ಕಾಸರಗೋಡು: ಆಟೋರಿಕ್ಷಾದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಿದ ಆಟೋ ಚಾಲಕನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕದ ತೊಟ್ಟಿ ಆಟೋ ಚಾಲಕ ಬಾರಡ್ಕ ನಿವಾಸಿ ಅರವಿಂದ ಯಾನೆ ರವಿ (47) ಮೃತಪಟ್ಟ ವ್ಯಕ್ತಿ. ಬದಿಯಡ್ಕ ನೋಂದಾವಣೆ ಕಚೇರಿಯ ಮುಂಭಾಗದ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಬದಿಯಡ್ಕದ ಹೋಟೆಲ್‌ವೊಂದರ ಬಳಿ ನಿಲುಗಡೆಗೊಳಿಸಿದ್ದ ಆಟೋದಲ್ಲಿ ಗೆಳೆಯರು ರವಿಯನ್ನು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಹಚ್ಚಿದ್ದರು. ಅವರು ಕೂಡಲೇ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆದರೆ ಮರಣಕ್ಕೆ ಕಾರಣ ಸ್ಪಷ್ಟವಾಗಿಲ್ಲ. ತಂದೆ ರಾಮ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಕಮಲಾಕ್ಷಿ, ಪತ್ನಿ ಅಶ್ವಿನಿ, ಏಕಪುತ್ರ (2ನೇ ತರಗತಿ ವಿದ್ಯಾರ್ಥಿ), ಸಹೋದರರಾದ ರಾಜೇಂದ್ರ ಕುಮಾರ್ (ಮೆಡಿಕಲ್ ರೆಪ್), ಜ್ಯೋತಿಪ್ರಕಾಶ್ (ಆಟೋಚಾಲಕ), ಅನಿಲ್ ಕುಮಾರ್ (ಚಾಲಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






