ಕುಂಬಳೆ: ಮಾದಕವಸ್ತುವಾದ ಎಂಡಿಎಂಎ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಆಟೋ ಚಾಲಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಕೊಡ್ಯಮ್ಮೆ ಪೂಕಟ್ಟೆ ನಿವಾಸಿ ಅಬ್ದುಲ್ ಅಸೀಸ್ (42) ಬಂಧಿತ ವ್ಯಕ್ತಿ.
ನಿನ್ನೆ ರಾತ್ರಿ 11 ಗಂಟೆಗೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನೇತೃತ್ವದ ಪೊಲೀಸರು ಕೊಡ್ಯಮ್ಮೆ ಜಂಕ್ಷನ್‌ನಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 18.20 ಗ್ರಾಂ ಎಂಡಿಎಂಎ ಪತ್ತೆಯಾ ಗಿದೆ. ಆಟೋ ರಿಕ್ಷಾವನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಇನ್‌ಸ್ಪೆಕ್ಟರ್ ಜತೆಗೆ ಎಸ್‌ಐಕೆ. ಶ್ರೀಜೇಶ್, ಎಸ್‌ಸಿಪಿಒ ಚಂದ್ರನ್ ಇದ್ದರು.