ಸೀತಾಂಗೋಳಿ: ಮಕ್ಕಳನ್ನು ಶಾಲೆಗೆ ಸೇರಿಸೋದು, ಅವರಿಗೆ ಬೇಕಾದ್ದನ್ನು ತೆಗೆದುಕೊಟ್ಟ ಮಾತ್ರಕ್ಕೆ ಹೆತ್ತವರ ಜವಾಬ್ದಾರಿ ಮುಗಿಯೋದಿಲ್ಲ. ಅವರೇನು ಮಾಡುತ್ತಾರೆ? ಯಾರೊಂ ದಿಗೆ ಸೇರುತ್ತಾರೆ? ಅವರ ಇಷ್ಟ ಕಷ್ಟ ಗಳೇನು ಎನ್ನುವುದನ್ನೂ ಗಮನಿಸ ಬೇಕು ಎಂದು ಯುವ ನ್ಯಾಯವಾದಿ ಅಕ್ಷತಾ ಇಕ್ಕೇರಿ ಅಭಿಪ್ರಾಯಪಟ್ಟರು. ಮುಕಾರಿಕಂಡಕ್ಕೆ ಸಮೀಪದ ಕುಕ್ಕೂಡೆಲ್‌ನ ಸ್ವಾಮಿ ಕೊರಗಜ್ಜ ಬಾಲ ಗೋಕುಲ ಕುಣಿತ ಭಜನಾ ಸಂಘದ 2ನೇ ವಾರ್ಷಿಕೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಭಾಷಣ ಮಾಡಿ ಮಾತಾ ಡುತ್ತಿದ್ದರು.
ಕ್ಷೇತ್ರಗಳು ಜೀವನದಲ್ಲಿ ಸಂಸ್ಕಾರ, ಧರ್ಮ ಜಾಗೃತಿ ಮೂಡಿಸುವ ಶಾಂತಿಯ ತಾಣವಾಗಿದೆ. ಆದ್ದರಿಂದ ಕ್ಷೇತ್ರ ದರ್ಶನ ನಡೆಸುವುದರಿಂದ ಧನಾತ್ಮಕ ಚಿಂತನೆಗಳು ಮೂಡುತ್ತದೆ ಎಂದವರು ಅಭಿಪ್ರಾಯ ಪಟ್ಟರು. ಇಂದು ಯುವ ಸಮಾಜವು ಮಾದಕ ವಸ್ತುಗಳ ಲಹರಿಗೆ ಬಲಿಯಾಗುತ್ತಿರು ವುದು ಆತಂಕದ ವಿಷಯವಾಗಿದೆ. ಬಾಲ್ಯದಿಂದಲೇ ಹೆತ್ತವರು ಅವರ ಕುರಿತು ಗಮನ ಹರಿಸಿರುತ್ತಿದ್ದರೆ ಈ ಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ. ಪುಟ್ಟ ಮಕ್ಕಳು ಬಾಲ ಗೋಕುಲದಂತಹ ಸಂಸ್ಕಾರ ಕೇಂ ದ್ರದಲ್ಲಿ ಬೆಳೆದರೆ ಭವಿಷ್ಯದಲ್ಲಿ ಅವರು ಉತ್ತಮ ಗುಣನಡತೆಯಿಂದ ಧರ್ಮಸಂಸ್ಕÈತಿಯ ಪ್ರತೀಕವಾಗಿ ಉಳಿಯುತ್ತಾರೆ ಎಂದವರು ಕಿವಿಮಾತು ಹೇಳಿದರು. ಶ್ರೀ ಸ್ವಾಮಿ ಕೊರಗಜ್ಜ ಬಾಲಗೋಕುಲ ಕುಣಿತ ಭಜನಾ ಸಂಘದ ಅಧ್ಯಕ್ಷ ರಾಮಚಂದ್ರ ಕುಲಾಲ್ ಕುಲಾಲ್ ನಗರ ಅಧ್ಯಕ್ಷತೆ ವಹಿಸಿದ್ದರು. ಕುಣಿತ ಭಜನೆಯ ಗುರು ರವಿರಾಜ್ ಏಳ್ಕಾನ, ಇನ್ನೋರ್ವ ಶಿಕ್ಷಕಿ ವಿಶಾಲಾಕ್ಷಿ ಶೇಣಿ, ಯಕ್ಷಗಾನ ಕಲಾವಿದ ಬಾಲಕೃಷ್ಣ ಪಾಟಾಳಿ ಸೀತಾಂಗೋಳಿ, ರಾಜೀವಿ ಕುಕ್ಕೂಡೆಲ್, ಗಣೇಶ್ ಪಿಎಂ ಮುಂ ಡಾನ್ ತ್ತಡ್ಕ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಯಕ್ಷಗಾನ ಕಲಾವಿದ ಬಾಲಕೃಷ್ಣ ಸೀತಾಂಗೋಳಿ, ಅಕ್ಷತಾ ಇಕ್ಕೇರಿಯರ‍್ಮನ್ನು ಸನ್ಮಾನಿಸ ಲಾಯಿತು. ದೀಪಪ್ರಜ್ವಲನಗೊಳಿಸಿ ಕುಣಿತ ಭಜನೆ ಆರಂಭಿಸಲಾಯಿತು. ಕಾರ್ಯದರ್ಶಿ ರಮೇಶ್ ಕೋಡಿ ಮೂಲೆ ಸ್ವಾಗತಿಸಿ, ಪುಷ್ಪಾಗಣೇಶ್ ವಂದಿಸಿದರು. ಅಪ್ಪಣ್ಣ ಸೀತಾಂಗೋಳಿ ನಿರೂಪಿಸಿದರು. ಸಂಘದ ಬಾಲಕಿಯರು ಪ್ರಾರ್ಥನೆ ಹಾಡಿದರು.







