ಬಜಕೂಡ್ಲು ಕ್ಲಬ್ ವತಿಯಿಂದ ಜನಪ್ರತಿನಿಧಿಗಳಿಗೆ ಗೌರವ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಂಜೇಶ್ವರ ಬ್ಲೋಕ್, ಎಣ್ಮಕಜೆ ಪಂಚಾಯತ್‌ಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ನಡೆಯಿತು. ಕ್ಲಬ್‌ನ ಅಧ್ಯಕ್ಷ ಚಂದ್ರ ಅಮೆಕ್ಕಳ ಅಧ್ಯಕ್ಷತೆ ವಹಿಸಿದರು. ಸಮಾಜಸೇವಕ ಸದಾಶಿವ ಭಟ್ ಹರಿನಿಲಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲೋಕ್ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ವಿದ್ಯಾ ಕುಮಾರಿ, ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಕೃಷ್ಣಪ್ಪ ಬಜಕೂಡ್ಲುರನ್ನು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಗೌರವಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ, ಹಿರಿಯ ಸದಸ್ಯ ಮಹಾಬಲ ರೈ, ಚಂದ್ರಶೇಖರ ಆಚಾರ್ಯ, ನಾರಾಯಣ ಪೂಜಾರಿ ಬಜಕೂಡ್ಲು, ವಿನೋದ್ ಶೆಟ್ಟಿ, ಕರುಣಾಕರ ಬಜಕೂಡ್ಲು, ಪ್ರಕಾಶ್ ರೈ, ದಾಮೋದರ ಬಜಕೂಡ್ಲು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಖಂಡಿಗೆ ಸ್ವಾಗತಿಸಿ, ಪುರುಷೋತ್ತಮ ಬಜಕೂಡ್ಲು ವಂದಿಸಿದರು. ಕ್ಲಬ್‌ನ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಜನವರಿ ೨೪ರಂದು ನಡೆಸುವ ಬಗ್ಗೆ ಚರ್ಚಿಸಲಾಯಿತು.

You cannot copy contents of this page