ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಮೋ ಬ್ರಿಗೇಡ್ ಮಾನ್ಯ ವತಿಯಿಂದ ವಿಶೇಷ ಭಜನಾ ಸೇವೆ ಜರಗಿತು. ಈ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಂದಿರದಿಂದ ಬೆಳ್ಳಿಯ ಛಾಯಾಚಿತ್ರ ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳ ಕಳವು ಪ್ರಕರಣವನ್ನು ಬೇಧಿಸಿ ಬೆಳ್ಳಿಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಿದ ತನಿಖಾಕಾಧಿರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಅದಿsಕಾರಿ ಪ್ರಸಾದ್ ಬಿ.ಕೆ. ಹಾಗೂ ಮೊಹಮ್ಮದ್ ಆರಿಫ್‌ರನ್ನು ಮಂದಿರದ ಕುಂಞಪ್ಪ ಗುರುಸ್ವಾಮಿ, ರಾಮ ಗುರುಸ್ವಾಮಿ ಗೌರವಿಸಿದರು.
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕುಂಞಕಣ್ಣ ಗುರುಸ್ವಾಮಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಪಂ. ಅಧ್ಯಕ್ಷ ಡಿ. ಶಂಕರ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಲ್ಲಾ ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕ್ಕುಂಜ, ಪಂ. ಸದಸ್ಯರಾದ ಅವಿನಾಶ್ ರೈ ಬದಿಯಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್, ಹರೀಶ ಮಜಿರ್ಪಳ್ಳಕಟ್ಟೆ ಅವರನ್ನು ಶ್ರೀ ಅಯ್ಯಪ್ಪ ಮಂದಿರದ ಸೇವಾಸಮಿತಿಯ ಪರವಾಗಿ ಅಧ್ಯಕ್ಷ ನಾರಾಯಣ ಮಣಿಯಾಣಿ ಅಭಿನಂದಿಸಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ನಮೋ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.







