ಕಾಸರಗೋಡು: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್‌ನ ನೇತೃತ್ವದಲ್ಲಿ ಎಣ್ಮಕಜೆ ಹಾಗೂ ಮಂಗಲ್ಪಾಡಿ ಪಂಚಾಯತ್‌ಗಳಲ್ಲಿ ಬ್ಯಾಂಕ್ ಖಾತೆಗಳ ರೀ ಕೆವೈಸಿ ಶಿಬಿರಗಳನ್ನು ನಡೆಸಲಾಗುವುದು. ಎಣ್ಮಕಜೆ ಪಂಚಾಯತ್‌ನಲ್ಲಿ ಈ ತಿಂಗಳ 15ರಂದು ಬೆಳಿಗ್ಗೆ 11ರಿಂದ ಪಂಚಾಯತ್ ಸಭಾಂಗಣದಲ್ಲಿ ಮಂಗಲ್ಪಾಡಿ ಪಂಚಾಯತ್‌ನಲ್ಲಿ 26ರಂದು ಬೆಳಿಗ್ಗೆ 10.30ರಿಂದ ಪಂಚಾಯತ್ ಕಚೇರಿಯ ಮುಂಭಾಗದಲ್ಲಿರುವ ಫೆರೋಹಾಲ್‌ನಲ್ಲಿ ಶಿಬಿರ ನಡೆಯಲಿದೆ.
ಗ್ರಾಹಕರು ಅವರ ಬ್ಯಾಂಕ್ ಪಾಸ್‌ಪುಸ್ತಕ, ಗುರುತುಚೀಟಿಗಳು (ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ ಕಾರ್ಡ್ ಮೊದಲಾದವುಗಳು) ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳ ಸಹಿತ ಶಿಬಿರದಲ್ಲಿ ಹಾಜರಾಗಬೇಕಾಗಿದೆ.