ಮಾವೋ ವಾದಿಗಳು ಪರಾರಿಯಾಗಿದ್ದಾರೆ. ಚಂದ್ರ ಮತ್ತು ಉಣ್ಣಿಮಾಯಾ ಎಂಬವರು ಪೊಲೀಸರ ವಶಕ್ಕೊಳಗಾದ ಮಾವೋವಾದಿಗಳಾಗಿದ್ದಾರೆ. …

ಚಾಕು ತೋರಿಸಿ ದೌರ್ಜನ್ಯಕ್ಕೆ ಯತ್ನಿಸಿದ ಅಧ್ಯಾಪಕನಿಗೆ ಇರಿದ ವಿದ್ಯಾರ್ಥಿನಿ

ಚೆನ್ನೈ: ಚಾಕು ತೋರಿಸಿ ಬೆದರಿಕೆಯೊಡ್ಡಿ ದೌರ್ಜನ್ಯ ಗೈಯ್ಯಲು ಯತ್ನಿಸಿದ ಅಧ್ಯಾಪಕನನ್ನು ವಿದ್ಯಾರ್ಥಿನಿ ಅದೇ ಚಾಕು ಕಸಿದು ಇರಿದ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅಧ್ಯಾಪಕ ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೇಲಂ ಬಳಿ ಈ ಘಟನೆ ನಡೆದಿದೆ. ಧರ್ಮಪುರಿ ಅಳಗಿರಿನಗರ ನಿವಾಸಿಯಾದ ಶಕ್ತಿದಾಸ್ ಎಂಬಾತನಿಗೆ ಇರಿತವುಂಟಾಗಿದೆ.  ಹಾಸ್ಟೆಲ್‌ನಲ್ಲಿ ನಿಂತು ಕಲಿಯು ತ್ತಿರುವ ವಿದ್ಯಾರ್ಥಿನಿ ಪುಸ್ತಕ ಪಡೆಯಲೆಂದು ಅಧ್ಯಾಪಕನ ಬಳಿಗೆ ಹೋದಾಗ ಆತ ಚಾಕು ತೋರಿಸಿ ಬೆದರಿಕೆಯೊಡ್ಡಿ ದೌರ್ಜನ್ಯಕ್ಕೆ ಮುಂದಾಗಿದ್ದಾನೆನ್ನಲಾಗಿದೆ. ಬೆದರಿಕೆಗೆ ಹೆದರದ ವಿದ್ಯಾರ್ಥಿನಿ ಶಕ್ತಿದಾಸ್‌ನ ಕೈಯಿಂದ ಚಾಕು …

ರಾಜ್ಯದಲ್ಲಿ ಇನ್ನೆರಡು ದಿನ ವ್ಯಾಪಕ ಮಳೆ

ಕಾಸರಗೋಡು: ಅರಬೀ ಸಮುದ್ರದ ಮೇಲ್ಭಾಗದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದ್ದು, ಇದರಿಂದ ಮುಂದಿನ ಎರಡು ದಿನ ಕೇರಳದಲ್ಲಿ ವ್ಯಾಪಕ ಮಳೆಗೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಇದೇ ವೇಳೆ  ಇಡುಕ್ಕಿ, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಎಂಬೀ ಜಿಲ್ಲೆಗಳಲ್ಲಿ ಇಂದು  ಯೆಲ್ಲೋ ಅಲರ್ಟ್  ಘೋಷಿಸಲಾಗಿದೆ. ಬೈಕ್‌ಗಳು ಢಿಕ್ಕಿ: ಕೇಸು ದಾಖಲು ಕುಂಬಳೆ: ಬಂದ್ಯೋಡು ಅಡ್ಕದಲ್ಲಿ ಮೊನ್ನೆ ಸಂಜೆ ಎರಡು ಬೈಕ್‌ಗಳು ಢಿಕ್ಕಿ ಹೊಡೆದು ಓರ್ವ ಗಾಯಗೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಟ್ಟಂ ನಿವಾಸಿ ಅಬ್ದುಲ್ …

೪೪ ಗ್ರಾಂ ಎಂ.ಡಿ.ಎಂ.ಎ ಸಹಿತ ಇಬ್ಬರ ಸೆರೆ

ವಯನಾಡು: ಮಾತಂಙರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿ ಕಾರಿಗಳು ನಡೆಸಿದ ಕಾರ್ಯಾಚರಣೆ ಯಲ್ಲಿ ಮತ್ತೆ ೪೪ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಘಟನೆಗೆ ಸಂಬಂಧಿಸಿ ಕಲ್ಲಿಕೋಟೆ ಫರೋಕ್ ನಿವಾಸಿ ನಿಜಾಫತ್ (೩೦), ಮಲಪ್ಪುರಂ ಏರನಾಡ್ ನಿವಾಸಿ ಫಿರೋಸ್ (೩೦) ಎಂಬಿವರನ್ನು ಬಂಧಿಸಲಾಗಿದೆ. ಇವರು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಎಂಡಿಎಂಎ ಬೆಂಗಳೂರಿನಿಂದ ತಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಬೆಂಗಳೂರಿನಿಂದ ಇದೇ ರೀತಿ ಯಲ್ಲಿ ಸಿಂಥೆಟಿಕ್ ಮಾದಕ ವಸ್ತು ಗಳು ರಾಜ್ಯದ ವಿವಿಧ ಭಾಗಗಳಿಗೆ ತಲುಪುತ್ತಿರುವುದಾಗಿ ಲಭಿಸಿದ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು …

ಅಕ್ಷಯ್ ಕಲ್ಲೇಗ ಕೊಲೆ : ಆರೋಪಿಗಳನ್ನು ಸ್ಥಳಕ್ಕೆ ತಲುಪಿಸಿ ತನಿಖೆ

ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖಂಡ ಅಕ್ಷಯ್ ಕಲ್ಲೇಗ (೨೪)ನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೆ ತಂದು ತನಿಖೆ  ನಡೆಸಿದರು. ಮೂವರು ಆರೋಪಿ ಗಳನ್ನು ಬಿಗಿ ಭದ್ರತೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಸ್ಥಳಕ್ಕೆ ಕರೆತರಲಾಗಿದೆ. ಈ ವೇಳೆ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಕೊನೆಗೆ ಪೊಲೀಸರು ಇವರನ್ನು ಚದುರಿಸಬೇ ಕಾಯಿತು. ನಾಲ್ವರು ಆರೋಪಿಗಳಾಗಿರುವ ಮನೀಶ್, ಚೇತನ್, ಮಂಜುನಾಥ್, ಕೇಶವರನ್ನು ಪೊಲೀಸರು ಬಂಧಿಸಿ ದ್ದಾರೆ. ಆರೋಪಿಗಳು ಎರಡು …

ರೋಡ್‌ಶೋ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ ದೊಡ್ಡ ಅಪಾಯದಿಂದ ಅಮಿತ್ ಶಾ ಪಾರು

ಜೈಪುರ: ರಾಜಸ್ಥಾನ ವಿಧಾನಸಭೆಗೆ ನಡೆಯಲಿರುವ ಚುನಾವಣಾ ಪ್ರಚಾರದಂಗವಾಗಿ ರಾಜಸ್ತಾನದ ಪರ್ಬನ ಡಂಗೋಲಿ ಮೊಹಲ್ಲಾದ ಎರಡು ಬದಿಗಳಲ್ಲೂ ಅಂಗಡಿಗಳು ಮತ್ತು ಮನೆಗಳಿರುವ ರಸ್ತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಥದ ಮೂಲಕ ರೋಡ್ ಶೋ ನಡೆಸುತ್ತಿದ್ದ ವೇಳೆ ಆಕಸ್ಮಾತ್ ವಿದ್ಯುತ್ ತಂತಿಯೊಂದು ಕಡಿದು ರಥದ ಮೇಲೆ ಬಿದ್ದು ಸಚಿವರು ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಅಮಿತ್ ಶಾ ಜೊತೆಗಿದ್ದ ಭದ್ರತಾ ಪಡೆಗಳು ಮತ್ತು ಪೊಲೀಸರು ತಕ್ಷಣ ಆ ಪ್ರದೇಶವನ್ನೆಲ್ಲಾ ಸುತ್ತುವರಿದು ವಿದ್ಯುತ್ ಆಫ್ ಮಾಡಿದರು. ಚುನಾವಣಾ …

ಬಾಂಗ್ಲಾದ ರೋಹಿಂಗ್ಯಾದವರಿಂದ ಉಗ್ರಗಾಮಿ ಚಟುವಟಿಕೆ: ಹತ್ತು ಕಡೆ ಎನ್‌ಐಎ ದಾಳಿ

ಬೆಂಗಳೂರು: ಭಾರತದಲ್ಲಿ ಉಗ್ರಗಾಮಿ ಚಟುವಟಿಕ ನಡೆಸಲು ಮತ್ತು ಮಹಿಳೆಯರ ಕಳ್ಳಸಾಗಾಟ ಉದ್ದೇಶದಿಂದ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದಿರುವ ರೋಹಿಂಗ್ಯಾರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರು ಸೇರಿದಂತೆ ದೇಶದ ೧೦ ಕಡೆಗಳಲ್ಲಿ  ಇಂದು ಬೆಳಗ್ಗಿನ ಜಾವ ೩ ಗಂಟೆಯಿಂದ ಏಕಕಾಲದಲ್ಲಿ ದಾಳಿ ಆರಂಭಿಸಿದೆ. ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವ ರೋಹಿಂಗ್ಯಾ ವಲಸೆಗಾರರು ಉಗ್ರಗಾಮಿ ಚಟುವಟಿಕೆಯಲ್ಲಿ  ತೊಡಗಿದ್ದಾರೆಂಬ ಖಚಿತ ಮಾಹಿತಿ ಲಭಿಸಿದನ್ವಯ ಎನ್‌ಐಎ ಈ ದಾಳಿ ನಡೆಸಿದೆ. ದಾಳಿ ಹಿನ್ನೆಲೆಯಲ್ಲಿ ಎಫ್‌ಐಆರ್‌ಗಳನ್ನೂ ಎನ್‌ಐಎ ದಾಖಲಿಸಿಕೊಂಡಿದೆ. ಈ …

ಪೋಕ್ಸೋ ಪ್ರಕರಣ: ಸಿಪಿಎಂ ನೇತಾರ ಅಮಾನತು

ಮಲಪ್ಪುರಂ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಸಿಪಿಎಂ ಜಿಲ್ಲಾ ಸಮಿತಿ  ಸದಸ್ಯನನ್ನು  ಪಕ್ಷ ಅಮಾನತುಗೊಳಿಸಿದೆ.  ಮಲಪ್ಪುರಂ ಜಿಲ್ಲಾ ಸಮಿತಿ ಸದಸ್ಯ ವೇಲಾಯುಧನ್ ವಳ್ಳಿಕುನ್ನು ಅವರನ್ನು ನಿನ್ನೆ ನಡೆದ ಜಿಲ್ಲಾ ನಾಯಕತ್ವ ಸಭೆಯ ನಿರ್ಧಾರ ಪ್ರಕಾರ ಅಮಾ ನತು ಮಾಡಲಾಗಿದೆ. ಪ್ರಾಯಪೂರ್ತಿ ಯಾಗದ ಬಾಲಕನಿಗೆ ಬಸ್ ಪ್ರಯಾ ಣ ಮಧ್ಯೆ ಕಿರುಕುಳ ನೀಡಿರುವುದಾಗಿ ದೂರಲಾಗಿದ್ದು, ಇದರಂತೆ  ವೇಲಾ ಯುಧನ್ ವಿರುದ್ದ ಪೋಕ್ಸೋ ಕೇಸು ದಾಖಲಿಸಲಾಗಿದೆ.

ಬೆಲೆಯೇರಿಕೆ: ರಾಜ್ಯಸರಕಾರದ ವಿರುದ್ಧ ಮುಸ್ಲಿಂ ಲೀಗ್‌ನಿಂದ ಚಳವಳಿ

ಕಲ್ಲಿಕೋಟೆ: ಬೆಲೆಯೇರಿಕೆ, ವಿದ್ಯುತ್ ದರ ಹೆಚ್ಚಳ ಮೊದಲಾದವುಗಳನ್ನು ಪ್ರತಿಭಟಿಸಿ  ರಾಜ್ಯ ಸರಕಾರದ ವಿರುದ್ಧ ಮುಸ್ಲಿಂ ಲೀಗ್ ಪ್ರತ್ಯಕ್ಷ ಹೋರಾಟಕ್ಕೆ ನಿರ್ಧರಿಸಿದೆ.  ಇದರಂಗವಾಗಿ ನಾಳೆ ಕೆಎಸ್‌ಇಬಿ ಕಚೇರಿಗಳ ಮುಂದೆ ಧರಣಿ ನಡೆಯಲಿದೆ.  ಜನಪರ ವಿಷಯಗಳನ್ನು ಯುಡಿಎಫ್ ಮುಂದಿರಿಸಿಕೊಂಡು ಸರಕಾರದ ವಿರುದ್ಧ ಚಳವಳಿ ತೀವ್ರಗೊಳಿಸುವು ದಾಗಿ ಲೀಗ್ ನೇತಾರ ಕುಂಞಾಲಿಕುಟ್ಟಿ ತಿಳಿಸಿದ್ದಾರೆ.

ಹೊಸಂಗಡಿ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಮುಂದುವರಿಕೆ: ಮಳೆಯಿಂದಾಗಿ ಮತ್ತೆ ಅಡಚಣೆ

ಮಂಜೇಶ್ವರ: ತಲಪಾಡಿಯಿಂದ ಚೆಂಗಳ ತನಕ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಕಾಮಗಾರಿಗೆ ಅಡಚಣೆಯೂ ಉಂಟಾಗುತ್ತಿದೆ. ಇದರಂತೆ ಹೊಸಂಗಡಿ ಪೇಟೆಯಲ್ಲಿ ಮಳೆಯಿಂದಾಗಿ ಕಾಮಗಾರಿಗೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಇಲ್ಲಿನ ನಿರ್ಮಾಣ ವಿಳಂಬಗೊಳ್ಳುವ ಸಾಧ್ಯತೆ ಉಂಟಾಗಬಹುದೆAದು ಸಾರ್ವ ಜನಿಕರು ಅಭಿಪ್ರಾಯಪಟ್ಟಿೆದ್ದಾರೆ. ಆದರೆ ಮಳೆಯ ಆರಂಭದಲ್ಲಿ ಇಲ್ಲಿನ ಸೇತುವೆಯ ಒಂದು ಭಾಗದಲ್ಲಿ ನೀರು ಸಂಗ್ರಹಗೊAಡು ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಅಲ್ಲದೆ ಮಣ್ಣು ಜರಿದುಬಿದ್ದ ಪರಿಣಾಮ ತಡೆಗೋಡೆಗೆ ಕಟ್ಟಲಾದ ಕಬ್ಬಿಣ ಬೇಲಿ ಹಾನಿಗೀಡಾಗಿದೆ. ಇದೀಗ ಅಲ್ಪ ಸ್ವಲ್ಪ …