ಉಪ್ಪಳ: ಆಟೋ ಚಾಲಕ ನೋರ್ವ ಮನೆಯಲ್ಲಿ ಹೃದಯಾಘಾ ತದಿಂದ ಮೃತಪಟ್ಟರು. ಉಪ್ಪಳ ನಯಾಬಜಾರ್ ಬಳಿಯ ಅಂಬಾರಿನ ಬಾಡಿಗೆ ಮನೆಯಲ್ಲಿ ವಾಸಿಸುವ ಮೊಹಮ್ಮದ್ ಶಾಹಿದ್ (43) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೈಕಂಬದಲ್ಲಿ ಕಳೆದ 20 ವರ್ಷಗಳಿಂದ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 9.30ಕ್ಕೆ ಮನೆಗೆ ತಲುಪಿದ ಇವರಿಗೆ ಹೃದಯಾಘಾತವುಂಟಾಗಿತ್ತು. ಕೂಡ ಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿ ಸಿದ್ದು ಅಷ್ಟರೊಳಗೆ ನಿಧನ ಸಂಭವಿಸಿತ್ತು.
ದಿವಂಗತರಾದ ಅಬ್ದುಲ್ ಖಾದರ್-ಜೈನಾಬಿ ದಂಪತಿಯ ಪುತ್ರನಾದ ಮೃತರು ಪತ್ನಿ ಶಾಹಿನ್, ಮಕ್ಕಳಾದ ಮುಸ್ತಫ, ಕೈಫ್, ಶಾನಿಯ, ಸಹೋದರ-ಸಹೋದರಿಯರಾದ ಶಾಜಿದ್, ಶಬೀರ್, ಸಪ್ರಾಸ್, ಸಾಜತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೊಹಮ್ಮದ್ ಶಾಹಿದ್‌ರ ನಿಧನ ಕ್ಕೆ ಸಂತಾಪ ಸೂಚಿಸಿ ಕೈಕಂಬದಲ್ಲಿ ಇಂದು ಮಧ್ಯಾಹ್ನವರೆಗೆ ಆಟೋ ರಿಕ್ಷಾ ಚಾಲಕರು ಹರತಾಳ ಆಚರಿಸು ತ್ತಿದ್ದಾರೆ.







