ಬದಿಯಡ್ಕ ನಿವಾಸಿ ರೈಲು ಪ್ರಯಾಣ ಮಧ್ಯೆ ಹೊಳೆಗೆ ಬಿದ್ದು ನಾಪತ್ತೆ

ಬದಿಯಡ್ಕ:  ಬದಿಯಡ್ಕ ನಿವಾಸಿಯೊಬ್ಬರು ರೈಲು ಪ್ರಯಾಣ ವೇಳೆ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಪೆಟ್ರೋಲ್ ಬಂಕ್ ಸಮೀಪದ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40) ಎಂಬವರು  ತೃಶೂರು ಚಾಲಕ್ಕುಡಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಅಗ್ನಿಶಾಮಕದಳ ಶೋಧ ಮುಂದುವರಿಸುತ್ತಿದೆ.  ವಿಷಯ ತಿಳಿದು ಸಂಬಂಧಿಕರು ತೃಶೂರಿಗೆ ತೆರಳಿದ್ದಾರೆ.

 ನಿನ್ನೆ ಬೆಳಿಗ್ಗೆ 10.45ರ ವೇಳೆ ಘಟನೆ ನಡೆದಿದೆ. ತಿರು ವನಂತಪುರದಿಂದ ತೃಶೂರಿಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನಲ್ಲಿ ಅಚ್ಯುತಾನಂದ ಶೆಣೈ ಪ್ರಯಾಣಿಸುತ್ತಿ ದ್ದರು. ಇವರು ಅಂಗಮಾಲಿ ಕರಯಾಂಪರಂಬ್‌ನ ಇಂಡಿಯನ್ ಮಲ್ಟಿಪಲ್ ಕೋ-ಆಪರೇಟಿವ್ ಸೊಸೈಟಿಯ ಬ್ರಾಂಚ್‌ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದಾರೆ.  ನಿನ್ನೆ ಬೆಳಿಗ್ಗೆ ಕಚೇರಿಗೆ ತಲುಪಿದ ಇವರು ಹೊರಗೆ ತೆರಳಿದ್ದರೆಂದು ಹೇಳಲಾಗುತ್ತಿದೆ. ದೀರ್ಘ ಹೊತ್ತು ಕಳೆದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಅಚ್ಯುತಾನಂದ ಶೆಣೈಯ ಮೊಬೈಲ್ ಫೋನ್‌ಗೆ  ಕರೆಮಾಡಿದ್ದರು. ಈ ವೇಳೆ ಫೋನ್ ಕರೆ ಸ್ವೀಕರಿಸಿರುವುದು ವೇನಾಡ್ ಎಕ್ಸ್ ಪ್ರೆಸ್‌ನ ಪ್ರಯಾಣಿಕನಾದ ಓರ್ವ ವ್ಯಕ್ತಿಯಾಗಿದ್ದಾರೆ. ಅಚ್ಯುತಾನಂದ ಶೆಣೈ ಮೊಬೈಲ್ ಫೋನ್ ಸೀಟಿನಲ್ಲಿರಿಸಿ  ರೈಲಿನ ಬಾಗಿಲಿನ ಬಳಿಗೆ ಹೋಗಿರುವುದಾಗಿಯೂ ಬಳಿಕ ಅವರು ನಾಪತ್ತೆಯಾಗಿದ್ದಾರೆಂದು ಫೋನ್ ಕರೆ ಸ್ವೀಕರಿಸಿದ  ವ್ಯಕ್ತಿ ತಿಳಿಸಿದ್ದರು.

 ಇದೇ ವೇಳೆ ರೈಲ್ವೇ ಹಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ರೈಲಿನಿಂದ ಒಬ್ಬರು ಹೊಳೆಗೆ ಬೀಳುವುದನ್ನು ಕಂಡಿದ್ದು, ಈ ವಿಷಯವನ್ನು ನೌಕರರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಸ್ಕೂಬಾ ಟೀಂ ಡಿಂಗಿ ಬೋಟ್ ಉಪಯೋಗಿಸಿ  ರಾತ್ರಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಇಂದು ಬೆಳಿಗ್ಗೆ ಹುಡುಕಾಟ ಪುನರಾರಂಭಿಸಲಾಗಿದೆ.  ತಾಯಿ ರಮಾ ಶೆಣೈ, ಪತ್ನಿ ಅನುಷ್ಕ ಎಂಬಿವರು ಅಚ್ಯುತಾನಂದ ಶೆಣೈಯವರ ಜೊತೆ ತೃಶೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ    ಗಾಯತ್ರಿ ಎಂಬ ಸಹೋ ದರಿಯೂ ಇದ್ದಾರೆ. ನೀರ್ಚಾಲಿ ನಲ್ಲಿ ನೂತನವಾಗಿ ನಿರ್ಮಿಸಿದ ಮನೆ ಮುಚ್ಚುಗಡೆಗೊಳಿಸಿದ ಸ್ಥಿತಿಯಲ್ಲಿದೆ.

You cannot copy contents of this page