ಶಬರಿಮಲೆಗೆ ಕಾಲ್ನಡೆ ಪ್ರಯಾಣಗೈಯ್ಯುತ್ತಿದ್ದ ಅಯ್ಯಪ್ಪ ಭಕ್ತನಿಗೆ ಬೈಕ್ ಢಿಕ್ಕಿ ಹೊಡೆದು ಮೃತ್ಯು

ತಲಪಾಡಿ: ಕಾಲ್ನಡೆ ಮೂಲಕ  ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿಗೆ ಅಪರಿಮಿತ ವೇಗದಿಂದ ಸಂಚರಿಸಿದ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಾಯವುಂಟಾಗಿದೆ. ಕುಂದಾಪುರದ ಅಯ್ಯಪ್ಪ ಶಿಬಿರದಿಂದ ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕಿರುವ ಕಾಲ್ನಡೆ ಪ್ರಯಾಣ ಮಧ್ಯೆ ಅಪಘಾತ ಸಂಭವಿಸಿದೆ. ಕೋಟೆಶ್ವರದ ಬಳಿ ಇರುವ ಕುಂಬ್ರಿ ನಿವಾಸಿ ಸುರೇಂದ್ರ ಮೊಗವೀರ (35) ಮೃತಪಟ್ಟ ವ್ಯಕ್ತಿ. ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

15 ಅಯ್ಯಪ್ಪ ಭಕ್ತರು ಮಂದರ್ತಿ ಕ್ಷೇತ್ರದಿಂದ ನಡೆದು ಹೋಗುತ್ತಿದ್ದ ಮಧ್ಯೆ ಕಣ್ಣುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಉಂಟಾಗಿದೆ. ಹಿಂದಿನಿಂದ ಬೈಕ್ ಗುದ್ದಿದೆ. ಸುರೇಂದ್ರನ್ ಹಾಗೂ ಇತರರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡಿರುವುದೇ ಮರಣಕ್ಕೆ ಕಾರಣವೆನ್ನಲಾಗಿದೆ.

You cannot copy contents of this page