ಕಾಸರಗೋಡು: ಅಡೂರು ಕೋಟೆಗದ್ದೆಯ ಡಾ. ಕೆ.ಎನ್ ಅಡಿಗ ಅವರಿಗೆ ಈಚೆಗೆ ಬೆಂಗಳೂರಿನಲ್ಲಿ ಕರುನಾಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಹೈಡ್ ಪಾರ್ಕ್ ಅಪಾರ್ಟ್ ಸಭಾಂಗಣದಲ್ಲಿ ಚಿತ್ರ ಸಂತೆ ತಂಡವು ಆಯೋಜಿಸಿದ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು, ಖ್ಯಾತ ಸಂಗೀತ ನಿರ್ದೇಶಕ ಕೆ ಎನ್ ರಮೇಶ್, ಚಲನಚಿತ್ರ ನಟಿ ಭೂಮಿಕಾ ಎ. ಕೆ, ಚಲನಚಿತ್ರ ನಿರ್ದೇಶಕ ಅಲ್ಲೂರಿ ಸೀತಾರಾಮ ರಾಜು ಮೊದಲಾದವರು ಇದ್ದರು.
