ಯುವಕನಿಗೆ ಇರಿತ ಆರೋಪಿ ಸೆರೆ

ಕಾಸರಗೋಡು: ಚೆರ್ಕಳ ಪೇಟೆಯ ಬೇಕರಿಯೊಂದರ ಬಳಿ ಚೆರ್ಕಳ ವಡಕ್ಕೇಕರ ಹೌಸ್‌ನ ಮೊಹಮ್ಮದ್ ತಾಜು ಸಿ.ಎಚ್ (೪೭) ಎಂಬವರನ್ನು ನ.೧ರಂದು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ ಉಮೇಶನ್. ಇ ಬಂಧಿಸಿದ್ದಾರೆ. ಚೆರ್ಕಳ ಬೇರ್ಕದ ಸಿನಾನ್ (೨೫) ಬಂಧಿತ ಆರೋ ಪಿ. ತನ್ನ ಸ್ನೇಹಿತ ಖಾಲಿದ್ ಎಂ ಬಾತನನ್ನು ಆರೋಪಿ ಹೀಯಾ ಳಿಸಿದ್ದಾನೆಂದೂ, ಅದನ್ನು ನಾನು ಪ್ರಶ್ನಿಸಿದ ದ್ವೇಷದಿಂದ ಆರೋ ಪಿ ತನಗೆ ಇರಿದನೆಂದು ಪೊಲೀಸರಿಗೆ ನೀಡಿದ  ದೂರಿನಲ್ಲಿ ಮೊಹ ಮ್ಮದ್ ತಾಜು ಆರೋಪಿಸಿದ್ದಾರೆ.

ನವಕೇರಳ ಸದಸ್ ಬಳಿಕ ಗಣೇಶ್ ಕುಮಾರ್ ಕಡನ್ನಪ್ಪಳ್ಳಿಗೆ ಸಚಿವ ಸ್ಥಾನ

ತಿರುವನಂತಪುರ: ಕೇರಳ ಕಾಂಗ್ರೆಸ್ ನೇತಾರ ಕೆ.ಬಿ. ಗಣೇಶ್ ಕುಮಾರ್ ಹಾಗೂ ಕಾಂಗ್ರೆಸ್ ಎಸ್‌ನ ರಾಮಚಂದ್ರನ್ ಕಡನ್ನಪ್ಪಳ್ಳಿ ಸಚಿವರಾಗಿ ಅಧಿಕಾರಕ್ಕೇರುವುದು ಬಹುತೇಕ ಖಚಿತಗೊಂಡಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಇವರನ್ನು ಸಚಿವರಾಗಿ ನೇಮಿಸಲು ಸಾಧ್ಯತೆ ಇದೆ. ಸಚಿವರಾದ ಆಂಟನಿ ರಾಜು (ಜನಾಧಿಪತ್ಯ ಕೇರಳ ಕಾಂಗ್ರೆಸ್), ಅಹಮ್ಮದ್ ದೇವರ್‌ಕೋವಿಲ್ (ಐಎನ್‌ಎಲ್) ಎಂಬಿವರ ಬದಲಾಗಿ ಈ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗುವುದು. ಒಬ್ಬೊಬ್ಬರು ಶಾಸಕರುಳ್ಳ ಪಕ್ಷಗಳಿಗೆ ತಲಾ ಎರಡೂವರೆ ವರ್ಷ ಸಚಿವ ಸ್ಥಾನ ಹಂಚಿಕೊಡುವ ಬಗ್ಗೆ ಎಲ್‌ಡಿಎಫ್ ಈ ಹಿಂದೆ …

ತವರು ಮನೆಯಲ್ಲಿದ್ದ ಯುವತಿಯ ಇರಿದು ಕೊಲೆ: ಆರೋಪಿ ಪತಿಗಾಗಿ ಶೋಧ

ಪಾಲಕ್ಕಾಡ್: ಪತಿಯೊಂದಿಗೆ ಸಿಟ್ಟುಗೊಂಡು ತವರು ಮನೆಗೆ ತೆರಳಿದ ಯುವತಿಯನ್ನು ಪತಿ ಇರಿದು ಕೊಲೆಗೈದ ಘಟನೆ ಪಾಲಕ್ಕಾಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಪಾಲಕ್ಕಾಡ್ ನಲ್ಲೇಪ್ಪಿಳ್ಳಿ ಎಂಬಲ್ಲಿನ ಊರ್ಮಿಳ (೩೨) ಎಂಬಾಕೆ ಕೊಲೆಗೀಡಾದ ಯುವತಿ.  ಊರ್ಮಿಳಾ ಹಾಗೂ ಪತಿ ಸಜೇಶ್ ಮಧ್ಯೆ ದೀರ್ಘ ಕಾಲದಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಊರ್ಮಿಳಾ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಇಂದು ಬೆಳಿಗ್ಗೆ ಅಲ್ಲಿಗೆ ತಲುಪಿದ ಸಜೇಶ್ ಗಲಾಟೆಯೆಬ್ಬಿ ಸಿದ್ದಾನೆ. ಬಳಿಕ  ಊರ್ಮಿಳಾ ಕೆಲಸ ಸ್ಥಳಕ್ಕೆ ತೆರಳಿದ್ದಾಳೆ. ಈ ವೇಳೆ  ದಾರಿ ಮಧ್ಯೆ …

ಚುನಾವಣಾ ದಿನದಂದೇ ಛತ್ತೀಸ್‌ಗಡ್‌ನಲ್ಲಿ ಮಾವೋವಾದಿಗಳಿಂದ ಬಾಂಬ್ ಸ್ಫೋಟ: ಯೋಧನಿಗೆ ಗಾಯ

ನವದೆಹಲಿ: ಮಿಝೋರಾಂನ ಎಲ್ಲಾ  ಹಾಗೂ ಛತ್ತೀಸ್‌ಗಡ ವಿಧಾನಸಭೆಯ ೨೦ ಸ್ಥಾನಗಳಿಗಿರುವ  ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಛತ್ತೀಸ್‌ಗಡದ ಸುಕ್ಮಾದ ತೊಂಡಮಾರ್ಕಾ ಪ್ರದೇಶದಲ್ಲಿ ಮಾವೋವಾದಿಗಳು ಇಂದು ಬೆಳಿಗ್ಗೆ  ಐಇಡಿ ಸ್ಫೋಟ ನಡೆಸಿದ್ದು, ಅದರಲ್ಲಿ ಸಿಆರ್‌ಪಿಎಫ್ ಕೊಬ್ರಾ ಬೆಟಾಲಿಯನ್‌ನ ಓರ್ವ ಯೋಧ ಗಾಯಗೊಂಡಿದ್ದಾರೆ. ಇವರನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಛತ್ತೀಸ್‌ಗಡದಲ್ಲಿ  ೨೦ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ಮತದಾನ ಆರಂಭಗೊಂಡಿದ್ದು, ಇದರಲ್ಲಿ ೧೨ ಪರಿಶಿಷ್ಟ ಪಂಗಡ ಮತ್ತು ಒಂದು ಪರಿಶಿಷ್ಟ ಜಾತಿಗೆ ಮೀಸಲಿರಿಸಿದೆ. ಮಾತ್ರವಲ್ಲ ಇದು ಸದಾ ಮಾವೋವಾದಿ …

ಆರಾಧನಾಲಯಗಳಲ್ಲಿ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ: ಮೇಲ್ಮನವಿ ವಿಚಾರಣೆ ನ.೧೪ರಂದು

ಎರ್ನಾಕುಳಂ: ಆರಾಧನಾಲಯ ಗಳಲ್ಲಿ ಸುಡುಮದ್ದು ಪ್ರದರ್ಶನಕ್ಕೆ ನಿಷೇಧ ಹೇರಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ನ.೧೪ರಂದು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಿದೆ. ಅರ್ಜಿಯಲ್ಲಿ ಎತ್ತದೇ ಇರುವ ವಿಷಯದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ತೀರ್ಪು ನೀಡಿದೆ. ಮಾತ್ರವಲ್ಲ, ರಾತ್ರಿ ವೇಳೆ ಅಂದರೆ ಎಲ್ಲರಿಗೂ ಅನು ಕೂಲಕರವಲ್ಲದ ಸಮಯದಲ್ಲಿ ಸುಡುಮದ್ದು ಪ್ರದರ್ಶನ ನಡೆಸಬಾರ ದೆಂದು ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಸರಿಯಾದ ಸಮಯದ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ …

ಶ್ರೀಗಂಧ ಮರ ಕಳವು: ಆರೋಪಿ ಸೆರೆ

ಕಾಸರಗೋಡು:  ಅರಣ್ಯದಿಂದ ಶ್ರೀಗಂಧ ಮರಗಳನ್ನು ಕಳವುಗೈದು ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚಟ್ಟಂಚಾಲ್ ನಿವಾಸಿ  ಮುಹಮ್ಮದ್ ಕುಂಞಿ (೩೧) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆಂದು ತಿಳಿಸಲಾಗಿದೆ. ಪಾಣಪ್ಪುಳ ಆಲಿಂಡಪಾರ ಎಂಬಲ್ಲಿಂದ ಕಳೆದ ಆಗಸ್ಟ್ ತಿಂಗಳಲ್ಲಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಈ ಪ್ರಕರಣದಲ್ಲಿ ಮುಹಮ್ಮದ್ ತಲೆಮ ರೆಸಿಕೊಂಡಿದ್ದನು. ತಳಿಪರಂಬ ಅರಣ್ಯ ಇಲಾಖೆ ರೇಂಜ್ ಆಫೀಸರ್ ಪಿ. ರಿತೀಶನ್ ನೇತೃತ್ವದ ತಂಡ ಮುಹಮ್ಮದ್ ಕುಂಞಿಯನ್ನು ಬಂಧಿಸಿದೆ. ಕಾಸರಗೋಡು, …

ಬಂಗಾಳಕೊಲ್ಲಿಯಲ್ಲಿ ೪.೨ ತೀವ್ರತೆಯ ಭೂಕಂಪ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಇಂದು ಬೆಳಿಗ್ಗೆ ೫.೩೨ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ  ಎಸ್.ಸಿ.ಎಸ್. ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ೧೦ ಕಿ.ಮೀ. ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನವಕೇರಳ ಸದಸ್ಸ್: ಕುಟುಂಬಶ್ರೀಯ ಬೆದರಿಸುವ ತಂತ್ರ ರಾಜಕೀಯ ದಿವಾಳಿತನ- ಬಿಜೆಪಿ ಆರೋಪ

ಮಂಜೇಶ್ವರ: ಕುಟುಂಬಶ್ರೀಯನ್ನು ಬೆದರಿಸಿ ನವಕೇರಳ ಸದಸ್ಸ್ ಕಾರ್ಯಕ್ರಮಕ್ಕೆ ಜನ ಸೇರಿಸುವ ಪ್ರಯತ್ನ ಸಿಪಿಎಂ ನಡೆಸುತ್ತಿದ್ದು, ಇದು ಅಧಿಕಾರ ದುರುಪಯೋಗವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲವೆಂದು ಬಿಜೆಪಿ ತಿಳಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವರ ಕಾರ್ಯಕ್ರಮಗಳಿಗೆ ಜನ ಸೇರುವುದಿಲ್ಲವೆಂಬ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಕುಟುಂಬಶ್ರೀಯನ್ನು ಬೆದರಿಸಿ ಜನ ಸೇರಿಸಲು ನಡೆಸುವ ತಂತ್ರ ಸಿಪಿಎಂನ ರಾಜಕೀಯ ದಿವಾಳಿತನದ ಸಂಕೇತವೆಂದು ಬಿಜೆಪಿ ದೂರಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸುವುದಾಗಿ ತಿಳಿಸಿದೆ. ಅಟಲ್ ಬಿಹಾರಿ ವಾಜಪೇಯಿಯವರ ಸಂಕಲ್ಪವಾದ ಕುಟುಂಬಶ್ರೀಯನ್ನು ರಾಜ್ಯದಲ್ಲಿ ಎಡರಂಗ ಸರಕಾರ ಅಧಿಕಾರದ …

ಗಾಜಾ ಪಟ್ಟಿಯ ಒಂದು ಭಾಗ ಪೂರ್ಣವಾಗಿ ಇಸ್ರೇಲ್  ನಿಯಂತ್ರಣ

ನವದೆಹಲಿ: ಪ್ಯಾಲಸ್ತಿನ್‌ನ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಆರಂಭಗೊಂಡು ಇಂದಿಗೆ ೩೧ ದಿನಗಳಾಗಿದ್ದು, ಗಾಜಾ ಪಟ್ಟಿ ಯಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಕಳೆದ ೨೪ ಗಂಟೆಗಳಲ್ಲಿ ೪೫೦ ಹಮಾಸ್ ಗುಹೆಗಳನ್ನು ನಾಶಪಡಿ ಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇದರಲ್ಲಿ ಹಮಾಸ್‌ನ ಪ್ರಮುಖ ಕಮಾಂಡರ್ ಜಮಾಲ್ ಮೂಸಾ ಕೂಡಾ ಹತನಾಗಿರು ವುದಾಗಿ ಇಸ್ರೇಲ್ ತಿಳಿಸಿದೆ. ನಮ್ಮ ಸೇನೆಯಿಂದ ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ ಅದರಲ್ಲಿ ಗಾಜಾ ನಗರ  ಪೂರ್ಣ ವಾಗಿ ನಮ್ಮ ನಿಯಂತ್ರಣಕ್ಕೆ …

ಕಳೆದ ತಿಂಗಳು ಎಐ ಕ್ಯಾಮರಾದಲ್ಲಿ ೧೩ ರಾಜಕಾರಣಿಗಳ ವಾಹನ ಸೆರೆ

ತಿರುವನಂತಪುರ:  ಸಾರಿಗೆ ಕಾನೂನು ಉಲ್ಲಂಘಿಸುವವರ ಪತ್ತೆಗಾಗಿ  ರಾಜ್ಯದಾದ್ಯಂತ ಸ್ಥಾಪಿಸಲಾದ ಎಐ ಕ್ಯಾಮರಾದಲ್ಲಿ ಈಗಾಗಲೇ ಹಲವು ಮಂದಿ ಸೆರೆಯಾಗಿದ್ದು, ಅವರಿಂದ ದಂಡ ವಸೂಲು ಮಾಡಲಾಗಿದೆ. ಇದೇ ವೇಳೆ ಕಳೆದ ತಿಂಗಳು ಎಐ ಕ್ಯಾಮರಾದಲ್ಲಿ ೧೩ ಮಂದಿ ಶಾಸಕರು ಹಾಗೂ ಸಂಸದರ ವಾಹನಗಳು ಕೂಡಾ ಸಾರಿಗೆ ಉಲ್ಲಂಘಿಸಿರುವುದನ್ನು ಪತ್ತೆಹಚ್ಚಲಾಗಿದೆ.