ಕುಂಬಳೆ: ಕೇರಳ ಸರಕಾರದ ಪ್ರಥಮ ಆಯುಷ್ ಕಾಯಕಲ್ಪ ಪ್ರಶಸ್ತಿ ಕುಂಬಳೆ ಪಂಚಾಯತ್‌ನ ಮೊಗ್ರಾಲ್ ಸರಕಾರಿ ಯುನಾನಿ ಡಿಸ್ಪೆನ್ಸರಿಗೆ ಲಭಿಸಿದೆ. ಆರೋಗ್ಯ ಸೇವೆಗಳಿಗೆ ಲಭಿಸಿದ ಅಂಗೀಕಾರವಿದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್‌ರಿಂದ ಪ್ರಶಸ್ತಿಯನ್ನು ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಯುನಾನಿ ಮೆಡಿಕಲ್ ಆಫೀಸರ್ ಡಾ| ಶಕೀರಲಿ ಕೆ.ಎ, ಜಿಲ್ಲಾ ಪ್ರೋಗ್ರಾಂ ಮೆನೇಜರ್ ಡಾ| ನಿಖಿಲ್, ಜೋಸ್ ಎಂ.ಎಸ್. ಎಂಬಿವರು ಸ್ವೀಕರಿಸಿದರು.