ಬದಿಯಡ್ಕ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಬದಿಯಡ್ಕ ಇದರ ಆಶ್ರಯದಲ್ಲಿ ಇಂಜಿನಿಯರ್‌ಗಳ ದಿನಾಚರಣೆ ಆಯೋಜಿಸಲಾಯಿತು. ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಮಾತನಾಡಿ, ಪರಮಾತ್ಮ ಮಹಾನ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ದುಃಖ ಅಶಾಂತಿಯಿAದ ಕೂಡಿರುವ ಭಾರತವನ್ನು ರಾಜಯೋಗ ಶಿಕ್ಷಣದ ಮೂಲಕ ಸ್ವರ್ಣಿಮಾ ಭಾರತವನ್ನಾಗಿ ಪರಿವರ್ತನೆ ಮಾಡುವ ಸಾಫ್ಟ್ ವೇರ್ ಆರ್ಕಿಟೆಕ್ಟ್. ಇಡೀ ಮಾನವ ಕುಲಕ್ಕೆ ಮಾರ್ಗಸೂಚಿಯನ್ನು ನೀಡುವ ಕೆಲಸ ಇವರಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಸಿವಿಲ್ ಇಂಜಿನಿಯರ್ ಮಹೇಂದ್ರ, ಸಿಪಿಸಿಆರ್.ಐ.ಯ ವಿಜ್ಞಾನಿ ಡಾ. ಸುಬ್ರಹ್ಮಣ್ಯ, ನಿತ್ಯಾನಂದ, ಶಂಕರ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಜಯೋಗಿನಿ ಬ್ರಹ್ಮಕುಮಾರಿ ಮಂಗಳ ಹಾಗೂ ಪ್ರೇಮ ಅತಿಥಿಗಳನ್ನು ಈಶ್ವರೀಯ ಕಾಣಿಕೆ ನೀಡಿ ಗೌರವಿಸಿದರು. ಬ್ರಹ್ಮಕುಮಾರಿ ದೀಪ ಸ್ವಾಗತಿಸಿದರು. ಬ್ರಹ್ಮಕುಮಾರಿ ವಿನೋದ ಸಂಸ್ಥೆಯ ಪರಿಚಯವನ್ನು ನೀಡಿದರು. ರಾಜಯೋಗ ಮೆಡಿಟೇಶನ್ ನಡೆಯಿತು.







