ಮಜೀರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಭಜನಾಮಂದಿರ ಭಜನೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಸೀತಾಂಗೋಳಿ : ನೀರ್ಚಾಲು ಮಜಿರ್ಪಳ್ಳಕಟ್ಟೆ, ಶಾಸ್ತಾನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಭಜನೋತ್ಸವ ಡಿ. ೨೦ರಂದು ಜರಗಲಿದೆ. ಇದರ ಪೂರ್ವಭಾವಿಯಾಗಿ ತಿಂಗಳ ಮಹಾಸಭೆ ಮಂದಿರ ಪರಿಸರದಲ್ಲಿ ಜರಗಿತು. ಸಮಿತಿಯ ಅಧ್ಯಕ್ಷ ನವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ರವಿ ಮಣಿಯಂಪಾರೆ ಮಾರ್ಗದರ್ಶನ ನೀಡಿದರು. ಹಿರಿಯ ಸದಸ್ಯರಾದ ಸೂರ್ಯ ನಿಡುಗಳ, ಐತ್ತಪ್ಪ ಕುಲಾಲ್, ಸೀತಾರಾಮ, ಶೇಖರ, ರಾಘವ, ಸುಧಾಕರ ಮಜಿರ್ಪಳ್ಳಕಟ್ಟೆ, ಲೋಕೇಶ್ ಮುಂಡಾನ್‌ತ್ತಡ್ಕ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಭಜನೋತ್ಸವದ ಆಮಂತ್ರಣ ಪತ್ರವನ್ನು ಗುರುಸ್ವಾಮಿ ರವಿ ಮಣಿಯಂಪಾರೆ ಹಿರಿಯ ಸದಸ್ಯ ಐತ್ತಪ್ಪ ಕುಲಾಲ್‌ರಿಗೆ ನೀಡಿ ಉದ್ಘಾಟಿಸಿದರು. ಹರೀಶ್ ಮುಗುರೋಡು ಅವರಿಗೆ ಮಂದಿರದ ನೂತನ ಸದಸ್ಯತ್ವವನ್ನು ಹಿರಿಯ ಸದಸ್ಯ ಸೂರ್ಯ ನಿಡುಗಳ ನೀಡಿದರು. ಗಣೇಶ್ ಪಿ.ಎಂ. ಮುಂಡಾನ್‌ತ್ತಡ್ಕ ಸ್ವಾಗತಿಸಿ, ರಾಜೇಶ್ ಎ. ಪೆರಿಯಡ್ಕ ವಂದಿಸಿದರು. ವಿವಿಧ ಸಮಿತಿಗಳನ್ನು ರಚಿಸಲಾಯಿತು.

RELATED NEWS

You cannot copy contents of this page